Homeಮುಖಪುಟಯೆಮೆನ್ ಮತ್ತು ಸೌದಿ-ಇರಾನ್ ಶಾಂತಿ ಒಪ್ಪಂದ

ಯೆಮೆನ್ ಮತ್ತು ಸೌದಿ-ಇರಾನ್ ಶಾಂತಿ ಒಪ್ಪಂದ

- Advertisement -
- Advertisement -

ಇತ್ತೀಚಿನ ಸೌದಿ ಅರೇಬಿಯಾ ಅಧಿಪತ್ಯ ಮತ್ತು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನಡುವಿನ ಶಾಂತಿ ಒಪ್ಪಂದದ ಕಾರಣದಿಂದ ಯೆಮೆನ್‌ನಲ್ಲಿ ನಡೆಯುತ್ತಿರುವ ಅಂತರ್ಯುದ್ಧವು ಕೊನೆಗೊಳ್ಳುವ ಭರವಸೆಗಳು ಮೂಡುತ್ತಿವೆ. ಈ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿದ್ದು ಚೀನ. ಈ ಸಂಘರ್ಷದಲ್ಲಿ ಚೀನ ತಟಸ್ಥ ನೀತಿಯನ್ನು ಅನುಸರಿಸಿತ್ತು. 1990ರಿಂದಲೂ ಈ ಪ್ರದೇಶದಲ್ಲಿ ನಡೆಯುತ್ತಿದ್ದ ಸಂಘರ್ಷದ ಫಲಿತಾಂಶವೇ ಯೆಮೆನ್‌ನ ಈ ಅಂತರ್ಯುದ್ಧ. ಅಂತಾರಾಷ್ಟ್ರೀಯ ವೀಕ್ಷಣಕಾರರು ಈ ಸಂಘರ್ಷವನ್ನು ಸೌದಿ ಅರೇಬಿಯ ಮತ್ತು ಇರಾನ್‌ಗಳ ನಡುವಿನ ಮುಸುಕು ಯುದ್ಧವೆಂದೇ ಕರೆದಿದ್ದರು. ಸೌದಿ ಅರೇಬಿಯಾ ಸರ್ಕಾರ 2015ರಲ್ಲಿ ತನ್ನನ್ನು ತಾನೇ ನೇರವಾಗಿ ಈ ಸಂಘರ್ಷದಲ್ಲಿ ತೊಡಗಿಸಿಕೊಂಡಿತ್ತು. ಇದೇ ಸಮಯದಲ್ಲಿ ಶಿಯಾಗಳ ಮುಂದಾಳತ್ವದ ಹೋತಿ ಸರ್ಕಾರ ಯೆಮೆನ್‌ನಲ್ಲಿ ಅಧಿಕಾರ ವಹಿಸಿಕೊಂಡಿತ್ತು.

