Homeಮುಖಪುಟ‘ಮೋದಿ ಟೀಕಾಕಾರರಾದ ಮಲ್ಲಿಕಾ ಸಾರಾಬಾಯಿ ನೃತ್ಯ ಕಾರ್ಯಕ್ರಮ ರದ್ದುಗೊಳಿಸಿ: ಕೇಂದ್ರ ಸಚಿವರ ಸೂಚನೆ

‘ಮೋದಿ ಟೀಕಾಕಾರರಾದ ಮಲ್ಲಿಕಾ ಸಾರಾಬಾಯಿ ನೃತ್ಯ ಕಾರ್ಯಕ್ರಮ ರದ್ದುಗೊಳಿಸಿ: ಕೇಂದ್ರ ಸಚಿವರ ಸೂಚನೆ

- Advertisement -
- Advertisement -

ಕಾಕತೀಯ ಹೆರಿಟೇಜ್ ಟ್ರಸ್ಟ್‌ನ ಟ್ರಸ್ಟಿಗಳಿಗೆ ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ ಅವರ ಕಚೇರಿಯಿಂದ ಜನವರಿ 16ರಂದು ಕರೆ ಬಂದಿದ್ದು, ವಾರಂಗಲ್ ಜಿಲ್ಲೆಯ ಯುನೆಸ್ಕೋ ವಿಶ್ವ ಪರಂಪರೆಯ ಸ್ಮಾರಕವಾದ ರಾಮಪ್ಪ ದೇವಸ್ಥಾನದಲ್ಲಿ ಮಲ್ಲಿಕಾ ಸಾರಾಬಾಯಿ ಅವರ ನೃತ್ಯ ಪ್ರದರ್ಶನಕ್ಕೆ ಅನುಮತಿ ಇಲ್ಲ ಎಂದು ತಿಳಿಸಲಾಗಿದೆ. ಪ್ರಖ್ಯಾತ ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯಗಾರ್ತಿಯಾಗಿರುವ ಸಾರಾಬಾಯಿಯವರು ಮೋದಿ ಟೀಕಾಕಾರರಾಗಿರುವ ಕಾರಣ ಈ ರೀತಿಯ ಮೌಖಿಕ ಆದೇಶ ಬಂದಿದೆ.

“ಒಂದೋ ವಾರಂಗಲ್‌ನ ರಾಮಪ್ಪ ದೇವಸ್ಥಾನದ ಕಲಾವಿದರ ಪಟ್ಟಿಯಿಂದ ಮಲ್ಲಿಕಾ ಸಾರಾಭಾಯಿ ಅವರನ್ನು ಕೈಬಿಡಿ ಅಥವಾ ಉತ್ಸವವನ್ನು ರದ್ದುಗೊಳಿಸಿ” ಎಂದು ಸೂಚನೆಯನ್ನು ಕಿಶನ್‌ ರೆಡ್ಡಿ ಕಚೇರಿ ನೀಡಿತ್ತು. ಆದರೆ ಆಯೋಜಕರು ಸಚಿವರ ‘ಮೌಖಿಕ ಆದೇಶ’ಯನ್ನು ಧಿಕ್ಕರಿಸಿದರು. ಜನವರಿ 21 ರಂದು ಕಾರ್ಯಕ್ರಮವನ್ನು ಮುಂದುವರೆಸಿದರು. ಮುಖ್ಯವಾಗಿ ಕಾರ್ಯಕ್ರಮವನ್ನು ದೇವಸ್ಥಾನದ ಒಳಗೆ ನಡೆಸುವ ಬದಲು, ಅದನ್ನು KUDA ಓಪನ್ ಗ್ರೌಂಡ್ಸ್ ಹತ್ತಿರವಿರುವ ತೆರೆದ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. 68 ವರ್ಷದ ನೃತ್ಯಗಾರ್ತಿ ಸಾರಾಬಾಯಿಯವರು ಹೇಳುವಂತೆ 4,000ಕ್ಕೂ ಹೆಚ್ಚು ಜನರು ಅಂದು ಕಾರ್ಯಕ್ರಮವನ್ನು ವೀಕ್ಷಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಅವಧಿಯಿಂದಲೂ ಅವರ ಕಟು ಟೀಕಾಕಾರರಾದ ಸಾರಾಭಾಯಿ, ಇಂತಹ ಪ್ರಮುಖ ಸಮಾರಂಭದಲ್ಲಿ ಯಾವುದೇ ‘ಮೋದಿ ವಿಮರ್ಶಕ’ ಪ್ರದರ್ಶನವನ್ನು ನೀಡಬಾರದು ಎಂದು ರೆಡ್ಡಿ ಎಚ್ಚರಿಸಿದ್ದರು.

ಯುನೆಸ್ಕೋದ ಮಾನ್ಯತೆ ದೊರೆತು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಮಪ್ಪ ಉತ್ಸವವನ್ನು ಆಯೋಜಿಸಲಾಗಿದೆ. “ನನಗೆ ನೃತ್ಯ ಮಾಡಲು ಬಿಡಬಾರದು ಎಂದು ಸಚಿವರು ಆದೇಶಿಸಿದರು. ಬಿಜೆಪಿ ವಿರುದ್ಧದ ನನ್ನ ರಾಜಕೀಯ ನಿಲುವು ಮತ್ತು ಅದರ ಹಿಂದುತ್ವದ ರಾಜಕೀಯದ ಕಾರಣದಿಂದ ನನಗೆ ಜಾಗವನ್ನು ನಿರಾಕರಿಸಲಾಯಿತು” ಎಂದು ಸಾರಾಬಾಯಿ ದೂರಿದ್ದಾರೆ.

ಸಚಿವ ಕಿಶನ್‌ ರೆಡ್ಡಿಯವರು ಕೋಲ್ಕತ್ತಾದಲ್ಲಿ ತಮ್ಮ ಸಾರ್ವಜನಿಕ ಭಾಷಣದ ನಂತರ ಸಂಸ್ಥೆಯ ಟ್ರಸ್ಟಿಗಳನ್ನು ಕರೆದಿರುವುದಾಗಿ ವರದಿಯಾಗಿದೆ. ಅಲ್ಲಿ 68 ವರ್ಷದ ಶಾಸ್ತ್ರೀಯ ನೃತ್ಯಗಾರ್ತಿ ಸಾರಬಾಯಿ, “ದೇಶದಲ್ಲಿ ಆದರ್ಶಗಳು ಸಂಪೂರ್ಣ ನಾಶವಾಗುತ್ತಿವೆ” ಎಂದು ನಿರಾಶೆ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಅಧಿಕಾರದಲ್ಲಿರುವ ಪಕ್ಷವು “ಹಿಂದೂ ಧರ್ಮದ ಹೆಸರಿನಲ್ಲಿ ಹಿಂದುತ್ವವನ್ನು ಜನರ ಗಂಟಲಿಗೆ ತಳ್ಳುತ್ತಿದೆ” ಎಂದು ಅವರು ಟೀಕಿಸಿದ್ದರು.

ಸಾರಾಭಾಯಿ ಇಂತಹ ಅಡ್ಡಿ ಎದುರಿಸುತ್ತಿರುವುದು ಇದೇ ಮೊದಲಲ್ಲ. 2020ರಲ್ಲಿ, ಸಾರಾಭಾಯ್ ಅವರನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಯಿತು. ಆದರೆ ಘಟಿಕೋತ್ಸವವನ್ನು ರದ್ದುಗೊಳಿಸಲಾಗಿತ್ತು.

“ಕಳೆದ ಎರಡು ದಶಕಗಳಲ್ಲಿ, ನಾನು ಸರ್ಕಾರದಿಂದ ಇಂತಹ ಅನೇಕ ಅಡಚಣೆಗಳನ್ನು ಎದುರಿಸಿದ್ದೇನೆ. ಆದರೆ ಇದು ಹೆಚ್ಚು ಹೆಚ್ಚು ಲಜ್ಜೆಗೆಡುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ವಾರಂಗಲ್‌ನಲ್ಲಿ ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜಿಸಲಾಗಿದೆ” ಎಂದು ಪ್ರತಿಕ್ರಿಯಿಸಿರುವ ಅವರು, “ತೆಲಂಗಾಣ ಸರ್ಕಾರ ಮತ್ತು ಸ್ಥಳೀಯ ಆಡಳಿತವು 48 ಗಂಟೆಗಳ ಕಿರು ಸೂಚನೆಯೊಳಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ. 4,000ಕ್ಕೂ ಹೆಚ್ಚು ಜನರು ಆಗಮಿಸಿದ್ದರು. ಪ್ರದರ್ಶನವು ಶಾಂತಿಯುತವಾಗಿ ನಡೆಯುವುದನ್ನು ಅವರು ಖಚಿತಪಡಿಸಿಕೊಂಡರು” ಎಂದು ವಿವರಿಸಿದ್ದಾರೆ.

“ಇದು ಪುಸ್ತಕ ನಿಷೇಧಕ್ಕೆ ಹೋಲುತ್ತದೆ. ರಾಜ್ಯವು ಪುಸ್ತಕವನ್ನು ನಿಷೇಧಿಸಿದಾಗ, ಪ್ರತಿಯೊಬ್ಬರೂ ಪುಸ್ತಕದ ಪ್ರತಿಯನ್ನು ಪಡೆಯಲು ಧಾವಿಸುತ್ತಾರೆ. ನೀವು ನನ್ನ ಪ್ರದರ್ಶನವನ್ನು ನಿಷೇಧಿಸಿದರೆ, ನನ್ನ ಬೆಂಬಲಕ್ಕೆ ಮತ್ತು ನನ್ನ ಕಲೆಯನ್ನು ವೀಕ್ಷಿಸಲು ಹೆಚ್ಚು ಹೆಚ್ಚು ಜನರು ಬರುತ್ತಾರೆ” ಎಂದು ಸಾರಾಬಾಯಿ ಅಭಿಪ್ರಾಯಪಟ್ಟಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ 2024: ರಾಹುಲ್ ಗಾಂಧಿ ಸ್ಪರ್ಧೆಗೆ ಒತ್ತಾಯಿಸಿ ಅಮೇಠಿ ಕಾಂಗ್ರೆಸ್ ಕಾರ್ಯಕರ್ತರಿಂದ ಧರಣಿ

0
ಅಮೇಠಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆಯಲ್ಲಿ ಅನಗತ್ಯ ವಿಳಂಬ ಮಾಡುತ್ತಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಇಲ್ಲಿನ ಪಕ್ಷದ ಜಿಲ್ಲಾ ಸಮಿತಿ ಕಚೇರಿ ಎದುರು ಧರಣಿ ನಡೆಸಿ, ರಾಹುಲ್ ಗಾಂಧಿ ಅವರನ್ನು ಕಣಕ್ಕಿಳಿಸಬೇಕು...