Homeಮುಖಪುಟ‘ಆದಿಮ ಆವಾಸಸ್ಥಾನ': ಗ್ರೇಟ್ ನಿಕೋಬಾರ್ ಯೋಜನೆ ತಡೆಯುವಂತೆ ರಾಷ್ಟ್ರಪತಿಗೆ ಪತ್ರ ಬರೆದ ಮಾಜಿ ಅಧಿಕಾರಿಗಳು

‘ಆದಿಮ ಆವಾಸಸ್ಥಾನ’: ಗ್ರೇಟ್ ನಿಕೋಬಾರ್ ಯೋಜನೆ ತಡೆಯುವಂತೆ ರಾಷ್ಟ್ರಪತಿಗೆ ಪತ್ರ ಬರೆದ ಮಾಜಿ ಅಧಿಕಾರಿಗಳು

ನಿಕೋಬಾರ್ ದ್ವೀಪದಲ್ಲಿ 72,000 ಕೋಟಿ ರೂಪಾಯಿಗಳ ಬೃಹತ್ ಯೋಜನೆಯನ್ನು ತಕ್ಷಣವೇ ನಿಲ್ಲಿಸಲು ಸರ್ಕಾರಕ್ಕೆ ಸೂಚಿಸುವಂತೆ ಆಗ್ರಹಿಸಿದ ಪತ್ರ

- Advertisement -
- Advertisement -

ಗ್ರೇಟ್ ನಿಕೋಬಾರ್ ದ್ವೀಪದಲ್ಲಿ 72,000 ಕೋಟಿ ರೂಪಾಯಿಗಳ ಬೃಹತ್ ಯೋಜನೆಯನ್ನು ತಕ್ಷಣವೇ ನಿಲ್ಲಿಸುವಂತೆ ಒಕ್ಕೂಟ ಸರ್ಕಾರಕ್ಕೆ ಸಲಹೆ ನೀಡುವಂತೆ 87 ಮಾಜಿ ಅಧಿಕಾರಿಗಳ ಗುಂಪು ಭಾನುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಒತ್ತಾಯಿಸಿದೆ. ಈ ಯೋಜನೆಯು ಸ್ಥಳೀಯ ಸಮುದಾಯಗಳ ಭವಿಷ್ಯದ ಮೇಲೆ ಮತ್ತು ದ್ವೀಪದ ಪರಿಸರ ವ್ಯವಸ್ಥೆಯ ಬಗ್ಗೆ ಗಂಭೀರ ಸಮಸ್ಯೆಯನ್ನು ಹುಟ್ಟುಹಾಕುತ್ತದೆ ಎಂದು ಮಾಜಿ ಅಧಿಕಾರಿಗಳು ಹೇಳಿದ್ದಾರೆ.

ಒಕ್ಕೂಟ ಸರ್ಕಾರದ ಅಡಿಯಲ್ಲಿ ಬರುವ ನೀತಿ ಆಯೋಗದ ನಿರ್ದೇಶನದ ಪ್ರಕಾರ, 35,000 ಕೋಟಿ ರೂಪಾಯಿಗಳ ಗ್ರೇಟ್ ನಿಕೋಬಾರ್ ಯೋಜನೆಯು 160 ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು ಭೂಮಿಯಲ್ಲಿ 130 ಚದರ ಕಿಮೀ ಪ್ರಾಥಮಿಕ ಅರಣ್ಯ ಸೇರಿದಂತೆ ಟ್ರಾನ್ಸ್-ಶಿಪ್‌ಮೆಂಟ್ ಬಂದರು, ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ವಿದ್ಯುತ್ ಸ್ಥಾವರ, ಟೌನ್‌ಶಿಪ್ ಮತ್ತು  ಪ್ರವಾಸೋದ್ಯಮ ಮೂಲಸೌಕರ್ಯಗಳ ನಿರ್ಮಾಣವನ್ನು ಒಳಗೊಂಡಿರುತ್ತದೆ. ನವೆಂಬರ್ 4 ರಂದು ಅಂತಿಮ ಪರಿಸರ ಅನುಮತಿಯನ್ನು ನೀಡಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಭಾರತ ಸರ್ಕಾರವು ದೇಶದ ಅತ್ಯಂತ ಪ್ರಾಚೀನ ಆವಾಸಸ್ಥಾನಗಳಲ್ಲಿ ಒಂದನ್ನು ನಾಶಮಾಡಲು ಸಿದ್ಧವಾಗಿದೆ. ಇದು ವಿವಿಧ ಅಪರೂಪದ ಮತ್ತು ಸ್ಥಳೀಯ ಪ್ರಭೇದಗಳಿಗೆ ನೆಲೆಯಾಗಿದೆ. ಜೊತೆಗೆ ಅತ್ಯಂತ ದುರ್ಬಲ ಬುಡಕಟ್ಟು ಸಮುದಾಯವಾದ ಗ್ರೇಟ್ ನಿಕೋಬಾರ್‌ನ ಶಾಂಪೆನ್ಸ್‌ನ ನೆಲೆಯಾಗಿದೆ” ಎಂದು ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ. .