ಸೌದಿ ಅರೇಬಿಯ ಯೆಮೇನಿ ಸಮ್ಮಿಶ್ರ ಸರ್ಕಾರ ಮತ್ತು ಹೋತಿ ಬಂಡುಕೋರರ ನಡುವೆ ಎಂಟು ತಿಂಗಳ ಯುದ್ಧ ವಿರಾಮಕ್ಕೋಸ್ಕರ ಮಧ್ಯಸ್ಥಿಕೆ ವಹಿಸಿತ್ತು, ಅದಲ್ಲದೇ ದೇಶದ ಭವಿಷ್ಯದ ಬಗ್ಗೆ ಎರಡು ವರ್ಷಗಳಷ್ಟು ಕಾಲ ಮಾತುಕತೆ ನಡೆಸಿತ್ತು. ಈ ಒಪ್ಪಂದ ಸೌದಿ ಅರೇಬಿಯ ಮತ್ತು ಇರಾನ್‌ಗಳ ನಡುವಿನ ಸಂದಿಗ್ಧದ ರಾಯಭಾರೀ ಸಂಬಂಧಗಳನ್ನು ಪುನಃಸ್ಥಾಪಿಸಲು ನೆರವಾಯಿತು. ಒಬ್ಬ ಪ್ರಮುಖ ಶಿಯಾ ಕ್ಲೆರಿಕ್‌ನನ್ನು ಗಲ್ಲಿಗೇರಿಸಿದ ಕಾರಣಕ್ಕೋಸ್ಕರ ಯಾವಾಗ ಟೆಹ್ರಾನ್‌ನ ಸೌದಿ ಅರೇಬಿಯಾ ರಾಯಭಾರಿ ಕಚೇರಿಯ ಮೇಲೆ ದಾಳಿ ನಡೆದಿತ್ತೋ, ಆಗ ಸೌದಿ ಅರೇಬಿಯ ಮತ್ತು ಇರಾನ್‌ಗಳ ನಡುವೆ 2016ರಿಂದಲೂ ಈ ರೀತಿಯ ಮಾರ್ಗಗಳಿನ್ನೂ ತೆರೆದಿರಲಿಲ್ಲ. ಈ ಘಟನೆಗಳ ನಂತರ ಎರಡೂ ದೇಶಗಳ ನಡುವಿನ ಸಂಬಂಧ ಕೆಡುತ್ತಾ ಹೋಯಿತು. ಈಗಿನ ಶಾಂತಿಯ ಒಪ್ಪಂದದ ನಂತರ, ಪರಸ್ಪರವಾಗಿ ಒಪ್ಪಿಕೊಂಡ ವಿಷಯಗಳು ಇಂತಿವೆ:

  •  ಯೆಮೆನ್‌ನಲ್ಲಿ ಯುದ್ಧವಿರಾಮ ಉಂಟಾಗಬೇಕು. ಈ ಯುದ್ಧವಿರಾಮ ಆರು ತಿಂಗಳ ಕಾಲ ಪರಸ್ಪರ ವಿಶ್ವಾಸವನ್ನು ಸ್ಥಾಪಿಸುವ ಮೊದಲನೇ ಹಂತವನ್ನೂ ಒಳಗೊಂಡಿದೆ.
  •  ಮೊದಲನೇ ಹಂತದ ವಿಶ್ವಾಸವನ್ನು ಸ್ಥಾಪಿಸುವ ಪ್ರಕ್ರಿಯೆಯ ನಂತರ, ಮುಂದಿನ ಮೂರು ತಿಂಗಳುಗಳ ಸಂಧಾನಗಳ ಕಾಲದಲ್ಲಿ, ಅದರ ಮುಂದಿನ ಎರಡು ವರ್ಷಗಳ ಪರಿವರ್ತನೆಯ ಹಂತವನ್ನು ತಲುಪಲು ಕೆಲಸ ಮಾಡಬೇಕು.
  •  ಯೆಮೆನ್‌ನಲ್ಲಿನ ಸರ್ಕಾರೀ ಕೆಲಸಗಾರರಿಗೆ ಸಂಬಳವನ್ನು ಸರ್ಕಾರೀ ಸ್ವಾಮ್ಯದಲ್ಲಿರುವ ತೈಲ ಮತ್ತು ಅನಿಲದಿಂದ ಉತ್ಪತ್ತಿಯಾಗುವ ಆದಾಯದಿಂದ ಭರಿಸತಕ್ಕದ್ದು. ಮತ್ತು ಯೆಮೇನಿ ಬಂದರುಗಳ ಮೇಲಿನ ಎಲ್ಲಾ ನಿರ್ಬಂಧಗಳನ್ನೂ ತೆಗೆಯಲಾಗುವುದು.
  •  ಸೌದಿ ಅರೇಬಿಯಾ ವಿರುದ್ಧ ಪ್ರತೀಕಾರದ ಆಕ್ರಮಣಗಳನ್ನು ಮಾಡದಿರುವಂತೆ ಭರವಸೆ ನೀಡಲು 1300 ಕಿ.ಮೀ. ಗಡಿಯುದ್ದಕ್ಕೂ ಸೌದಿ ಅರೇಬಿಯ ಮತ್ತು ಯೆಮೆನ್ ನಡುವೆ ಸಂಘರ್ಷಣಾರಹಿತ ವಲಯವನ್ನು ನಿರ್ಮಿಸಲಾಗುವುದು.

