Homeಅಂಕಣಗಳುತಜ್ಞರ ಸಮಾಲೋಚನೆಯಿಲ್ಲದೆ ಕ್ರಿಮಿನಲ್ ಕಾನೂನುಗಳ ಬದಲಾವಣೆ; ಮುಂದಿನ ಟಾರ್ಗೆಟ್ ಸಂವಿಧಾನವೇ?

ತಜ್ಞರ ಸಮಾಲೋಚನೆಯಿಲ್ಲದೆ ಕ್ರಿಮಿನಲ್ ಕಾನೂನುಗಳ ಬದಲಾವಣೆ; ಮುಂದಿನ ಟಾರ್ಗೆಟ್ ಸಂವಿಧಾನವೇ?

- Advertisement -
- Advertisement -

ಐಪಿಸಿ, ಸಿಆರ್‌ಪಿಸಿ ಮತ್ತು ಐಇಎ ಕಾನೂನುಗಳಲ್ಲಿದ್ದ ವಸಾಹತು ಕುರುಹುಗಳನ್ನು ತೆಗೆದಿದ್ದೇವೆ ಎಂದು ಪ್ರತಿಪಾದಿಸಿಕೊಂಡು, ಬದಲಾದ ಮಸೂದೆಗಳನ್ನು ಸಂಸ್ಕೃತ ಶೀರ್ಷಿಕೆಗಳಿಂದ ಮರುನಾಮಕರಣ ಮಾಡಿ ಗೃಹ ಸಚಿವ ಅಮಿತ್ ಶಾ ಮೂರು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಿದರು. ಬದಲಾದ ಈ ಮೂರು ಮಸೂದೆಗಳನ್ನು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರು ಗೃಹ ವ್ಯವಹಾರಗಳ ಸ್ಥಾಯಿ ಸಮಿತಿಗೆ ಕಳುಹಿಸಿ ಮೂರು ತಿಂಗಳೊಳಗೆ ವರದಿ ನೀಡುವಂತೆ ತಿಳಿಸಿದ್ದಾರೆ. ದೇಶದಾದ್ಯಂತ ಹಲವು ತಜ್ಞರು ಈ ಕಾನೂನುಗಳ ಬದಲಾವಣೆಗಳ ಬಗ್ಗೆ ಅಸಮಾಧಾನ ಮತ್ತು ಕಳವಳ ವ್ಯಕ್ತಪಡಿಸಿದ್ದಾರೆ. ಗೃಹಸಚಿವರು ಆಡಿದ ವಸಾಹತುಶಾಹಿ ಕಾನೂನನ್ನು ಸರಿಪಡಿಸಿದ್ದೇವೆ ಎಂಬ ಮಾತುಗಳ ಮರ್ಮದ ಸತ್ಯಾಸತ್ಯತೆಯನ್ನು ಈ ಒಂದು ಉದಾಹರಣೆಯ ಮೂಲಕ ಅವಲೋಕಿಸಬಹುದು. ಸೆಡಿಷನ್ ಅಥವಾ ಐಪಿಸಿಯ 124ಎ ಅಡಿಯ ದೇಶದ್ರೋಹ ಕಾನೂನು ಅಂತಹ ಒಂದು ವಸಾಹತು ಪಳೆಯುಳಿಕೆ. ಇದರ ದುರುಪಯೋಗದ ಬಗ್ಗೆ ದೇಶದಾದ್ಯಂತ ನೂರಾರು ಟೀಕೆಗಳು ಬಂದಿದ್ದವು. ಜಗತ್ತಿನಾದ್ಯಂತ (ಭಾರತದಲ್ಲಿ ಅದನ್ನು ಪರಿಚಯಿಸಿದ ಬ್ರಿಟನ್ ಸೇರಿದಂತೆ) ಹಲವು ದೇಶಗಳು ದೇಶದ್ರೋಹ ಕಾನೂನನ್ನು ತೊಡೆದುಹಾಕಿರುವ ಹಿನ್ನೆಲೆಯಲ್ಲಿ ಭಾರತಲ್ಲೂ ಅದನ್ನು