Homeಮುಖಪುಟಜಾರ್ಖಾಂಡ್‌ನಲ್ಲಿ ಜಾತಿಗಣತಿಗೆ ಸಮ್ಮತಿಸಿದ ಸಿಎಂ ಚಂಪೈ ಸೊರೆನ್

ಜಾರ್ಖಾಂಡ್‌ನಲ್ಲಿ ಜಾತಿಗಣತಿಗೆ ಸಮ್ಮತಿಸಿದ ಸಿಎಂ ಚಂಪೈ ಸೊರೆನ್

- Advertisement -
- Advertisement -

ಬಿಹಾರದ ಮಾದರಿಯಲ್ಲಿ ಜಾರ್ಖಾಂಡ್ ರಾಜ್ಯದಲ್ಲಿ ಜಾತಿ ಆಧಾರಿತ ಸಮೀಕ್ಷೆಗೆ ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ಚಾಲನೆ ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಜಾತಿಗಣತಿ ಬಗ್ಗೆ ಕರಡು ತಯಾರಿಸಿ ಸಚಿವ ಸಂಪುಟದ ಮುಂದೆ ಇಡಬೇಕು ಎಂದು ಸಿಬ್ಬಂದಿ ಸುಧಾರಣೆ ಇಲಾಖೆಗೆ ಸಿಎಂ ನಿರ್ದೇಶಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಲೋಕಸಭೆ ಚುನಾವಣೆ ಬಳಿಕ ಜಾರ್ಖಾಂಡ್‌ನಲ್ಲಿ ಜಾತಿಗಣತಿ ನಡೆಯಲಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಡೊಡ್ಡ ಜನಸಂಖ್ಯೆಗೆ, ದೊಡ್ಡ ಪಾಲು, ಜಾರ್ಖಂಡ್ ಸಿದ್ಧವಾಗಿದೆ ಎಂದು ಬರೆದುಕೊಂಡಿದ್ದಾರೆ.

ಜಾರ್ಖಂಡ್ ಸಿಎಂ ಅವರ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಚೌಬೆ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸಿಬ್ಬಂದಿ ಇಲಾಖೆಯು ಜಾರ್ಖಂಡ್‌ನಲ್ಲಿ ಸಮೀಕ್ಷೆಯನ್ನು ನಡೆಸಲು ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್‌ಒಪಿ) ಸಿದ್ಧಪಡಿಸುತ್ತದೆ. ಜಾತಿಗಣತಿ ಕುರಿತು ಅನುಮೋದನೆಗಾಗಿ ಸಂಪುಟದ ಮುಂದೆ ಇಡಲಾಗುವುದು. ಕಳೆದ ವರ್ಷ ಜನವರಿ 7 ಮತ್ತು ಅಕ್ಟೋಬರ್ 2ರ ನಡುವೆ ಬಿಹಾರದಲ್ಲಿ ಜಾತಿಗಣತಿ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಅದರಂತೆ ಜಾರ್ಖಂಡ್‌ನನಲ್ಲೂ ಜಾತಿ ಗಣತಿಯನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ. ಡೇಟಾ ಸಂಗ್ರಹಣೆಯನ್ನು ನಡೆಸಲಾದ ನೆರೆಯ ಬಿಹಾರದ ಮಾದರಿಯಲ್ಲಿ ಜಾತಿ ಸಮೀಕ್ಷೆಯನ್ನು ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಜಾತಿಗಣತಿ ವರದಿ ಬಿಡುಗಡೆಗೊಳಿಸಿದ್ದ ಬಿಹಾರ:

