Homeಮುಖಪುಟಈ ದೇಶದ ಪ್ರಧಾನಿ ಒಬ್ಬ ಹೇಡಿ, ನನ್ನ ವಿರುದ್ಧ ಕೇಸು ಹಾಕಿ ನನ್ನನ್ನೂ ಜೈಲಿಗೆ ಹಾಕಲಿ:...

ಈ ದೇಶದ ಪ್ರಧಾನಿ ಒಬ್ಬ ಹೇಡಿ, ನನ್ನ ವಿರುದ್ಧ ಕೇಸು ಹಾಕಿ ನನ್ನನ್ನೂ ಜೈಲಿಗೆ ಹಾಕಲಿ: ಪ್ರಿಯಾಂಕಾ ಗಾಂಧಿ

- Advertisement -
- Advertisement -

ರಾಹುಲ್ ಗಾಂಧಿಗೆ ಅವರ ತಂದೆ ಯಾರೆಂಬುದು ಕೂಡ ಗೊತ್ತಿಲ್ಲ ಎಂದು ಮುಖ್ಯಮಂತ್ರಿಯೊಬ್ಬರು ಹೇಳಿದ್ದಾರೆ, “ಅವರ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ?” ಎಂದು ರಾಜ್‌ಘಾಟ್‌ನಲ್ಲಿ ನಡೆಯುತ್ತಿರುವ ಅಹೋರಾತ್ರಿ ಸತ್ಯಾಗ್ರಹದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಶ್ನೆ ಮಾಡಿದ್ದಾರೆ.

ಲೋಕಸಭೆಯಿಂದ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿರುವ ಕ್ರಮ ವಿರೋಧಿಸಿ ರಾಜ್‌ಘಾಟ್‌ನಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ನ ಅಹೋರಾತ್ರಿ ಸತ್ಯಾಗ್ರಹದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭಾನುವಾರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ಒಬ್ಬ ಹೇಡಿ ಎಂದು ಹೇಳಿದ್ದಾರೆ.

”ನೀವು ಸಂಸತ್ತಿನಲ್ಲಿ ನನ್ನ ಹುತಾತ್ಮ ತಂದೆಯನ್ನು ಅವಮಾನಿಸುತ್ತೀರಿ. ನೀವು ಅವರ ಮಗನನ್ನು ಮೀರ್ ಜಾಫರ್ ಎಂದು ಕರೆಯುತ್ತೀರಿ. ನೀವು ನನ್ನ ತಾಯಿಯನ್ನು ಅವಮಾನಿಸುತ್ತಿದ್ದೀರಿ. ನಿಮ್ಮ ಸಿಎಂ ಒಬ್ಬರು ರಾಹುಲ್ ಗಾಂಧಿಗೆ ಅವರ ತಂದೆ ಯಾರೆಂದು ಸಹ ತಿಳಿದಿಲ್ಲ ಎಂದು ಹೇಳುತ್ತಾರೆ”

”ಗಾಂಧಿ ಕುಟುಂಬದವರು ನೆಹರೂ ಸರ್‌ನೇಮ್ ಬಳಸಬೇಕು ಎಂದು ನಿಮ್ಮ ಪ್ರಧಾನಿ ಇಡೀ ಕುಟುಂಬವನ್ನು ಅವಮಾನಿಸುತ್ತಾರೆ. ಆದರೆ ಅವರ ವಿರುದ್ಧ ಯಾವುದೇ ಪ್ರಕರಣ ಇಲ್ಲ. ಯಾರೂ ನಿಮ್ಮನ್ನು ಸಂಸತ್ತಿನಿಂದ ಹೊರಗೆ ಕರೆದೊಯ್ಯುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಾಹುಲ್ ಅನರ್ಹತೆ ವಿರೋಧಿಸಿ ಕಾಂಗ್ರೆಸ್‌ನಿಂದ ದೇಶಾದ್ಯಂತ ಅಹೋರಾತ್ರಿ ಸತ್ಯಾಗ್ರಹ

”ನಾವು ದೀರ್ಘಕಾಲ ಮೌನವಾಗಿದ್ದೇವೆ ಎನ್ನುವ ಕಾರಣಕ್ಕೆ ಇದು ನಡೆಯುತ್ತಿದೆ. ನನ್ನ ಸಹೋದರ ಏನು ಹೇಳಿದರು? ಪ್ರಧಾನಿ ಮೋದಿ ಬಳಿ ಹೋಗಿ ಅಪ್ಪಿಕೊಂಡರು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಯಾವುದೇ ದ್ವೇಷವಿಲ್ಲ ಎಂದು ಅವರು ಹೇಳಿದರು. ಆದರೆ ನೀವು ನಮ್ಮ ಸಹೋದರನ ಮೇಲೆ ದ್ವೇಷ ಕಾರುತ್ತೀದ್ದೀರಿ” ಎಂದು ಹೇಳಿದರು.

