Homeಕರ್ನಾಟಕಕೇರಳ ಹಾಗೂ ಕರ್ನಾಟಕದ ಕರಾವಳಿಯಾದ್ಯಂತ ಸರಳ ‘ಬಕ್ರೀದ್’ ಆಚರಣೆ

ಕೇರಳ ಹಾಗೂ ಕರ್ನಾಟಕದ ಕರಾವಳಿಯಾದ್ಯಂತ ಸರಳ ‘ಬಕ್ರೀದ್’ ಆಚರಣೆ

ಪ್ರವಾದಿ ಇಬ್ರಾಹಿಂ ಹಾಗೂ ಅವರ ಮಗ ಇಸ್ಮಾಯಿಲ್ ಅವರ ತ್ಯಾಗ-ಬಲಿದಾನದ ನೆನೆಪಿನಲ್ಲಿ ವಿಶ್ವದಾದ್ಯಂತ ಮುಸಲ್ಮಾನರು ಬಕ್ರೀದ್ ಹಬ್ಬ ಆಚರಿಸುತ್ತಾರೆ.

- Advertisement -
- Advertisement -

ತ್ಯಾಗ ಮತ್ತು ಬಲಿದಾನದ ಸಂಕೇಂತವಾದ ಬಕ್ರೀದ್ ಹಬ್ಬವನ್ನು ಕೇರಳ ಸೇರಿದಂತೆ ಕರ್ನಾಟದ ಕರಾವಳಿಯಾದ್ಯಂತ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ. ಪ್ರವಾದಿ ಇಬ್ರಾಹಿಂ ಮತ್ತು ಅವರ ಪುತ್ರ ಇಸ್ಮಾಯಿಲ್ ಅವರ ತ್ಯಾಗ ಮತ್ತು ಬಲಿದಾದನ ನೆನಪಿಗೆ ಮುಸಲ್ಮಾನರು ಈ ಹಬ್ಬವನ್ನು ಆಚರಿಸುತ್ತಾರೆ.

ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಲು ಸರಕಾರ ಹೊರಡಿಸಿದ ಮಾರ್ಗಸೂಚಿಯಂತೆ ಸುರಕ್ಷಿತ ಅಂತರ ಕಾಪಾಡಿ ಮಸೀದಿಗಳಲ್ಲಿ ಸಾಮೂಹಿಕವಾಗಿ ಈದ್ ಪ್ರಾರ್ಥನೆಯನ್ನು ಮಾಡಲಾಯಿತು. ದಕ್ಷಿಣ ಕನ್ನಡ, ಉಡುಪಿ ಹಾಗು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಾದ್ಯಂತ ತಮ್ಮ ವ್ಯಾಪ್ತಿಯಲ್ಲಿರುವ ಮಸೀದಿಗಳಲ್ಲಿ ಮುಸ್ಲಿಮರು ಬಕ್ರೀದ್ ನಮಾಝ್ ಮಾಡಿದರು.

ದ.ಕ ಜಿಲ್ಲೆಯಲ್ಲಿ ಕೊರೊನಾ ಪ್ರಯುಕ್ತ ಈದ್ಗಾದಲ್ಲಿ ಸಾಮೂಹಿಕ ನಮಾಝ್‌ಗೆ ನಿರ್ಬಂಧ ವಿಧಿಸಲಾಗಿದ್ದರಿಂದ ಅಲ್ಲಿ ನಮಾಝ್ ಇರಲಿಲ್ಲ. ಅಲ್ಲದೆ 60 ವರ್ಷಕ್ಕಿಂದ ಮೇಲ್ಪಟ್ಟ ಹಾಗೂ 10 ವರ್ಷಕ್ಕಿಂತ ಕೆಳಗಿನ ಪ್ರಾಯದವರು ಮಸೀದಿ ಪ್ರವೇಶಿಸಲು ಅವಕಾಶ ಇರಲಿಲ್ಲ.

ತ್ಯಾಗ ಬಲಿದಾನದ ಹಬ್ಬಕ್ಕೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಶುಭಾಶಯ ಹೇಳಿದ್ದಾರೆ. ತಮ್ಮ ಟ್ವೀಟ್‌ನಲ್ಲಿ “ತ್ಯಾಗ ಮತ್ತು ಬಲಿದಾನದ ಮಹತ್ವವನ್ನು ಸಾರುವ ಬಕ್ರೀದ್ ಹಬ್ಬದ ಆಶಯಗಳು ನಮ್ಮೆಲ್ಲರ ಬದುಕಿನ ಮೌಲ್ಯಗಳಾಗಲಿ.‌ ಸುಖ-ಕಷ್ಟಗಳೆರಡರ ಕಾಲದಲ್ಲಿಯೂ ಸೌಹಾರ್ದತೆಯ ಬಂಧ ನಮ್ಮೆಲ್ಲರನ್ನು ಬೆಸೆದಿರಲಿ” ಎಂದು ಶುಭಾಶಯ ಹೇಳಿದ್ದಾರೆ.

