Homeಕವನಕವಿತೆ| ಕೋಮುವಾದ, ಜಾತಿ-ಧರ್ಮ ಎಂದವರು ಎಲ್ಲಿಗೆ ಹೋದರಯ್ಯ...

ಕವಿತೆ| ಕೋಮುವಾದ, ಜಾತಿ-ಧರ್ಮ ಎಂದವರು ಎಲ್ಲಿಗೆ ಹೋದರಯ್ಯ…

- Advertisement -
- Advertisement -

ಕೋಮುವಾದ ಮಾಡುವವರು…
ಜಾತಿ-ಧರ್ಮ ಅಂತ ಕಚ್ಚಾಡುವವರು…
ತನ್ನದೇ ಜಯ ಎಂದವರು ಎಲ್ಲಯ್ಯ?.
ಎಲ್ಲಿಗೆ ಹೋದರಯ್ಯ ಅವರು ಎಲ್ಲಿಗೆ ಹೋದರಯ್ಯ…..

ತಾನು ಮೇಲು ತನ್ನದೇ ಮೇಲು…
ತನ್ನ ಎದುರು ಎಲ್ಲವು ಕೀಳು…
ಎಂದವರು ಎಲ್ಲಯ್ಯ?.
ಎಲ್ಲಿಗೆ ಹೋದರಯ್ಯ ಅವರು ಎಲ್ಲಿಗೆ ಹೋದರಯ್ಯ…..

ತನಗೆ ಅವರು ಆಗಲ್ಲ…
ನನಗೆ ಇವರು ಆಗಲ್ಲ…
ತಾನೇ ದೊಡ್ಡವನು ಎಂದವರು ಎಲ್ಲಯ್ಯ?.
ಎಲ್ಲಿಗೆ ಹೋದರಯ್ಯ ಅವರು ಎಲ್ಲಿಗೆ ಹೋದರಯ್ಯ…..

ತನಗೆ ದಿನ ಇಡೀ ನಗರ ಸುತ್ತಾಡಬೇಕು…
ಶಾಪಿಂಗ್ ಮಾಡಬೇಕು…
ಅದು ನನ್ನ ಹವ್ಯಾಸ ಎಂದವರು ಎಲ್ಲಯ್ಯ?.
ಎಲ್ಲಿಗೆ ಹೋದರಯ್ಯ ಅವರು ಎಲ್ಲಿಗೆ ಹೋದರಯ್ಯ…..

ತನ್ನ ಮದುವೆ ಆಡಂಬರದಿಂದ ಆಗಬೇಕು…
ಈ ದಿನದಲ್ಲಿ ಆಗಬೇಕು…
ಇದು ನನ್ನ ಕನಸು ಎಂದವರು ಎಲ್ಲಯ್ಯ?.
ಎಲ್ಲಿಗೆ ಹೋದರಯ್ಯ ಅವರು ಎಲ್ಲಿಗೆ ಹೋದರಯ್ಯ…..

ನೌಫಲ್ ಮಠ
ಉಪ್ಪಿನಂಗಡಿ ದ.ಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...