ಜಿ 7 ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವ ಮತ್ತು ವೈಚಾರಿಕಾ ಸ್ವಾತಂತ್ರ್ಯದ ಬಗ್ಗೆ ಭಾಷಣ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರು, ಒಕ್ಕೂಟ ಸರ್ಕಾರ ಜಗತ್ತಿಗೆ ಏನು ಬೋಧಿಸುತ್ತದೆಯೋ ಅದನ್ನು ದೇಶದಲ್ಲಿ ಪಾಲಿಸಬೇಕು ಎಂದು ಪ್ರಧಾನಿಗೆ ತಿರುಗೇಟು ನೀಡಿದ್ದಾರೆ.
ಸರ್ವಾಧಿಕಾರ, ಭಯೋತ್ಪಾದನೆ, ಹಿಂಸಾತ್ಮಕ ಉಗ್ರಗಾಮಿತನ ಮತ್ತು ಆರ್ಥಿಕ ದಬ್ಬಾಳಿಕೆಯಿಂದ ಉಂಟಾಗುವ ಹಲವಾರು ಬೆದರಿಕೆಗಳಿಂದ ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ವೈಚಾರಿಕಾ ಸ್ವಾತಂತ್ರ್ಯವನ್ನು ರಕ್ಷಿಸುವಲ್ಲಿ ಜಿ 7 ಮತ್ತು ಅದರ ಪಾಲುದಾರರಿಗೆ ಭಾರತವು ಮಿತ್ರ ದೇಶವಾಗಿದೆ ಎಂದು ಪ್ರಧಾನಿ ಮೋದಿ ಭಾನುವಾರ ಹೇಳಿದ್ದರು.
“ಜಿ 7 ಸಭೆಯಲ್ಲಿ ಪ್ರಧಾನಿ ಮೋದಿ ಮಾಡಿದ ಭಾಷಣವು ಸ್ಪೂರ್ತಿದಾಯಕವಾಗಿತ್ತು ಮತ್ತು ಅಷ್ಟೇ ವಿಪರ್ಯಾಸವಾಗಿತ್ತು. ಮೋದಿ ಸರ್ಕಾರವು ಜಗತ್ತಿಗೆ ಬೋಧಿಸುವದನ್ನು ಭಾರತದಲ್ಲಿ ಪಾಲಿಸಬೇಕು” ಎಂದು ಪಿ. ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ತರಬೇತಿ ಪಡೆದ ಮಹಿಳೆಯರನ್ನು ಅರ್ಚಕರಾಗಿ ನೇಮಿಸಲಾಗುತ್ತದೆ: ತಮಿಳುನಾಡು ಸಚಿವ
ಜಿ 7 ಸಭೆಯಲ್ಲಿ ದೈಹಿಕವಾಗಿ ಹಾಜರಾಗದ ಏಕೈಕ ಅತಿಥಿ ಪ್ರಧಾನಿ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
Because India is an outlier as far as the fight against Covid 19 is concerned. We are the most infected and least vaccinated country (as a proportion of the population).
— P. Chidambaram (@PChidambaram_IN) June 14, 2021
“ಇದಕ್ಕೆ ಕಾರಣ ಏನೆಂದು ನಿಮ್ಮನ್ನು ಕೇಳಿಕೊಳ್ಳಿ? ಯಾಕೆಂದರೆ ಕೊರೊನಾ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಭಾರತವು ಬೇರೆಯಾಗಿದೆ. ನಾವು ಹೆಚ್ಚು ಸೋಂಕಿತ ದೇಶವಾಗಿದ್ದು, ಜನಸಂಖ್ಯೆಯ ಅನುಪಾತದಲ್ಲಿ ಕಡಿಮೆ ಲಸಿಕೆ ನೀಡಿದ ದೇಶ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರಿಟನ್‌ನ ಕಾರ್ನ್‌ವಾಲ್‌ನಲ್ಲಿ ನಡೆದ ಗ್ರೂಪ್ ಆಫ್ ಸೆವೆನ್ (ಜಿ 7) ಶ್ರೀಮಂತ ಪ್ರಜಾಪ್ರಭುತ್ವಗಳ ಶೃಂಗಸಭೆಯ ಅಧಿವೇಶನದಲ್ಲಿ ಪ್ರಧಾನಿ ಮೋದಿ ಆನ್‌ಲೈನ್ ಭಾಷಣ ಮಾಡಿದ್ದರು.
ಇದನ್ನೂ ಓದಿ: ಸಂಪೂರ್ಣ ಪ್ಯಾಕೇಜ್‌ಗಾಗಿ ಸಿಎಂ ಮನೆ ಮುತ್ತಿಗೆ ಯತ್ನ: ಹೋರಾಟಗಾರರ ಬಂಧನ