ಕೇರಳದಲ್ಲೂ ಇಂದು ಬಕ್ರೀದನ್ನು ಆಚರಿಸಲಾಗುತ್ತಿದೆ. ಕೇರಳದ ಮಲಪ್ಪುರಂ ಹಾಗೂ ಇತರ ಜಿಲ್ಲೆಗಳಲ್ಲಿ ಸರಳವಾಗಿ ಹಾಗೂ ಅಂತರ ಕಾಪಾಡಿಕೊಂಡು ಹಬ್ಬದ ನಮಾಝ್ ನಡೆಸಲಾಯಿತು.

ಕೇರಳ ಮುಸ್ಲಿಮರ ಧಾರ್ಮಿಕ ಮತ್ತು ಆಧ್ಯಾತ್ಮಿಕ ನಾಯಕರಾದ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಮತ್ತು ಸೆಯ್ಯದ್ ಹೈದರಾಲಿ ಶಿಹಾಬ್ ತಂಙಲ್ ಸೇರಿದಂತೆ ಸಾಮಾಜಿಕ ಮುಖಂಡರು, ತಮ್ಮ ಸಹೋದರರನ್ನು ಕೊರೊನಾ ಕಾರ್ಯಸೂಚಿಯ ಮಿತಿಯಲ್ಲಿ ಈದ್ ಆಚರಿಸಲು ಒತ್ತಾಯಿಸಿದ್ದರು. ಆಚರಣೆ ಮತ್ತು ಪ್ರಾರ್ಥನಾ ಸಭೆಗಳು ಯಾವುದೇ ರೀತಿಯಲ್ಲಿ ಸಾಮಾಜಿಕ ಕೂಟಗಳು ಮತ್ತು ಸಾರ್ವಜನಿಕ ಸಭೆಗಳಿಗೆ ನಿಗದಿಪಡಿಸಿದ ಮಾನದಂಡಗಳಿಗೆ ವಿರುದ್ಧವಾಗಿರಬಾರದು ಎಂದು ಅವರು ಕೇಳಿದ್ದರು.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ “ಈದ್-ಉಲ್-ಅಝ್ಹಾ ನಮಗೆ ತ್ಯಾಗ, ಭಕ್ತಿ ಮತ್ತು ಮಾನವೀಯತೆ, ಪ್ರೀತಿಯ ದೊಡ್ಡ ಸಂದೇಶವನ್ನು ನೀಡುತ್ತದೆ. ಈ ವರ್ಷದ ಈದ್ ಆಚರಣೆಯು ಜೀವನದಲ್ಲಿ ಈ ಮಹಾನ್ ಮೌಲ್ಯಗಳನ್ನು ಸಾಕಾರಗೊಳಿಸುವ ಪ್ರತಿಜ್ಞೆಯನ್ನು ನವೀಕರಿಸಲು ಬಂದ ಒಂದು ಅವಕಾಶವಾಗಿದೆ. ಪ್ರಪಂಚದಾದ್ಯಂತವಿರುವ ಮಲಯಾಳಿಗಳಿಗೆ ಈದ್ ಶುಭ ಹಾರೈಸುತ್ತೇನೆ.” ಎಂದು ಟ್ಟಿಟ್ಟರ್‌ ಮೂಲಕ ಶುಭಾಶಯ ಕೋರಿದ್ದಾರೆ.

ನಾಳೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಹಾಗೂ ಭಾರತದಾದ್ಯಂತ ಬಕ್ರೀದ್ ಆಚರಿಸಲಾಗುತ್ತದೆ.


ಓದಿ: ಹುಲಿ ಜಾನಪದ; ಕನ್ನಡ ಜಾನಪದ ಪರಂಪರೆಯಲ್ಲಿ ಹುಲಿಯ ಜತೆಗಿನ ಮುಖಾಮುಖಿ- ಅರುಣ್ ಜೋಳದಕೂಡ್ಲಿಗಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...