Homeಮುಖಪುಟ'ಅಧಿಕಾರ ಶಾಶ್ವತವಲ್ಲ; ನಮ್ಮ ಸಿದ್ಧಾಂತ ಶಾಶ್ವತ..'; ಅಜಿತ್ ವಿರುದ್ಧ ಶರದ್ ಪವಾರ್‌ ಕಿಡಿ

‘ಅಧಿಕಾರ ಶಾಶ್ವತವಲ್ಲ; ನಮ್ಮ ಸಿದ್ಧಾಂತ ಶಾಶ್ವತ..’; ಅಜಿತ್ ವಿರುದ್ಧ ಶರದ್ ಪವಾರ್‌ ಕಿಡಿ

- Advertisement -
- Advertisement -

ತಮ್ಮ ಸಹೋದರನ ಪುತ್ರ ಅಜಿತ್ ಪವಾರ್‌ಗೆ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನೀಡುವ ಭಾರತದ ಚುನಾವಣಾ ಆಯೋಗ (ಇಸಿಐ) ಮತ್ತು ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರ ನಿರ್ಧಾರದ ಬಗ್ಗೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸಂಸ್ಥಾಪಕ ಶರದ್ ಪವಾರ್ ಅವರು ಶನಿವಾರ ಪ್ರತಿಕ್ರಿಯಿಸಿದ್ದಾರೆ. ‘ರಾಜಕೀಯ ಪಕ್ಷ ಕಟ್ಟಿದವರನ್ನು ಪಕ್ಷದಿಂದಲೇ ತೆಗೆದುಹಾಕುವಂಥ ಘಟನೆ ಹಿಂದೆಂದೂ ನಡೆದಿರಲಿಲ್ಲ’ ಎಂದು ಶರದ್ ಪವಾರ್ ಆಕ್ರೋಶ ಹೊರಹಾಕಿದ್ದಾರೆ.

‘ಈ ನಿರ್ಧಾರವು ಕಾನೂನಿಗೆ ವಿರುದ್ಧವಾಗಿದೆ’ ಎಂದು ಪ್ರತಿಪಾದಿಸಿದ ಎನ್‌ಸಿಪಿ ಸಂಸ್ಥಾಪಕರು, ಇಸಿಐ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿರುವುದಾಗಿ ಹೇಳಿದರು.

‘ರಾಜಕೀಯ ಪಕ್ಷ ಕಟ್ಟಿದವರನ್ನು ಪಕ್ಷದಿಂದ ತೆಗೆದು ಹಾಕಿರುವ ಘಟನೆ ಹಿಂದೆಂದೂ ನಡೆದಿರಲಿಲ್ಲ. ಅಷ್ಟೇ ಅಲ್ಲ ಪಕ್ಷದ ಚಿಹ್ನೆಯನ್ನೂ ಕಸಿದುಕೊಳ್ಳಲಾಗಿದೆ. ಈ ನಿರ್ಧಾರ ಕಾನೂನಿಗೆ ಅನುಗುಣವಾಗಿಲ್ಲ. ಈ ವಿಚಾರದಲ್ಲಿ ನಾವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದೇವೆ. ನಾವು ನಮ್ಮ ಸಾರ್ವಜನಿಕ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸಬೇಕಾಗಿದೆ’ ಎಂದು ಶರದ್ ಪವಾರ್ ಹೇಳಿದ್ದಾರೆ.

‘ಎನ್‌ಸಿಪಿ ಹೆಸರು ಮತ್ತು ಚಿಹ್ನೆಯನ್ನು ಕಳೆದುಕೊಳ್ಳುವ ಬಗ್ಗೆ ನಾವು ಚಿಂತಿಸುವುದಿಲ್ಲ’ ಎಂದು ಹೇಳುವ ಮೂಲಕ ಶರದ್ ಪವಾರ್ ಅವರು  ಅವರು ಜೂನಿಯರ್ ಪವಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಆದರೆ, ಜನರು ಬೇರೆ ದಾರಿಯಲ್ಲಿ ಹೋಗಲು ಆಯ್ಕೆ ಮಾಡಿದವರನ್ನು ಒಪ್ಪುವುದಿಲ್ಲ’ ಎಂದು ಪ್ರತಿಪಾದಿಸಿದರು.

ಸತಾರಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶರದ್ ಪವಾರ್, ‘ಅಧಿಕಾರ ಬರುತ್ತದೆ ಮತ್ತು ಹೋಗುತ್ತದೆ ಆದರೆ ಸಿದ್ಧಾಂತ, ನೀತಿಗಳು ಮತ್ತು ದೇಶವನ್ನು ಮುನ್ನಡೆಸುವ ಚಿಂತನೆ ಶಾಶ್ವತ’ ಎಂದು ತಿರುಗೇಟು ಕೊಟ್ಟರು.

