Homeರಂಜನೆಕ್ರೀಡೆIPL2022: ಪವರ್ ಕಟ್ ಸಮಸ್ಯೆಯಿಂದ ಸಿಎಸ್‌ಕೆ ತಂಡದ ಕಾನ್ವೆ ಔಟ್? ನೆಟ್ಟಿಗರಿಂದ ತರಾಟೆ

IPL2022: ಪವರ್ ಕಟ್ ಸಮಸ್ಯೆಯಿಂದ ಸಿಎಸ್‌ಕೆ ತಂಡದ ಕಾನ್ವೆ ಔಟ್? ನೆಟ್ಟಿಗರಿಂದ ತರಾಟೆ

- Advertisement -
- Advertisement -

ನಾಲ್ಕು ಬಾರಿ IPL ಚಾಂಪಿಯನ್ ಆಗಿರುವ ಚನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ಬಾರಿ ಸೋಲಿನ ಮೇಲೆ ಸೋಲುಗಳು ಕಾಡುತ್ತಿವೆ. ಈ ಬಾರಿಯ ಟೂರ್ನಿಯಲ್ಲಿ ನಾಯಕತ್ವವನ್ನು ಜಡೇಜಾರಿಂದ ಧೋನಿಗೆ ವಹಿಸಿದರೂ ಸೋಲುಗಳು ಮಾತ್ರ ನಿಂತಿಲ್ಲ. ಆಡಿರುವ 12 ಪಂದ್ಯಗಳಲ್ಲಿ 8 ಅನ್ನು ಸೋತು, 4 ಅನ್ನು ಗೆದ್ದು ಸದ್ಯ 9ನೇ ಸ್ಥಾನದಲ್ಲಿರುವ ಸಿಎಸ್‌ಕೆ ತನ್ನ ಪ್ಲೆ ಆಫ್ ಕನಸ್ಸನ್ನು ಕೈಬಿಟ್ಟಿದೆ. ಗುರುವಾರ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಪವರ್ ಕಟ್ ಸಮಸ್ಯೆಯೂ ಕೂಡ ಸಿಎಸ್‌ಕೆ ತಂಡವನ್ನು ಕಾಡಿತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 49 ಎಸೆತಗಳಲ್ಲಿ 87 ರನ್ ಸಿಡಿಸಿ ತಂಡದ ಜಯಕ್ಕೆ ಕಾರಣವಾಗಿದ್ದ ಚನ್ನೈ ತಂಡದ ಆಟಗಾರ ಡೆವೊನ್ ಕಾನ್ವೆ ಮುಂಬೈ ಎದುರಿನ ಪಂದ್ಯದಲ್ಲಿ ಮಾತ್ರ ಎಲ್‌ಬಿಡಬ್ಲೂ ಆಗಿ ಸೊನ್ನೆಗೆ ಔಟ್ ಆಗಬೇಕಾಯಿತು. ವಾಸ್ತವದಲ್ಲಿ ಅವರು ಔಟ್ ಆಗಿರಲಿಲ್ಲ, ಬಾಲ್ ವಿಕೆಟ್‌ನಿಂದ ಹೊರಹೋಗುವಂತಿತ್ತು. ಆದರೆ ಅದನ್ನು ಅವರು ರಿವ್ಯೂ ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ ಪವರ್ ಕಟ್ ಸಮಸ್ಯೆಯಿಂದಾಗಿ ಪಂದ್ಯದ ಮೊದಲ 10 ಎಸೆತಗಳಲ್ಲಿ ಡಿಆರ್‌ಎಸ್ ವರ್ಕ್ ಆಗಲಿಲ್ಲ!

ಡ್ಯಾನಿಯಲ್ ಸ್ಯಾಮ್ಸ್ ಎಸೆದ ಎರಡನೆ ಎಸೆತ ಕಾನ್ವೆ ಪ್ಯಾಡ್‌ಗೆ ತಗುಲಿತು. ಬೌಲರ್ ಮನವಿ ಪುರಸ್ಕರಿಸಿದ ಮೊದಲ ಅಂಪೈರ್ ಔಟ್ ಎಂದು ತೀರ್ಪಿತ್ತರು. ಆದರೆ ಕಾನ್ವೆ ಅದನ್ನು ಒಪ್ಪಲು ಸಿದ್ದರಿರಲಿಲ್ಲ. ಡಿಆರ್‌ಎಸ್ ಇಲ್ಲದ ಕಾರಣ ಒಲ್ಲದ ಮನಸ್ಸಿನಿಂದಲೇ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಅಲ್ಲಿಂದ ಮುಂದಕ್ಕೆ ಮೋಯಿನ್ ಅಲಿ, ರಾಬಿನ್ ಉತ್ತಪ್ಪ, ರುತುರಾಜ್ ಗಾಯಕ್‌ವಾಡ್ ಹೀಗೆ ಸಾಲು ಸಾಲು ವಿಕೆಟ್‌ ಬಿದ್ದು ಚನ್ನೈ 97 ರನ್‌ಗಳಿಗೆ ಆಲೌಟ್‌ ಆಯಿತು ಮತ್ತು 5 ವಿಕೆಟ್‌ಗಳ ಹೀನಾಯ ಸೋಲುಂಡಿತು.

