ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 2ನೇ ಸೆಮಿಫೈನಲ್ ಇಂದು ನಡೆಯುತ್ತಿದ್ದು ಭಾರತ ಮತ್ತು ಇಂಗ್ಲೆಂಡ್ ಕಣಕ್ಕಿಳಿಯುತ್ತಿವೆ. ಈಗಾಗಲೇ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ವಿರುದ್ಧ ಗೆದ್ದು ಫೈನಲ್ ತಲುಪಿದೆ. ಹಾಗಾಗಿ ಇಂದು ನಡೆಯುವ ಪಂದ್ಯದಲ್ಲಿ ಭಾರತ ತಂಡ ಗೆಲ್ಲಲಿ ಎಂದು ಪಾಕ್ ಅಭಿಮಾನಿಗಳು ಹಾರೈಸಿದ್ದಾರೆ. ಹಾಗೊಂದು ವೇಳೆ ಭಾರತ ಗೆದ್ದಲ್ಲಿ 2007ರ ನಂತರ ಮತ್ತೊಮ್ಮೆ ಭಾರತ-ಪಾಕ್ ಫೈನಲ್‌ನಲ್ಲಿ ಭೇಟಿಯಾಗಲಿದ್ದಾರೆ. ಆ ರೋಚಕ ಕ್ಷಣಕ್ಕಾಗಿ ಹಲವರು ಕಾದು ಕುಳಿತಿದ್ದಾರೆ. ಇಂದಿನ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ.
ಇನ್ನೊಂದೆಡೆ ಇಂಗ್ಲೆಂಡ್ ತಂಡ ಸಹ ಭಾರತದ ವಿರುದ್ಧ ಗೆದ್ದು ಫೈನಲ್ ತಲುಪುವ ಹಂಬಲದಲ್ಲಿದೆ. 2010ರಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಚಾಂಪಿಯನ್ ಆಗಿದ್ದ ಇಂಗ್ಲೆಂಡ್, 2016ರಲ್ಲಿ ವೆಸ್ಟ್ ಇಂಡೀಸ್ ಎದುರು ಫೈನಲ್‌ನಲ್ಲಿ ಮುಗ್ಗಿರಿಸಿತ್ತು.
ಇದನ್ನೂ ಓದಿ: 360 ಡಿಗ್ರಿ ಬ್ಯಾಟರ್ ಸೂರ್ಯಕುಮಾರ್ ಯಾದವ್: ಟಿ20ಯಲ್ಲಿ ಮತ್ತೆರೆಡು ದಾಖಲೆ
ಭಾರತ, ಇಂಗ್ಲೆಂಡ್ ಮತ್ತು ಪಾಕಿಸ್ತಾನ ಈ ಮೂರು ತಂಡಗಳು ಟಿ20 ವಿಶ್ವಕಪ್ ಅನ್ನು ತಲಾ ಒಮ್ಮೆಮ್ಮೆ ಜಯಿಸಿವೆ. ಮೂರು ತಂಡಗಳಲ್ಲಿ ಯಾವ ತಂಡ ಎರಡನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಲಿದೆ ಎಂಬುದು ಭಾನುವಾರ ತೀರ್ಮಾನವಾಗಲಿದೆ.
ಇಂದು ಭಾರತ ತಂಡ ಇಂಗ್ಲೆಂಡ್ ಎದುರು ಗೆದ್ದು ನವೆಂಬರ್ 13ರಂದು ಪಾಕಿಸ್ತಾನದ ವಿರುದ್ಧ ಸೆಣಸಲಿ ಎಂದು ಪಾಕ್ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಇದುವರೆಗೂ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡ 14 ಬಾರಿ ಮುಖಾಮುಖಯಾಗಿವೆ. 13 ಬಾರಿ ಭಾರತ ಗೆದ್ದರೆ ಒಮ್ಮೆ ಮಾತ್ರ ಪಾಕ್ ಜಯಕಂಡಿದೆ.
2007ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಇವೆರೆಡು ತಂಡಗಳು ಸೆಣಸಿದ್ದವು. ಆ ಪಂದ್ಯದಲ್ಲಿ ಭಾರತ ತಂಡ 5 ರನ್‌ಗಳಿಂದ ಪಾಕ್ ಅನ್ನು ಮಣಿಸಿ ಚಾಂಪಿಯನ್ ಆಗಿತ್ತು.
ಭಾರತ-ಪಾಕ್ ಅಭಿಮಾಣಿಗಳ ಕ್ರಿಕೆಟ್ ಜ್ವರ ಹೇಗಿದೆ ಎಂದು ಈ ಕೆಳಗಿನ ಟ್ವೀಟ್‌ಗಳಲ್ಲಿ ನೋಡಿ.
Thankyou Indian Fans 🙏 Lets meet on sunday in Finals #INDvsPAK 🇵🇰💚 pic.twitter.com/ft6fsxJCDV
— Natasha 🇵🇰 (@NatashaOfficiaI) November 9, 2022
Pak & Indian fans praying to have IND vs Pak in final. #crickettwitter pic.twitter.com/xzoCcxccJZ
— Harshhh! (@Harsh_humour) November 10, 2022
Do you want IndiaVsPak on Sunday.
If yes :- Retweet ( )
If no :- Like ❤️#ViratKohli #PakvsNz #IndvsEng #IndvsPak
BRING BACK ARCHANA pic.twitter.com/d8z5Buhy8s— Priyanka Shekhawat (@Priyank63631847) November 10, 2022
ಇದನ್ನೂ ಓದಿ : ಟಿ20 ವಿಶ್ವಕಪ್: ಬಲಿಷ್ಟ ತಂಡಗಳನ್ನು ಮಣಿಸಿದ ಪುಟ್ಟ ಆದರೆ ದಿಟ್ಟ ತಂಡಗಳಿವು