Homeಮುಖಪುಟಬಾಕಿ ಸಂಬಳ ನೀಡುವಂತೆ 'ನಮ್ಮ ಮೆಟ್ರೋ' ಕಾರ್ಮಿಕರಿಂದ ಪ್ರತಿಭಟನೆ

ಬಾಕಿ ಸಂಬಳ ನೀಡುವಂತೆ ‘ನಮ್ಮ ಮೆಟ್ರೋ’ ಕಾರ್ಮಿಕರಿಂದ ಪ್ರತಿಭಟನೆ

- Advertisement -
- Advertisement -

ತಮ್ಮ ಬಾಕಿಯಿರುವ ಸಂಬಳವನ್ನು ನೀಡುವಂತೆ “ನಮ್ಮ ಮೆಟ್ರೋ” ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ. ಬೊಮ್ಮನಹಳ್ಳಿಯ ಬಿಎಂಆರ್‌ಸಿಎಲ್‌ನ ಸಿಮೆಂಟ್ ಕಾಸ್ಟಿಂಗ್ ಅಂಗಳದಲ್ಲಿ ನೂರಾರು ಉದ್ರಿಕ್ತ ಮೆಟ್ರೋ ಕಾರ್ಮಿಕರು ಭಾನುವಾರ ಪ್ರತಿಭಟನೆ ನಡೆಸಿ ಸಂಬಳವನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.

ಶನಿವಾರ ಪ್ರಾರಂಭವಾಗಿದ್ದ ಪ್ರತಿಭಟನೆಯು ಭಾನುವಾರ ಮಧ್ಯಾಹ್ನ ಪರಿಸ್ಥತಿ ಬಿಗಡಾಯಿಸಿದ್ದರಿಂದ 500 ಕ್ಕೂ ಹೆಚ್ಚು ಕಾರ್ಮಿಕರು ಅಲ್ಲಿನ ಮೇಲುಸ್ತುವಾರಿ ಅಧಿಕಾರಿಯನ್ನು ಸುತ್ತುವರೆದು ತಮ್ಮನ್ನು ಈಗಿನಿಂದಲೇ ಮನೆಗೆ ಕಳುಹಿಸಬೇಕೆಂದು ಒತ್ತಾಯಿಸಿದರು. ಘಟನೆಯಲ್ಲಿ ವಾಹನಗಳು ಮತ್ತು ಕಚೇರಿ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೇತನವನ್ನು ವಿಳಂಬ ಮಾಡಿರುವುದಲ್ಲದೆ ಕಂಪನಿಯು ಮೂಲಭೂತ ಸೌಕರ್ಯಗಳನ್ನು ನೀಡುವುದನ್ನು ನಿಲ್ಲಿಸಿದೆ. ಕಾರ್ಮಿಕರಿರುವ ಪ್ರದೇಶಕ್ಕೆ ನೀರು ಸರಬರಾಜು ಮಾಡಿ ಎರಡು ದಿನಗಳು ಕಳೆದಿದ್ದು, ಮೂರು ದಿನಗಳಿಂದ ಪಡಿತರ ಅಂಗಡಿಯನ್ನು ಮುಚ್ಚಿದ್ದಾರೆ. ಏನನ್ನಾದರೂ ಖರೀದಿಸಲು ಹೊರಟರೆ ಪೊಲೀಸರು ನಮ್ಮನ್ನು ಹೊಡೆಯುತ್ತಾರೆ ಎಂದು ಅಲ್ಲಿನ ಕಾರ್ಮಿಕರು ಆರೋಪಿಸಿದ್ದಾರೆ.

ನಮ್ಮನ್ನು ಇಂದು ಮನೆಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಲಾಯಿತಾದರೂ ಬಿಹಾರದ ಜನರನ್ನು ಮಾತ್ರ ಬಸ್ಸಿನಲ್ಲಿ ಕರೆದೊಯ್ಯಲಾಯಿತು. ಆದರೆ ಜಾರ್ಖಂಡ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಿಗೆ ಹೋಗುವ ಜನರಿಗೆ ಪ್ರಯಾಣದ ವ್ಯವಸ್ಥೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಕಾರ್ಮಿಕರು ಅಲವತ್ತುಕೊಂಡಿದ್ದಾರೆ. ಈ ಕಾರ್ಮಿಕರು ಕಳೆದ ಎರಡು ತಿಂಗಳುಗಳಲ್ಲಿ ರಾಜ್ಯ ಸರ್ಕಾರದಿಂದ  ಯಾವುದೆ ಉಚಿತ ಆಹಾರ ಅಥವಾ ಪಡಿತರವನ್ನು ಪಡೆದಿಲ್ಲ ಎಂದು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಕಾರ್ಮಿಕರೊಂದಿಗೆ ಮಾತನಾಡಿ “ಕಾರ್ಮಿಕರು ಸಂಕಟಕ್ಕೊಳಗಾಗಿದ್ದಾರೆ, ಆದರೆ ಅದು ಪ್ರಮುಖ ವಿಷಯವಲ್ಲ. ಅವರಲ್ಲಿ ಅರ್ಧದಷ್ಟು ಜನರು ಹಿಂತಿರುಗಲು ಉತ್ಸುಕರಾಗಿದ್ದಾರೆ. ಭಾನುವಾರ 130 ಕಾರ್ಮಿಕರು ಬಿಹಾರಕ್ಕೆ ತೆರಳಿದ್ದಾರೆ”ಎಂದು ಅವರು ಹೇಳಿದ್ದಾರೆ.

