Homeಮುಖಪುಟಪರಸ್ಪರ ಒಪ್ಪಿಗೆಯಿಂದ ಪಂಜಾಬ್‌ನಲ್ಲಿ ಪ್ರತ್ಯೇಕ ಸ್ಪರ್ಧೆಗೆ ಕಾಂಗ್ರೆಸ್-ಆಫ್ ನಿರ್ಧಾರ: ಅರವಿಂದ್ ಕೇಜ್ರಿವಾಲ್

ಪರಸ್ಪರ ಒಪ್ಪಿಗೆಯಿಂದ ಪಂಜಾಬ್‌ನಲ್ಲಿ ಪ್ರತ್ಯೇಕ ಸ್ಪರ್ಧೆಗೆ ಕಾಂಗ್ರೆಸ್-ಆಫ್ ನಿರ್ಧಾರ: ಅರವಿಂದ್ ಕೇಜ್ರಿವಾಲ್

- Advertisement -
- Advertisement -

ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಪಂಜಾಬ್‌ನ ಲೋಕಸಭೆ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲು ‘ಪರಸ್ಪರ ಒಪ್ಪಿಗೆ’ ನೀಡಿವೆ; ಈ ವಿಷಯದಲ್ಲಿ ಎರಡು ಪಕ್ಷಗಳ ನಡುವೆ ಯಾವುದೇ ಗೊಂದಲ ಇಲ್ಲ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಕೇಜ್ರಿವಾಲ್ ಇಂದು ಕಾಂಗ್ರೆಸ್ ನಾಯಕ ಮತ್ತು ಖ್ಯಾತ ವಕೀಲ ಅಭಿಷೇಕ್ ಸಿಂಘ್ವಿ ಅವರ ಮನೆಗೆ ಊಟಕ್ಕೆ ಭೇಟಿ ನೀಡಿದ್ದರು. ಪಂಜಾಬ್‌ನಲ್ಲಿ ಎಎಪಿ ಮತ್ತು ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಧಾರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್‌ನಲ್ಲಿ ಕಾಂಗ್ರೆಸ್ ಮತ್ತು ಎಎಪಿ ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಪರಸ್ಪರ ಒಪ್ಪಿಗೆ ಸೂಚಿಸಿವೆ, ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ’ ಎಂದರು.

ಪಂಜಾಬ್‌ನಲ್ಲಿ ಪ್ರತಿಸ್ಪರ್ಧಿಗಳಾಗಿರುವ ಕಾಂಗ್ರೆಸ್ ಮತ್ತು ಆಪ್ ಇಂಡಿಯಾ ಬಣದಲ್ಲಿ ಮಿತ್ರಪಕ್ಷಗಳು. ‘ದೆಹಲಿಯಲ್ಲಿ ಸೀಟು ಹಂಚಿಕೆಯನ್ನು ಅಂತಿಮಗೊಳಿಸಲು ಎಎಪಿ ಕಾಂಗ್ರೆಸ್ ಜೊತೆ ಮಾತುಕತೆ ನಡೆಸುತ್ತಿದೆ’ ಎಂದು ಕೇಜ್ರಿವಾಲ್ ಹೇಳಿದರು. ‘ನಾವು ದೆಹಲಿಯಲ್ಲಿ ಮೈತ್ರಿ ಕುರಿತು ಕಾಂಗ್ರೆಸ್‌ನೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ನಾವು ಸೀಟು ಹಂಚಿಕೆಯ ಬಗ್ಗೆ ಚರ್ಚಿಸುತ್ತಿದ್ದೇವೆ. ಯಾವುದೇ ಮೈತ್ರಿ ಇಲ್ಲದಿದ್ದರೆ (ಕಾಂಗ್ರೆಸ್ ಮತ್ತು ಎಎಪಿ ನಡುವೆ) ಬಿಜೆಪಿಗೆ ಸುಲಭವಾಗುತ್ತದೆ’ ಎಂದು ಅವರು ಹೇಳಿದರು.

