Homeಮುಖಪುಟಆರೆಸ್ಸೆಸ್ ಮುಖಂಡನ ಹೇಳಿಕೆ ಬೆನ್ನಲ್ಲೇ ದೇಶದ ಹೆಸರು ಬದಲಿಸಲು ಹೊರಟ ಕೇಂದ್ರ

ಆರೆಸ್ಸೆಸ್ ಮುಖಂಡನ ಹೇಳಿಕೆ ಬೆನ್ನಲ್ಲೇ ದೇಶದ ಹೆಸರು ಬದಲಿಸಲು ಹೊರಟ ಕೇಂದ್ರ

- Advertisement -
- Advertisement -

ಸೆಪ್ಟೆಂಬರ್ 9ರಂದು ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಔತಣಕೂಟದ ಲೆಟರ್ ಹೆಡ್‌ನಲ್ಲಿ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಾಗಿ ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಮುದ್ರಿಸಲಾಗಿದ್ದು, ಇದೀಗ ಲೆಟರ್ ಹೆಡ್‌ ವ್ಯಾಪಕವಾಗಿ ವೈರಲ್ ಆಗಿದೆ.

ಇದಲ್ಲದೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಯ ನಂತರ ದೇಶದ ಹೆಸರನ್ನೇ ಬದಲಾಯಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.

ಇತ್ತೀಚೆಗೆ ಗುವಾಹಟಿಯಲ್ಲಿ ಸಕಲ್ ಜೈನ ಸಮಾಜ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಆರೆಸ್ಸೆಸ್‌ನ  ಮೋಹನ್ ಭಾಗವತ್, ಜನರು ಇಂಡಿಯಾದ ಬದಲಿಗೆ “ಭಾರತ್” ಎಂಬ ಹೆಸರನ್ನು ಬಳಸಬೇಕು. ಭಾರತ ಎಂಬ ಹೆಸರು ಪುರಾತನ ಕಾಲದಿಂದಲೂ ಮುಂದುವರಿದುಕೊಂಡು ಬಂದಿದ್ದು, ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದ್ದರು.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್‌ ರಮೇಶ್ ಅವರು, ಜಿ20 ಶೃಂಗಸಭೆಯ ಔತಣಕೂಟಕ್ಕೆ ರಾಷ್ಟ್ರಪತಿ ಭವನಕ್ಕೆ  ಆಮಂತ್ರಣ ಕಳುಹಿಸಲಾಗಿದೆ. ಅದರಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಎಂದು ಬರೆಯುವ ಬದಲು ಪ್ರೆಸಿಡೆಂಟ್ ಆಫ್ ಭಾರತ್‌ ಎಂದು ಬರೆಯಲಾಗಿದೆ. ಸರಕಾರ ದೇಶದ ಹೆಸರನ್ನೇ ಬದಲಿಸಲು ಹೊರಟಿದೆ ಎಂದು ಹೇಳಿದ್ದಾರೆ. ಇದಲ್ಲದೆ ಭಾರತ ಎಂದರೆ ಅದು ಇಂಡಿಯಾ, ರಾಜ್ಯಗಳ ಒಕ್ಕೂಟ, ಆದರೆ ಈಗ ರಾಜ್ಯಗಳ ಒಕ್ಕೂಟದ ಮೇಲೆ ಆಕ್ರಮಣ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇದಕ್ಕೆ ಪುಷ್ಠಿ ನೀಡುವಂತೆ ಅಸ್ಸಾಂ ಸಿಎಂ ಹೇಮಂತ್ ಬಿಸ್ವಾ ಶರ್ಮಾ ರಿಪಬ್ಲಿಕ್ ಆಫ್ ಭಾರತ್ ಎಂದು ಟ್ವಿಟ್ ಮಾಡಿದ್ದು, ನಮ್ಮ ನಾಗರಿಕತೆ ಅಮೃತ ಕಾಲದೆಡೆ ಸಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

 

ಇದನ್ನು ಓದಿ: ತಜ್ಞರ ಸಮಾಲೋಚನೆಯಿಲ್ಲದೆ ಕ್ರಿಮಿನಲ್ ಕಾನೂನುಗಳ ಬದಲಾವಣೆ; ಮುಂದಿನ ಟಾರ್ಗೆಟ್ ಸಂವಿಧಾನವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...