Homeಮುಖಪುಟಖ್ಯಾತ ಗಣಿತ ಶಾಸ್ತ್ರಜ್ಞ ಸಿ ಆರ್ ರಾವ್ ನಿಧನ

ಖ್ಯಾತ ಗಣಿತ ಶಾಸ್ತ್ರಜ್ಞ ಸಿ ಆರ್ ರಾವ್ ನಿಧನ

- Advertisement -
- Advertisement -

ಭಾರತದ ಖ್ಯಾತ ಗಣಿತ ಶಾಸ್ತ್ರಜ್ಞ ಕಲ್ಯಂಪುಡಿ ರಾಧಾಕೃಷ್ಣ ರಾವ್ ಅವರು ನಿಧನರಾಗಿದ್ದಾರೆ.

ಸಿ.ಆರ್. ರಾವ್ ಎಂದೇ ಹೆಸರು ಪಡೆದಿದ್ದ ಕಲ್ಯಂಪುಡಿ ರಾಧಾಕೃಷ್ಣ ರಾವ್ 102ನೇ ವಯಸ್ಸಿಗೆ ನಿಧನರಾಗಿದ್ದಾರೆ. ರಾವ್ ಅವರು ಮದ್ರಾಸ್ ಪ್ರೆಸಿಡೆನ್ಸಿ (ಈಗಿನ ಕರ್ನಾಟಕ) ಬಳ್ಳಾರಿಯ ಹಡಗಲಿಯಲ್ಲಿ ತೆಲುಗು ಕುಟುಂಬದಲ್ಲಿ ಜನಿಸಿದ್ದರು.

ಅವರ ಶಾಲಾ ಶಿಕ್ಷಣವನ್ನು ಗುಡೂರ್, ನುಜ್ವಿಡ್, ನಂದಿಗಾಮ ಮತ್ತು ವಿಶಾಖಪಟ್ಟಣಂನಲ್ಲಿ ಮಗಿಸಿದ್ದು, ಈ ಎಲ್ಲಾ ಪ್ರದೇಶಗಳು ಈಗ ಆಂಧ್ರಪ್ರದೇಶ ರಾಜ್ಯದಲ್ಲಿದೆ. ಅವರು ಆಂಧ್ರ ವಿಶ್ವವಿದ್ಯಾನಿಲಯದಿಂದ ಗಣಿತಶಾಸ್ತ್ರದಲ್ಲಿ ಎಂಎಸ್ಸಿ ಮತ್ತು 1943 ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಿಂದ  ಸಂಖ್ಯಾಶಾಸ್ತ್ರದಲ್ಲಿ  ಎಂಎ ಪಡೆದಿದ್ದಾರೆ. ಅವರು ಪಿಹೆಚ್ ಡಿ ಬಳಿಕ 1965ರಲ್ಲಿ ಕೇಂಬ್ರಿಡ್ಜ್‌ನಿಂದ DSc ಪದವಿಯನ್ನು  ಪಡೆದಿದ್ದಾರೆ.

ರಾಧಾಕೃಷ್ಣ ರಾವ್ ಅವರಿಗೆ ಇತ್ತೀಚೆಗೆ ನೊಬೆಲ್ ಪ್ರಶಸ್ತಿಗೆ ಸಮಾನವಾದ  ಸಂಖ್ಯಾಶಾಸ್ತ್ರಜ್ಞರಿಗೆ ನೀಡುವ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗಿದೆ.  ಸಿ.ಆರ್.ರಾವ್ ಅವರಿಗೆ ಗಣಿತ ಮತ್ತು ಸಂಖ್ಯಾಶಾಸ್ತ್ರದಲ್ಲಿ ಮಾಡಿರುವ ಸಾಧನೆಗಾಗಿ 1968ರಲ್ಲಿ ಪದ್ಮಭೂಷಣ, 2001ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಏಳು ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ, ರಾವ್ ಸುಮಾರು 51 ಡಾಕ್ಟರೇಟ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು, ಅವರಲ್ಲಿ ಕೆಆರ್ ಪಾರ್ಥಸಾರಥಿ, ಆರ್ ರಂಗ ರಾವ್, ವಿಎಸ್ ವರದರಾಜನ್ ಮತ್ತು ಎಸ್‌ಆರ್‌ಎಸ್ ವರದನ್  ಸೇರಿದ್ದಾರೆ.

ಇದನ್ನು ಓದಿ: ಜಾದವ್‌ಪುರ ವಿವಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯ ಬೆತ್ತಲೆ ಮೆರವಣಿಗೆ: ತನಿಖೆಯಲ್ಲಿ ಬಯಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read