Homeಮುಖಪುಟಬಿಹಾರ: ನಾಪತ್ತೆಯಾಗಿದ್ದ ಮಹಿಳೆ ಶವ ಪತ್ತೆ, ಪೊಲೀಸ್-ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಉದ್ರಿಕ್ತ ಗುಂಪು

ಬಿಹಾರ: ನಾಪತ್ತೆಯಾಗಿದ್ದ ಮಹಿಳೆ ಶವ ಪತ್ತೆ, ಪೊಲೀಸ್-ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಉದ್ರಿಕ್ತ ಗುಂಪು

- Advertisement -
- Advertisement -

ನಾಪತ್ತೆಯಾದ ಎರಡು ದಿನಗಳ ನಂತರ ಮಹಿಳೆಯ ಶವ ಭಾನುವಾರ ಪತ್ತೆಯಾಗಿದ್ದು, ಬಿಹಾರದ ನೌಗಾಚಿಯಾದ ಉದ್ರಿಕ್ತ ಗುಂಪೊಂದು ಪೊಲೀಸ್ ಸಿಬ್ಬಂದಿ ಮತ್ತು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದೆ.

ಸಿಟ್ಟಿಗೆದ್ದ ಗುಂಪು ಪೊಲೀಸ್ ವಾಹನಕ್ಕೂ ಬೆಂಕಿ ಹಚ್ಚಿದ್ದು, ಸುದ್ದಿ ವರದಿ ಮಾಡಲು ಸ್ಥಳದಲ್ಲಿದ್ದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದೆ. ದಾಳಿಯಲ್ಲಿ ಇಬ್ಬರು ಪತ್ರಕರ್ತರಿಗೆ ಗಂಭೀರ ಗಾಯಗಳಾಗಿವೆ.

ಸ್ಥಳೀಯರ ಮಾಹಿತಿ ಪ್ರಕಾರ, ಶೋಭಾದೇವಿ ಎಂಬ ಮಹಿಳೆ ಫೆ.16ರ ಶುಕ್ರವಾರ ಹಾಲು ಮಾರಲು ಹೋದಾಗ ನಾಪತ್ತೆಯಾಗಿದ್ದಳು. ಭಾನುವಾರ ಆಕೆಯ ಶವವನ್ನು ಪತ್ತೆ ಹಚ್ಚಲಾಗಿದ್ದು, ನಂತರ ಸ್ಥಳೀಯರು ಪೊಲೀಸರ ಮೇಲೆ ಹಲ್ಲೆ ನಡೆಸಿದರು; ಪದೇ ಪದೇ ದೂರು ನೀಡಿದರೂ ಅವರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಪ್ರಕರಣದ ತನಿಖೆಯನ್ನು ಪ್ರಾರಂಭಿಸಲಾಗಿದ್ದು, ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ನಾವು ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದೇವೆ. ಮಹಿಳೆಯ ಶವವನ್ನು ಹೊರತೆಗೆಯಲು ನಾವು ಪ್ರಯತ್ನಿಸುತ್ತಿದ್ದೇವೆ. ಸ್ಥಳೀಯ ಎಸ್‌ಡಿಒ ಮತ್ತು ಡಿಎಸ್‌ಪಿ ಅದರಲ್ಲಿ ಭಾಗಿಯಾಗಿದ್ದಾರೆ…’ ಎಂದು ನೌಗಾಚಿಯಾ ಎಸ್‌ಪಿ ಪುರನ್ ಕುಮಾರ್ ಝಾ ಅವರು ಹೇಳಿದರು.

ಕಳೆದ ವರ್ಷದ ಆರಂಭದಲ್ಲಿ, ಬಿಹಾರದ ನೌಗಾಚಿಯಾದಲ್ಲಿ ನಿವಾಸಿಯೊಬ್ಬರ ಮನೆಯ ಮೇಲೆ ದಾಳಿ ನಡೆಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಗ್ರಾಮಸ್ಥರ ಗುಂಪು ಹಲ್ಲೆ ನಡೆಸಿತ್ತು. ಗುರುವಾರ ರಾತ್ರಿ ಬಿಹಾರದ ನೌಗಾಚಿಯಾದಲ್ಲಿ ನಿವಾಸಿಯೊಬ್ಬರ ಮನೆಯ ಮೇಲೆ ದಾಳಿ ನಡೆಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಗ್ರಾಮಸ್ಥರ ಗುಂಪು ಹಲ್ಲೆ ನಡೆಸುವ ಮುನ್ನವೇ ಪೊಲೀಸ್ ತಂಡ ಆರೋಪಿಯ ಪತ್ನಿ ಮತ್ತು ಮಗುವಿನ ಮೇಲೆ ಹಲ್ಲೆ ನಡೆಸಿದೆ ಎಂದು ಗ್ರಾಮದ ನಿವಾಸಿಗಳು ಆರೋಪಿಸಿದ್ದಾರೆ.

ಪೊಲೀಸ್ ತಂಡ ಆರೋಪಿಯ ಪತ್ನಿ ಮತ್ತು ಮಗುವಿನ ಮೇಲೆ ಹಲ್ಲೆ ನಡೆಸಿದೆ ಎಂದು ದಿಮಾಹ ಗ್ರಾಮದ ನಿವಾಸಿಗಳು ಆರೋಪಿಸಿದ್ದಾರೆ.

ಇದನ್ನೂ ಓದಿ; ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ಅಕ್ರಮ; ಉತ್ತರ ಪ್ರದೇಶದಾದ್ಯಂತ 122 ಮಂದಿ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...