Homeಮುಖಪುಟನನ್ನ ತೆಂಗು, ಅಡಿಕೆ ಮರಗಳನ್ನು ವಾಪಸ್‌ ಕೊಡಿ : ಧರಣಿ ಕೂತ ಮಹಿಳೆ, ಗ್ರಾಮಸ್ಥರ ಬೆಂಬಲ

ನನ್ನ ತೆಂಗು, ಅಡಿಕೆ ಮರಗಳನ್ನು ವಾಪಸ್‌ ಕೊಡಿ : ಧರಣಿ ಕೂತ ಮಹಿಳೆ, ಗ್ರಾಮಸ್ಥರ ಬೆಂಬಲ

- Advertisement -
- Advertisement -

ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ತಿಪ್ಪೂರು ಗ್ರಾಮದಲ್ಲಿ ಗ್ರಾಮ ಲೆಕ್ಕಿಗ, ಕಂದಾಯಾಧಿಕಾರಿ ಮಾಡಿದ ತಪ್ಪಿಗೆ ಅಮಾಯಕ ಮಹಿಳೆಯ ನೂರಾರು ಮರಗಳನ್ನು ಕಡಿದು ತೋಟ ನಾಶ ಮಾಡಿದ ತಹಶೀಲ್ದಾರ್‌ ಕ್ರಮದ ವಿರುದ್ಧ ಸಿದ್ದಮ್ಮನವರು ಧರಣಿ ಆರಂಭಿಸಿದ್ದಾರೆ. ನನ್ನ ತೆಂಗು, ಅಡಿಕೆ ಮರಗಳನ್ನು ವಾಪಸ್‌ ಕೊಡಿ ಎಂದು ಗೋಳಿಡುತ್ತಿದ್ದ ಆಕೆಯ ಪ್ರತಿಭಟನೆಗೆ ಗ್ರಾಮಸ್ಥರು ಸಾಥ್‌ ನೀಡಿದ್ದಾರೆ.

ಮಾರ್ಚ್‌ 06ರಂದು ತಾನೇ ನೀರು ಹೊಯ್ದು ಬೆಳೆಸಿದ್ದ ಸಿದ್ದಮ್ಮ ಅವರಿಗೆ ಸೇರಿದ್ದ ತೆಂಗು ಮತ್ತು ಅಡಿಕೆ ಮರಗಳು ಕಣ್ಣೆದುರೇ ನೆಲಕ್ಕುರುಳಿವೆ. ಜಿಲ್ಲಾಧಿಕಾರಿ ಆದೇಶವನ್ನೇ ಧಿಕ್ಕರಿಸಿದ ತಹಶೀಲ್ದಾರ್ ಮುಂದೆ ನಿಂತು ಸಿದ್ದಮ್ಮನವರಿಗೆ ಸೇರಿದ ಅಡಿಕೆ ಮತ್ತು ತೆಂಗಿನ ಮರಗಳನ್ನು ಕಡಿಸಿಹಾಕಿದ್ದಾರೆ. ತಾನು ಸಲಹಿದ  ಫಲ ನೀಡುತ್ತಿದ್ದ ಮರಗಳು ಕಡಿದ್ದನ್ನು ನೋಡಿ ಸಿದ್ದಮ್ಮ ಮಕ್ಕಳು ಕಳೆದುಕೊಂಡಂತೆ ಅಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದ್ದವು.

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ಗ್ರಾಮ ಲೆಕ್ಕಿಗ, ಕಂದಾಯಾಧಿಕಾರಿ ಮಾಡಿದ ತಪ್ಪಿಗೆ ಅಮಾಯಕ ಮಹಿಳೆಯ ತೋಟ ನಾಶ ಮಾಡಿದ ತಹಶಿಲ್ದಾರ್‌: ಗುಬ್ಬಿಯಲ್ಲೊಂದು ಮನಕಲಕುವ ಕರಾಳ ಘಟನೆ.. ವಿಡಿಯೋ ನೋಡಿ.

Posted by Naanu Gauri on Sunday, March 8, 2020

ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ತಿಪ್ಪೂರು ಗ್ರಾಮದಲ್ಲಿ ಕೋಡಿಕೆಂಪಮ್ಮ ದೇವಾಲಯದ ಜಾತ್ರೆ ಇತ್ತು. ಆ ಜಾತ್ರೆ ನಡೆಯುವ ಜಾಗದ ಭೂಮಿ ವಿವಾದದಲ್ಲಿತ್ತು  ಆ ಜಮೀನನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಆದರೆ ಗ್ರಾಮ ಲೆಕ್ಕಿಗ ಮತ್ತು ಕಂದಾಯಾಧಿಕಾರಿಯ ಲೋಪದಿಂದಾಗಿ ಸಿದ್ದಮ್ಮ ಅವರ ತೋಟವನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗಿದೆ. ಸಿದ್ದಮ್ಮನವರ ತೋಟದ ಪ್ರಕರಣ ನ್ಯಾಯಾಲಯದಲ್ಲಿದ್ದು ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯ ಸೂಚಿಸಿದ್ದರೂ ತಹಶೀಲ್ದಾರ್ ಕೂಡ ಅದನ್ನು ಪರಿಶೀಲಿಸುವ ಗೋಜಿಗೆ ಹೋಗದೆ ಮಹಿಳಾ ರೈತರೊಬ್ಬರ ತೋಟವನ್ನು ಧ್ವಂಸ ಮಾಡಲಾಗಿದೆ.

