Homeಕರ್ನಾಟಕಕ್ರಾಂತಿಕಾರಿ ‘ಚೆ ಗುವೆರಾ’ ಅವರ ಮಗಳು, ಮೊಮ್ಮಗಳು ಇಂದು ಬೆಂಗಳೂರಿಗೆ ಆಗಮನ!

ಕ್ರಾಂತಿಕಾರಿ ‘ಚೆ ಗುವೆರಾ’ ಅವರ ಮಗಳು, ಮೊಮ್ಮಗಳು ಇಂದು ಬೆಂಗಳೂರಿಗೆ ಆಗಮನ!

- Advertisement -
- Advertisement -

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್‌‌ ( ಸಿಐಟಿಯು) ನ 17ನೇ ಅಖಿಲ ಭಾರತ ಸಮ್ಮೇಳನದ ಅಂಗವಾಗಿ ಗುರುವಾರ (ಇಂದು) ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನ ಬಳಿ ಇರುವ ಸ್ಕೌಟ್‌ ಆಂಡ್‌ ಗೈಡ್‌ ಸಭಾಂಗಣದಲ್ಲಿ ನಡೆಯುವ ಸಭೆಗೆ ಕ್ಯೂಬಾದ ಕ್ರಾಂತಿಕಾರಿ ‘ಚೆ ಗುವೇರಾ’ ಅವರ ಮಗಳು ಮತ್ತು ಮೊಮ್ಮಗಳು ಭಾಗವಹಿಸಲಿದ್ದಾರೆ.

ಸಿಐಟಿಯು ಅಖಿಲ ಭಾರತ ಸಮ್ಮೇಳನ ಬುಧವಾರ ಬೆಂಗಳೂರಿನಲ್ಲಿ ಉದ್ಘಾಟನೆಯಾಗಿದೆ. ‘ಚೆ ಗುವೇರಾ’ ಅವರ ಮಗಳು ಡಾ. ಅಲಿಡಾ ಗುವೇರಾ ಮತ್ತು ಮೊಮ್ಮಗಳು ಎಸ್ತಫಾನಿಯಾ ಮಚಿನ್ ಗುವೇರಾ ಐದು ದಿನಗಳ ಕಾಲ ನಡೆಯಲಿರುವ ಸಮ್ಮೇಳನದ ಎರಡನೇ ದಿನದ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸಮಾರಂಭವು ಸಂಜೆ 4:30 ಗೆ ಪ್ರಾರಂಭವಾಗಲಿದ್ದು, ಚೆ ಗುವೇರಾ ಅವರ ಮಗಳು ಮತ್ತು ಮೊಮ್ಮಗಳಿಗೆ ನಾಗರಿಕ ಸನ್ಮಾನ ಕೂಡಾ ನಡೆಯಲಿದೆ.

ಅಖಿಲ ಭಾರತ ಸಮ್ಮೇಳನಕ್ಕೆ ವರ್ಲ್ಡ್ ಫೆಡರೇಷನ್ ಆಫ್ ಟ್ರೇಡ್ ಯೂನಿಯನ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪಂಬಿಸ್ ಕಿರ್ತಿಸಿಸ್ ಕೂಡಾ ಆಗಮಿಸಲಿದ್ದಾರೆ. ಸಮ್ಮೇಳನದ ಕೊನೆಯ ದಿನವಾದ ಜನವರಿ 22 ರಂದು ಮಧ್ಯಾಹ್ನ 1 ಗಂಟೆಗೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾರ್ಮಿಕರ ಬೃಹತ್ ಬಹಿರಂಗ ಸಭೆ ನಡೆಯಲಿದ್ದು 2 ಲಕ್ಷ ಜನರು ಭಾಗವಹಿಸುವ ನೀರಿಕ್ಷೆಯಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read