Homeಮುಖಪುಟದೆಹಲಿಯಲ್ಲಿ ಕಳಪೆ ಮಟ್ಟಕ್ಕೆ ಇಳಿದ ವಾಯು ಗುಣಮಟ್ಟ: ಸಿಎಂ ಕೇಜ್ರಿವಾಲ್ ಸ್ಪಷ್ಟನೆ

ದೆಹಲಿಯಲ್ಲಿ ಕಳಪೆ ಮಟ್ಟಕ್ಕೆ ಇಳಿದ ವಾಯು ಗುಣಮಟ್ಟ: ಸಿಎಂ ಕೇಜ್ರಿವಾಲ್ ಸ್ಪಷ್ಟನೆ

- Advertisement -
- Advertisement -

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ಅತ್ಯಂತ ಕಳಪೆ ಮಟ್ಟಕ್ಕೆ ಬಂದು ನಿಂತಿದೆ. ದೀಪಾವಳಿ ಹಿನ್ನೆಲೆ ಸಿಡಿಸಿದ ಪಟಾಕಿಯಿಂದ ದೆಹಲಿಯ ವಾಯು ಮತ್ತಷ್ಟು ವಿಷವಾಗಿದೆ ಎಂದು ಮೂಲಗಳು ತಿಳಿಸಿವೆ.

ನಸುಕಿನ ಜಾವ ದಟ್ಟ ಹೊಗೆ ಆವರಿಸಿತ್ತು. ರಾಜಧಾನಿಯಲ್ಲಿ ಈಗ ಹರಡಿರುವ ಅತ್ಯಂತ ಕಳಪೆ ಮಟ್ಟದ ವಾಯು ಉಸಿರಾಟಕ್ಕೆ ಯೋಗ್ಯವಲ್ಲ ಎಂದು ತಜ್ಞರು ತಿಳಿಸಿದ್ದಾರೆ. ದೆಹಲಿಯ ಲೋಧಿಯಲ್ಲಿ ವಾಯು ಸೂಚ್ಯಂಕ ೫೦೦ ದಾಖಲಾಗಿದೆ. ದೆಹಲಿಯಲ್ಲಿ ೩೦೬ ಮತ್ತು ನೋಯ್ಡಾದಲ್ಲಿ ೩೫೬ ದಾಖಲಾಗಿದೆ.

ಇನ್ನು ದೆಹಲಿಯಲ್ಲಿ ಪಟಾಕಿ ಸಿಡಿಸದಂತೆ ನಿರ್ಬಂಧ ಹೇರಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜನತೆ ನಿಯಮ ಮೀರಿ ಪಟಾಕಿ ಸಿಡಿಸಿ, ಹಬ್ಬವನ್ನು ಸಂಭ್ರಮಿಸಿದ್ದಾರೆ. ಪರಿಣಾಮ ವಾಯು ಗುಣಮಟ್ಟ ತೀವ್ರ ಹದಗೆಟ್ಟು ಹೋಗಿದೆ. ಇನ್ನು ದೆಹಲಿಗೆ ಹೋಲಿಸಿದರೆ ಮುಂಬೈನಲ್ಲಿ ಐದು ವರ್ಷದಲ್ಲಿ ವಾಯು ಗುಣಮಟ್ಟ ಉತ್ತಮ ಸ್ಥಿತಿಯಲ್ಲಿದೆ.

ಇನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾತನಾಡಿ, ದೆಹಲಿಯ ವಾಯು ಗುಣಮಟ್ಟ ಕಳೆದ ಐದು ವರ್ಷಗಳಲ್ಲಿ ಉತ್ತಮ ಸ್ಥಿತಿ ತಲುಪಿದೆ. ಆದರೆ ದೀಪಾವಳಿ ಆಚರಣೆಯ ಒಂದು ದಿನದ ನಂತರ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದೆ ಅಂತಾ ವಾಯು ಗುಣಮಟ್ಟದ ಬಗ್ಗೆ ಕೇಜ್ರಿವಾಲ್ ಸ್ಪಷ್ಟನೆ ನೀಡಿದ್ದಾರೆ.

ಪಟಾಕಿ ಸಿಡಿಸುವಲ್ಲಿ ದೆಹಲಿ ಜನತೆ ಸಂಯಮದಿಂದ ವರ್ತಿಸಿದ್ದಾರೆ. ಕಡಿಮೆ ಪಟಾಕಿ ಸಿಡಿಸಿದ್ದಾರೆ. ಇದು ಖುಷಿಪಡಬೇಕಾದ ಸಂಗತಿ. ಆದರೆ ದೆಹಲಿ ಅಕ್ಕಪಕ್ಕದ ನಗರಗಳಾದ ಗಾಜಿಯಾಬಾದ್, ಗುರುಗ್ರಾಮ್, ನೋಯ್ಡಾ, ಫರಿದಾಬಾದ್ ಗಳಲ್ಲಿ ಹೆಚ್ಚು ಪಟಾಕಿ ಸಿಡಿಸಿದ್ದರಿಂದ ಅದರ ಎಫೆಕ್ಟ್ ದೆಹಲಿಗೂ ತಲುಪಿದೆ. ಆದ್ದರಿಂದ ದೆಹಲಿ ವಾಯು ಗುಣಮಟ್ಟ ದೀಪಾವಳಿಯ ಒಂದೇ ದಿನದ ನಂತರ ಅತ್ಯಂತ ಕಳಪೆ ಮಟ್ಟ ದಾಖಲಿಸಿದೆ ಎಂದು ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...