Homeಚಳವಳಿಅಂಬೇಡ್ಕರ್ ಭಾವಚಿತ್ರ ದುರ್ಬಳಕೆ ತಡೆಗೆ ಚಳ್ಳಕೆರೆಯಲ್ಲಿ ತಾಲ್ಲೂಕು ಆಡಳಿತಕ್ಕೆ ಪತ್ರ

ಅಂಬೇಡ್ಕರ್ ಭಾವಚಿತ್ರ ದುರ್ಬಳಕೆ ತಡೆಗೆ ಚಳ್ಳಕೆರೆಯಲ್ಲಿ ತಾಲ್ಲೂಕು ಆಡಳಿತಕ್ಕೆ ಪತ್ರ

- Advertisement -
- Advertisement -

ಚಳ್ಳಕೆರೆಯಲ್ಲಿ ವಿಶ್ವ ಹಿಂದೂ ಪರಿಷತ್-ಬಜರಂಗದಳದ ವತಿಯಿಂದ ಆಚರಿಸಲಾಗುತ್ತಿರುವ ಹಿಂದೂ ಮಹಾಗಣಪತಿ ಮಹೋತ್ಸವ-2019ರ ಭಿತ್ತಿಪತ್ರ (Wall Poster) ಮತ್ತು ಜಾಹೀರಾತು ಫಲಕ (Flex) ಗಳಲ್ಲಿ ಮುದ್ರಿಸಲಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಕೋರಿ ದಲಿತ ಸಂಘಟನೆಗಳು ತಾಲ್ಲೂಕು ಆಡಳಿತಕ್ಕೆ ಪತ್ರ ಬರೆದಿರುವ ವಿಶಿಷ್ಟ ಘಟನೆ ಜರುಗಿದೆ.

ಏಕೆ ಅಂಬೇಡ್ಕರ್ ಭಾವಚಿತ್ರ ಬಳಸಬಾರದು ಎಂಬುದಕ್ಕೆ ಅವರು ಮುಖ್ಯ ಅಂಶಗಳನ್ನು ಹಾಗೂ ತಾತ್ವಿಕ ಕಾರಣಗಳನ್ನು ಮುಂದಿಟ್ಟು ಆಕ್ಷೇಪ, ವಿರೋಧಗಳನ್ನು ದಾಖಲಿಸಿದ್ದಾರೆ.

ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮನ್ನು ತಾವು ಹಿಂದೂ ಎಂದು ಗುರುತಿಸಿಕೊಳ್ಳಲು ಯಾವತ್ತಿಗೂ ಬಯಸಿದವರಲ್ಲ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಯೋಲಾದಲ್ಲಿ ಅಕ್ಟೋಬರ್ ೧೩, ೧೯೩೫ ರಂದು ನಡೆದ ದಲಿತ ಮಹಾಸಮ್ಮೇಳನದಲ್ಲಿ ಅವರು, ’ನಾನು ಹಿಂದೂ ಆಗಿ ಹುಟ್ಟಿದ್ದೇನೆ. ಅದು ನನ್ನ ಕೈಯಲ್ಲಿರಲಿಲ್ಲ. ಆದರೆ ಹಿಂದೂ ಆಗಿ ಸಾಯಲಾರೆ’ (ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂ.೧೮, ಪು.೩೩೩) ಎಂದು ಬಹಿರಂಗವಾಗಿ ಘೋಷಿಸಿಕೊಂಡರಲ್ಲದೆ ತಾವು ನುಡಿದಂತೆಯೇ ನಡೆದುಕೊಂಡರೂ ಕೂಡ.

ಅಕ್ಟೋಬರ್ ೧೪, ೧೯೫೬ ರಂದು ಮಹಾರಾಷ್ಟ್ರದ ನಾಗಪುರದ ದೀಕ್ಷಾಭೂಮಿಯಲ್ಲಿ ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಅಂಬೇಡ್ಕರ್ ಅವರು ಬೌದ್ಧ ಧಮ್ಮವನ್ನು ಸ್ವೀಕರಿಸಿದರು. ತಾವು ಹಿಂದೂ ಧರ್ಮವನ್ನು ತೊರೆದು ಬೌದ್ಧ ಧಮ್ಮವನ್ನು ಸ್ವೀಕರಿಸಿದ ದಿನದಂದು ಅವರು, ’ಈ ದಿನ ನನಗೆ ನರಕದಿಂದ ಬಿಡುಗಡೆಗೊಂಡ ಹಾಗೆ ಅನ್ನಿಸುತ್ತದೆ’ ಎಂದು ತಮ್ಮವರೊಂದಿಗೆ ಹೇಳಿಕೊಂಡರು. (ಸಮಗ್ರ ಬರೆಹಗಳು ಮತ್ತು ಭಾಷಣಗಳು, ಸಂ.೨೦, ಪು.೭೯೭)

