Homeಕರ್ನಾಟಕ‘1 ಲಕ್ಷ ರೂ., ಚಿನ್ನ ಮತ್ತು ಬೆಳ್ಳಿ...!’; ಸಚಿವ ಆನಂದ್ ಸಿಂಗ್‌‌ ಕಡೆಯಿಂದ ಪ್ರತಿ ವಾರ್ಡ್...

‘1 ಲಕ್ಷ ರೂ., ಚಿನ್ನ ಮತ್ತು ಬೆಳ್ಳಿ…!’; ಸಚಿವ ಆನಂದ್ ಸಿಂಗ್‌‌ ಕಡೆಯಿಂದ ಪ್ರತಿ ವಾರ್ಡ್ ಸದಸ್ಯರಿಗೆ ದೀಪಾವಳಿ ಉಡುಗೊರೆ

- Advertisement -
- Advertisement -

ವಿಜಯನಗರ ಜಿಲ್ಲೆಯ ಹೊಸಪೇಟೆ ಕ್ಷೇತ್ರವನ್ನು ಪ್ರತಿನಿಧಿಸುವ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ತಮ್ಮ ಕ್ಷೇತ್ರದ ಚುನಾಯಿತ ಸದಸ್ಯರಿಗೆ ದುಬಾರಿ ದೀಪಾವಳಿ ಉಡುಗೊರೆಗಳನ್ನು ನೀಡಿ ವಿವಾದವೆಬ್ಬಿಸಿದ್ದಾರೆ.

ತಮ್ಮ ಮನೆಯಲ್ಲಿ ನಡೆಯುವ ಲಕ್ಷ್ಮೀ ಪೂಜೆಯ ಆಮಂತ್ರಣ ಪತ್ರಿಕೆ ಪೆಟ್ಟಿಗೆಯಲ್ಲಿ ಚಿನ್ನ, ಬೆಳ್ಳಿ, ಬಟ್ಟೆ, ನಗದುಗಳನ್ನು ಅವರು ನೀಡಿದ್ದಾರೆ. ಉಡುಗೊಡೆ ಬಾಕ್ಸ್ ಮತ್ತು ಅದರಲ್ಲಿರುವ ಫೋಟೋಗಳು ಈಗ ವೈರಲ್ ಆಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸಚಿವ ಆನಂದ್ ಸಿಂಗ್‌ ಎರಡು ಸೆಟ್ ಉಡುಗೊರೆ ಬಾಕ್ಸ್‌ಗಳನ್ನು ನಗರಸಭೆ ಸದಸ್ಯರಿಗೆ ಮತ್ತು ಇನ್ನೊಂದು ಗ್ರಾಮ ಪಂಚಾಯಿತಿ ಸದಸ್ಯರಿಗೆ ವಿತರಿಸಿದ್ದಾರೆ ಎಂದು ವರದಿಯಾಗಿದೆ. ಪುರಸಭೆ ಸದಸ್ಯರಿಗೆ 1 ಲಕ್ಷ ರೂ.ನಗದು, 144 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ, ರೇಷ್ಮೆ ಸೀರೆ, ಧೋತಿ, ಡ್ರೈ ಫ್ರೂಟ್ ಬಾಕ್ಸ್ ನೀಡಿದರೆ, ಪಂಚಾಯ್ತಿ ಸದಸ್ಯರಿಗೆ ಇದಕ್ಕಿಂತಲೂ ಕಡಿಮೆ ನಗದು, ಚಿನ್ನಾಭರಣ ಮತ್ತು ಉಳಿದ ವಸ್ತುಗಳನ್ನು ನೀಡಿದ್ದಾಗಿ ವರದಿ ಹೇಳಿವೆ.

ಇದನ್ನೂ ಓದಿ: ಅರಣ್ಯ ಕಾಯ್ದೆಯಡಿ ಹಲವು ಗಂಭೀರ ಪ್ರಕರಣಗಳಿರುವ ಆನಂದ್ ಸಿಂಗ್‌ಗೆ ಅರಣ್ಯ ಸಚಿವ ಸ್ಥಾನ!

ಹೊಸಪೇಟೆ ಕ್ಷೇತ್ರವು 35 ಚುನಾಯಿತ ಮತ್ತು ಐದು ನಾಮನಿರ್ದೇಶಿತ ಸದಸ್ಯರ ಒಂದು ನಗರಸಭೆಯನ್ನು ಹೊಂದಿದೆ. ಜೊತೆಗೆ 182 ಸದಸ್ಯರನ್ನು ಹೊಂದಿರುವ 10 ಗ್ರಾಮ ಪಂಚಾಯಿತಿಗಳನ್ನು ಹೊಂದಿದೆ.

ಕೆಲವು ಪುರಸಭೆಯ ಚುನಾಯಿತ ಸದಸ್ಯರು ಉಡುಗೊರೆ ಪೆಟ್ಟಿಗೆಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ್ದು, ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವಾಗ ಆನಂದ್‌ ಸಿಂಗ್‌ ಸೋಗಿನ ಸಜ್ಜನಿಕೆಯನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಆದರೆ ಆನಂದ್ ಸಿಂಗ್ ಅವರ ಬೆಂಬಲಿಗರು ಇದನ್ನು ನಿರಾಕರಿಸಿದ್ದು, ಪ್ರತಿ ದೀಪಾವಳಿಯಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಅವರು ಉಡುಗೊರೆಗಳನ್ನು ಕಳುಹಿಸುತ್ತಾರೆ. ಆದರೆ ಮುಂದಿನ ದಿನಗಳಲ್ಲಿ ಚುನಾವಣೆ ಇರುವುದರಿಂದ ಈ ವರ್ಷ ವಿವಾದವಾಗಿದೆ ಎಂದು ಹೇಳಿದ್ದಾರೆ.

ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಇತರ ಪ್ರಮುಖ ವ್ಯಕ್ತಿಗಳಿಗೂ ಉಡುಗೊರೆ ಪೆಟ್ಟಿಗೆಗಳನ್ನು ಕಳುಹಿಸಲಾಗಿದೆ ಎಂದು ಬೆಂಬಲಿಗರು ಹೇಳಿದ್ದಾರೆ.

ಇದನ್ನೂ ಓದಿ: ತನಗೆ ಸಿಕ್ಕ ಖಾತೆಗೆ ಕ್ಯಾತೆ ತೆಗೆದ ಸಚಿವ ಆನಂದ್ ಸಿಂಗ್!

“ಸಚಿವ ಆನಂದ್ ಸಿಂಗ್ ಅವರು ಪ್ರತಿ ಗಣೇಶ ಮತ್ತು ದೀಪಾವಳಿ ಹಬ್ಬದ ಸಮಯದಲ್ಲಿ ಆಹ್ವಾನದ ಭಾಗವಾಗಿ ಉಡುಗೊರೆ ಪೆಟ್ಟಿಗೆಗಳನ್ನು ಕಳುಹಿಸುತ್ತಾರೆ. ಅವರು ಅವುಗಳನ್ನು ತನ್ನ ಆಪ್ತ ಸ್ನೇಹಿತರು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಕಳುಹಿಸುತ್ತಾರೆ. ಇದನ್ನು ಯಾಕೆ ವಿವಾದ ಮಾಡುತ್ತಿದ್ದಾರೆ ಎಂಬುದು ನಮಗೆ ಖಚಿತವಿಲ್ಲ” ಎಂದು ಹೊಸಪೇಟೆಯ ಬೆಂಬಲಿಗರೊಬ್ಬರು ಹೇಳಿದ್ದಾರೆ.

ಆಸ್ತಿ ವಿವಾದದ ಕುರಿತು ಕುಟುಂಬವೊಂದಕ್ಕೆ ಬೆದರಿಕೆ ಹಾಕಿದ್ದಕ್ಕಾಗಿ ಆನಂದ್ ಸಿಂಗ್ ವಿರುದ್ಧ ಪೊಲೀಸರು ಸೆಪ್ಟೆಂಬರ್‌‌‌ನಲ್ಲಿ ಎಫ್‌ಐಆರ್‌ ದಾಖಲಿಸಿದ್ದರು. ದಲಿತ ವ್ಯಕ್ತಿ ಡಿ. ಪೋಲಪ್ಪ ನೀಡಿದ ದೂರಿನ ಮೇರೆಗೆ ಸಚಿವರು ಮತ್ತು ಇತರ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಚಿವ ಆನಂದ್ ಸಿಂಗ್ ಅವರು ಬಳ್ಳಾರಿ ಗಣಿ ಉದ್ಯಮಿಯಾಗಿದ್ದು, ಅವರ ಚರ ಮತ್ತು ಸ್ಥಿರ ಆಸ್ತಿಗಳ ಒಟ್ಟು ಮೊತ್ತ 70 ಕೋಟಿ ರೂ. ಆಗಿದೆ. 2009 ರಲ್ಲಿ ಬಳ್ಳಾರಿ ಗಣಿಗಾರಿಕೆ ಹಗರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಆನಂದ್ ಸಿಂಗ್‌ ಅವರನ್ನು ಎರಡು ಬಾರಿ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿ, ವಂಚನೆ, ಕ್ರಿಮಿನಲ್ ನಂಬಿಕೆ ಉಲ್ಲಂಘನೆ, ಕ್ರಿಮಿನಲ್ ಅತಿಕ್ರಮಣ ಮತ್ತು ಫೋರ್ಜರಿ ಆರೋಪವಿದೆ.

ಇದನ್ನೂ ಓದಿ: ಎಸ್‌ಪಿ ಕಚೇರಿ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಸಂತ್ರಸ್ತ ಕುಟುಂಬ; ಸಚಿವ ಆನಂದ್‌ ಸಿಂಗ್ ವಿರುದ್ಧ ಅಟ್ರಾಸಿಟಿ ಕೇಸ್‌ ದಾಖಲು

ರಾಜ್ಯದ ಬೇಲಿಕೇರಿ ಕೋಟೆಯಿಂದ ಕಬ್ಬಿಣವನ್ನು ಅಕ್ರಮವಾಗಿ ರಫ್ತು ಮಾಡಿದ ಆರೋಪದಲ್ಲಿ 2013 ರಲ್ಲಿ ಸಿಬಿಐ ಅವರನ್ನು ಎರಡನೇ ಬಾರಿಗೆ ಬಂಧಿಸಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಇಷ್ಟೊಂದು ದುಬಾರಿ ಹಣ ಎಲ್ಲಿಂದ ಬಂತು ಇಲ್ಲಿಗೆ ಯಾಕೆ ಐಟಿ ಯವರು ಯಾಕೆ ರೈಡ್ ಮಾಡ್ಲಿಲ್ಲ

LEAVE A REPLY

Please enter your comment!
Please enter your name here

- Advertisment -

Must Read

‘ಪೆನ್ ಡ್ರೈವ್ ಕೊಟ್ಟಿದ್ದು ನಾನೆ..’; ಸ್ಪಷ್ಟನೆ ನೀಡಿದ ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ

0
ದೇಶದಾದ್ಯಂತ ಭಾರೀ ಸುದ್ದಿಯಾಗಿರುವ, ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಠಿಸಿರುವ ಜೆಡಿಎಸ್ ಸಂದರಾದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದಲ್ಲಿ ಇಂದು ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ರೇವಣ್ಣ ಮೊಮ್ಮಗನ...