ಯೆಮೆನ್‌ನಲ್ಲಿನ ಯುದ್ಧ

ಹೋತಿ ಯೆಮೆನ್‌ನಲ್ಲಿ ಶಿಯಾ ಮುಸ್ಲಿಮರ ಒಂದು ಪ್ರಮುಖವಾದ ಆಂದೋಲನ. ಹೋತಿಗಳು ಯೆಮೆನ್‌ನ ಉತ್ತರದ ಪ್ರಾಂತ್ಯವಾದ ಸಾದದಿಂದ ಬಂದವರು, ಮತ್ತು ಅಲ್ಲಿ ಅವರು ಯೆಮೆನ್‌ನ ಸರ್ಕಾರದ ಜೊತೆ ತಮ್ಮನ್ನು ಸಂಘರ್ಷದಲ್ಲಿ ತೊಡಗಿಸಿಕೊಂಡಿದ್ದರು. ಜೈದಿ ಸಮುದಾಯದವರಿಗೆ ಹೆಚ್ಚಿನ ಆರ್ಥಿಕ ಮತ್ತು ರಾಜಕೀಯ ಪ್ರಾತಿನಿಧ್ಯವನ್ನು ನೀಡಿ ಶಾಂತಿಯ ಒಡಂಬಡಿಕೆಯನ್ನು ಮಾಡಿಕೊಳ್ಳಲು ಯೆಮೆನಿ ಸರ್ಕಾರ ಪ್ರಯತ್ನಿಸಿದಾಗ 1990ರ ವೇಳೆಗೆ ಈ ಸಮುದಾಯ ಬೆಳವಣಿಗೆಯನ್ನು ಕಂಡಿತು. ಆದರೆ ಯೆಮೇನಿ ಸರ್ಕಾರ ಒಪ್ಪಂದವನ್ನು ಈಡೇರಿಸದೇ ಇದ್ದಾಗ, ಜೈದಿ ಸಮುದಾಯದ ಸದಸ್ಯರುಗಳು ಒಟ್ಟಿಗೆ ಸೇರಿ ಹೋತಿ ಆಂದೋಲನವನ್ನು ಪ್ರಾರಂಭಿಸಿದರು. ಶಿಯಾ ಗೆರಿಲ್ಲಾ ಆಂದೋಲನಗಳು ಹೋಲಿಕೆಯಿಂದ ಬಹಳಷ್ಟು ವಿಕೇಂದ್ರೀಕರಣದಿಂದ ಕೂಡಿದ್ದು, ಅದರ ಸ್ಥಳೀಯ ನಾಯಕರುಗಳು ಒಂದೇ ಗುರಿಯನ್ನು ಮುಂದಿಟ್ಟುಕೊಂಡು ಜನರನ್ನು ಸಜ್ಜುಗೊಳಿಸಿದರು. ಇದು ಕೇಂದ್ರೀಕೃತ ನಾಯಕತ್ವದ ಆಡಳಿತ ವ್ಯವಸ್ಥೆಯ ಮೇಲಿನ ಪ್ರತಿರೋಧವನ್ನು ಪರಿಣಾಮಕಾರಿಯನ್ನಾಗಿ ಮೂಡಿಸಲು ಸಾಧ್ಯವಾಯಿತು.

ಈ ಆಂದೊಲನ ಬಹಳ ವರ್ಷಗಳ ಕಾಲ ಬೆಳೆಯುತ್ತಾ ಬಂದಿತು. 2004ರಲ್ಲಿ, ಹೋತಿ ಯೆಮೆನ್ ಸರ್ಕಾರದ ವಿರುದ್ಧ ಬಂಡಾಯವೇಳಲು ಪ್ರಾರಂಭಿಸಿತು. ಈ ಬಂಡಾಯ, ಸುದೀರ್ಘವಾದ ಹೋತಿಗಳ ಮತ್ತು ಯೆಮೆನ್ ದೇಶದ ನಡುವಿನ ಅಂತರ್ಯುದ್ಧಕ್ಕೆ ನಾಂದಿಯಾಯಿತು.

