Homeಮುಖಪುಟಕಾಂಗ್ರೆಸ್‌ ರಾಜೀನಾಮೆ ಸರಣಿಗೆ ಮತ್ತೆರಡು ಹೆಸರು ಸೇರ್ಪಡೆ; ಬಿಜೆಪಿ ಸೇರಲಿರುವ ಕಮಲ್ ನಾಥ್, ಅವರ ಪುತ್ರ...

ಕಾಂಗ್ರೆಸ್‌ ರಾಜೀನಾಮೆ ಸರಣಿಗೆ ಮತ್ತೆರಡು ಹೆಸರು ಸೇರ್ಪಡೆ; ಬಿಜೆಪಿ ಸೇರಲಿರುವ ಕಮಲ್ ನಾಥ್, ಅವರ ಪುತ್ರ ನಕುಲ್?

- Advertisement -
- Advertisement -

ಕಾಂಗ್ರೆಸ್‌ ರಾಜೀನಾಮೆ ಸರಣಿಗೆ ಮತ್ತೊಂದು ಹೆಸರು ಸೇರ್ಪಡೆಯಾಗುವ ಎಲ್ಲ ಲಕ್ಷಣಗಳು ಕಾಣುತ್ತಿದ್ದು, 2024 ರ ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಬೀಳುತ್ತಿರುವ ದೊಡ್ಡ ಹೊಡೆತಗಳಲ್ಲಿ ಇದೂ ಒಂದಾಗಿದೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಮತ್ತು ಅವರ ಪುತ್ರ ನಕುಲ್ ಬಿಜೆಪಿ ಸೇರಬಹುದು ಎಂದು ಮೂಲಗಳು ತಿಳಿಸಿವೆ. ಆದರೆ, ಕಮಲ್ ನಾಥ್ ಅಥವಾ ನಕುಲ್ ನಾಥ್ ಅವರಿಂದ ಅಧಿಕೃತ ದೃಢೀಕರಣವಿಲ್ಲ.

ಈ ಬೆಳವಣಿಗೆಯ ಬಗ್ಗೆ ಊಹಾಪೋಹಗಳನ್ನು ಹೆಚ್ಚಿಸಿದ ಬಿಜೆಪಿ ವಕ್ತಾರ ಮತ್ತು ಕಮಲ್ ನಾಥ್ ಅವರ ಮಾಜಿ ಮಾಧ್ಯಮ ಸಲಹೆಗಾರ ನರೇಂದ್ರ ಸಲೂಜಾ ಅವರು, ಭೋಪಾಲ್‌ನಲ್ಲಿರುವ ಮಾಜಿ ಮುಖ್ಯಮಂತ್ರಿ ಮತ್ತು ಅವರ ಪುತ್ರನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದಕ್ಕೆ “ಜೈ ಶ್ರೀ ರಾಮ್” ಎಂದು ಶೀರ್ಷಿಕೆ ನೀಡಿದ್ದಾರೆ.

ಈ ಬೆಳವಣಿಗೆಗಗಳ ನಡುವೆ, ಛಿಂದ್ವಾರಾದ ಕಾಂಗ್ರೆಸ್ ಸಂಸದ ನಕುಲ್ ನಾಥ್ ಅವರು ಎಕ್ಸ್‌ನಲ್ಲಿನ ತಮ್ಮ ಪ್ರೊಫೈಲ್ ಬಯೋದಿಂದ ‘ಕಾಂಗ್ರೆಸ್’ ಅನ್ನು ತೆಗೆದುಹಾಕಿದ್ದಾರೆ. ತಂದೆ-ಮಗ ಇಬ್ಬರೂ ಇಂದು ದೆಹಲಿಗೆ ಆಗಮಿಸಲಿದ್ದಾರೆ.

