Homeಕರ್ನಾಟಕಶ್ರೀರಂಗಪಟ್ಟಣ: ನಾಲ್ಕು ಮಕ್ಕಳು ಸೇರಿ ಐದು ಮಂದಿಯ ಭೀಕರ ಹತ್ಯೆ

ಶ್ರೀರಂಗಪಟ್ಟಣ: ನಾಲ್ಕು ಮಕ್ಕಳು ಸೇರಿ ಐದು ಮಂದಿಯ ಭೀಕರ ಹತ್ಯೆ

- Advertisement -
- Advertisement -

ಒಂದೇ ಕುಟುಂಬದ ಐವರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್‌.ಎಸ್‌. ಬಜಾರ್‌ ರಸ್ತೆಯಲ್ಲಿ ನಡೆದಿದೆ.  ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲ್ಲಲಾಗಿದ್ದು, ಹತ್ಯೆಯಾದವರ ಪೈಕಿ ನಾಲ್ವರು ಮಕ್ಕಳು ಸೇರಿದ್ದಾರೆ.

ಓರ್ವ ಮಹಿಳೆ ಹಾಗೂ ನಾಲ್ವರು ಮಕ್ಕಳನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲ್ಲಲಾಗಿದೆ. ಶವಗಳು ಕೊಠಡಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಪ್ರಕರಣವನ್ನು ಎಲ್ಲ ಆಯಾಮದಲ್ಲೂ ಪರಿಶೀಲಿಸುತ್ತಿದ್ದಾರೆ ಎಂದು ಮೈಸೂರಿನ ಪ್ರಾದೇಶಿಕ ಪತ್ರಿಕೆ ‘ಆಂದೋಲನ’ ವರದಿ ಮಾಡಿದೆ.

ಲಕ್ಷ್ಮಿ (26), ರಾಜ್‌ (12), ಕೋಮಲ್‌ (7), ಕುನಾಲ್‌ (4) ಮತ್ತು ಗೋವಿಂದ್‌ (8) ಎಂಬವರು ಹತ್ಯೆಯಾಗಿದ್ದಾರೆ. ಲಕ್ಷ್ಮಿ ಅವರ ಪತಿ ಗಂಗಾರಾಮ್‌ ಅವರು ವ್ಯಾಪಾರಕ್ಕೆಂದು ಆಂಧ್ರಪ್ರದೇಶಕ್ಕೆ ಎಂಟು ದಿನಗಳ ಹಿಂದೆ ತೆರಳಿದ್ದರು ಎಂದು ತಿಳಿದುಬಂದಿದೆ.

ಶನಿವಾರ ತಡರಾತ್ರಿಯೇ ಕೊಲೆಯಾಗಿದ್ದರೂ ಭಾನುವಾರ ಬೆಳಿಗ್ಗೆಯವರೆಗೆ ಯಾರಿಗೂ ತಿಳಿದಿರಲಿಲ್ಲ. ಇಷ್ಟು ಹೊತ್ತಾದರೂ ಯಾರೂ ಮನೆಯಿಂದ ಹೊರಬಂದಿರದಿದ್ದ ಕಾರಣ ನೆರೆಮನೆಯ ಮಹಿಳೆಯೊಬ್ಬರು ಮನೆಗೆ ತೆರಳಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಗಂಗಾರಾಮ್‌ ಅವರ ಕುಟುಂಬ ಗುಜರಾತಿನ ಅಹಮದಾಬಾದ್‌ ಮೂಲದವರಾಗಿದ್ದು ಸುಮಾರು ನವಲತ್ತು ವರ್ಷಗಳ ಹಿಂದೆ ಗಂಗಾರಾಮ್‌ ಮತ್ತು ಸಹೋದರರು ವಲಸೆ ಬಂದು ಕೆಆರ್‌ಎಸ್‌ ಬಜಾರ್‌ ರಸ್ತೆಯಲ್ಲಿ ನೆಲೆದಿದ್ದರು.

ಬಟ್ಟೆ, ಪ್ಲಾಸ್ಟಿಕ್‌ ಹಾಗೂ ಇನ್ನಿತರ ವಸ್ತುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಸ್ಥಳೀಯವಾಗಿ ವ್ಯಾಪಾರ ನಡೆಸುತ್ತಿರಲಿಲ್ಲ. ಹೊರರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳಿಗೆ ತೆರಳಿ ವ್ಯಾಪಾರ ನಡೆಸುತ್ತಿದ್ದರು. ವ್ಯಾಪಾರಕ್ಕೆಂದು ಹೋದರೆ ಹತ್ತರಿಂದ ಹದಿನೈದು ದಿನಗಳವರೆಗೆ ವಾಪಸ್‌ ಬರುತ್ತಿರಲಿಲ್ಲ ಎಂದು ವರದಿಯಾಗಿದೆ.

ಆರ್ಥಿಕವಾಗಿ ಸಬಲರಾಗಿದ್ದ ಕಾರಣ, ಯಾರೋ ಪರಿಚಯಸ್ಥರೇ ಹಣಕ್ಕಾಗಿ ಮನೆಗೆ ನುಗ್ಗಿ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿರುವುದಾಗಿ `ಆಂದೋಲನ’ ವರದಿ ಉಲ್ಲೇಖಿಸಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್‌.ಯತೀಶ್‌ ಅವರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆ.ಆರ್‌.ಎಸ್‌. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿರಿ: ಕೊಲೆಗಾರನೊಂದಿಗೆ ಕುಳಿತುಕೊಳ್ಳಲಾರೆ: ಬಿಜೆಪಿ ಸಂಸದನ ಉಪಸ್ಥಿತಿ ವಿರೋಧಿಸಿ ವೇದಿಕೆ ತ್ಯಜಿಸಿದ ಟಿಎಂಸಿ ಸಚಿವ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...