ನಿರ್ಮೂಲನೆ ಮಾಡುವ ಕೂಗು ಹೆಚ್ಚಿತು. ಮೇ 2022ರಲ್ಲಿ ಸುಪ್ರೀಂಕೋರ್ಟ್ ತನ್ನ ತೀರ್ಪೊಂದರಲ್ಲಿ ದೇಶದ್ರೋಹ ಕಾನೂನನ್ನು ಅಮಾನತ್ತಿನಲ್ಲಿಟ್ಟು, ಇದರ ಬಗ್ಗೆ ನಿಲುವು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ನಂತರ ಕೇಂದ್ರ ಸರ್ಕಾರ ರಚಿಸಿದ್ದ ರಿತುಲಾಲ್ ಅವಸ್ಥಿ ನೇತೃತ್ವದ 22ನೇ ಕಾನೂನು ಆಯೋಗ ’124ಎ’ಅನ್ನು ಉಳಿಸಿಕೊಳ್ಳುವಂತೆ ಆಘಾತಕಾರಿ ಶಿಫಾರಸ್ಸು ನೀಡಿತು. ಕರ್ನಾಟಕದ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಾಧೀಶರಾಗಿದ್ದಾಗ, ಕರ್ನಾಟಕ ಬಿಜೆಪಿ ಸರ್ಕಾರ ಆದೇಶಿಸಿದ್ದ, ’ಶಾಲೆಗಳಲ್ಲಿ ಹಿಜಾಬ್ ನಿಷೇಧ’ವನ್ನು ಎತ್ತಿಹಿಡಿದಿದ್ದವರು ಅವಸ್ಥಿ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳುವುದು ಮುಖ್ಯವಾದೀತು. ಈಗ ವಸಾಹತು ಪಳೆಯುಳಿಕೆ ಸೆಡಿಶನ್‌ಅನ್ನು ತೆಗೆದುಹಾಕಿದ್ದೇವೆ ಎಂದು ಘೋಷಿಸಿಕೊಂಡಿರುವ ಅಮಿತ್ ಶಾ, ಐಪಿಸಿ ಬದಲು ಮಂಡಿಸಿರುವ ಭಾರತೀಯ ನ್ಯಾಯಸಂಹಿತಾ 2023ನ ಸೆಕ್ಷನ್ 150ರಲ್ಲಿ ’ದೇಶದ್ರೋಹ’ ಹೆಸರನ್ನಷ್ಟೇ ಕೈಬಿಟ್ಟು, ಅದರ ಕರಾಳತೆಯನ್ನು ಇನ್ನಷ್ಟು ವಿಸ್ತರಿಸಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ! ಹೀಗೆ ದೇಶವನ್ನು ಕರಾಳತೆಯತ್ತ ಒಯ್ಯಲು ಮಾಡುತ್ತಿರುವ ಕಾನೂನು ತಿದ್ದುಪಡಿಗಳ ಪರ್ವವನ್ನು ಈ ಸರ್ಕಾರ ಮುಂದುವರಿಸಿದೆ. ಇದರ ಬೆನ್ನಲ್ಲೇ ಸಂಘಪರಿವಾರದ ದೀರ್ಘಕಾಲದ ಯೋಜನೆಯಾದ ಸಂವಿಧಾನ ಬದಲಾವಣೆಯ ಮಾತುಗಳನ್ನು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಸಂಬಂಧಿಸಿದವರು ಮತ್ತೆ ಮುನ್ನಲೆಗೆ ತಂದಿದ್ದಾರೆ.

