Homeಮುಖಪುಟಇತರ ಕಂಪೆನಿಗಳಿಗೆ ಪ್ರಯಾಣಿಕರ ಮಾಹಿತಿ ಮಾರಾಟ ಮಾಡಲಿರುವ ರೈಲ್ವೇ!

ಇತರ ಕಂಪೆನಿಗಳಿಗೆ ಪ್ರಯಾಣಿಕರ ಮಾಹಿತಿ ಮಾರಾಟ ಮಾಡಲಿರುವ ರೈಲ್ವೇ!

ಪ್ರಸ್ತಾವಿತ ಮಾರಾಟವು 1000 ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ

- Advertisement -
- Advertisement -

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಹೆಸರು, ವಿಳಾಸ, ಇತರ ವೈಯಕ್ತಿಕ ವಿವರಗಳನ್ನು ಕಂಪನಿಗಳಿಗೆ ಮಾರಾಟ ಮಾಡಲು ಸಿದ್ಧವಾಗಿದೆ ಎಂದು ವರದಿಯಾಗಿದೆ. ಈ ಮೂಲಕ ಭಾರತೀಯ ರೈಲ್ವೇ ಅಭೂತಪೂರ್ವ ಹಣಗಳಿಸುವ ಪ್ರಕ್ರಿಯೆಗೆ ಸಿದ್ಧವಾಗಿದೆ.

ರೈಲ್ವೇ ಇಲಾಖೆಯು ಖಾಸಗಿ ಮತ್ತು ಸರ್ಕಾರಿ ಕಂಪನಿಗಳಿಗೆ ತನ್ನ ಪ್ರಯಾಣಿಕರ ವೈಯಕ್ತಿಕ ಡೇಟಾವನ್ನು ಮಾರಾಟ ಮಾಡಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) – ಭಾರತೀಯ ರೈಲ್ವೇಯ ಆನ್‌ಲೈನ್ ಟಿಕೆಟ್ ಬುಕಿಂಗ್ ವಿಭಾಗವು ಪ್ರಯಾಣಿಕರ ಡೇಟಾದ ಬೃಹತ್ ಬ್ಯಾಂಕ್ ಅನ್ನು ಹೊಂದಿದೆ ಮತ್ತು ಪ್ರಸ್ತಾವಿತ ಮಾರಾಟವು 1000 ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ.

ತನ್ನ ಈ ಯೋಜನೆಯನ್ನು ಸಮರ್ಥಿಸಿಕೊಂಡಿರುವ  ರೈಲ್ವೇ ಇಲಾಖೆ, ಈ ಪ್ರಕ್ರಿಯೆಯು ಡೇಟಾ ಹುಡುಕುವವರಿಗೆ ಮಾಹಿತಿಯನ್ನು ಪೂರೈಸುವ ಮತ್ತು ಗ್ರಾಹಕರಿಗೆ ಪ್ರಯೋಜನಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದೆ.

ಪ್ರಸ್ತುತ ರೈಲ್ವಾ ಇಲಾಖೆ ಮಾರಾಟ ಮಾಡುತ್ತಿರುವ ಮಾಹಿತಿಗಳಲ್ಲಿ ಪ್ರಯಾಣಿಕರ ಹೆಸರು, ವಿಳಾಸ, ವಯಸ್ಸು, ಫೋನ್ ಸಂಖ್ಯೆ, ಇಮೇಲ್ ಐಡಿ, ಪ್ರಯಾಣಿಕರ ಸಂಖ್ಯೆ, ಪ್ರಯಾಣದ ವರ್ಗ, ಪಾವತಿ ವಿಧಾನ, ಖಾತೆ ಬಳಕೆದಾರ ಹೆಸರು, ಪಾಸ್‌ವರ್ಡ್ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ನಡೆಸುತ್ತಿದ್ದ ಉದ್ಯೋಗಾಕಾಂಕ್ಷಿಗೆ ಥಳಿಸಿದ ಅಧಿಕಾರಿ

IRCTC ಹಣಗಳಿಸುವ ಪ್ರಕ್ರಿಯೆಯಲ್ಲಿ ಸಹಾಯ ಮಾಡಲು ಸಲಹೆಗಾರರನ್ನು ನೇಮಿಸಿಕೊಳ್ಳಲು ಕೋರಿ ಟೆಂಡರ್ ಕರೆದಿದೆ. ಈಮಧ್ಯೆ ಟೆಂಡರ್ ಯೋಜನೆಯು ವಿವಾದಕ್ಕೆ ಒಳಗಾಗುವುದರಿಂದ ಈ ಕ್ರಮವನ್ನು ಹಿಂತೆಗೆದುಕೊಳ್ಳುವ ಸಾಧ್ಯತೆ ಕೂಡಾ ಇದೆ ಎಂದು ಹೇಳಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕುವಂತೆ...

0
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರಿ ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ " ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ...