Homeಮುಖಪುಟಕಡೆಗೂ ಪತ್ರಕರ್ತ ಸಿದ್ದಿಕ್ ಕಪ್ಪನ್‌ರವರಿಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ಕಡೆಗೂ ಪತ್ರಕರ್ತ ಸಿದ್ದಿಕ್ ಕಪ್ಪನ್‌ರವರಿಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್

- Advertisement -
- Advertisement -

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಪ್ರಕರಣದಲ್ಲಿ ಎರಡು ವರ್ಷಗಳಿಂದ ಜೈಲಿನಲ್ಲಿದ್ದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್‌ರವರಿಗೆ ಕೊನೆಗೂ ಸುಪ್ರೀಂ ಕೋರ್ಟ್ ಜಾಮೀನು ನೀಡುವುದಾಗಿ ತಿಳಿಸಿದೆ.

ಪ್ರತಿಯೊಬ್ಬ ವ್ಯಕ್ತಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದಿರುವ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಯುಯು ಲಲಿತ್‌ರವರು ಸುಪ್ರೀಂ ಕೋರ್ಟ್ ಸಿದ್ದಿಕ್ ಕಪ್ಪನ್‌ರವರಿಗೆ ಜಾಮೀನು ನೀಡುತ್ತದೆ ಎಂದು ತಿಳಿಸಿದ್ದಾರೆ.

ಕಪ್ಪನ್‌ ಮಾನ್ಯತೆ ಪಡೆದ ಪತ್ರಕರ್ತರಲ್ಲ. ಅವರಿಗೆ ಗಲಭೆಗಳನ್ನು ಪ್ರಚೋದಿಸಲು ಹಣ ನೀಡಲಾಗಿದೆ. ಅವರು ಗಲಭೆ ಪರಿಸ್ಥಿತಿಯನ್ನು ಸೃಷ್ಟಿಸಲು ಮತ್ತು ಸ್ಫೋಟಕಗಳನ್ನು ಬಳಸಲು ಪ್ರಯತ್ನಿಸುತ್ತಿದ್ದರು. ಅವರು ಪಿಎಫ್‌ಐಗೆ ಸೇರಿದವರು ಮತ್ತು ಇದು ಭಯೋತ್ಪಾದಕ ಸಂಘಟನೆ” ಎಂದು ಉತ್ತರ ಪ್ರದೇಶ ಸರ್ಕಾರದ ಪರವಾಗಿ ವಕೀಲ ಮಹೇಶ್ ಜೇಠ್ಮಲಾನಿ ವಾದಿಸಿದರು.

ಕಪ್ಪನ್ ಬಳಿಯಿಂದ ಏನನ್ನು ವಶಪಡಿಸಿಕೊಂಡಿದ್ದೀರಿ? ಕಾರಿನಲ್ಲಿ ಯಾವುದೇ ಸ್ಫೋಟಕಗಳು ಕಂಡುಬಂದಿಲ್ಲ, ಅವನ ಬಳಿ ಯಾವುದೇ ವಸ್ತುಗಳು ಕಂಡುಬಂದಿಲ್ಲ. ಹಾಗಿದ್ದ ಮೇಲೆ ಸ್ಪೋಟಕಗಳನ್ನು ಎಲ್ಲಿ ಬಳಸಿದರು ಎಂದು ಪ್ರಶ್ನಿಸಿದ ಲಲಿತ್‌ರವರು ಜಾಮೀನು ಮಂಜೂರು ಮಾಡಿದರು. ಮುಂದಿನ ಆರು ವಾರಗಳ ಕಾಲ ದೆಹಲಿ ಪೊಲೀಸರಿಗೆ ಮತ್ತು ಆನಂತರ ಕೇರಳ ಪೊಲೀಸರಿಗೆ ವರದಿ ಮಾಡಿಕೊಳ್ಳಬೇಕು ಎಂಬು ಷರತ್ತು ವಿಧಿಸಲಾಗಿದೆ.

2020 ರ ಅಕ್ಟೋಬರ್ 5 ರಂದು ಸಿದ್ದೀಕ್ ಕಪ್ಪನ್ ಅವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. 2020 ರ ಸೆಪ್ಟೆಂಬರ್ 14 ರಂದು ಹತ್ರಾಸ್‌ನಲ್ಲಿ 19 ವರ್ಷದ ದಲಿತ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ವರದಿ ಮಾಡುವುದಾಕ್ಕಾಗಿ ಕಪ್ಪನ್ ಇತರ ಮೂವರೊಂದಿಗೆ ಕಾರಿನಲ್ಲಿ ಹತ್ರಾಸ್‌ಗೆ ಪ್ರಯಾಣಿಸುತ್ತಿದ್ದಾಗ ಬಂಧನಕ್ಕೊಳಗಾಗಿದ್ದರು. ಅಂದಿನಿಂದ ಅವರಿಗೆ ಜಾಮೀನು ನಿರಾಕರಿಸಲಾಗಿತ್ತು.