ಇದನ್ನೂ ಓದಿ: ಸುಡಾನ್ ಬಿಕ್ಕಟ್ಟಿನ ಮೂಲವೇನು?

2011ರಲ್ಲಿ, ಹೋತಿಗಳು ಸರ್ಕಾರದ ವಿರುದ್ಧ ಸಾಮೂಹಿಕ ಪ್ರತಿಭಟನೆಯನ್ನು ಹಮ್ಮಿಕೊಂಡರು, ಇದರಿಂದ ಅಧ್ಯಕ್ಷ ಆಲಿ ಅಬ್ದುಲ್ಲಾ ಸಾಲೆಹ್, ಮೂವತ್ತು ವರ್ಷಗಳ ಅಧಿಕಾರಾವಧಿಯ ನಂತರ ಪದಚ್ಯುತಿಗೊಳ್ಳಬೇಕಾಯಿತು. ಯುದ್ಧ ಹಾಗೆಯೇ ಮುಂದುವರಿಯಿತು, ಮತ್ತು 2014ರಲ್ಲಿ ಅವರು ಯೆಮೆನ್‌ನ ರಾಜಧಾನಿಯಾದ ಸಾನ ನಗರವನ್ನು ವಶಪಡಿಸಿಕೊಂಡರು. ಹೋತಿಯ ಈ ಆಕ್ರಮಣವನ್ನು ಮಿಡಲ್ ಈಸ್ಟ್‌ನ ಅನೇಕ ರಾಷ್ಟ್ರಗಳು, ವಿಶಿಷ್ಟವಾಗಿ ಸೌದಿ ಅರೇಬಿಯ ವಿರೋಧಿಸಿದವು. ಹೋತಿ ಒಂದು ಶಿಯಾಗಳ ಗುಂಪಾಗಿದ್ದು, ಅವರು ಸ್ವಾಭಾವಿಕವಾಗಿಯೇ ಇರಾನ್‌ನ ಜೊತೆ ಮೈತ್ರಿಯಾಗಿದ್ದಾರೆ ಎಂದು ಸೌದಿ ಅರೇಬಿಯಾ ಸರ್ಕಾರ ಪ್ರತಿಪಾದಿಸಿತು. ಮಾರ್ಚ್ 2015ರಲ್ಲಿ ಸೌದಿ ಅರೇಬಿಯಾದ ಸರ್ಕಾರ ಯೆಮೆನ್ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಿತು; ಈಗ ಯೆಮೆನ್‌ನಲ್ಲಿ ಮುಂದುವರಿಯುತ್ತಿದ್ದ ಯುದ್ಧಕ್ಕೆ ಅದೇ ಕಾರಣ.

ಸೌದಿ ಅರೇಬಿಯಾದ ಆಕ್ರಮಣ ಬಹಳ ಕ್ರೌರ್ಯದಿಂದ ಕೂಡಿತ್ತು. ಆಗಲೇ ಯೆಮೆನ್ ಪ್ರಪಂಚದಲ್ಲಿ ಅತ್ಯಂತ ಬಡ ರಾಷ್ಟ್ರಗಳಲ್ಲಿ ಒಂದಾಗಿತ್ತು, ಮತ್ತು ಈ ಸಂಘರ್ಷಕ್ಕೆ ಬಲಿಯಾದವರ ಸಂಖ್ಯೆ ಸುಮಾರು ಎರಡು ಲಕ್ಷ, ಮತ್ತು ಲಕ್ಷಾಂತರ ಮಂದಿ ತಮ್ಮ ಮನೆಮಠಗಳನ್ನು ಕಳೆದುಕೊಂಡರು.