ಊಹಾಪೋಹಗಳಿಗೆ ಸಂಬಂಧಿಸಿದಂತೆ, ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು ಶುಕ್ರವಾರ ರಾತ್ರಿ ಕಮಲ್ ನಾಥ್ ಅವರೊಂದಿಗೆ ಮಾತನಾಡಿದ್ದಾರೆ. ‘ನೆಹರು-ಗಾಂಧಿ ಕುಟುಂಬದೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ ವ್ಯಕ್ತಿಯಿಂದ ನಾವು ಇದನ್ನು ಹೇಗೆ ನಿರೀಕ್ಷಿಸಬಹುದು’ ಎಂದು ಹೇಳಿದ್ದಾರೆ. ನಾವು ಅಂತಹದನ್ನು ನಿರೀಕ್ಷಿಸಬಾರದು ಎಂದು ಅವರು ಹೇಳಿದರು.

ಮಧ್ಯಪ್ರದೇಶದ ಸೋನ್‌ಕಾಚ್‌ನ ಕಾಂಗ್ರೆಸ್ ಶಾಸಕ ಸಜ್ಜನ್ ಸಿಂಗ್ ವರ್ಮಾ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪ್ರೊಫೈಲ್‌ಗಳಿಂದ ಪಕ್ಷದ ಲೋಗೋವನ್ನು ತೆಗೆದುಹಾಕಿದ್ದಾರೆ ಎಂದು ವರದಿಯಾಗಿದೆ. ವರ್ಮಾ ಅವರನ್ನು ಕಮಲ್ ನಾಥ್ ಅವರ ಕಟ್ಟಾ ಬೆಂಬಲಿಗರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರು ಬಿಜೆಪಿಗೆ ಸೇರಿದ ಕೆಲವೇ ದಿನಗಳಲ್ಲಿ ಇತ್ತೀಚಿನ ಊಹಾಪೋಹಗಳು ಬಂದಿತ್ತು. ಅವರು ‘ಗ್ರ್ಯಾಂಡ್ ಓಲ್ಡ್ ಪಾರ್ಟಿ’ಯಿಂದ ಇತ್ತೀಚಿಗೆ ಹೊರಬಂದ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದಾರೆ.

ನಾಲ್ಕು ದಶಕಗಳ ಕಾಲ ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿದ್ದ ಚವಾಣ್ ಅವರು ಎಲ್ಲ ಪಕ್ಷದ ಹುದ್ದೆಗಳಿಗೆ ಮತ್ತು ಭೋಕರ್ ಕ್ಷೇತ್ರದ ಶಾಸಕ ಸ್ಥಾನಕ್ಕೆ ಫೆಬ್ರವರಿ 12 ರಂದು ರಾಜೀನಾಮೆ ನೀಡಿದರು. ಮರುದಿನ, 65 ವರ್ಷದ ನಾಯಕ ಬಿಜೆಪಿ ಸೇರಿದರು. ಫೆಬ್ರವರಿ 15 ರಂದು ಅವರು ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.

ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕರಾದ ಬಾಬಾ ಸಿದ್ದಿಕ್ ಮತ್ತು ಮಿಲಿಂದ್ ದಿಯೋರಾ ಕೂಡ ಪಕ್ಷವನ್ನು ತೊರೆದ ನಂತರ ಚವಾಣ್ ಅವರು ಕಾಂಗ್ರೆಸ್ ತೊರೆದಿದ್ದಾರೆ. ಸಿದ್ದಿಕ್ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಜಿತ್ ಪವಾರ್ ಬಣವನ್ನು ಸೇರಿದರೆ, ದಿಯೋರಾ ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಿವಸೇನಾ ಬಣವನ್ನು ಸೇರಿದರು.

ಇದನ್ನೂ ಓದಿ; ‘ಅಧಿಕಾರ ಶಾಶ್ವತವಲ್ಲ; ನಮ್ಮ ಸಿದ್ಧಾಂತ ಶಾಶ್ವತ..’; ಅಜಿತ್ ವಿರುದ್ಧ ಶರದ್ ಪವಾರ್‌ ಕಿಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...