ಅಮಿತ್ ಶಾ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ವಿವಾದಾತ್ಮಕ ಮತ್ತು ಬಿಜೆಪಿಗೆ ಸಹಾಯವಾಗುವಂತಹ ತೀರ್ಪು ನೀಡಿದ ಪೀಠದಲ್ಲಿದ್ದ ಅಂದಿನ ಸುಪ್ರೀಂಕೋರ್ಟ್ ನ್ಯಾಯಾಧೀಶ ರಂಜನ್ ಗೊಗೊಯ್ ಅವರು ಈಗ ಬಿಜೆಪಿ ಪಕ್ಷ ನಾಮನಿರ್ದೇಶನ ಮಾಡಿರುವ ರಾಜ್ಯಸಭಾ ಸದಸ್ಯ. ಮುಂಗಾರು ಸಂಸತ್ ಅಧಿವೇಶನದಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿದ ರಂಜನ್ ಗೊಗೊಯ್ ಅವರು ಆಗಸ್ಟ್ 8ರಂದು “ಭಾರತದ ಸಂವಿಧಾನದ ಮೂಲ ರಚನೆಯ ಸಿದ್ಧಾಂತ ನ್ಯಾಯದಾನ ವ್ಯವಸ್ಥೆಯ ಆಧಾರದಲ್ಲಿ ಚರ್ಚಾಸ್ಪದವಾದುದು” ಎಂದು ಹೇಳುವ ಮೂಲಕ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದರು. ಈಗಿರುವ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಸಂವಿಧಾನಕ್ಕೆ ತರಲಾಗುವ ಯಾವುದೇ ತಿದ್ದುಪಡಿ ಭಾರತದ ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವಂತಿಲ್ಲ. ಈ ತೀರ್ಪು, ಮಾನವ ಹಕ್ಕುಗಳಿಗೆ ಕವಡೆ ಕಿಮ್ಮತ್ತು ನೀಡದ ಸಂಘಪರಿವಾರಕ್ಕೆ ಮನುಧರ್ಮಶಾಸ್ತ್ರದ ಕುಟಿಲ ನೀತಿಗಳನ್ನು ಸಂವಿಧಾನಕ್ಕೆ ತರಲು ಕೈಕಟ್ಟಿಹಾಕಿದೆ. ಆದುದರಿಂದ ಅವಕಾಶ ಸಿಕ್ಕಾಗಲೆಲ್ಲಾ ಸಂವಿಧಾನವನ್ನು ಬದಲಿಸುವ ಮಾತನ್ನಾಡುವುದರ ಜೊತೆಗೆ ಅದು ಏನೋ ಸಾಮಾನ್ಯ ಸಂಗತಿ ಎಂಬಂತೆ ಜನರ ಮನಸ್ಸಿನಲ್ಲಿ ಭಾವನೆ ಮೂಡಿಸುವುದಕ್ಕೆ, ಅವರಲ್ಲಿ ಅದರ ಬಗ್ಗೆ ಒಪ್ಪಿಗೆಯನ್ನು ಉತ್ಪಾದಿಸುವುದಕ್ಕೆ ನಾಗಪುರದ ಗಿಡುಗಗಳು ಸದಾ ಪ್ರಯತ್ನಿಸುತ್ತಿರುತ್ತವೆ. ಇದು ರಂಜನ್ ಗೊಗೊಯ್ ಅವರ ಹೇಳಿಕೆಗೆ ಮಾತ್ರ ನಿಲ್ಲದೆ ಆಗಸ್ಟ್ 15, ಸ್ವಾತಂತ್ರ್ಯ ದಿನಾಚರಣೆಯ ದಿನ ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಸಮಿತಿಯ ಮುಖ್ಯಸ್ಥ ಬಿಬೇಕ್ ದೇಬರಾಯ್ ಎನ್ನುವ ವ್ಯಕ್ತಿ ’ಮಿಂಟ್’ ದಿನಪತ್ರಿಕೆಯಲ್ಲಿ ಬರಹವೊಂದನ್ನು ಬರೆದು ’ನಾವು ಜನಗಳು’ ಹೊಸ ಸಂವಿಧಾನವನ್ನು ಅಪ್ಪಿಕೊಳ್ಳಬೇಕೆಂದು ವಾದಮಾಡಿ ಕರೆ ನೀಡುತ್ತಾರೆ. ಅಷ್ಟಕ್ಕೇ ನಿಲ್ಲದೆ ಭಾರತದ ಸಂವಿಧಾನ ಮುಖ್ಯವಾಗಿ 1935ರ ಗವರ್ನಮೆಂಟ್ ಆಫ್ ಇಂಡಿಯಾ ಆಕ್ಟ್‌ನ ಆಧಾರದಲ್ಲಿ ರೂಪಿತವಾಗಿದೆ ಎಂಬ ಅರ್ಧಸತ್ಯವನ್ನು ಹೇಳಿ ಅದಕ್ಕೆ ವಸಾಹತುಶಾಹಿ ಪರಂಪರೆಯ ಸಂಬಂಧವಿದೆ ಎನ್ನುವ ಮೂಲಕ ಬದಲಾವಣೆ ಮಾಡಲು ಸಜ್ಜಾಗಿರುವ ಬಗ್ಗೆ ಹಿಂಟ್ ಕೂಡ ನೀಡುತ್ತಾರೆ. ಕೆಲವು ವರ್ಷಗಳ ಹಿಂದೆ ಕರ್ನಾಟಕದ ಸಂಸದ ಅನಂತ ಕುಮಾರ ಹೆಗಡೆ ಸಂವಿಧಾನ ಬದಲಿಸುವ ಬಗ್ಗೆ ಕರೆ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬೇಕಿದೆ. ಈಗ ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಸಮಿತಿ ದೇಬರಾಯ್ ಅವರ ವೈಯಕ್ತಿಕ ಅಭಿಪ್ರಾಯಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೊಂಡಿದ್ದರೂ, ಸಂಘ ಪರಿವಾರ ಮತ್ತು ಬಿಜೆಪಿ ಎರಡು ನಾಲಗೆಯಲ್ಲಿ ಮಾತನಾಡುವ ಗುಣ ಇಂದು ನಿನ್ನೆಯದೇನಲ್ಲ ಎಂಬುದು ತಿಳಿದಿರುವ ಸಂಗತಿಯೇ!

ಇದನ್ನೂ ಓದಿ: “ದೇಶದ್ರೋಹ” ಕಾನೂನನ್ನು ರದ್ದು ಮಾಡಿ, ಹೊಸ ಕಾನೂನಿನಡಿ 7 ವರ್ಷ ಜೈಲು-ಅಮಿತ್ ಶಾ

ಸಂವಿಧಾನದ ಪ್ರಮುಖ ರೂವಾರಿ, ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ದೇಶದ ಎಲ್ಲ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಂವಿಧಾನವನ್ನು ಭಾರತಕ್ಕೆ ನೀಡಿದ ಬಾಬಾಸಾಹೇಬ ಅಂಬೇಡ್ಕರ್ ಅವರು ಈಗಾಗಲೇ, ಈ ದೇಬರಾಯ್ ಈಗ ಎತ್ತುತ್ತಿರುವ ಬಹುತೇಕ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಹೀಗಿದ್ದರೂ, ಇಂತಹ ದಾರ್ಷ್ಟ್ಯತನವನ್ನು ಮೆರೆಯುವ ಈ ಸಂಘಪರಿವಾರದವರಿಗೆ ಬಾಬಾಸಾಹೇಬರ ಮಾತುಗಳನ್ನೇ ಮುಖಕ್ಕೆ ಹಿಡಿಯಬೇಕಿದೆ. ಭಾರತ ಸಂವಿಧಾನದ ಮೊದಲ ಕರಡನ್ನು ಅರ್ಪಿಸಿ ಮಾಡುವ ಭಾಷಣದಲ್ಲಿ ಅಂಬೇಡ್ಕರ್ ಹೇಳುವ ಈ ಮಾತುಗಳನ್ನು ನೋಡೋಣ: “ಜಗತ್ತಿನ ಇತಿಹಾಸದ ಈ ಸಂದರ್ಭದಲ್ಲಿ ರಚಿಸಲಾದ ಸಂವಿಧಾನದಲ್ಲಿ ಏನಾದರೂ ಹೊಸದು ಇರಬಹುದೇ ಎಂದು ಯಾರಿಗಾದರೂ ಪ್ರಶ್ನೆ ಮೂಡಬಹುದು. ಮೊದಲ ಲಿಖಿತ ಸಂವಿಧಾನದ ಕರಡು ರಚನೆಯಾಗಿ ಸುಮಾರು ನೂರು ವರ್ಷಗಳಿಗಿಂತಲೂ ಹೆಚ್ಚುಕಾಲ ಸರಿದಿದೆ. ಬಹಳಷ್ಟು ದೇಶಗಳು ತಮ್ಮ ಸಂವಿಧಾನಗಳನ್ನು ಲಿಖಿತ ಸಂವಿಧಾನವನ್ನಾಗಿಸಿಕೊಂಡಿವೆ. ಸಂವಿಧಾನದ ಆಳ-ಅಗಲವನ್ನು ನಿಶ್ಚಯಿಸಲಾಗಿದೆ. ಅದೇರೀತಿ ಜಗತ್ತಿನಾದ್ಯಂತ ಸಂವಿಧಾನದ ಮೂಲ ಗುಣಗಳನ್ನು ಕೂಡ ಗುರುತಿಸಲಾಗಿದೆ. ಈ ವಾಸ್ತವಾಂಶಗಳ ಹಿನ್ನೆಲೆಯಲ್ಲಿ, ಮುಖ್ಯ ಅಂಶಗಳಲ್ಲಿ ಸಂವಿಧಾನ ಒಂದೇ ರೀತಿ ಕಾಣುವುದು ಸಾಮಾನ್ಯ. ಇಷ್ಟು ತಡವಾಗಿ ರೂಪುಗೊಂಡ ಸಂವಿಧಾನದಲ್ಲಿ ಏನಾದರೂ ಹೊಸತು ಇರುವುದಾದರೆ, ಹಿಂದಿನ ತಪ್ಪುಗಳನ್ನು ಸರಿಪಡಿಸಿರುವ ಬದಲಾವಣೆಗಳು ಮತ್ತು ದೇಶದ ಅಗತ್ಯಗಳಿಗೆ ತಕ್ಕಂತೆ ಅದನ್ನು ಅಳವಡಿಸಿಕೊಂಡಿರುವುದು. ಬೇರೆ ದೇಶಗಳ ಸಂವಿಧಾನಗಳನ್ನು ಕುರುಡಾಗಿ ನಕಲು ಮಾಡಲಾಗಿದೆ ಎಂಬ ಆರೋಪ, ಸಂವಿಧಾನವನ್ನು ಸರಿಯಾಗಿ ಆಧ್ಯಯನ ಮಾಡದೆ ಇರುವುದರಿಂದ ಮೂಡಿರುವಂಥದ್ದು ಎಂದು ನಾನು ಖಂಡಿತವಾಗಿ ಹೇಳಬಲ್ಲೆ” ಎನ್ನುತ್ತಾರೆ. ಅಲ್ಲದೆ 1935ರ ಗವರ್ನಮೆಂಟ್ ಆಫ್ ಇಂಡಿಯಾ ಆಕ್ಟ್‌ನ ಹಲವು ಅಂಶಗಳನ್ನು ಒಳಗೊಂಡಿದೆ ಎಂಬ ಆರೋಪಕ್ಕೆ “ನಾನು ಇದಕ್ಕೆ ಯಾವ ವಿಶಾದವನ್ನೂ ವ್ಯಕ್ತಪಡಿಸುವುದಿಲ್ಲ. ಒಂದರಿಂದ ತೆಗೆದುಕೊಳ್ಳುವುದಕ್ಕೆ ಯಾವ ನಾಚಿಕೆಯೂ ಇರಬೇಕಿಲ್ಲ. ಇದು ನಕಲು ಅಲ್ಲ. ಸಂವಿಧಾನದ ಮೂಲ ಚಿಂತನೆಗಳಿಗೆ ಯಾರೂ ಪೇಟೆಂಟ್ ಹೊಂದಿಲ್ಲ” ಎನ್ನುತ್ತಾರೆ ಬಾಬಾಸಾಹೇಬರು.