ಶಾಂಪೆನ್ ಬುಡಕಟ್ಟು ಸಮುದಾಯವನ್ನು ಸರ್ಕಾರವು “ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪು” ಎಂದು ಪಟ್ಟಿಮಾಡಿದೆ. ಈ ಸಮುದಾಯವು ಕೃಷಿ-ಪೂರ್ವ ಮಟ್ಟದ ತಂತ್ರಜ್ಞಾನ, ಕಡಿಮೆ ಮಟ್ಟದ ಸಾಕ್ಷರತೆ ಮತ್ತು ಕ್ಷೀಣಿಸುತ್ತಿರುವ ಅಥವಾ ನಿಶ್ಚಲವಾಗಿರುವ ಜನಸಂಖ್ಯೆಯಿಂದ ಕೂಡಿದೆ. ಶಾಂಪೆನ್ಸ್‌ ಸಮುದಾಯದ ಪ್ರದೇಶಕ್ಕೆ ಹೊರಗಿನವರು ಪದೇ ಪದೇ ಆಕ್ರಮಣ ಮಾಡಿದ್ದಾರೆ ಎಂದು ಪತ್ರದಲ್ಲಿ ಮಾಜಿ ಅಧಿಕಾರಿಗಳು  ಹೇಳಿದ್ದಾರೆ.

“ಪರಿಶಿಷ್ಟ ಬುಡಕಟ್ಟುಗಳ ರಾಷ್ಟ್ರೀಯ ಆಯೋಗಕ್ಕೆ ಈ ವಿಷಯದ ಬಗ್ಗೆ ತಿಳಿದಿದೆ. ಜೊತೆಗೆ ಅಂತಹ ಹೇರಿಕೆಗಳನ್ನು ತಡೆಯಲು ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಸೂಚನೆಯ ಬಗ್ಗೆ ಗಮನ ಹರಿಸುವ ಬದಲು, ಸರ್ಕಾರವು ಈಗ ಆ ಸಮುದಾಯದ ಮೇಲೆ ದೊಡ್ಡ ಹೇರಿಕೆಯನ್ನು ಮಾಡಲು ಸಿದ್ಧವಾಗಿದೆ” ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಗ್ರೇಟ್ ನಿಕೋಬಾರ್‌ನ ಸುಮಾರು 853 ಚದರ ಕಿ.ಮೀ ಪ್ರದೇಶವನ್ನು ಅಂಡಮಾನ್ ಮತ್ತು ನಿಕೋಬಾರ್ ಪ್ರೊಟೆಕ್ಷನ್ ಆಫ್ ಅಬೊರಿಜಿನಲ್ ಟ್ರೈಬ್ಸ್ ರೆಗ್ಯುಲೇಶನ್-1956 ರ ಅಡಿಯಲ್ಲಿ, ‘ಬುಡಕಟ್ಟು ಮೀಸಲು’ ಎಂದು ಗೊತ್ತುಪಡಿಸಲಾಗಿದೆ. ಈ ಭೂಮಿ ಸಮುದಾಯದ ವಿಶೇಷ ಬಳಕೆಗೆ ಮೀಸಲಾಗಿದೆ ಮತ್ತು ಈ ಪ್ರದೇಶಕ್ಕೆ ಆಡಳಿತದ ಸ್ಪಷ್ಟ ಅನುಮತಿಯಿಲ್ಲದೆ ಪ್ರವೇಶಿಸಲು ಸಾಧ್ಯವಿಲ್ಲ.

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು, ಹರ್ಯಾಣದಲ್ಲಿ ಪರಿಹಾರ ಅರಣ್ಯೀಕರಣ ಸೇರಿದಂತೆ ಕೆಲವು ಷರತ್ತುಗಳೊಂದಿಗೆ ನೀಡಿದ ಪರಿಸರ ಮತ್ತು ಕರಾವಳಿ ನಿಯಂತ್ರಣ ವಲಯದ ಅನುಮತಿಯ ಬಗ್ಗೆ ಕೂಡಾ ಮಾಜಿ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತದ ಅರಣ್ಯ ಸಂರಕ್ಷಣಾ ಕಾನೂನಿನ ಅಡಿಯಲ್ಲಿ, ಅಭಿವೃದ್ಧಿ ಅಥವಾ ಕೈಗಾರಿಕಾ ಯೋಜನೆಗಳಿಗಾಗಿ ಅರಣ್ಯಗಳನ್ನು ತೆರವುಗೊಳಿಸುವಾಗ, ಪರಿಸರ ನಷ್ಟವನ್ನು ಸರಿದೂಗಿಸಲು ಅರಣ್ಯೇತರ ಭೂಮಿಯ ಸಮಾನ ಪ್ರದೇಶದಲ್ಲಿ ಮರಗಳನ್ನು ನೆಡಬೇಕಾಗಿದೆ.

