Homeಮುಖಪುಟಭಯೋತ್ಪಾದನ ಕೃತ್ಯದ ಆರೋಪಿ ವೈಭವ್ ರಾವುತ್ ಜೈಲಿನಿಂದ ಬಿಡುಗಡೆ ವೇಳೆ ಅದ್ದೂರಿ ಸ್ವಾಗತ

ಭಯೋತ್ಪಾದನ ಕೃತ್ಯದ ಆರೋಪಿ ವೈಭವ್ ರಾವುತ್ ಜೈಲಿನಿಂದ ಬಿಡುಗಡೆ ವೇಳೆ ಅದ್ದೂರಿ ಸ್ವಾಗತ

- Advertisement -
- Advertisement -

ಸನಾತನ ಸಂಸ್ಥೆಯ ಸದಸ್ಯ, ಭಯೋತ್ಪಾದನ ಕೃತ್ಯದ ಆರೋಪಿ ವೈಭವ್ ರಾವುತ್ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ನಲಸೋಪಾರದಲ್ಲಿ ಹಿಂದುತ್ವವಾದಿಗಳು ಡಿಜೆ ಹಾಡು ಹಾಕಿ ಭವ್ಯವಾಗಿ ಸ್ವಾಗತವನ್ನು ಮಾಡಿದ್ದಾರೆ.

2017ರಲ್ಲಿ ಪುಣೆಯಲ್ಲಿ ನಡೆದ ಸನ್‌ಬರ್ನ್ ಸಂಗೀತ ಉತ್ಸವದಲ್ಲಿ ಬಾಂಬ್ ಸ್ಫೋಟದ ಸಂಚಿನಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ರಾವುತ್‌ಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು.

ರಾವತ್‌ಗೆ ಸ್ವಾಗತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ. ವಿಡಿಯೋದಲ್ಲಿ ಕೇಸರಿ ವಸ್ತ್ರದಾರಿ ಪುರುಷರು ಮತ್ತು ಮಹಿಳೆಯರ ಗುಂಪು ಡಿಜೆ ಹಾಡಿಗೆ ಡ್ಯಾನ್ಸ್‌ ಮಾಡುತ್ತಾ ರಾವುತ್‌ಗೆ ಸ್ವಾಗತಿಸುವುದು ಕಂಡು ಬಂದಿದೆ.

2018ರಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ವೈಭವ್ ರಾವುತ್‌ಗೆ ಬಂಧಿಸಿತ್ತು. ಬಂಧನದ ಬಳಿಕ ಅಧಿಕಾರಿಗಳ ಪರಿಶೀಲನೆ ವೇಳೆ ರಾವತ್‌ ಮನೆಯಲ್ಲಿ ಶಸ್ತ್ರಾಸ್ತ್ರಗಳ ಅಕ್ರಮ ಸಂಗ್ರಹಣೆ ಮತ್ತು ಗೌಪ್ಯ ಕೋಣೆಯಲ್ಲಿ  ಪಿಸ್ತೂಲುಗಳು, ಕಚ್ಚಾ ಬಾಂಬ್‌ಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು, ಏರ್‌ಗನ್‌ಗಳು, ಮದ್ದುಗುಂಡುಗಳು ಸಂಗ್ರಹಿಸಿಟ್ಟಿರುವುದು ಕಂಡು ಬಂದಿತ್ತು.

ಮುಂಬೈ ಹೈಕೋರ್ಟ್‌ ರಾವತ್‌ಗೆ ಇತ್ತೀಚೆಗೆ ಜಾಮೀನು ಮಂಜೂರು ಮಾಡಿತ್ತು. ಜಾಮೀನಿನ ವೇಳೆ ಕೋರ್ಟ್‌ ಅನುಮತಿ ಇಲ್ಲದೆ ಪಾಲ್ಘರ್ ಜಿಲ್ಲೆಯ ವಸೈ-ವಿರಾರ್ ಪ್ರದೇಶ ಬಿಟ್ಟು ತೆರಳದಂತೆ ಕೋರ್ಟ್‌ ಸೂಚಿಸಿತ್ತು.

ಇದನ್ನು ಓದಿ; ”ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ” ಎಂದವರು ಈಗ “ತಿಂದಿದ್ದು ಹೇಳಿದವರನ್ನು ಬಿಡುವುದಿಲ್ಲ” ಎಂದು ಬದಲಿಸಿದ್ದಾರೆಯೇ?: ಕಾಂಗ್ರೆಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ನವೀಕರಿಸಿದ ಅಂಕಿ ಅಂಶ: 4 ಹಂತಗಳಲ್ಲಿ 1.07 ಕೋಟಿ ಮತಗಳಲ್ಲಿ ವ್ಯತ್ಯಾಸ!

0
2024ರ ಲೋಕಸಭಾ ಚುನಾವಣೆಯ ಮೊದಲ ನಾಲ್ಕು ಹಂತಗಳ ಮತದಾನದ ಪ್ರತಿ ರಾತ್ರಿ ಚುನಾವಣಾ ಆಯೋಗ ನೀಡಿದ ಮತದಾನದ ಅಂಕಿ-ಅಂಶಗಳನ್ನು ವಿಶ್ಲೇಷಣೆ ಮಾಡಿದಾಗ ಮೊದಲ ನಾಲ್ಕು ಹಂತಗಳಲ್ಲಿ ಸುಮಾರು 1.07 ಕೋಟಿ ಮತಗಳ ವ್ಯತ್ಯಾಸವನ್ನು...