2019ರ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರ ರಾಜಧಾನಿಯ ಎಲ್ಲ ಏಳು ಸಂಸದೀಯ ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. 2014ರಲ್ಲಿ ಅವರು ಇದೇ ಸಾಧನೆ ಮಾಡಿದ್ದರು. ಕೇಜ್ರಿವಾಲ್ ಅವರ ಹೇಳಿಕೆಯು ಇಂಡಿಯಾ ಮಿತ್ರಪಕ್ಷಗಳು ಬಿಜೆಪಿಯನ್ನು ಎದುರಿಸುವ ಮೂಲಕ, ತಮ್ಮ ಓಟ್‌ ಬ್ಯಾಂಕ್ ಹಿಡಿದಿಟ್ಟುಕೊಳ್ಳುವ ತಂತ್ರ ಎಂದು ಸೂಚಿಸುತ್ತದೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಪಂಜಾಬ್‌ನ ಎಲ್ಲ 13 ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಆಪ್ ನಿರ್ಧರಿಸಿದೆ ಎಂದು ಈ ಹಿಂದೆ ಘೋಷಿಸಿದ್ದರು. ಪಂಜಾಬ್‌ನ ಕಾಂಗ್ರೆಸ್‌ನ ಉನ್ನತ ನಾಯಕರಲ್ಲಿ ಒಬ್ಬರಾದ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪರತಾಪ್ ಸಿಂಗ್ ಬಾಜ್ವಾ ಅವರು ಮುಖ್ಯಮಂತ್ರಿಗೆ ‘ಧನ್ಯವಾದ’ಗಳನ್ನು ಸಲ್ಲಿಸಿದ್ದರು; ಕಾಂಗ್ರೆಸ್ ಬಯಸಿದ್ದು ಇದನ್ನೇ’ ಎಂದು ಹೇಳಿದ್ದಾರೆ.

‘ಪಂಜಾಬ್ ಮತ್ತು ಇತರ ರಾಜ್ಯಗಳ ನಡುವೆ ವ್ಯತ್ಯಾಸವಿದೆ. ಇಲ್ಲಿ ಅವರು (ಎಎಪಿ) ಸರ್ಕಾರದಲ್ಲಿದ್ದಾರೆ ಮತ್ತು ನಾವು ಪ್ರಮುಖ ವಿರೋಧ ಪಕ್ಷವಾಗಿದ್ದೇವೆ. ನಾವಿಬ್ಬರೂ ಹೇಗೆ ಒಟ್ಟಿಗೆ ಸೇರಬಹುದು? ನಾವು ಒಗ್ಗೂಡಿದರೆ, ಆಡಳಿತ ವಿರೋಧಿ ಮತಗಳು ಬಿಜೆಪಿ ಅಥವಾ ಅಕಾಲಿದಳಕ್ಕೆ ಬದಲಾಗಲಿವೆ. ನಾವು ನಮ್ಮ ಸ್ಥಾನವನ್ನು ಹೇಗೆ ಬಿಟ್ಟುಕೊಡಬಹುದು? ಕಾಂಗ್ರೆಸ್ ಪುನರಾಗಮನದ ದಾರಿಯಲ್ಲಿದೆ. ಈ ಮೂಲಕ ನಾವು ನಮ್ಮ ಅಸ್ತಿತ್ವವನ್ನು ಮುಂದುವರಿಸಿ, ನಮ್ಮ ವೋಟ್ ಬ್ಯಾಂಕ್ ಅನ್ನು ಉಳಿಸಿಕೊಳ್ಳಬೇಕು; ಅದನ್ನು ಬೆಳೆಸಿಕೊಳ್ಳಬೇಕು. ಇದು ಇಬ್ಬರಿಗೂ (ಕಾಂಗ್ರೆಸ್ ಮತ್ತು ಎಎಪಿ) ಹೆಚ್ಚು ಉತ್ತಮವಾಗಿದೆ’ ಎಂದು ಅವರು ಹೇಳಿದರು.

ಎಎಪಿ ಮತ್ತು ಕಾಂಗ್ರೆಸ್ ನಡುವಿನ ತಿಳುವಳಿಕೆಯು ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಅದರ ಮುಖ್ಯಸ್ಥ ಜೆಪಿ ನಡ್ಡಾ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಮೈತ್ರಿಯನ್ನು ‘ಅವಕಾಶವಾದಿ’ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ; ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ಅಕ್ರಮ; ಉತ್ತರ ಪ್ರದೇಶದಾದ್ಯಂತ 122 ಮಂದಿ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...