“ಗ್ರೇಟ್ ನಿಕೋಬಾರ್‌ನ ಪ್ರಾಚೀನ ಕಾಡುಗಳನ್ನು ಹರಿಯಾಣದಲ್ಲಿ ನೆಡುವ ಕಾಡುಗಳೊಂದಿಗೆ ಬದಲಾಯಿಸುವ ಕಲ್ಪನೆಯು ದೊಡ್ಡ ದುರಂತವಾಗಿದ್ದು, ಹಾಸ್ಯಾಸ್ಪದವಾಗಿದೆ. ಗ್ರೇಟ್‌ ನಿಕೋಬಾರ್‌ನ ಸುಮಾರು 13,075 ಎಕರೆ ಶ್ರೀಮಂತ, ನಿತ್ಯಹರಿದ್ವರ್ಣ, ಮಳೆಕಾಡುಗಳು ಅಸಾಧಾರಣ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿಂದ ತುಂಬಿವೆ. ಅದನ್ನು ಹರಿಯಾಣದ ಒಣ ಪ್ರದೇಶವಾದ ಅರಾವಳಿ ಬೆಟ್ಟಗಳಲ್ಲಿ ಹೊಸದಾಗಿ ನೆಟ್ಟು ಮರಗಳಿಗೆ ಪರಿಹಾರವನ್ನು ನೀಡಲಾಗುತ್ತದೆ” ಎಂದು ಪತ್ರದಲ್ಲಿ ಆಶ್ಚರ್ಯವ್ಯಕ್ತಪಡಿಸಲಾಗಿದೆ.

ಪತ್ರದಲ್ಲಿ, ಮಾಜಿ ಚುನಾವಣಾ ಆಯುಕ್ತ ಎಸ್‌.ವೈ. ಖುರೈಶಿ, ಮಾಜಿ ಮುಖ್ಯ ಮಾಹಿತಿ ಆಯುಕ್ತ ವಜಾಹತ್ ಹಬೀಬುಲ್ಲಾ, ಭಾರತೀಯ ಆಡಳಿತ ಸೇವೆಗಳ ಮಾಜಿ ಅಧಿಕಾರಿಗಳಾದ ಹರ್ಷ್ ಮಂದರ್, ಜೂಲಿಯೊ ರಿಬೇರೊ ಮತ್ತು ಅರುಣಾ ರಾಯ್ ಸೇರಿದಂತೆ ಅನೇಕ ನಿವೃತ್ತ ನಾಗರಿಕ ಅಧಿಕಾರಿಗಳು ಸಹಿ ಮಾಡಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಅರಣ್ಯ ಭೂಮಿಯ ಅಕ್ರಮ ಡಿ-ನೋಟಿಫಿಕೇಶನ್; ಇಬ್ಬರು ಮಾಜಿ ಐಎಎಸ್ ಅಧಿಕಾರಿಗಳ ವಿರುದ್ಧ ಪರಿಸರ ಸಚಿವಾಲಯಕ್ಕೆ ದೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಗನ್ ಮೋಹನ್ ರೆಡ್ಡಿಯನ್ನು ಡ್ರಗ್ ಲಾರ್ಡ್ ಪ್ಯಾಬ್ಲೋ ಎಸ್ಕೋಬಾರ್‌ಗೆ ಹೋಲಿಸಿದ ಚಂದ್ರಬಾಬು ನಾಯ್ಡು

0
ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಹಿಂದಿನ ಮುಖ್ಯಮಂತ್ರಿ ವೈಎಸ್ ಜಗನ್‌ಮೋಹನ್ ರೆಡ್ಡಿ ವಿರುದ್ಧ ಇಂದು ರಾಜ್ಯ ವಿಧಾನಸಭೆಯಲ್ಲಿ ಸೇಡು ತೀರಿಸಿಕೊಂಡಿದ್ದು, ಅವರನ್ನು ಕೊಲಂಬಿಯಾದ ಡ್ರಗ್ ಲಾರ್ಡ್ ಪ್ಯಾಬ್ಲೋ ಎಸ್ಕೋಬಾರ್‌ಗೆ ಹೋಲಿಸಿದ್ದಾರೆ. ಇಂಡಿಯಾ...