Homeಮುಖಪುಟಮೈತ್ರಿ ತುಂಬಾ ಕೆಟ್ಟ ಮತ್ತು ಕಹಿ ಅನುಭವ ನೀಡಿದೆ- ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ

ಮೈತ್ರಿ ತುಂಬಾ ಕೆಟ್ಟ ಮತ್ತು ಕಹಿ ಅನುಭವ ನೀಡಿದೆ- ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ

ಭವಿಷ್ಯದಲ್ಲಿಯೂ ನಾವು ಯಾವುದೇ ಪಕ್ಷದೊಂದಿಗೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ತಿಳಿಸಿದ್ದಾರೆ.

- Advertisement -
- Advertisement -

ಮುಂಬರುವ ಪಂಚರಾಜ್ಯ ಚುನಾವಣೆಯಲ್ಲಿ ಅಸ್ಸಾಂ ಹೊರತು ಪಡಿಸಿ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಮತ್ತು ಪುದುಚೇರಿಯಲ್ಲಿ ಬಹುಜನ ಸಮಾಜವಾದಿ ಪಕ್ಷ ಯಾರೊಂದಿಗು ಮೈತ್ರಿ ಮಾಡಿಕೊಳ್ಳದೇ ಸ್ಪರ್ಧಿಸಲಿದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ತಿಳಿಸಿದ್ದಾರೆ.

ಈ ಚುನಾವಣೆಯಲ್ಲಿ ನಾವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಇತರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕಹಿ ಅನುಭವಿಸಿದ್ದೇವೆ. ಜೊತೆಗೆ ಮುಂದಿನ ವರ್ಷ ನಡೆಯಲಿರುವ ಯುಪಿ ವಿಧಾನಸಭಾ ಚುನಾವಣೆಯಲ್ಲಿಯೂ ತಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸುತ್ತದೆ ಎಂದು ಮಾಯಾವತಿ ಹೇಳಿದ್ದಾರೆ.

ಬಹುಜನ ಸಮಾಜವಾದಿ ಪಕ್ಷದ ಸಂಸ್ಥಾಪಕ ಕಾನ್ಸಿರಾಮ್ ಅವರ 87 ನೇ ಜನ್ಮ ದಿನಾಚರಣೆಯಂದು ಗೌರವ ಸಲ್ಲಿಕೆ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಇದನ್ನೂ ಓದಿ: 18 ಪಕ್ಷಾಂತರಿಗಳಿಗೆ ಟಿಕೆಟ್, ತಮಿಳುನಾಡು BJP ಪರಿಸ್ಥಿತಿ ಇಲ್ಲಿಗೆ ಬಂತು: ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯ

“ನಾವು ಚುನಾವಣೆಗಳಿಗಾಗಿ ಆಂತರಿಕವಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಕಾರ್ಯತಂತ್ರವನ್ನು ನಾವು ಈಗಲೇ ಬಹಿರಂಗಪಡಿಸುವುದಿಲ್ಲ. ಉತ್ತರ ಪ್ರದೇಶದ ಎಲ್ಲಾ 403 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಎಸ್‌ಪಿ ಸ್ಪರ್ಧಿಸುತ್ತದೆ ಜೊತೆಗೆ ಉತ್ತಮ ಪ್ರದರ್ಶನ ನೀಡಲಿದೆ” ಎಂದು ಹೇಳಿದ್ದಾರೆ.

“ನಮ್ಮ ಪಕ್ಷವು ಇತರರೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಆದರೆ, ಅದು ಕಹಿ ಅನುಭವ ನೀಡಿದೆ. ನಮ್ಮ ಪಕ್ಷದ ಮುಖಂಡರು, ಕಾರ್ಮಿಕರು ಮತ್ತು ಮತದಾರರು, ದೇಶದ ಇತರ ಪಕ್ಷಗಳಿಗೆ ಹೋಲಿಸಿದರೆ ಹೆಚ್ಚು ಶಿಸ್ತುಬದ್ಧರಾಗಿದ್ದಾರೆ. ಮೈತ್ರಿಕೂಟದಲ್ಲಿ, ನಮ್ಮ ಮತಗಳು ಮೈತ್ರಿಪಕ್ಷಕ್ಕೆ ಹೋಗುತ್ತವೆ. ಆದರೆ ಇತರ ಪಕ್ಷದ ಮತಗಳು ನಮಗೆ ಬೀಳುವುದಿಲ್ಲ” ಎಂದು ಮಾಯಾವತಿ ಹೇಳಿದ್ದಾರೆ.

“ಮೈತ್ರಿ ಮಾಡಿಕೊಳ್ಳುವುದು ತುಂಬಾ ಕೆಟ್ಟ ಮತ್ತು ಕಹಿ ಅನುಭವವಾಗಿದೆ. ಹೀಗಾಗಿ ಭವಿಷ್ಯದಲ್ಲಿಯೂ ನಾವು ಯಾವುದೇ ಪಕ್ಷದೊಂದಿಗೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ” ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ತಿಳಿಸಿದ್ದಾರೆ.


ಇದನ್ನೂ ಓದಿ: ದೇವಾಲಯದಲ್ಲಿ ನೀರು ಕುಡಿದ ಮುಸ್ಲಿಂ ಬಾಲಕನ ಮೇಲೆ ಕ್ರೂರ ಹಲ್ಲೆ: #SorryAsif ಎಂದ ನೆಟ್ಟಿಗರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಮಾದಕ ದ್ರವ್ಯ ಕಳ್ಳಸಾಗಣೆ, ಜುಗಾರಿ,  ಭಿಕ್ಷೆ ಬೇಡುವುದನ್ನು ‘ವೃತ್ತಿ’ ಎಂದು ಪಟ್ಟಿ ಮಾಡಿದ...

0
ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರಪ್ರದೇಶ ಸರಕಾರ ಮತ್ತೆ ಮುಜುಗರಕ್ಕೆ ಈಡಾಗಿದ್ದು, ಉತ್ತರಪ್ರದೇಶ ಪೊಲೀಸ್ ಮೊಬೈಲ್ ಅಪ್ಲಿಕೇಶನ್ UPCOPನಲ್ಲಿ ಬಾಡಿಗೆದಾರರ ಪರಿಶೀಲನೆಗಾಗಿ ವೃತ್ತಿ ಬಗ್ಗೆ ಪಟ್ಟಿ ಮಾಡಿದೆ. ಅವುಗಳಲ್ಲಿ 'ಮಾದಕ ದ್ರವ್ಯಗಳ ಕಳ್ಳಸಾಗಣೆ', 'ಜುಗಾರಿ',  ಮತ್ತು...