Homeಮುಖಪುಟಜವಳಿ ಮೇಲಿನ ಜಿಎಸ್‌ಟಿ ಹೆಚ್ಚಳದ ನಿರ್ಧಾರ ಮುಂದೂಡಿಕೆ

ಜವಳಿ ಮೇಲಿನ ಜಿಎಸ್‌ಟಿ ಹೆಚ್ಚಳದ ನಿರ್ಧಾರ ಮುಂದೂಡಿಕೆ

ಒಕ್ಕೂಟ ಸರ್ಕಾರದ ನಿರ್ಧಾರದ ವಿರುದ್ಧ ಜವಳಿ ಉದ್ಯಮ ಮತ್ತು ಹಲವು ರಾಜ್ಯಗಳ ಆಕ್ಷೇಪಣೆ ಎತ್ತಿದ್ದವು

- Advertisement -
- Advertisement -

ಜವಳಿ ಮೇಲಿನ ಜಿಎಸ್‌ಟಿ ಹೆಚ್ಚಳದ ನಿರ್ಧಾರವನ್ನು ಮುಂದೂಡಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್‌ ಸಭೆಯು ತೀರ್ಮಾನಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. ಪ್ರಸ್ತುತ ಜವಳಿ ಮೇಲೆ 5% ಜಿಎಸ್‌ಟಿ ವಿಧಿಸಲಾಗುತ್ತಿದ್ದು, ಇದನ್ನು 12% ಕ್ಕೆ ಹೆಚ್ಚಿಸುವ ಬಗ್ಗೆ ಒಕ್ಕೂಟ ಸರ್ಕಾರ ಈ ಹಿಂದೆ ತೀರ್ಮಾನಿಸಿತ್ತು. ಆದರೆ ಈ ತೀರ್ಮಾನದ ವಿರುದ್ದ ಜವಳಿ ಉದ್ಯಮಗಳು ಮತ್ತು ದೇಶದ ಹಲವು ರಾಜ್ಯಗಳು ಆಕ್ಷೇಪ ಎತ್ತಿದ್ದವು.

ಜವಳಿ ಉತ್ಪನ್ನಗಳ ಮೇಲಿನ ತೆರಿಗೆ ದರ ಹೆಚ್ಚಳಕ್ಕೆ ಹಲವು ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದ್ದು, ದರ ಏರಿಕೆಯನ್ನು ತಡೆಹಿಡಿಯುವಂತೆ ಒತ್ತಾಯಿಸಿದ್ದವು. ಗುಜರಾತ್, ಪಶ್ಚಿಮ ಬಂಗಾಳ, ದೆಹಲಿ, ರಾಜಸ್ಥಾನ ಮತ್ತು ತಮಿಳುನಾಡು ರಾಜ್ಯಗಳು ಈ ವಿಷಯವನ್ನು ಪ್ರಸ್ತಾಪಿಸಿದ್ದವು.

ಇದನ್ನೂ ಓದಿ:‘ಜಿಎಸ್‌ಟಿ 12%’: ಜನವರಿಯಿಂದ ಬಟ್ಟೆಬರೆ ಮತ್ತು ಪಾದರಕ್ಷೆಗಳ ಬೆಲೆ ಏರಿಕೆ!

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿವಿಧ ರಾಜ್ಯಗಳ ವಿತ್ತ ಸಚಿವರ ಬಜೆಟ್ ಪೂರ್ವ ಸಮಾಲೋಚನೆಯ ಸಂದರ್ಭದಲ್ಲಿ ಈ ವಿಷಯವು ಚರ್ಚೆಗೆ ಬಂದಿತ್ತು.

ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಾತನಾಡಿ, ಜವಳಿ ಮೇಲಿನ ತೆರಿಗೆ ಹೆಚ್ಚಳವನ್ನು ದೆಹಲಿ ಸರ್ಕಾರ ವಿರೋಧಿಸುತ್ತದೆ. ಸಾಮಾನ್ಯ ಜನರ ಧ್ವನಿಯನ್ನು ಹತ್ತಿಕ್ಕಲು ಸರ್ಕಾರ ಬಿಡುವುದಿಲ್ಲ ಎಂದು ಸಿಸೋಡಿಯಾ ಹೇಳಿದ್ದಾರೆ.

