ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ನಡುವಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಎಡಗೈ ಬ್ಯಾಟ್‌ಮನ್, ಎಲ್‌ಎಸ್‌ಜಿ ಪರ ಆಡುತ್ತಿರುವ ಕ್ವಿಂಟನ್ ಡಿಕಾಕ್ ಕ್ರೀಡಾ ಸ್ಫೂರ್ತಿ ಮೆರೆದು ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಐಪಿಎಲ್ 15ನೇ ಆವೃತ್ತಿಯ 42ನೇ ಪಂದ್ಯದಲ್ಲಿ ಇಂದು ಉಭಯ ತಂಡಗಳು ಮುಖಾಮುಖಿಯಾಗಿವೆ. ಕನ್ನಡಿಗರಾದ ಕೆ.ಎಲ್.ರಾಹುಲ್ ಎಲ್‌ಎಸ್‌ಜಿಗೆ, ಮಯಾಂಕ್ ಅಗರ್‌ವಾಲ್ ಪಂಜಾಬ್ ಕಿಂಗ್ಸ್ ತಂಡಕ್ಕೆ ನಾಯಕರಾಗಿದ್ದು ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ದುಕೊಂಡಿತು.
ಬ್ಯಾಟಿಂಗ್‌ಗೆ ಇಳಿದ ಎಲ್‌ಎಸ್‌ಜಿ ಆರಂಭಿಕ ಆಘಾತ ಎದುರಿಸಿತು. ಕೆ.ಎಲ್.ರಾಹುಲ್ 6 ರನ್ ಗಳಿಸಿ ಔಟಾದರು. ಆದರೆ ಕ್ವಿಂಟನ್ ಡಿಕಾಕ್ ಹಾಗೂ ದೀಪಕ್ ಹೂಡಾ 2ನೇ ವಿಕೆಟ್‌ಗೆ ಉತ್ತಮ ಆರಂಭ ನೀಡಿದರು. 37 ಬಾಲ್‌ಗಳಲ್ಲಿ 4 ಫೋರ್, 2 ಸಿಕ್ಸ್ ಮೂಲಕ 46 ರನ್ ಗಳಿಸಿ ಅರ್ಧ ಶತಕದ ಹೊಸ್ತಿಲಲ್ಲಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಉತ್ತಮ ಆರಂಭ ನೀಡಿ ಆಟವಾಡುತ್ತಿದ್ದ ಡಿಕಾಕ್ 12ನೇ ಓವರ್‌ನಲ್ಲಿ ಔಟ್ ಆಗಿದ್ದು ವಿಶೇಷ. ಸಂದೀಶ್ ಶರ್ಮಾ ಅವರು ಬೌಲಿಂಗ್ ಮಾಡುತ್ತಿದ್ದರು. ಆದರೆ ಓವರ್‌ನ ನಾಲ್ಕನೇ ಎಸೆತದಲ್ಲಿ ಡಿಕಾಕ್ ಅವರ ಬ್ಯಾಟ್‌ಗೆ ತಾಕಿ ಬಾಲ್ ಕೀಪರ್ (ಜಿತೇಶ್ ಶರ್ಮಾ) ಕೈ ಸೇರಿತ್ತು. ಆದರೆ ಅಂಪೈರ್ ಔಟ್ ಕೊಡಲಿಲ್ಲ. ಆಗ ಕ್ರೀಡಾ ಸ್ಫೂರ್ತಿ ಮೆರೆದ ಡಿಕಾಕ್ ತಾವಾಗಿಯೇ ಔಟ್ ಎಂದು ಒಪ್ಪಿಕೊಂಡು ಕ್ರೀಸ್‌ನಿಂದ ಹೊರನಡೆದರು.
ಕ್ರಿಕೆಟ್ ಇತಿಹಾಸದಲ್ಲಿ ಇದೇ ರೀತಿಯ ಕ್ರೀಡಾ ಸ್ಫೂರ್ತಿಯನ್ನು ಹಲವು ಸಲ ಕ್ರಿಕೆಟ್ ಪ್ರೇಮಿಗಳು ಕಂಡಿದ್ದಾರೆ. ಆಡಮ್ ಕಿಲ್‌ಕ್ರಿಸ್ಟ್, ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ, ಕುಮಾರ ಸಂಗಾಕ್ಕಾರ ಸೇರಿದಂತೆ ಹಲವು ಆಟಗಾರರು ಇದೇ ರೀತಿಯಲ್ಲಿ ಕ್ರೀಡಾ ಸ್ಫೂರ್ತಿಯನ್ನು ಮೆರೆದಿದ್ದಾರೆ.
— Vaishnavi Sawant (@VaishnaviS45) April 29, 2022
ಬ್ಲಾಕ್ ಲೈವ್ಸ್ ಮ್ಯಾಟರ್‌ನಲ್ಲಿ ವಿವಾದ: ಕ್ರೀಡಾ ಸ್ಫೂರ್ತಿಯಿಂದ ಮೆಚ್ಚುಗೆಗೆ ಒಳಗಾಗಿರುವ ಕ್ವಿಂಟನ್ ಡಿಕಾಕ್ ಈ ಹಿಂದೆ ಬ್ಲಾಕ್ ಲೈವ್ಸ್ ಮ್ಯಾಟರ್ ಚಳವಳಿಯ ವೇಳೆ ಟೀಕೆಗೆ ಒಳಗಾಗಿದ್ದರು. ಎಲ್ಲ ಆಟಗಾರರು ಮಂಡಿಯೂರಿದ್ದಾಗ ಡಿಕಾಕ್ ಮಂಡಿಯೂರದೇ ಟೀಕೆಗೆ ಒಳಗಾಗಿದ್ದರು.