ರಾಹುಲ್ ಗಾಂಧಿ ಅವಿವಾಹಿತ, ಎಚ್ಚರಿಕೆಯಿಂದಿರಿ: ಮಾಜಿ ಸಂಸದನ ಹೇಳಿಕೆಗೆ ಭಾರಿ ವಿರೋಧ

ಕೇರಳ, ತಮಿಳುನಾಡು ಮತ್ತು ಪುದಿಚೆರಿ ಚುನಾವಣಾ ಪ್ರಚಾರದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಧ್ಯೆ ಮಧ್ಯೆ ಕಾಲೇಜುಗಳಿಗೂ ಭೇಟಿ ನೀಡಿ ಸಂವಾದ ನಡೆಸುತ್ತಿದ್ದಾರೆ. ಇಂದು ಕನ್ಯಾಕುಮಾರಿಯ ಕಾಲೇಜೊಂದರಲ್ಲಿ ವೇಗವಾಗಿ ಪುಷ್-ಅಪ್ ಹೊಡೆಯುವ ಮೂಲಕ, ನೃತ್ಯ ಮಾಡುವ ಮೂಲಕ 50ನೇ ವರ್ಷದಲ್ಲಿಯೂ ಫಿಟ್ನೆಸ್ ತೋರಿಸಿ ಗಮನ ಸೆಳೆದಿದ್ದಾರೆ.

ಕನ್ಯಾಕುಮಾರಿಯ ಮುಲುಗುಮುದ್‌ನಲ್ಲಿನ ಸೇಂಟ್ ಜೋಸೆಫ್ ಹೈಯರ್ ಸೆಕಂಡರಿ ಶಾಲೆಗೆ ಭೇಟಿ ನೀಡಿದ್ದ ಅವರು ಅಲ್ಲಿನ 10 ನೇ ತರಗತಿ ವಿದ್ಯಾರ್ಥಿ ಮೆರೋಲಿನ್ ಶೆನಿಗ್ ಅವರೊಂದಿಗೆ ಪುಷ್-ಅಪ್ ಚಾಲೆಂಜ್‌ನಲ್ಲಿ ಭಾಗವಹಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ 7-8 ಸೆಕೆಂಡ್‌ನಲ್ಲಿ 14ಕ್ಕೂ ಹೆಚ್ಚು ಪುಷ್-ಅಪ್ ಹೊಡೆದು, ಒಂಟಿ ಕೈಯಲ್ಲಿ ಪುಷ್-ಅಪ್ ಹೊಡೆದು ಗಮನ ಸೆಳೆದಿದ್ದಾರೆ. ಅಲ್ಲದೆ ವಿದ್ಯಾರ್ಥಿನಿಯರು ಮತ್ತು ಶಿಕ್ಷಕರೊಂದಿಗೆ ನೃತ್ಯಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ.

ಈ ಕುರಿತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿಯೂ ಸಹ “ರಾಹುಲ್ ಗಾಂಧಿಯವರು ಅಕಿಡೋ ದಲ್ಲಿ ಬ್ಲಾಕ್ ಬೆಲ್ಟ್‌ ಪಡೆದಿದ್ದಾರೆ ಎಂಬುದು ನಿಮಗೆ ಗೊತ್ತೆ?” ಎಂದು ರಾಹುಲ್ ಗಾಂಧಿಯವರ ವಿಡಿಯೋ ಪೋಸ್ಟ್ ಮಾಡಿದೆ.

ಕೆಲದಿನಗಳ ಹಿಂದೆ ತಾನೇ ಕೇರಳದ ಮೀನುಗಾರರೊಂದಿಗೆ ಸಮುದ್ರಯಾನ ಮಾಡುತ್ತಿದ್ದಾಗ, ಅರೇಬಿಯನ್ ಸಮುದ್ರಕ್ಕೆ ಹಾರಿ, ಮೀನುಗಾರರೊಂದಿಗೆ ಸುಮಾರು 10 ನಿಮಿಷಗಳ ಕಾಲ ಈಜಿ ಗಮನ ಸೆಳೆದಿದ್ದರು. ಹೊರಬಂದ ನಂತರ ತೆಗೆಯಲಾದ ಅವರ ಫೋಟೊವೊಂದು ಎಲ್ಲೆಡೆ ವೈರಲ್ ಆಗಿ 50ನೇ ವರ್ಷದಲ್ಲಿಯೂ ದೇಹವನ್ನು ಹೇಗೆ ಫಿಟ್ ಆಗಿ ಇಟ್ಟಿದ್ದಾರೆ ಎಂದು ಹೊಗಳಲಾಗಿತ್ತು. ಬಾಕ್ಸರ್ ವಿಜೇಂದರ್ ಸಿಂಗ್ ಮತ್ತು ಮಿಲಿಂದ್ ದೊಹ್ರ ಟ್ವಿಟರ್‌ ನಲ್ಲಿ ಈ ಕುರಿತು ಬರೆದುಕೊಂಡಿದ್ದರು.


ಇದನ್ನೂ ಓದಿ: ಕೇರಳದ ಮೀನುಗಾರರೊಂದಿಗೆ ಸಂವಾದ: ಸಮುದ್ರದಲ್ಲಿ ಈಜಿದ ರಾಹುಲ್ ಗಾಂಧಿ

LEAVE A REPLY

Please enter your comment!
Please enter your name here