Homeಮುಖಪುಟಹಿಂಸಾಚಾರ ಪೀಡಿತ ಮಣಿಪುರದಲ್ಲಿ ಯೋಧನಿಗೆ ಅಪಹರಿಸಿ ಹತ್ಯೆ

ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಯೋಧನಿಗೆ ಅಪಹರಿಸಿ ಹತ್ಯೆ

- Advertisement -
- Advertisement -

ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಮತ್ತೆ ಮತ್ತೆ ಅಹಿತಕರ ಘಟನೆಗಳು ನಡೆಯುತ್ತಲೇ ಇದೆ. ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ಸೇನಾ ಯೋಧನನ್ನು ಅವರ ಮನೆಯಿಂದ ಅಪಹರಿಸಿ ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಿಗ್ಗೆ 9.30ರ ಸುಮಾರಿಗೆ ಯೋಧ ಸೆರ್ಟೊ ತಂಗ್‌ತಾಂಗ್ ಕೋಮ್ ಅವರ ಮೃತದೇಹ ಪತ್ತೆಯಾಗಿದೆ. ಸೆರ್ಟೊ ತಂಗ್‌ತಾಂಗ್ ಕೋಮ್ ರಜೆಯಲ್ಲಿದ್ದರು. ಈಶಾನ್ಯ ರಾಜ್ಯದ ಲೀಮಾಖೋಂಗ್ ಮಿಲಿಟರಿ ಕೇಂದ್ರದಲ್ಲಿ ಅವರನ್ನು ನಿಯೋಜಿಸಲಾಗಿತ್ತು.

ಯೋಧನನ್ನು ಅಪಹರಣ ನಡೆಸುವ ವೇಳೆ 10 ವರ್ಷದ ಮಗ ಮನೆಯಲ್ಲಿದ್ದ. ಈತ ಪ್ರಕರಣದ  ಪ್ರತ್ಯಕ್ಷದರ್ಶಿಯಾಗಿದ್ದು, ತನ್ನ ತಂದೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮೂವರು ಬಂದೂಕುಧಾರಿಗಳು ಮನೆಗೆ ಪ್ರವೇಶಿಸಿ ಹಣೆಗೆ ಪಿಸ್ತೂಲು ಗುರಿ ಇರಿಸಿ ಅವರನ್ನು ವಾಹನವೊಂದರಲ್ಲಿ ಅಪಹರಿಸಿದ್ದರು ಎಂದು ಕೋಮ್ ಪುತ್ರ ಹೇಳಿದ್ದಾರೆ.

ಘಟನೆ ಬಳಿಕ ಯೋಧನ ಸುಳಿವು ಸಿಕ್ಕಿರಲಿಲ್ಲ. ಬೆಳಗ್ಗೆ ಸುಮಾರು 9.30ಕ್ಕೆ ಅವರ ಮೃತದೇಹ ಇಂಫಾಲ ಪೂರ್ವ ಸೊಗೊಲ್‌ಮಂಗ್ ಪಿಎಸ್‌ನ ವ್ಯಾಪ್ತಿಯಲ್ಲಿ ಬರುವ ಮೊಂಗ್‌ಜಾಮ್‌ನ ಪೂರ್ವದಲ್ಲಿರುವ ಖುನಿಂಗ್‌ತೆಕ್ ಗ್ರಾಮದಲ್ಲಿ ಪತ್ತೆಯಾಗಿದೆ.

ಮೃತದೇಹದ ಗುರುತನ್ನು ಯೋಧನ ಕುಟುಂಬ ಪತ್ತೆಹಚ್ಚಿದೆ. ಅವರ ತಲೆಯಲ್ಲಿ ಗುಂಡಿನ ಗಾಯಗಳಿತ್ತು ಎಂದು ತಿಳಿದು ಬಂದಿದೆ. ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ.

ಯೋಧನ ಅಂತಿಮ ಸಂಸ್ಕಾರವನ್ನು ಕುಟುಂಬದವರ ಅಪೇಕ್ಷೆಯಂತೆ ನಡೆಸಲಾಗುತ್ತಿದ್ದು, ಮೃತರ ಕುಟುಂಬಕ್ಕೆ ನೆರವು ನೀಡಲು ಸೇನಾ ತಂಡ ಗ್ರಾಮಕ್ಕೆ ಆಗಮಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: ರವೀಂದ್ರನಾಥ ಟ್ಯಾಗೋರ್‌ರ ‘ಶಾಂತಿನಿಕೇತನ’ UNESCOದ ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...