ಇದೇ ಸಂದರ್ಭದಲ್ಲಿ ತಾವು ಬರೆದು ತಯಾರಿಸಿದ ಇಪ್ಪತ್ತೆರಡು ಪತ್ರಿಜ್ಞಾ ವಿಧಿಗಳನ್ನು ಅವರು ತಮ್ಮ ಅನುಯಾಯಿಗಳಿಗೆ ಬೋಧಿಸಿದರು. ಈ ಪ್ರತಿಜ್ಞಾ ವಿಧಿಗಳಲ್ಲಿ ’ನಾನು ಬ್ರಹ್ಮ, ವಿಷ್ಣು, ಶಿವ, ರಾಮ, ಕೃಷ್ಣ, ಗಣಪತಿ ಮೊದಲಾದ ಹಿಂದೂ ದೇವರುಗಳನ್ನು ನಂಬುವುದಿಲ್ಲ ಮತ್ತು ಪೂಜಿಸುವುದಿಲ್ಲ’ ಎನ್ನುವುದೂ ಸೇರಿದೆ. (ಸಮಗ್ರ ಬರೆಹಗಳು ಮತ್ತು ಭಾಷಣಗಳು, ಸಂ.೨೦, ಪು.೭೯೦)

ಅಂಬೇಡ್ಕರರು ಬೌದ್ಧ ಧಮ್ಮವನ್ನು ಸ್ವೀಕರಿಸಿದ ನಂತರ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಯಾವುದೇ ಗುರುತು, ಲಾಂಛನ, ವಿಶೇಷಣ, ಉಪಾಧಿಗಳಿಗೆ ಅವರನ್ನು ತಳುಕುಹಾಕದೆ ಬೌದ್ಧ ಧಮ್ಮದೊಂದಿಗೆ ಅವರನ್ನು ಗುರುತಿಸಿಕೊಂಡು ಬರಲಾಗುತ್ತಿದೆ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಇಂತಹ ಸೂಕ್ಷ್ಮ ವಿಚಾರಗಳನ್ನು ಗಮನಿಸುವ ಗೋಜಿಗೆ ಹೋಗದ ಚಳ್ಳಕೆರೆಯ ವಿಶ್ವ ಹಿಂದೂ ಪರಿಷತ್-ಬಜರಂಗ ದಳದವರು ಅಂಬೇಡ್ಕರ್ ಅವರ ಭಾವಚಿತ್ರವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿರುವುದು ಈ ಸಂಘಟನೆಯ ಅವಿವೇಕತನವನ್ನು ತೋರಿಸುತ್ತದೆ. ದಲಿತರ ಭಾವನೆಗಳನ್ನು ಗೌರವಿಸುವ ಔಚಿತ್ಯ ಪ್ರಜ್ಞೆಯಿಲ್ಲದ ಇಂತಹವರು ಅಂಬೇಡ್ಕರ್ ಅವರನ್ನು ಪ್ರಚಾರ ಸಾಮಗ್ರಿಯಂತೆ ಬಳಸಿಕೊಳ್ಳುತ್ತಿರುವುದು ಆಕ್ಷೇಪಣೀಯವೂ ಖಂಡನಾರ್ಹವೂ ಆಗಿದೆ ಎಂದು ಆರೋಪಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್-ಬಜರಂಗ ದಳದವರು ಪ್ರಕಟಿಸಿರುವ ಭಿತ್ತಿಪತ್ರ ಮತ್ತು ಜಾಹೀರಾತು ಫಲಕಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವಷ್ಟೇ ಅಲ್ಲದೆ ಎಂ.ಎಸ್. ಗೋಳ್ವಾಲ್ಕರ್, ಕೆ.ಬಿ. ಹೆಡ್ಗೇವಾರ್,  ವಿ.ಡಿ. ಸಾವರ್ಕರ್ ಇವರ ಭಾವಚಿತ್ರಗಳೂ ಸೇರಿರುತ್ತವೆ. ಇವರೆಲ್ಲ ತಮ್ಮನ್ನು ತಾವು ಹಿಂದೂಗಳೆಂದು ಕರೆದುಕೊಂಡವರು. ಎಂ.ಎಸ್. ಗೋಳ್ವಾಲ್ಕರ್ ಅವರಂತೂ, ’ಮುಸಲ್ಮಾನರು ಕ್ರೈಸ್ತರು ಪಾರ್ಸಿಗಳು ಭಾರತೀಯರಲ್ಲ. ಅವರು ಈ ದೇಶದಲ್ಲಿ ಇರುವುದಾದರೆ ಎರಡನೇ ದರ್ಜೆಯ ಪ್ರಜೆಗಳಂತೆ ಇರತಕ್ಕದ್ದೆಂದು’ ಪ್ರತಿಪಾದಿಸಿದವರು. ಇವರ ’ಬಂಚ್ ಆಫ್ ಥಾಟ್ಸ್’(Bunch of thoughts) ಕೃತಿಯ ಸಾರವೇ ಅನ್ಯಧರ್ಮ ದ್ವೇಷ. ಮುಸ್ಲಿಂ ಸಮುದಾಯದವರ ಮೇಲೆ ದ್ವೇಷದ ನಂಜನ್ನು ಕಾರುವುದೇ ಇವರ ತಾತ್ವಿಕತೆ ಎಂದು ಕಿಡಿ ಕಾರಿದ್ದಾರೆ.