ಮಾರ್ಚ್‌ 06ರ ಬೆಳಿಗ್ಗೆ ಸಿದ್ದಮ್ಮ ಅವರು ತೋಟಕ್ಕೆ ಹೋದ ಗುಬ್ಬಿ ತಹಶೀಲ್ದಾರ್ 170 ಅಡಿಕೆ ಗಿಡಗಳು ಮತ್ತು 25 ತೆಂಗಿನ ಮರಗಳನ್ನು ಕಡಿಸಿ ಹಾಕಿದ್ದಾರೆ. ಈ ಮೂಲಕ ಜಿಲ್ಲಾಧಿಕಾರಿಗಳು ನೀಡಿದ್ದ ಆದೇಶವನ್ನು ಉಲ್ಲಂಘಿಸಿದ್ದಾರೆ. ತಹಶೀಲ್ದಾರ್ ಧೋರಣೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅಧಿಕಾರಿ ಕ್ರೂರವಾಗಿ ನಡೆದುಕೊಂಡಿದ್ದಾರೆ ಎಂದು ಟೀಕೆ ವ್ಯಕ್ತವಾಗಿದೆ.

ಅಡಿಕೆ ಮತ್ತು ತೆಂಗಿನ ಮರಗಳು ನೆಲಕ್ಕೆ ಬಿದ್ದಿರುವುದನ್ನು ನೋಡಿದ ಸಿದ್ದಮ್ಮ ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಗೊಳೋ ಎಂದು ಕಣ್ಣೀರು ಕರೆಯುತ್ತಿದ್ದಾರೆ. ಗುಬ್ಬಿ ತಾಲೂಕು ತಹಶೀಲ್ದಾರ್ ಏಕಾಏಕಿ ತೋಟಕ್ಕೆ ಬಂದು ನಿರ್ದಯವಾಗಿ ಮರಗಳನ್ನು ಕಡಿಸಿರುವುದು ಆಕೆಯನ್ನು ಕೆರಳುವಂತೆ ಮಾಡಿದೆ. ಇನ್ನೊಂದೆಡೆ ತಪ್ಪು ಮಾಡಿ ತಹಶೀಲ್ದಾರ್‌ ಇಕ್ಕಟ್ಟಿಗೆ ಸಿಲುಕಿದ್ದಾರೆ.

ತಾಲೂಕು ದಂಡಾಧಿಕಾರಿ ಮತ್ತು ಕಂದಾಯ ಅಧಿಕಾರಿ ಮತ್ತು ಗ್ರಾಮ ಲೆಕ್ಕಿಗ ರೈತರಿಗೆ ಅನ್ಯಾಯ ಮಾಡಿದ್ದಾರೆ. ಯಡಿಯೂರಪ್ಪ ಸರ್ಕಾರದಲ್ಲಿ ರೈತರಿಗೆ ರಕ್ಷಣೆ ಇಲ್ಲ. ರೈತರ ಬೆಳೆದ ಬೆಳೆಯನ್ನು ಅಧಿಕಾರಿಯೇ ಮುಂದೆ ನಿಂತು ಕತ್ತರಿಸಿಹಾಕಲು ಅನುವು ಮಾಡಿಕೊಟ್ಟಿದ್ದಾರೆ. ಆ ತಹಶೀಲ್ದಾರ್ ಗೆ ಮರಗಳನ್ನು ಕಡಿಸುವ ಮನಸ್ಸು ಹೇಗೆ ಬಂತು ಎಂದು ರೈತರು  ಕಿಡಿಕಾರಿದ್ದಾರೆ.

ಈ ಕುರಿತು ಶಾಸಕ ಎಸ್‌.ಆರ್‌ ಶ್ರೀನಿವಾಸ್‌ ಪ್ರತಿಕ್ರಿಯೆ ನೀಡಿ ಹತ್ತು ಮರಗಳನ್ನು ಕಡಿದುಬಿಟ್ಟಿದ್ದಾರೆ ಅಷ್ಟೇ. ಏನೂ ತೊಂದರೆಯಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇನ್ನು ತಹಶೀಲ್ದಾರ್‌ ಎಂ ಮಮತಾ ನಾವು ಜಿಲ್ಲಾಧಿಕಾರಿ ಆದೇಶ ಪಾಲಿಸದ್ದೇವೆ ಅಷ್ಟೇ. ಮರಗಳ ತೆರವಿಗೂ ಮುನ್ನ ನಾಲ್ಕು ಅರ್ಚಕರ ಸಹಿ ಪಡೆದಿದ್ದೇವೆ ಎಂದು ಸಬೂಬು ಹೇಳುತ್ತಿದ್ದಾರೆ.

ಇದೆಲ್ಲದರಿಂದ ಕೆರಳಿರುವ ಸಿದ್ದಮ್ಮ ಮನೆ ಮುಂದೆ ಅಂಬೇಡ್ಕರ್‌ ಫೋಟೊ ಇಟ್ಟುಕೊಂಡು ಧರಣಿ ಆರಂಭಿಸಿದ್ದಾರೆ. ಜಿಲ್ಲಾಡಳಿತ ಮಧ್ಯಪ್ರವೇಶಿಸಿ ನ್ಯಾಯ ದೊರಕಿಸಿಕೊಡದಿದ್ದಲ್ಲಿ ತುಮಕೂರಿಗೆ ಬಂದು ಹೋರಾಟ ನಡೆಸುತ್ತೇನೆ ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...