ಇಲ್ಲಿಯವರೆಗೂ ಮನುಧರ್ಮಶಾಸ್ತ್ರವೇ ತಮ್ಮ ಸಂವಿಧಾನ ಎಂದು ಪ್ರತಿಪಾದಿಸಿಕೊಂಡು ಬಂದು, ಭಾರತದ ಸಂವಿಧಾನದ ಬಗ್ಗೆ ಹಾಗೂ ಸಾಂವಿಧಾನಿಕ ನೈತಿಕತೆಯ ಬಗ್ಗೆ ಮೂರು ಪೈಸೆಯ ಗೌರವವನ್ನೂ ತೋರದ ಸಂಘ ಪರಿವಾರಿಗಳು ಈಗ ಸಂವಿಧಾನ ಬದಲಿಸುವ ಮಾತನ್ನಾಡುತ್ತಿರುವುದು ಕುಚೋದ್ಯವೇ ಸರಿ. ಮೇಲೆ ಹೇಳಿದ ಭಾಷಣದ ಕೊನೆಗೆ ಬಾಬಾಸಾಹೇಬರು ಹೇಳುವ ಮಾತುಗಳನ್ನು, ಸಂವಿಧಾನ ಬದಲಾವಣೆಯನ್ನು ಪ್ರತಿಪಾದಿಸುವವರ ಮುಖಕ್ಕೆ ಹಿಡಿಯಬೇಕಿದೆ: “ನನಗೆ ಇದು ಕಾರ್ಯಗತವಾಗುವ, ಹೊಂದಾಣಿಕೆಗೆ ಸಾಧ್ಯ ಮಾಡಿಕೊಡುವ ಮತ್ತು ಶಾಂತಿ ಹಾಗೂ ಯುದ್ಧದ ಸಮಯದಲ್ಲಿಯೂ ದೇಶವನ್ನು ಒಟ್ಟಿಗೆ ಹಿಡಿದಿಡುವುದಕ್ಕೆ ಬಲಶಾಲಿಯಾಗಿದೆ (ಸಂವಿಧಾನ). ಬಹುಶಃ ನಾನು ಹೀಗೆ ಹೇಳಬಹುದಾದರೆ, ಹೊಸ ಸಂವಿಧಾನದಡಿಯಲ್ಲಿ ಅಂದುಕೊಳ್ಳದಂತೆ ಆಗದೆ, ಹಳ್ಳ ಹಿಡಿದರೆ, ಅದಕ್ಕೆ ಕಾರಣ ನಾವು ಕೆಟ್ಟ ಸಂವಿಧಾನ ಹೊಂದಿದ್ದೆವು ಅಂತಲ್ಲ. ನಾವು ಏನು ಹೇಳಬೇಕಾಗಬಹುದು ಅಂದರೆ ಮನುಷ್ಯ ಕೆಟ್ಟವನಾಗಿದ್ದ ಎಂದು”.

ಹೀಗೆ ಉದಾತ್ತವಾದ ನಮ್ಮ ಭಾರತ ಸಂವಿಧಾನವನ್ನು ಬಳಸಿಕೊಂಡು ದೇಶಕ್ಕೆ ಸರಿಯಾದ ಮಾರ್ಗವನ್ನು ಕಲ್ಪಿಸಿಕೊಡಲು ಸಾಧ್ಯವಾಗದ ’ಕೆಟ್ಟ’ ಮನುಷ್ಯರಷ್ಟೇ ಸಂವಿಧಾನದ ಮೂಲ ರಚನೆಯನ್ನು ಬದಲಿಸುವ ಮಾತುಗಳನ್ನಾಡಬಲ್ಲರು. ಒಳ್ಳೆಯ ಉದ್ದೇಶವಿದ್ದವರು ಎಂದಿಗೂ ಆಡುವ ಮಾತುಗಳಲ್ಲ ಅವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...