Homeಮುಖಪುಟಸಹೋದ್ಯೋಗಿಗೆ ಲೈಂಗಿಕ ದೌರ್ಜನ್ಯ: ಯುಪಿ ಸರ್ಕಾರಿ ಉದ್ಯೋಗಿ ಬಂಧನ

ಸಹೋದ್ಯೋಗಿಗೆ ಲೈಂಗಿಕ ದೌರ್ಜನ್ಯ: ಯುಪಿ ಸರ್ಕಾರಿ ಉದ್ಯೋಗಿ ಬಂಧನ

ದುಷ್ಕರ್ಮಿಯ ವಿರುದ್ದ ದೂರು ದಾಖಲಾಗಿ ಒಂದು ವಾರವಾದರೂ, ಲೈಂಗಿಕ ದೌರ್ಜನ್ಯದ ವಿಡಿಯೊ ವೈರಲ್‌ ಆದ ನಂತರ ಬಂಧನವಾಗಿದೆ

- Advertisement -
- Advertisement -

ಉತ್ತರ ಪ್ರದೇಶದ ರಾಜ್ಯ ಸರ್ಕಾರಿ ಅಧಿಕಾರಿಯೊಬ್ಬ, ಮಹಿಳಾ ಉದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ವಿಡಿಯೊಂದನ್ನು ಸ್ವತಃ ಸಂತ್ರಸ್ತೆ ರೆಕಾರ್ಡ್‌ ಮಾಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆರೋಪಿಯನ್ನು ಲಕ್ನೋದಲ್ಲಿ ಬಂಧಿಸಲಾಗಿದೆ.

ಆರೋಪಿಯನ್ನು ಇಚ್ಚಾರಾಮ್‌ ಯಾದವ್‌ ಎಂದು ಗುರುತಿಸಲಾಗಿದ್ದು, ಉತ್ತರ ಪ್ರದೇಶ ಆಡಳಿತದ ಅಧೀನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದನು. ಈತನ ವಿರುದ್ಧ ಅಕ್ಟೋಬರ್ 29 ರಂದು ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಲಾಗಿತ್ತಾದರೂ, ನಿನ್ನೆಯವರೆಗೂ ಬಂಧಿಸಲಾಗಿರಲಿಲ್ಲ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಇದರ ನಂತರ ದುಷ್ಕರ್ಮಿಯು ಮಹಿಳೆಗೆ ಲೈಂಗಿಕ ದೌಜನ್ಯ ಎಸಗುವ ವಿಡಿಯೊ ವೈರಲ್ ಆಗುತ್ತಿದ್ದಂತೆ ಆತನ ಬಂಧನವಾಗಿದೆ.

ಇದನ್ನೂ ಓದಿ: ಆದಿತ್ಯನಾಥ್‌ ಅವರನ್ನು ‘ವಿಷ’ ಎಂದು ಉಲ್ಲೇಖಿಸಿದ ಯುಪಿ BJP ಕಾರ್ಯಕಾರಿಣಿ ಸದಸ್ಯ!

ಯುಪಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಗುತ್ತಿಗೆ ಉದ್ಯೋಗಿಯಾಗಿರುವ 30 ವರ್ಷದ ಮಹಿಳೆ, ತನ್ನ ಮೇಲೆ ದೌರ್ಜನ್ಯ ಎಸಗುವ ಈ ವೀಡಿಯೊಗಳನ್ನು ಸ್ವತಃ ಚಿತ್ರೀಕರಿಸಿದ್ದಾರೆ ಎಂದು ವರದಿಯಾಗಿದೆ.