ಕೇರಳ ಮೂಲದ ಪತ್ರಕರ್ತರಾಗಿರುವ ಸಿದ್ದಿಕ್‌ ಜಾತಿ ಆಧಾರಿತ ಗಲಭೆಯನ್ನು ಪ್ರಾರಂಭಿಸಲು ಮತ್ತು ಕೋಮು ಸೌಹಾರ್ದತೆಯನ್ನು ಸೃಷ್ಟಿಸಲು ಉದ್ದೇಶಿಸಿದ್ದಾರೆ ಎಂದು ಉತ್ತರ ಪ್ರದೇಶದ ಪೊಲೀಸರು ಮೊದಲು ಆರೋಪಿಸಿದ್ದರು. ತರುವಾಯ, ದೇಶದ್ರೋಹದ ಆರೋಪಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಸಿದ್ದಿಕ್ ಕಪ್ಪನ್ ನಿರಪರಾಧಿಯಾಗಿದ್ದು ಅವರು ಅಸಾಮರಸ್ಯ ಹರಡಲು ಯಾವುದೇ ವೇದಿಕೆಯನ್ನು ಬಳಸಿಲ್ಲ. ಕಪ್ಪನ್‌ ಅವರಿಗೆ ಮರೆಮಾಚಲು ಏನೂ ಇಲ್ಲ. ಅವರು ತಮ್ಮ ಮುಗ್ಧತೆಯನ್ನು ಸಾಬೀತುಪಡಿಸಲು ನಾರ್ಕೋ ವಿಶ್ಲೇಷಣೆ ಅಥವಾ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗಳಿಗೆ ಒಳಗಾಗಲು ಕೂಡಾ ತಯಾರು” ಎಂದು ನ್ಯಾಯಾಲಯದಲ್ಲಿ ಅವರ ಪರ ವಕೀಲರು ವಾದಿಸಿದ್ದರು.

ಕಪ್ಪನ್ ಮತ್ತು ಇತರ ಇಬ್ಬರೊಂದಿಗೆ ಬಂಧಿಸಲ್ಪಟ್ಟ ಕ್ಯಾಬ್ ಚಾಲಕನಿಗೆ ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್  ಜಾಮೀನು ನೀಡಿತ್ತು.

ಇದನ್ನೂ ಓದಿ: 2015ರ ಸಮಯಕ್ಕೆ ಆತ್ಮೀಯರಾಗಿದ್ದವರ ದನಿ ಬದಲಾಗಿದ್ದನ್ನು ಗಮನಿಸಿದೆ; ಮೊಹಮ್ಮದ್ ಝುಬೇರ್ ಸಂದರ್ಶನ ಭಾಗ-1

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಯಾವ ತಪ್ಪನ್ನೂ ಮಾಡದ ಸಿದ್ದಿಕ್ ಕಪ್ಪನ್ ಎರಡು ವರ್ಷ ಜೈಲು ಶಿಕ್ಷೆ ಅನುಬವಿಸಿದರು. ಇವರಿಗೆ ಜಾಮೀನು ದೊರಕಿದ್ದು ಸ್ವಾಗತಾರ್ಹ.

LEAVE A REPLY

Please enter your comment!
Please enter your name here

- Advertisment -

Must Read

ಮಕ್ಕಳಿಗೆ ಟಿಫಿನ್ ಬಾಕ್ಸ್‌ಗಳಲ್ಲಿ ಮಾಂಸಾಹಾರ ತರದಂತೆ ಸೂಚಿಸಿದ ಶಾಲೆ: ಆರೋಪ

0
ಜೈಪುರದ ಪ್ರತಿಷ್ಠಿತ ಶಾಲೆಯೊಂದರಲ್ಲಿ ಮಕ್ಕಳಿಗೆ ಟಿಫಿನ್ ಬಾಕ್ಸ್‌ಗಳಲ್ಲಿ ಮಾಂಸಾಹಾರವನ್ನು ತರದಂತೆ ನಿಷೇಧಿಸಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಈ ಬಗೆಗಿನ ಆರೋಪವನ್ನು ಶಾಲೆಯ ಮುಖ್ಯೋಪಾಧ್ಯಾಯರು ನಿರಾಕರಿಸಿದ್ದಾರೆ. ಕಥೆಗಾರ ಮತ್ತು ಚಿತ್ರಕಥೆಗಾರ, ದರಾಬ್...