”ನೀವು ನಮ್ಮನ್ನು ‘ಪರಿವಾರವಾದಿ’ ಎಂದು ಕರೆಯುತ್ತೀರಿ. ಹಾಗಾದರೆ ಭಗವಾನ್ ರಾಮ ಯಾರು? ಭಗವಾನ್ ರಾಮ ಮತ್ತು ಪಾಂಡವರು ತಮ್ಮ ಕುಟುಂಬದ ಪರವಾಗಿ ನಿಂತ ಪರಿವಾರವಾದಿಗಳೇ? ಹಾಗಾದರೆ ನಮ್ಮ ಕುಟುಂಬ ದೇಶಕ್ಕಾಗಿ ತ್ಯಾಗ ಮಾಡಿದೆ ಎಂದು ನಾಚಿಕೆಪಡಬೇಕೇ?” ಎಂದು ಪ್ರಶ್ನೆ ಮಾಡಿದ್ದಾರೆ.

”ನನ್ನ ಸಹೋದರ ಪ್ರಪಂಚದ ಎರಡು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಓದಿದ್ದಾನೆ, ನೀವು ಅವನ ಪದವಿಯನ್ನು ನೋಡಲಿಲ್ಲ, ಆದರೆ ಮಾಧ್ಯಮದ ಸಹಾಯದಿಂದ ಅವನನ್ನು ಪಪ್ಪು ಮಾಡಿದ್ದೀರಿ. ನಂತರ ಅವನು ಪಪ್ಪು ಅಲ್ಲ ಎಂದು ನೀವು ಕಂಡುಕೊಂಡಿದ್ದೀರಿ ಮತ್ತು ಲಕ್ಷಾಂತರ ಜನರು ಅವನೊಂದಿಗೆ ನಡೆಯುತ್ತಿದ್ದಾರೆ” ಎಂದರು.

”ನನ್ನ ಸಹೋದರನ ವಿರುದ್ಧ ಕೇಸ್ ದಾಖಲಿಸಿದ ವ್ಯಕ್ತಿ ಕಳೆದ ವರ್ಷ ತನ್ನ ಸ್ವಂತ ಪ್ರಕರಣಕ್ಕೆ ತಡೆ ತಂದಿದ್ದರು. ಯಾವಾಗ ರಾಹುಲ್ ಗಾಂಧಿ ಅವರು, ಅದಾನಿ ಕುರಿತು ಭಾಷಣ ಮಾಡಿದರೋ ಆಗ ಮತ್ತೆ ಆ ಪ್ರಕರಣವನ್ನು ಮರು ತೆರೆಯಲಾಯಿತು ಎಂದು ಪ್ರಿpm narendra modiಯಾಂಕಾ ಗಾಂಧಿ ಹೇಳಿದರು.

”ಈ ದೇಶದ ಪ್ರಧಾನಿ ಒಬ್ಬ ಹೇಡಿ. ಹೌದು, ನನ್ನ ವಿರುದ್ಧ ಕೇಸು ಹಾಕಿ ನನ್ನನ್ನೂ ಜೈಲಿಗೆ ಹಾಕಿ. ನನ್ನ ಸಹೋದರ ದೇಶದ ಹೆಮ್ಮೆ ಮತ್ತು ಈ ಪ್ರಧಾನಿ ಹೇಡಿ. ನಮ್ಮ ದೇಶವು ಹೆಮ್ಮೆಯ ರಾಜನನ್ನು ಸೋಲಿಸುವ ಸಂಪ್ರದಾಯವನ್ನು ಹೊಂದಿದೆ” ಎಂದು ಕಿಡಿಕಾರಿದ್ದಾರೆ.

”ಈ ದೇಶವು ಹೃದಯದಿಂದ ಮಾತನಾಡುತ್ತದೆ ಎಂದು ನನ್ನ ಕುಟುಂಬ ನನಗೆ ಕಲಿಸಿದೆ. ಆದರೆ ಇಂದು ಎಲ್ಲವೂ ವಿಭಿನ್ನವಾಗಿದೆ ಎಂದು ನನಗೆ ಅನಿಸುತ್ತಿದೆ” ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read