ಜವಳಿ ವ್ಯಾಪಾರಿಗಳು ಜಿಎಸ್‌ಟಿ ದರಗಳ ಹೆಚ್ಚಳವನ್ನು ವಿರೋಧಿಸುತ್ತಿದ್ದಾರೆ ಮತ್ತು ಅವರ ಬೇಡಿಕೆಗಳು ಸಮರ್ಥನೀಯವಾಗಿವೆ, ಆದ್ದರಿಂದ ಆಮ್ ಆದ್ಮಿ ಪಕ್ಷ (ಎಎಪಿ)ದ ಸರ್ಕಾರವು ಅವರ ಬೇಡಿಕೆಗಳ ಪರವಾಗಿದೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ:ಅತ್ಯಾಚಾರ, ಕೊಲೆ ಪ್ರಕರಣ: ಜೀವಾವಧಿ ಶಿಕ್ಷೆ ನೀಡಿದ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಅಪರಾಧಿ

ಪಶ್ಚಿಮ ಬಂಗಾಳದ ಮಾಜಿ ವಿತ್ತ ಸಚಿವ ಅಮಿತ್ ಮಿತ್ರಾ ಅವರು ಒಕ್ಕೂಟ ಸರ್ಕಾರದ ಹಣಕಾಸು ಸಚಿವರಿಗೆ ಜವಳಿ ಮೇಲಿನ ಪ್ರಸ್ತಾವಿತ ಹೆಚ್ಚಳವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಈ ಹೆಚ್ಚಳದಿಂದಾಗಿ ಸುಮಾರು ಒಂದು ಲಕ್ಷ ಜವಳಿ ಘಟಕಗಳು ಮುಚ್ಚಿಹೋಗುತ್ತದೆ ಮತ್ತು 15 ಲಕ್ಷ ಉದ್ಯೋಗ ನಷ್ಟವಾಗುತ್ತದೆ ಎಂದು ಅವರು ಹೇಳಿದ್ದರು.

ಇಷ್ಟೇ ಅಲ್ಲದೆ, ಕೈಗಾರಿಕಾ ಸಂಸ್ಥೆಗಳು ಕೂಡಾ ತೆರಿಗೆ ಹೆಚ್ಚಿಸುವುದನ್ನು ವಿರೋಧಿಸಿದ್ದವು. ವಿಶೇಷವಾಗಿ ಈ ಹೆಚ್ಚಳದಿಂದ ಅಸಂಘಟಿತ ವಲಯ ಮತ್ತು ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) ಹೆಚ್ಚಿ ಹೊಡೆತ ಬಿದ್ದು, ಬಡವರು ಖರೀದಿಸುವ ಉಡುಪುಗಳ ದರಗಳು ಹೆಚ್ಚಳವಾಗುತ್ತಿತ್ತು.

ಜಿಎಸ್‌ಟಿ ಕೌನ್ಸಿಲ್‌ನ ಶಿಫಾರಸುಗಳ ಮೇರೆಗೆ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ), ಜನವರಿ 1, 2022 ರಿಂದ ಜವಳಿ ಮತ್ತು ಪಾದರಕ್ಷೆಗಳ ಮೇಲಿನ ಜಿಎಸ್‌ಟಿ ದರವನ್ನು 5% ರಿಂದ 12% ಕ್ಕೆ ಏರಿಸಲಾಗುವುದು ಎಂದು ಘೋಷಿಸಿತ್ತು.

ಇದನ್ನೂ ಓದಿ:12 ವರ್ಷಗಳಲ್ಲೇ ಗರಿಷ್ಠ ಮಟ್ಟದ ಸಗಟು ಹಣದುಬ್ಬರ ದಾಖಲು

ಜಿಎಸ್‌ಟಿ ಕೌನ್ಸಿಲ್‌ನ 46 ನೇ ಸಭೆ ಇಂದು ದೆಹಲಿಯಲ್ಲಿ ನಡೆಯುತ್ತಿದ್ದು, ಸಭೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು ಮತ್ತು ಹಿರಿಯ ಅಧಿಕಾರಿಗಳು ಸಹ ಉಪಸ್ಥಿತರಿದ್ದರು.

ಫೆಬ್ರವರಿ 1, 2022 ರಂದು ಸಂಸತ್ತಿನಲ್ಲಿ ಮಂಡನೆಯಾಗಲಿರುವ 2022-23ರ ಒಕ್ಕೂಟ ಸರ್ಕಾರದ ಬಜೆಟ್‌ಗೆ ಮುಂಚಿತವಾಗಿ ಸಭೆ ನಡೆಯುತ್ತಿರುವುದರಿಂದ ಈ ಸಭೆಯು ಮಹತ್ವದ್ದಾಗಿದೆ.

ಕೊರೊನಾದಿಂದಾಗಿ ಜವಳಿ ಉದ್ಯಮಕ್ಕೆ ಕೆಟ್ಟ ಪರಿಣಾಮ ಬೀರಿದೆ. ಈ ಉದ್ಯಮ ವಲಯವು, ಕೃಷಿಯ ನಂತರ ಎರಡನೇ ಅತಿ ದೊಡ್ಡ ಆದಾಯ ಉತ್ಪಾದಿಸುವ ವಲಯವಾಗಿದೆ.

ಇದನ್ನೂ ಓದಿ:ತಮಿಳು ನಾಡಗೀತೆಯು ಪ್ರಾರ್ಥನೆಯಾಗಿದ್ದು, ಅದನ್ನು ಹಾಡುವಾಗ ಎದ್ದುನಿಲ್ಲಬೇಕಾಗಿಲ್ಲ: ಮದ್ರಾಸ್ ಹೈಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...