ಆಲಿ ಅಬ್ದುಲ್ಲಾ ಸಾಲೆಹ್

ಈ ಹೋತಿ ಅನ್ನುವುದು ಒಂದು ಆಂದೋಲನವಾಗಿರುವುದರಿಂದ, ಅವರಿಗೆ ಅತ್ಯಂತ ತಳಮಟ್ಟದಲ್ಲಿ ಸೌದಿ ಅರೇಬಿಯಾದ ಆಕ್ರಮಣದ ವಿರುದ್ಧ ಜನರನ್ನು ಸಜ್ಜುಗೊಳಿಸಲು ಸಾಧ್ಯವಾಯಿತು, ಮತ್ತು ಅವರಿಗೆ ಸೌದಿ ಅರೇಬಿಯಾದ ಆಕ್ರಮಣದ ವಿರುದ್ಧ ಗೆರಿಲ್ಲಾ ರೀತಿಯ ಯುದ್ಧ ತಂತ್ರಗಳನ್ನು ನಿಯೋಜಿಸಲು ಅನುಕೂಲಕರವಾಯಿತು.

ಈ ಸಂಘರ್ಷವನ್ನು ಮಿಡಲ್ ಈಸ್ಟ್‌ನಲ್ಲಿ ಸೃಷ್ಟಿಯಾಗುತ್ತಿರುವ ಶೀತಲ ಸಮರ ಎಂದು ಪರಿಗಣಿಸಲಾಯಿತು. ಅಂದರೆ ಅಮೆರಿಕದ ಮೈತ್ರಿಕೂಟ ಒಂದು ಕಡೆ, ಮತ್ತು ಇರಾನ್ ಇನ್ನೊಂದು ಕಡೆ. ಇರಾನ್, ಯೆಮೆನ್ ಜೊತೆಯಲ್ಲಿ ಸೇರಿಕೊಂಡರೆ ಅದಕ್ಕೆ ಬಹಳಷ್ಟು ಲಾಭ ಉಂಟಾಗುವುದಂತೂ ನಿಜ. ಯೆಮೆನ್ ಇರುವುದು ಗಲ್ಫ್‌ನ ಆಯಕಟ್ಟಿನ ಪ್ರದೇಶದಲ್ಲಿ, ಮತ್ತು ಅದಕ್ಕೆ ಗಟ್ಟಿಯಾದ ಸಾಂಸ್ಕೃತಿಕ ನಂಟು ಇರಾನ್ ಜೊತೆಯಲ್ಲಿದೆ. ಯೆಮೆನ್ ಇರುವುದು ಕೆಂಪು ಸಮುದ್ರ ಪ್ರಾರಂಭವಾಗುವ ಕಡೆಯಲ್ಲಿ, ಮತ್ತು ಅಲ್ಲಿನ ತೈಲದ ಸರಬರಾಜಿನ ಚಲನವಲನದ ಬಗ್ಗೆ ಆ ದೇಶ ಪ್ರಭಾವ ಬೀರಬಲ್ಲದು.

ಯೆಮೆನ್‌ನಲ್ಲಿನ ಪರಿಸ್ಥಿತಿ

ಯೆಮೆನ್ ಪ್ರಪಂಚದ ಅತಿಯಾದ ಬಡ ದೇಶಗಳಲ್ಲಿ ಒಂದು. ಹೊರದೇಶದಿಂದ ಬರುವ ಹಣದ ಆರ್ಥಿಕತೆಯ ಮೇಲೆ ಯೆಮೆನ್ ಅವಲಂಬಿತವಾಗಿದೆ, ಆದರೆ, ಕಳೆದ ಕೆಲವು ದಶಕಗಳಿಂದ ಅದರ ಆರ್ಥಿಕವಾದ ಪ್ರತ್ಯೇಕೀಕರಣದ ಕಾರಣದಿಂದ ಅದರ ಆರ್ಥಿಕತೆ ಬಹಳ ದುರ್ಬಲಗೊಂಡಿತು. ಅಲ್ಲಿನ ಮೂರು ಕೋಟಿ ಜನಗಳಲ್ಲಿನ ಮೂರನೇ ಎರಡು ಭಾಗದ ಜನರು ಆಹಾರದ ವಿಷಯದಲ್ಲಿ ಅಭದ್ರರಾಗಿದ್ದಾರೆ. ಈಗ ಮುಂದುವರಿಯುತ್ತಿರುವ ಯುದ್ಧದ ಕಾರಣಕ್ಕೆ ಬಹಳಷ್ಟು ಜನರು ಆಹಾರ ಮತ್ತು ಆರೋಗ್ಯ ಸೇವೆಯಿಂದ ವಂಚಿತರಾಗಿದ್ದಾರೆ. ಯೆಮೆನ್ ಬಹಳ ಪರ್ವತಗಳಿಂದ ಕೂಡಿದ ಪ್ರದೇಶ, ಮತ್ತು ದೂರದ ಪ್ರದೇಶಗಳನ್ನು ತಲುಪುವುದು ಬಹಳ ಕಷ್ಟ. ಇದು ಪ್ರತಿರೋಧದ ಆಂದೋಲನಕ್ಕೆ, ಅದರಲ್ಲೂ ಸೌದಿ ಅರೇಬಿಯಾದ ಸೈನ್ಯದ ವಿರುದ್ಧದ ಯುದ್ಧದಲ್ಲಿ ಸಹಕಾರಿಯಾಗಿದ್ದರೂ, ಅದೇ ಸಮಯದಲ್ಲಿ ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳನ್ನು ಪಡೆಯುವುದು ಕೂಡ ಕಷ್ಟಕರವಾಗಿದೆ.

ಸೌದಿ ಅರೇಬಿಯಾ ಮತ್ತು ಇರಾನ್

ಸೌದಿ ಅರೇಬಿಯಾ ಮತ್ತು ಇರಾನ್, ಇವೆರಡೂ ಮಧ್ಯ ಪ್ರಾಚ್ಯದಲ್ಲಿ ಎರಡು ಪ್ರಮುಖವಾದ ಬಲಿಷ್ಟ ರಾಷ್ಟ್ರಗಳು ಮತ್ತು ಈ ಒಪ್ಪಂದ ಬಹಳ ಪ್ರಾಮುಖ್ಯತೆಯನ್ನು ಪಡೆದಂತಹ ಒಂದು ಘಟನೆ. ಈ ಪೈಪೋಟಿ ಪ್ರಾಥಮಿಕವಾಗಿ ಆರ್ಥಿಕ ಮತ್ತು ಸೈನಿಕ ಅಂಶಗಳಿಂದ ಕೂಡಿದೆ. ಸೌದಿ ಅರೇಬಿಯ ಅಮೆರಿಕದ ಜೊತೆಯಲ್ಲಿ ಮೈತ್ರಿಯನ್ನು ಹೊಂದಿದೆ ಮತ್ತು ಅಮೆರಿಕ ಸರ್ಕಾರದ ಕಾರಣದಿಂದ ಅಂತಾರಾಷ್ಟ್ರೀಯವಾಗಿ ಇರಾನ್‌ನನ್ನು ಒಂಟಿ ಮಾಡಲಾಗಿದೆ. ಇತ್ತೀಚೆಗೆ ಎರಡೂ ದೇಶಗಳು ವಿಪರೀತವಾದ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಇರಾನ್‌ನ ಆರ್ಥಿಕ ಪರಿಸ್ಥಿತಿ ಅತಿಯಾದ ಸಂಕಷ್ಟಕ್ಕೆ ಒಳಗಾಗಬೇಕಾಯಿತು ಮತ್ತು ಅಮೆರಿಕ ಮತ್ತು ಸೌದಿಯ ಸಂಬಂಧ ಮೊದಲಿದ್ದುದಕ್ಕೆ ಹೋಲಿಸಿದರೆ ಈಗ ಬಹಳ ದುರ್ಬಲಗೊಂಡಿತ್ತು. ಮಿಡಲ್‌ಈಸ್ಟ್‌ನಾದ್ಯಂತ ನಡೆಯುತ್ತಿದ್ದ ಸಂಘರ್ಷಗಳಲ್ಲಿ ಮೌನ ಸೌದಿ ಅರೇಬಿಯಾದ ಉಪಸ್ಥಿತಿ ಇರುತ್ತಿತ್ತು, ಮತ್ತು ಇದರ ಪರಿಣಾಮವಾಗಿ ಸಿರಿಯಾ ಮತ್ತು ಇರಾಕ್‌ಗಳಲ್ಲಿ ಪ್ರಕ್ಷುಬ್ಧತೆ ಮತ್ತು ಅಸ್ಥಿರತೆ ಉಂಟಾಗಿತ್ತು. ಮಿಡಲ್ ಈಸ್ಟ್‌ನಾದ್ಯಂತ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಮತ್ತು ಬೆಂಬಲವನ್ನು ನೀಡುತ್ತಿದೆ ಎಂದು ಇರಾನ್‌ನನ್ನು ದೂಷಿಸಲಾಯಿತು. ವಿಶಿಷ್ಟವಾಗಿ ಲೆಬೆನಾನ್, ಪ್ಯಾಲಿಸ್ಟೀನ್ ಮತ್ತು ಸಿರಿಯಾಗಳಿಗೆ. ಈ ಎರಡೂ ಶಕ್ತಿಗಳು ಇನ್ನೂ ಬೇಲಿಯ ಎದುರುಬದುರೇ ಇದ್ದವು. ಅಮೆರಿಕ ಶಸ್ತ್ರಾಸ್ತ್ರಗಳನ್ನು ನೀಡಿತ್ತು, ಸೈನ್ಯದ ಬೆಂಬಲ ಮತ್ತು ರಾಯಭಾರಿ ಸಹಾಯವನ್ನು ಸೌದಿ ಅರೇಬಿಯಾಗೆ ನೀಡಿತು. ಆದರೂ ಇತ್ತೀಚಿನ ವರ್ಷಗಳಲ್ಲಿ, ಮಿಡಲ್ ಈಸ್ಟ್‌ನ ತೈಲದ ಮೇಲೆ ಅವಲಂಬಿತವಾಗುವುದು ಕಡಿಮೆಯಾಗುತ್ತಾ ಬಂದಿರುವುದರಿಂದ, ಅನೇಕ ಪರಿಣಿತರ ಪ್ರಕಾರ ಅಮೆರಿಕ ಮತ್ತು ಸೌದಿ ಅರೇಬಿಯಾದ ಸಂಬಂಧ ದಿನಕಳೆದಂತೆ ಕ್ಷೀಣಿಸುತ್ತಾ ಹೋಗುತ್ತದೆಯೆಂದು. ಇರಾನ್‌ನಲ್ಲಿನ ಆರ್ಥಿಕ ಅಭದ್ರತೆ ಕೂಡ ಅಲ್ಲಿನ ನಾಯಕತ್ವದ ವಿಷಯದಲ್ಲಿ ಬಿಕ್ಕಟ್ಟು ಉಂಟಾಗಲು ಕಾರಣವಾಗಿದೆ; ಅದರ ಅರ್ಥ ಈ ಮುಂದುವರಿಯುತ್ತಿರುವ ಸಂಘರ್ಷಗಳನ್ನು ಸಹಿಸಿಕೊಳ್ಳುವುದು ಅದಕ್ಕೆ ಕಷ್ಟವಾಗುತ್ತಿದೆ ಎಂದು. ಅಮೆರಿಕದಲ್ಲಿನ ಬೈಡನ್‌ನ ಸರ್ಕಾರ ಇರಾನ್ ಜೊತೆಯಲ್ಲಿ ಹೆಚ್ಚು ಸ್ನೇಹಪರತೆಯಿಂದ ಕೆಲಸ ಮಾಡಲು ಪೂರ್ವಭಾವೀ ಮುನ್ಸೂಚನೆಗಳನ್ನು ಕಳುಹಿಸುತ್ತಿದೆ. ಆದ್ದರಿಂದ ಈ ಸಂಘರ್ಷಗಳ ಅಂತ್ಯ ಈ ಸಂದರ್ಭದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಒಳ್ಳೆಯದು.

ಕನ್ನಡಕ್ಕೆ: ಕೆ. ಶ್ರೀನಾಥ್

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...