ಆದರೆ ಕಾರ್ಮಿಕರು ತಮ್ಮನ್ನು ಒತ್ತಾಯಪೂರ್ವಕವಾಗಿ ಉಳಿಯುವಂತೆ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ, ಅದಕ್ಕೆ ಪ್ರತಿಕ್ರಿಯಿಸಿದ ವ್ಯವಸ್ಥಾಪಕ ನಿರ್ದೇಶಕರು ಇಲ್ಲೇ ಉಳಿದು ಕೆಲಸವನ್ನು ಮುಂದುವರಿಸಲು ಮನವಿ ಮಾಡಿದ್ದೆವು, ಅವರ ಆರೋಗ್ಯ ರಕ್ಷಣೆ, ಆಹಾರ ಮತ್ತು ವೇತನದ ಬಗ್ಗೆ ಭರವಸೆ ನೀಡಿದ್ದೇವೆ. ಉಳಿಯುವಂತೆ ನಾವು ಅವರಿಗೆ ಮನವಿ ಮಾಡಿದರೂ, ಸೇವಾ ಸಿಂಧು ಪೋರ್ಟಲ್‌ನಲ್ಲಿ ಪ್ರಯಾಣಕ್ಕಾಗಿ ಅರ್ಜಿ ಸಲ್ಲಿಸುವ ಆಯ್ಕೆಯನ್ನು ಸಹ ಅವರ ಗಮನಕ್ಕೆ ತರಲಾಗಿದೆ”ಎಂದು ಅವರು ಹೇಳಿದರು.

ಕಾರ್ಮಿಕರನ್ನು ಹೊರಗಿನವರು ಪ್ರಚೋದಿಸಿದ್ದಾರೆ ಎಂಧು ಆರೋಪಿಸಿದ ವ್ಯವಸ್ತಾಪಕ ನಿರ್ದೇಶಕರು, ಅವರು ಹೊರಗಿನವರಿಂದ ಪ್ರಚೋದಿಸಲ್ಪಟ್ಟದ್ದರಿಂದ ಹಿಂಸಾಚಾರದಲ್ಲಿ ಪಾಲ್ಗೊಂಡರು. ಇದರಿಂದಾಗಿ ಬಿಎಂಆರ್ಸಿಎಲ್ ಎಂಜಿನಿಯರ್ ಗಾಯಗೊಂಡರು. ಇಂದು ಮತ್ತೆ ನಡೆಸಿದ ಹಿಂಸಾಚಾರದಲ್ಲಿ ವಾಹನಗಳು ಮತ್ತು ಕಚೇರಿ ಹಾನಿಗೊಳಗಾಗಿದೆ ಎಂದು ಹೇಳಿದ್ದಾರೆ.

ಕಾರ್ಮಿಕರ ಪ್ರತಿಭಟನೆಯ ನಂತರ ಬಿಎಂಆರ್‌ಸಿಎಲ್‌ ವೇತನ ಪಾವತಿ ಮಾಡಿದೆ ಎಂಬ ವರದಿಗಳು ಬಂದಿವೆ.

ಕೃಪೆ: ಡೆಕ್ಕನ್ ಹೆರಾಲ್ಡ್


ಇದನ್ನೂ ಓದಿ: ದೇಶದಾದ್ಯಂತ ಕಾರ್ಮಿಕರ ರೈಲು ಪ್ರಯಾಣದರವನ್ನು ಕಾಂಗ್ರೆಸ್‌ ಭರಿಸಲಿದೆ: ಸೋನಿಯಾ ಗಾಂಧಿ ಭರವಸೆ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎವರೆಸ್ಟ್, ಎಂಡಿಹೆಚ್ ಮಸಾಲೆ ಪದಾರ್ಥಗಳನ್ನು ನಿಷೇಧಿಸಿದ ನೇಪಾಳ

0
ನೇಪಾಳದ ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟ ನಿಯಂತ್ರಣ ಇಲಾಖೆಯು ಎರಡು ಭಾರತೀಯ ಮಸಾಲೆ ಬ್ರಾಂಡ್‌ಗಳಾದ ಎವರೆಸ್ಟ್ ಮತ್ತು ಎಂಡಿಎಂಹೆಚ್‌ಗಳ ಆಮದು, ಬಳಕೆ ಮತ್ತು ಮಾರಾಟವನ್ನು ನಿಷೇಧಿಸಿದೆ. ಅಲ್ಲದೆ ಈ ಮಸಾಲೆಗಳಲ್ಲಿನ ಎಥಿಲೀನ್ ಆಕ್ಸೈಡ್...