ಅ.2, 2023ರಂದು ಬಿಹಾರ ರಾಜ್ಯ ಸರಕಾರವು ಜಾತಿ ಗಣತಿ ವರದಿಯನ್ನು ಬಿಡುಗಡೆಗೊಳಿಸಿತ್ತು. ಈ ಮೂಲಕ ದೇಶದಲ್ಲಿ ಜಾತಿ ಆಧಾರಿತ ಸಮೀಕ್ಷೆಯ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಬಿಹಾರದಲ್ಲಿ 36%ದಷ್ಟು ಅತಿಹೆಚ್ಚು ಹಿಂದುಳಿದಿರುವ ಮತ್ತು 27% ಹಿಂದುಳಿದ ವರ್ಗದ ಜನರಿದ್ದಾರೆ. 19.7%  ಪರಿಶಿಷ್ಟ ಜಾತಿಯ ಜನ ಮತ್ತು 1.7% ಪರಿಶಿಷ್ಟ ಪಂಗಡಗಳ ಜನರಿದ್ದಾರೆ. ಸಾಮಾನ್ಯ ವರ್ಗದ ಜನಸಂಖ್ಯೆಯು  15.5% ದಷ್ಟಿದೆ. ರಾಜ್ಯದ ಒಟ್ಟು ಜನಸಂಖ್ಯೆ 13.1 ಕೋಟಿಗೂ ಹೆಚ್ಚು ಎಂದು ಜಾತಿಗಣತಿಯಲ್ಲಿ ಬಹಿರಂಗವಾಗಿತ್ತು. ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರ ಯಾದವ್ ಸಮುದಾಯವು ಅತಿಹೆಚ್ಚು ಅಂದರೆ ಒಬಿಸಿ ವರ್ಗಗಳಲ್ಲಿ 14.27 ಶೇಕಡಾ ಜನಸಂಖ್ಯೆಯನ್ನು ಹೊಂದಿದೆ. ಭೂಮಿಹಾರ್ ಜನಸಂಖ್ಯೆ ಶೇಕಡಾ 2.86 ರಷ್ಟಿದ್ದರೆ, ಬ್ರಾಹ್ಮಣರು ಶೇಕಡಾ 3.66 ರಷ್ಟಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಸಮುದಾಯಕ್ಕೆ ಸೇರಿದ ಕುರ್ಮಿಗಳು ಜನಸಂಖ್ಯೆ ಶೇಕಡಾ 2.87 ರಷ್ಟಿದ್ದಾರೆ. ಮುಸಾಹರ್‌ಗಳು ಶೇಕಡಾ 3ರಷ್ಟಿದ್ದಾರೆ ಎಂದು ವರದಿ ತಿಳಿಸಿತ್ತು. ಇದಾದ ಬಳಿಕ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಜಾತಿ ಆಧಾರಿತ ಮೀಸಲಾತಿಯನ್ನು 50% ರಿಂದ 65%ಕ್ಕೆ ಹೆಚ್ಚಿಸುವ ಮಸೂದೆಯನ್ನು ಬಿಹಾರ ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿತ್ತು.

ಆ ಬಳಿಕ ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶದಲ್ಲಿ ಜಾತಿ ಗಣತಿ ಕೂಗು ಹೆಚ್ಚಾಗಿ ಕೇಳಿ ಬಂದಿತ್ತು. ಇಂಡಿಯ ಮೈತ್ರಿ ಕೂಟ 2024ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶದಾದ್ಯಂತ ಜಾತಿಗಣತಿಯನ್ನು  ನಡೆಸುವುದಾಗಿ ಹೇಳಿಕೊಂಡಿದೆ.

ಇದನ್ನು ಓದಿ: ಜಾರ್ಖಂಡ್‌ನಲ್ಲಿ ಮತ್ತೆ ರಾಜಕೀಯ ಬಿಕ್ಕಟ್ಟು; ಸ್ವಪಕ್ಷದ ಶಾಸಕರನ್ನು ಸಂಪುಟದಿಂದ ಕೈಬಿಡುವಂತೆ ಪಟ್ಟು ಹಿಡಿದ ಕಾಂಗ್ರೆಸ್‌ ಶಾಸಕರು

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...