ಕಾನ್ವೆ ಔಟ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗಳು ಆರಂಭವಾಗಿವೆ. ವೀಕ್ಷಕ ವಿವರಣೆ ನೀಡುತ್ತಿದ್ದ ಸುನೀಲ್ ಗಾವಸ್ಕರ್ ಕೂಡ ಇದು ಕಳಪೆ ತೀರ್ಪು ಎಂದು ಉಚ್ಚರಿಸಿದ್ದಾರೆ. ಪ್ರಪಂಚದ ದೊಡ್ಡ ಟೂರ್ನಿಯಲ್ಲಿ ಪವರ್ ಕಟ್ ಸಮಸ್ಯೆಯೇ ಎಂದು ಹಲವರು ಟೀಕಿಸಿದ್ದಾರೆ. ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಕೂಡ ಟೀಕೆ ವ್ಯಕ್ತಪಡಿಸಿದ್ದಾರೆ.

ಮುಂಬೈ ಇಂಡಿಯನ್ಸ್ ಮಾಲೀಕರಾದ ಮುಖೇಶ್ ಅಂಬಾನಿ ವಿರುದ್ಧವೂ ಟ್ರೋಲ್‌ಗಳು ಕಂಡುಬಂದಿವೆ. ಅವುಗಳನ್ನು ಈ ಕೆಳಗೆ ನೋಡಬಹುದು.

ಇದೇ ರೀತಿಯ ವಿವಾದ ಕಳೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಔಟಾದಾಗ ಉಂಟಾಗಿತ್ತು. ಕೀಪರ್ ಕ್ಯಾಚ್ ಮನವಿಯನ್ನು ಡಿಆರ್‌ಎಸ್‌ ಮೂಲಕ ಚೆಕ್ ಮಾಡಲಾಗಿತ್ತು. ಆಗ ಬಾಲ್ ಬ್ಯಾಟ್‌ ಹತ್ತಿರ ಬರುವ ಮುನ್ನವೇ ಅಲ್ಟ್ರಾ ಎಡ್ಜ್‌ನಲ್ಲಿ ಸ್ಪೈಕ್ ಆಗುತ್ತಿತ್ತು. ಅದನ್ನು ಔಟ್ ಎಂದು ಘೋಷಿಸಿದಾಗ ರೋಹಿತ್ ಶರ್ಮಾ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಐಪಿಎಲ್‌: ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಕ್ರೀಡಾಸ್ಫೂರ್ತಿ ಮೆರೆದ ಕ್ವಿಂಟನ್ ಡಿಕಾಕ್‌

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಠ್ಯ ಪರಿಷ್ಕರಣೆ ವಿವಾದಕ್ಕೆ ಕಾರ್ಟೂನ್‌ಗಳು ಸ್ಪಂದಿಸಿದ್ದು ಹೀಗೆ…

0
ಕರ್ನಾಟಕದಲ್ಲಿ ಪಠ್ಯ ಪರಿಷ್ಕರಣೆ ವಿವಾದ ತಾರಕಕ್ಕೆರಿದೆ. ಕರ್ನಾಟಕ ಸರ್ಕಾರ ನೇಮಿಸಿದ್ದ ರೋಹಿತ್ ಚಕ್ರತೀರ್ಥ ಸಮಿತಿ ಮಾಡಿರುವ ಪರಿಷ್ಕರಣೆಗಳು ಸಂವಿಧಾನ ವಿರೋಧಿಯಾಗಿದ್ದು, ಒಂದು ಸಮುದಾಯವನ್ನು ಮಾತ್ರ ಪರಿಗಣಿಸಿವೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಎಳೆಯ...