Homeಮುಖಪುಟವಿಜ್ಞಾನ-ವಿಶೇಷ; ಹಡಗು ಹಾರುತಿದೆ ನೋಡಿದಿರಾ?: ವಿಶ್ವಕೀರ್ತಿ

ವಿಜ್ಞಾನ-ವಿಶೇಷ; ಹಡಗು ಹಾರುತಿದೆ ನೋಡಿದಿರಾ?: ವಿಶ್ವಕೀರ್ತಿ

- Advertisement -
- Advertisement -

ಈಚಿತ್ರವನ್ನು ಗಮನಿಸಿ. ಏನು ಕಾಣುತ್ತಿದೆ? ಹೌದು. ಸಮುದ್ರದಲ್ಲಿ ಒಂದು ಹಡಗು ತೇಲುತ್ತಿರುವಂತಿದೆ. ನೀರಿನ ಮೇಲಲ್ಲ ಗಾಳಿಯಲ್ಲಿ ಹಾರುತ್ತಿದೆ ಅಲ್ಲವೇ? ಇದು ಹೇಗೆ ಸಾಧ್ಯ? ಇದು ನಿಜವಾದ ಚಿತ್ರಾನ? ಏನೋ ಎಡಿಟ್ ಮಾಡಿರಬೇಕು ಅಂತ ಯೋಚನೆ ಮಾಡುತ್ತಿದ್ದಿರಾ. ಹಾಗಾದರೆ ಇಲ್ಲಿ ಕೇಳಿ,

ಇಂಗ್ಲೆಂಡ್‌ನ ಕಾರ್ನಾವಾಲ್‌ನಲ್ಲಿ, ಡೇವಿಡ್ ಮಾರಿಸ್ ಎನ್ನುವ ವ್ಯಕ್ತಿ ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದ ಚಿತ್ರ ಇದು. ಈ ಚಿತ್ರದಲ್ಲಿ ಯಾವುದನ್ನೂ ಎಡಿಟ್ ಮಾಡಿಲ್ಲ. ಚಿತ್ರದಲ್ಲಿ ಹಡಗು ಗಾಳಿಯಲ್ಲಿ ಹಾರುತ್ತಿರುವಂತೆ ನೀವು ಕಾಣುತ್ತಿರುವುದು ನಿಜ! ಚಿತ್ರ ತೆಗೆದ ಡೇವಿಡ್ ಕೂಡ ಇದನ್ನು ನೋಡಿ ಅಚ್ಚರಿಯಾಗಿದ್ದರು. ಈ ಚಿತ್ರ ಅಂರ್ಜಾಲದಲ್ಲಿ ಸಂಚಲನ ಮೂಡಿಸಿದ್ದು ಕೂಡ ನಿಜ.

ಅರೆರೆ ಏನಿದು, ವಿಜ್ಞಾನಿಗಳು ಗಾಳಿಯಲ್ಲಿ ಹಾರುವ ಹಡಗನ್ನು ಕಂಡುಹಿಡಿದು ಬಿಟ್ಟರಾ ಅಂತ ಯೋಚನೆ ಮಾಡ್ತಿದ್ದೀರಾ. ಅದರ ಅವಶ್ಯಕತೆ ಏನು ಎಂಬ ಚಿಂತೆ ಮೂಡಿತಾ? ಇಲ್ಲಾ ಇದು ಹಾರುವ ಹಡಗಲ್ಲ. ಇದು ನೀರಿನ ಮೇಲೆ ಚಲಿಸುತ್ತಿರುವ ಹಡಗೇ! ಹಡಗು ಗಾಳಿಯಲ್ಲಿ ಹಾರುತ್ತಿರುವಂತೆ ಕಾಣುತ್ತಿರುವುದು ಚಿತ್ರದಲ್ಲಿ ಮಾತ್ರ ಅಲ್ಲಾ, ಚಿತ್ರ ತೆಗೆದ ಡೇವಿಡ್ ಮಾರಿಸ್ ಅವರ ಬರಿಗಣ್ಣಿಗೂ ಇದು ಹಾರುತ್ತಿರುವಂತೆಯೇ ಕಂಡಿದೆ.

ಹಿಗೆ ಗೋಚರಿಸುವುದಕ್ಕೆ ಕಾರಣ ನಿಸರ್ಗದಲ್ಲಿ ಕಾಣುವ ಅಪರೂಪದ ದೃಷ್ಟಿಭ್ರಮೆ (Optical Illusion) ವಿಧ್ಯಮಾನದಿಂದ. ಇದನ್ನು ಮಿರಾಜ್ (mirage) ಎಂದು ಕರೆಯುತ್ತಾರೆ. ಕನ್ನಡದಲ್ಲಿ ಮಿರಾಜ್‌ಗೆ ಬಿಸಿಲುಕುದುರೆ, ಮರೀಚಿಕೆ, ಭ್ರಮೆ ಎಂಬ ಪದಗಳು ಬಳಕೆಯಲ್ಲಿವೆ.

ಹಾಗಿದ್ದರೆ ಹಡಗು ನಿಜಕ್ಕೂ ಹಾರಿದ್ದು ಹೇಗೆ?

ಡೇವಿಡ್ ಮೋರಿಸ್‌ರವರು ಸಮುದ್ರದ ತಟದಿಂದ ಬಹಳ ದೂರದಲ್ಲಿ ಕಾಣುವ ಹಡಗಿನ ಚಿತ್ರವನ್ನು ತೆಗೆದಿದ್ದಾರೆ. ಸಾಮಾನ್ಯವಾಗಿ ಸಮುದ್ರದ ನೀರು ತಂಪಾಗಿರುತ್ತದೆ. ಈ ಕಾರಣದಿಂದ, ನೀರಿನ ಹತ್ತಿರ ಇರುವ ಗಾಳಿಯು ತಂಪಾಗಿರುತ್ತದೆ. ಸಮುದ್ರದ ನೀರಿನ ಮಟ್ಟದಿಂದ ಮೇಲಕ್ಕೆ ಚಲಿಸಿದಂತೆ, ಅಂದಿನ ಆ ಸ್ಥಳದ ವಾತಾವರಣದ ಹವಾಮಾನಕ್ಕೆ ತಕ್ಕಂತೆ, ಗಾಳಿಯ ತಾಪಮಾನವು ಹೆಚ್ಚುತ್ತಿರುತ್ತದೆ. ಅಲ್ಲದೆ, ತಂಪಾಗಿರುವ ಗಾಳಿಯ ಸಾಂದ್ರತೆ (density) ಹೆಚ್ಚಿದ್ದು, ಬಿಸಿಯಾಗಿರುವ ಗಾಳಿಯ ಸಾಂದ್ರತೆ ಕಡಿಮೆ ಇರುವುದರಿಂದ, ತಂಪಾದ ಗಾಳಿಯ ಪದರ ಕೆಳಗಿದ್ದು, ಬಿಸಿಯಾದ ಗಾಳಿಯ ಪದರ ಅದರ ಮೇಲಿರುತ್ತದೆ. ಹೀಗೆ, ಸಮುದ್ರದಿಂದ ಮೇಲ್ಮುಖವಾಗಿ ಏರಿಕೆಯ ತಾಪಮಾನದ ಗಾಳಿಯ ಪದರಗಳು ರಚಿಸಲ್ಪಟ್ಟಿರುತ್ತವೆ.

ಅಲ್ಲದೆ, ನಾವು ಯಾವುದಾದರೊಂದು ವಸ್ತುವನ್ನು ನೋಡುತ್ತೇವೆ ಎಂದರೆ, ಆ ವಸ್ತುವಿನ ಮೇಲೆ ಬೆಳಕು ಬಿದ್ದು, ಅದು ನಮ್ಮಕಣ್ಣಿನ ಮೇಲೆ ಬಿದ್ದರೆ ಮಾತ್ರ ಆ ವಸ್ತು ನಮಗೆ ಕಾಣುತ್ತದೆ. ಬೆಳಕು ಸರಳರೇಖೆಯಲ್ಲಿಯೇ ಚಲಿಸುತ್ತದೆ ಎಂದು ತಿಳಿದಿದ್ದೇವೆ. ಆದುದರಿಂದಲೆ ನಮಗೆ ಕಾಣುವ ವಸ್ತು ಬೆಳಕಿನ ಕಿರಣಗಳ ಸರಳ ರೇಖೆಯ ದಿಕ್ಕಿನಲ್ಲಿದೆ ಎಂದು ನಾವು ಗ್ರಹಿಸುವುದು. ಆದರೆ ಬೆಳಕು, ಒಂದು ಸಾಂದ್ರತೆ ಇರುವ ಮಾಧ್ಯಮದಿಂದ (medium) ಮತ್ತೊಂದು ಸಾಂದ್ರತೆಇರುವ ಮಾಧ್ಯಮಕ್ಕೆ ಚಲಿಸಿದಾಗ ಹೆಚ್ಚು ಸಾಂದ್ರತೆ ಇರುವ ಮಾಧ್ಯಮದ ಕಡೆಗೆ ಬಾಗುತ್ತದೆ. ಇದನ್ನು ವಕ್ರೀಭವನ (refraction) ಎಂದು ಕರೆಯುತ್ತೇವೆ.

ಈಗ ಈ ಚಿತ್ರ ನೋಡಿ, ಈ ಚಿತ್ರದಲ್ಲಿ ಹಡಗಿನಿಂದ ಬರುತ್ತಿರುವ ಬೆಳಕಿನ ಕಿರಣಗಳು ನೇರವಾಗಿ (ಸರಳ ರೇಖೆಯಲ್ಲಿ) ಚಲಿಸದೆ ಬಾಗಿ ದಡದಲ್ಲಿರುವ ವ್ಯಕ್ತಿಯಕಣ್ಣಿಗೆ ಬೀಳುತ್ತಿದೆ. ಇದು ಏಕೆ ಎಂದು ಹೆಳಬಲ್ಲಿರಾ?

ಹೌದು, ನಾವು ಈಗಾಗಲೇ ತಿಳಿದಂತೆ, ವಾತಾವರಣದ ಹವಾಮಾನದಿಂದ ಸಮುದ್ರದ ನೀರಿನ ಬಳಿ ಹೆಚ್ಚು ಸಾಂದ್ರತೆ ಉಳ್ಳ ತಂಪಾದ ಗಾಳಿಯ ಪದರವಿದೆ. ಸಮುದ್ರದಿಂದ ಮೇಲ್ಮುಖವಾಗಿ ಚಲಿಸಿದಂತೆ ಕಡಿಮೆ ಸಾಂದ್ರತೆಯ, ಹೆಚ್ಚು ಉಷ್ಣವುಳ್ಳ ಗಾಳಿಯ ಪದರಗಳಿರುವುದರಿಂದ, ಬೆಳಕು ಹೆಚ್ಚು ಸಾಂದ್ರತೆಯ ಗಾಳಿಯ ಪದರದಿಂದ ಕಡಿಮೆ ಸಾಂದ್ರತೆಯ ಗಾಳಿಯ ಪದರದ ಕಡೆಗೆ ಚಲಿಸಿದಾಗ, ಹೆಚ್ಚು ಸಾಂದ್ರತೆವುಳ್ಳ ಗಾಳಿಯ ಪದರದ ಕಡೆಗೆ ಬಾಗುತ್ತಿದೆ. ಈ ಕಾರಣದಿಂದ ಹಡಗಿನಿಂದ ಬರುವ ಬೆಳಕಿನ ಕಿರಣಗಳು ಸಮುದ್ರ ಮಟ್ಟದಿಂದ ತಾಪಮಾನ ಹೆಚ್ಚಾಗುತ್ತಿರುವ ಗಾಳಿಯ ಪದರಗಳ ಮೂಲಕ ಹಾದು ಹಲವು ಬಾರಿ ವಕ್ರೀಭವನಗೊಂಡು ವ್ಯಕ್ತಿಯ ಕಣ್ಣಿಗೆ ಬೀಳುತ್ತಿದೆ.

ಬೆಳಕಿನ ಕಿರಣಗಳು ಆ ವ್ಯಕ್ತಿಯ ಕಣ್ಣಿಗೆ ಬಿದ್ದಾಗ, ಅದು ನೇರವಾಗಿ ಬಂದಿದ್ದರೆ ಯಾವ ಸ್ಥಳದಿಂದ ಬರುತ್ತಿತ್ತೋ ಆ ಸ್ಥಳದಲ್ಲಿಯೇ ಹಡಗು ಇದೆ ಎಂಬ ಚಿತ್ರ ವ್ಯಕ್ತಿಗೆ ಕಾಣುತ್ತದೆ. ಆತನ ಸ್ಥಾನದಲ್ಲಿ ಕ್ಯಾಮರಾ ಇದ್ದರೂ, ಅದೂ ಕೂಡ ಇದೆ ರೀತಿಯ ಚಿತ್ರವನ್ನು ಸೆರೆ ಹಿಡಿಯುತ್ತದೆ. ಆದರೆ ಇದು ನೈಜ ಚಿತ್ರವಲ್ಲ. ಬೆಳಕಿನ ವಕ್ರೀಭವನದಿಂದ ಉಂಟಾದ ದೃಷ್ಟ ಭ್ರಮೆಯ ಚಿತ್ರ ಇದಾಗಿದೆ. ಇದೆ ಹಾರುವ ಹಡಗಿನ ಚಿತ್ರದ ಹಿಂದಿನ ವಿಜ್ಞಾನ ರಹಸ್ಯ.

ಇಂತಹ ದೃಷ್ಟಭ್ರಮೆಯನ್ನು ಮಿರಾಜ್ ಎಂದು ಹೆಚ್ಚು ಜನಪ್ರಿಯವಾಗಿದೆ. ಮಿರಾಜ್ ಮೂಡುವುದು, ವಾತಾವರಣದ ಹವಾಮಾನ (ತಾಪಮಾನ), ಗಾಳಿಯ ವೇಗ ಮತ್ತು ಸೂರ್ಯನ ಬಿಸಿಲಿನ ಸೂಕ್ಷ್ಮ ಬದಲಾವಣೆಗಳಿಂದ. ಹಾಗಾಗಿ ಹಲವು ಸ್ಥಳಗಳಲ್ಲಿ ಇಂತಹ ವಿದ್ಯಮಾನಗಳನ್ನು ಕಾಣುವುದು ಅತೀ ಅಪರೂಪ.

ಮರಳು ಭೂಮಿಯಲ್ಲಿ ದೂರದಲ್ಲಿ ನೀರಿರುವಂತೆ ಕಾಣುವುದು, ಬೇಸಿಗೆಯಂದು ಹೆದ್ದಾರಿಗಳಲ್ಲಿ ವಾಹನಗಳ ಪ್ರತಿಫಲನವನ್ನು ರಸ್ತೆಯಲ್ಲಿ ಕಾಣುವುದು ಇವೆಲ್ಲವೂ ಮಿರಾಜ್‌ಗಳೆ. ಕೆಲವೊಮ್ಮೆ, ಕಡಲ ಕಿನಾರೆ ಬಳಿ ಸೂರ್ಯಾಸ್ತವನ್ನು ಕಂಡು ವಾಪಸ್ಸಾಗುವಾಗ ಮತ್ತೊಮ್ಮೆ ಸೂರ್ಯನನ್ನು ಕಾಣಬಹುದು. ಇದು ಕೂಡ ಹಾರುವ ಹಡಗಿನ ಚಿತ್ರದಂತೆಯೇ. ಮುಂದೊಮ್ಮೆ ಎಂದಾದರೂ ಸೂರ್ಯಾಸ್ತ ನೋಡುವಾಗ ಇದರ ಬಗ್ಗೆ ಗಮನ ಕೊಡಿ. ಅಂದಿನ ಹವಾಮಾನ ’ನಮ್ಮ ವೈಜ್ಞಾನಿಕ ಮನೋಭಾವ’ ವೃದ್ಧಿಗೆ ಸಹಕರಿಸಿದರೆ, ಸೂರ್ಯನ ಅತೀ ಅಪರೂಪದ ಮಿರಾಜ್‌ಅನ್ನು ಕಣ್ತುಂಬಿಕೊಳ್ಳಬಹುದು.

ವಿಶ್ವ ಕೀರ್ತಿ ಎಸ್.

ವಿಶ್ವ ಕೀರ್ತಿ ಎಸ್.
ವಿಜ್ಞಾನ ಮತ್ತು ಖಗೋಳ sದಲ್ಲಿ ಆಸಕ್ತಿ, ಹವ್ಯಾಸಿ ಆಕಾಶ ವೀಕ್ಷಣೆಗಾರ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಂಸ್ಥೆಯಲ್ಲಿ ವೈಜ್ಞಾನಿಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಸರ್ಕಾರದ ಸಂವಹನಕ್ಕೆ ಸಚಿವರ ಚರ್ಚೆಯ ವರದಿ; ಕಳೆ ಕೀಳುವ ನೆಪದಲ್ಲಿ ತೆನೆ ಚಿವುಟುವ ಹುನ್ನಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...