ವಿಡಿಯೊದಲ್ಲಿ ದುಷ್ಕರ್ಮಿ ಇಚ್ಚಾರಾಮ್‌‌ ಮಹಿಳೆಯ ಮೇಲೆ ಪಟ್ಟು ಬಿಡದೆ ಲೈಂಗಿಕ ಕಿರುಕುಳ ನೀಡುವುದು ಕಾಣುತ್ತದೆ. ಸಂತ್ರಸ್ತೆ ಮಹಿಳೆ ಆತನನ್ನು ದೂರ ತಳ್ಳಲು ಪ್ರಯತ್ನಿಸಿದರೂ, ದುಷ್ಕರ್ಮಿ ಇದರಿಂದ ವಿಚಲಿತನಾಗುವುದಿಲ್ಲ. ಒಂದು ವೀಡಿಯೊದಲ್ಲಿ, ಆತ ಮಹಿಳೆಯನ್ನು ಚುಂಬಿಸುತ್ತಾನೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಮಹಿಳಾ ಕೇಂದ್ರಿತ ರಾಜಕಾರಣ: ಪ್ರಿಯಾಂಕಾ ಗಾಂಧಿ ಮುಖ್ಯಮಂತ್ರಿ ಅಭ್ಯರ್ಥಿ?

 

ದುಷ್ಕರ್ಮಿಯ ವಿರುದ್ದ ಒಂದು ವಾರದ ಹಿಂದೆಯೆ ಮಹಿಳೆ ದೂರು ನೀಡಿದ್ದರು. ಆದರೆ ಆತನನ್ನು ನಿನ್ನೆಯವರೆಗೂ ಬಂಧಿಸಿರಲಿಲ್ಲ. ಇಂದು ಬೆಳಿಗ್ಗೆ ಟ್ವಿಟರ್‌ನಲ್ಲಿ ಅವನು ಜೈಲಿನಲ್ಲಿ ಇರುವ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ. ಅನೇಕ ಟ್ವಿಟ್ಟರ್ ಬಳಕೆದಾರರು ಯುಪಿ ಪೊಲೀಸರು ದುಷ್ಕರ್ಮಿಯನ್ನು ತಡವಾಗಿ ಬಂಧಿಸಿದ್ದನ್ನು ಪ್ರಶ್ನಿಸಿದ್ದಾರೆ.

ಮಹಿಳೆಯು, “ತಾನು 2013 ರಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದೇನೆ. ವಿಭಾಗದ ಉಸ್ತುವಾರಿಯಾಗಿದ್ದ ಇಚ್ಚಾರಾಮ್ 2018 ರಲ್ಲಿ ತನಗೆ ಕಿರುಕುಳ ನೀಡಲು ಪ್ರಾರಂಭಿಸಿದನು” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತನ್ನೊಂದಿಗೆ ಸಹಕರಿಸಿದರೆ ಕೆಲಸವನ್ನು ಖಾಯಂ ಮಾಡುವುದಾಗಿ ಆತ ಹೇಳಿದ್ದು, ಒಂದು ವೇಳೆ ನಿರಾಕರಿಸಿದರೆ ಕೆಲಸದಿಂದ ವಜಾ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಜೊತೆಗೆ, ದುಷ್ಕರ್ಮಿ ತನಗೆ ಜೀವ ಬೆದರಿಕೆ ಕೂಡಾ ಒಡ್ಡಿದ್ದನು ಎಂದು ಮಹಿಳೆ ಆರೋಪಿಸಿದ್ದಾರೆ.

ಇದನ್ನೂ ಓದಿ: ಲಾಕಪ್ ಡೆತ್: ’ಉತ್ತರ ಪ್ರದೇಶದಲ್ಲಿ ಮಾನವ ಹಕ್ಕುಗಳು ಉಳಿದಿವೆಯೇ?’- ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಭಾರತದಲ್ಲಿ ಉತ್ತರ ಪ್ರದೇಶ ಮಾತ್ರವೇ ಒಂದು ರಾಜ್ಯವಿದ್ದಂತೆ ಕಾಣ್ತಾ ಇರಬೇಕು ,ಉತ್ತರ ಪ್ರದೇಶ ಬಿಟ್ಟರೆ ಬೇರೆ ರಾಜ್ಯಗಳಲ್ಲಿ ಐಲೆಟ್ ಬಕೇಟ್ ಸುದ್ದಿಗಳು ಸಿಗೋದಿಲ್ಲಾ ಅನಿಸುತ್ತೇ , ಏನೇ ಆದರೂ ತಪ್ಪು ಮಾಡಿದವನಿಗೆ ಶಿಕ್ಷೆ ಆಗಲಿ.

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...