ಆದ್ದರಿಂದ, ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಜೀವವಿರೋಧಿ ಮನುವಾದಿ ಸಿದ್ಧಾಂತಗಳ ಪ್ರಚಾರಕರ ಜೊತೆಯಲ್ಲಿಟ್ಟು ಪ್ರದರ್ಶಿಸುವುದನ್ನು ಮತ್ತು ಸ್ವತಃ ತಾವೇ ವಿರೋಧಿಸಿದ, ತಿರಸ್ಕರಿಸಿದ ಲಾಂಛನಗಳೊಂದಿಗೆ ಅವರನ್ನು ಬೆಸೆಯುವುದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.

ನಮ್ಮ ಆಕ್ಷೇಪ ಮತ್ತು ವಿರೋಧಗಳಿಗೆ ಪೂರಕವಾದ ದಾಖಲೆಗಳನ್ನು ಬಾಬಾಸಾಹೇಬ್ ಅವರ ಕೃತಿ ಸಂಪುಟಗಳಿಂದ ಆಯ್ದು ಈ ಪತ್ರದೊಂದಿಗೆ ಲಗತ್ತಿಸುತ್ತಿದ್ದೇವೆ. ಹಾಗಾಗಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆರವುಗೊಳಿಸಲು ತಾವು ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದೂ, ತಪ್ಪಿದಲ್ಲಿ ಸದರಿ ಸಂಘಟಕರ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದು ನಮಗೆಲ್ಲ ಅನಿವಾರ್ಯವಾಗುತ್ತದೆ ಎಂದೂ ಈ ಮೂಲಕ ತಮ್ಮ ಗಮನಕ್ಕೆ ತರಬಯಸುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

6 COMMENTS

  1. ಕೋಮುವಾದಿಗಳ ಭಾವಚಿತ್ರಗಳ ಜೊತೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿತ್ರವನ್ನು ಹಾಕಿರುವುದು ಖಂಡನಾರ್ಹ.

  2. ಓವೈಸಿ & ಹಾಗೂ ಟಿಪ್ಪು ವಿನ ಜೊತೆ ಅಂಬೇಡ್ಕರ್ ರರ ಭಾವಚಿತ್ರ ಸೇರಿಸುತ್ತಾರಲ್ಲ ಅದಕ್ಕೆ ಏಕೆ ಯಾರು ಆಕ್ಷೇಪಣೆ ಮಾಡುವದಿಲ್ಲ?

  3. ಯಾಕೆಂದರೆ ಟಿಪ್ಪು ಮತ್ತು ಒವೈಸಿ ದಲಿತರ ದ್ವೇಷಿಗಳಲ್ಲ. ಈಗ ಕಪಟದಾಟ ನಡೆಯುವುದಿಲ್ಲ.

  4. ಹೌದು!ಆಂಬೇಡ್ಕರ್ ದೇಶದ ಸ್ಪಾತಂತ್ರಕ್ಕಾಗಾ
    ನೀಡಿದ ಕೋಡುಗೆ ದೋಡ್ಡ ಸೋನ್ನೆ.ದೇಶಭಕ್ತ
    ರ ಸಾಲಿನಲ್ಲಿ ಆಂಬೇಡ್ಕರ ಬೇಡವೆ ಬೇಡ.
    ಸೇರಿಸಿದರೆ ಅದು ದೇಶಭಕ್ತರ ಅವಮಾನ..!!

    • ಮೊದಲು ಅಂಬೇಡ್ಕರ್ ಬಗ್ಗೆ ಚೆನ್ನಾಗಿ ಓದಿಕೊಂಡು ಆಮೇಲೆ ಚರ್ಚೆ ಮಾಡಿ ಅದಕ್ಕಿಂತ ಮೊದಲೇ ಚರ್ಚೆ ಮಾಡುವುದು ಅವಿವೇಕಿತನ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ಭದ್ರಕೋಟೆ ಮಥುರಾದಲ್ಲಿ ಮುಸ್ಲಿಮರಿಗೆ ಮತದಾನ ನಿರಾಕರಣೆ?

0
ಲೋಕಸಭೆ ಚುನಾವಣೆ ಹಿನ್ನೆಲೆ ಈಗಾಗಲೇ ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಕೆಲ ಕ್ಷೇತ್ರಗಳ ಬೂತ್‌ಗಳಲ್ಲಿ ಮತದಾನದ ದಿನ ಮತಗಟ್ಟೆಗೆ ತೆರಳಿದ್ದ ನಾಗರಿಕರಿಗೆ ತಮ್ಮ ಹೆಸರು ಪಟ್ಟಿಯಿಂದ ನಾಪತ್ತೆಯಾಗಿರುವುದು, ತಪ್ಪಾಗಿ ನಮೂದಿಸಿರುವುದು ಕಂಡುಬಂದಿದೆ. ಮಥುರಾ...