‘ಈ ಬೆಳವಣಿಗೆಯಿಂದ ನಮ್ಮ ಕೆಲವು ಸಹೋದ್ಯೋಗಿಗಳು ವಿಚಲಿತರಾದರು, ಕೆಲವರು ಪಕ್ಷವನ್ನು ಕಿತ್ತುಕೊಂಡರು, ಕೆಲವರು ಚಿಹ್ನೆಯನ್ನು ಕಿತ್ತುಕೊಂಡರು, ಇದೆಲ್ಲದರ ಬಗ್ಗೆ ನಾನು ಎಂದಿಗೂ ಚಿಂತಿಸುವುದಿಲ್ಲ. ಕೆಲವರು ಸಿದ್ಧಾಂತವನ್ನು ತೊರೆದು ಬೇರೆ ದಾರಿಯಲ್ಲಿ ಹೋಗಲು ಆಯ್ಕೆ ಮಾಡಿದರು. ಆದರೆ, ಜನರು ಈ ಕ್ರಮವನ್ನು ಮೆಚ್ಚಲಿಲ್ಲ’ ಎಂದರು.

ಅಜಿತ್ ಪವಾರ್ ಬಣವನ್ನು ‘ನೈಜ’ ಎನ್‌ಸಿಪಿ ಎಂದು ಅಧಿಕೃತವಾಗಿ ಗುರುತಿಸುವ ಇಸಿಐ ಆದೇಶದ ವಿರುದ್ಧದ ಅರ್ಜಿಯ ತುರ್ತು ವಿಚಾರಣೆಯನ್ನು ಅವರು ಸುಪ್ರೀಂ ಕೋರ್ಟ್‌ನಲ್ಲಿ ಕೋರಿದ್ದಾರೆ. ಅರ್ಜಿಯ ಆರಂಭಿಕ ಪಟ್ಟಿಯನ್ನು ಸಹ ಉನ್ನತ ನ್ಯಾಯಾಲಯ ಪರಿಗಣಿಸಿದೆ.

ಶರದ್ ಪವಾರ್ ನೇತೃತ್ವದ ಎನ್‌ಸಿಪಿಯಿಂದ ಜುಲೈ 2023 ರಲ್ಲಿ ಎರಡು ಬಣಗಳಾಗಿ ಬೇರ್ಪಟ್ಟಾಗ, ಅಜಿತ್ ಪವಾರ್ ನೇತೃತ್ವದ ಗುಂಪು ನಿಜವಾದ ಎನ್‌ಸಿಪಿ ಎಂದು ನಾರ್ವೇಕರ್ ಹೇಳಿದ್ದಾರೆ.

ಈ ವಾರದ ಆರಂಭದಲ್ಲಿ ಚುನಾವಣಾ ಆಯೋಗವು ಅಜಿತ್ ಪವಾರ್ ಅವರ ಬಣ ನಿಜವಾದ ಎನ್‌ಸಿಪಿ ಎಂದು ತೀರ್ಪು ನೀಡಿತು. ಅಜಿತ್ ಬಣಕ್ಕೆ ‘ಗಡಿಯಾರ’ ಚಿಹ್ನೆಯನ್ನು ನೀಡಿತು. ಮತ್ತೊಂದೆಡೆ, ರಾಜ್ಯಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತನ್ನ ಹೊಸ ರಾಜಕೀಯ ರಚನೆಯನ್ನು ಹೆಸರಿಸಲು ಚುನಾವಣಾ ಸಂಸ್ಥೆ ಶರದ್ ಪವಾರ್ ಅವರ ಬಣಕ್ಕೆ ವಿಶೇಷ ರಿಯಾಯಿತಿಯನ್ನೂ ನೀಡಿತು.

ಅಜಿತ್ ಪವಾರ್ ಮತ್ತು ಎಂಟು ಶಾಸಕರು ಕಳೆದ ವರ್ಷ ಜುಲೈನಲ್ಲಿ ಏಕನಾಥ್ ಶಿಂಧೆ ಸರ್ಕಾರಕ್ಕೆ ಸೇರ್ಪಡೆಗೊಂಡರು, ಇದು ಶರದ್ ಪವಾರ್ ಸ್ಥಾಪಿಸಿದ ಎನ್‌ಸಿಪಿ ವಿಭಜನೆಗೆ ಕಾರಣವಾಯಿತು.

ಇದನ್ನೂ ಓದಿ; ‘ಮೈತ್ರಿ ಬಾಗಿಲು ತೆರೆದಿದೆ’ ಎಂಬ ಲಾಲೂ ಹೇಳಿಕೆ; ಸಿಎಂ ನಿತೀಶ್‌ಕುಮಾರ್ ಪ್ರತಿಕ್ರಿಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...