Homeಮುಖಪುಟಮುಸ್ಲಿಮರನ್ನು ಕೊಳೆತ ಸೇಬುಗಳಿಗೆ ಹೋಲಿಸಿದ ಸ್ಟಾರ್‌ ಆಫ್‌ ಮೈಸೂರ್‌ ಪತ್ರಿಕೆ: ವೀರೋಧದ ನಂತರ ಕ್ಷಮಾಪಣೆ

ಮುಸ್ಲಿಮರನ್ನು ಕೊಳೆತ ಸೇಬುಗಳಿಗೆ ಹೋಲಿಸಿದ ಸ್ಟಾರ್‌ ಆಫ್‌ ಮೈಸೂರ್‌ ಪತ್ರಿಕೆ: ವೀರೋಧದ ನಂತರ ಕ್ಷಮಾಪಣೆ

- Advertisement -
- Advertisement -

ಮೈಸೂರಿನಲ್ಲಿ ಸಂಜೆ ಪ್ರಸಾರವಾಗುವ ಇಂಗ್ಲಿಶ್ ದಿನಪತ್ರಿಕೆ ಸ್ಟಾರ್ ಆಫ್ ಮೈಸೂರು ಎಪ್ರಿಲ್ 6 ರಂದು ಪ್ರಕಟಿಸಿದ್ದ ಸಂಪಾದಕೀಯದ ಬಗ್ಗೆ ಹಲವು ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ದೇಶದಲ್ಲಿ ಒಂದು ಸಮುದಾಯದ ಜನರು ಕೊಳೆತ ಸೇಬಿನಂತೆ ಎಂದು ಬರೆದಿದ್ದಲ್ಲದೆ ಅವುಗಳನ್ನು ಸಿಂಗಾಪುರ್ ದೇಶದ ಹಿಂದಿನ ಮುಖಂಡ ಅಥವಾ ಇಸ್ರೇಲ್‌ನ ಪ್ರಸಕ್ತ ಸರ್ಕಾರಾದ ಮಾದರಿಯಲ್ಲಿ ಹೊರಗೆ ಎಸೆಯಬೇಕು ಎಂದು ಎಂ ಗೋವಿಂದೆ ಗೌಡ ಸಂಪಾದಕರಾಗಿರುವ ಹಾಗು ಕೆ ಬಿ ಗಣಪತಿ ಉಪಸಂಪಾದಕರಾಗಿರುವ ಈ ಪತ್ರಿಕೆಯ ಸಂಪಾದಕೀಯ ಹೇಳಿತ್ತು.

ಅಂದರೆ ಕೊರೊನಾ ಕುರಿತು ಜಾಗೃತಿ ಮೂಡಿಸುವ ನೆಪದಲ್ಲಿ ಮುಸ್ಲಿಂ ಸಮುದಾಯದ ಮೇಲೆ ಕೋಮುದ್ವೇಷ ಮೂಡಿಸುವ ಸಂಪಾದಕೀಯವೊಂದು ಈ ಪತ್ರಿಕೆಯಲ್ಲಿ ಪ್ರಕಟವಾಗಿ ಭಾರೀ ಟೀಕೆಗೆ ಒಳಗಾಗಿದೆ.

ಸಂಪಾದಕೀಯದಲ್ಲಿ ಮುಸ್ಲಿಂ ಸಮುದಾಯದ ಹೆಸರನ್ನು ಎಲ್ಲಿಯೂ ನೇರವಾಗಿ ತೆಗೆದುಕೊಳ್ಳದಿದ್ದರೂ, ದೇಶದ 18% ಜನರನ್ನು ದೂಷಿಸಿದ್ದ ಸಂಪಾದಕೀಯದ ನಿಲುವು ಮುಸ್ಲಿಮರ ವಿರುದ್ಧವಾಗಿದೆ ಎಂದು ಸ್ಪಷ್ಟವಾಗಿದೆ ಎಂದು ಹಲವು ಸಂಘಟನೆಗಳು ಆರೋಪಿಸಿದ್ದವು.

‘ಫೋರಮ್ ಅಗೆನಿಸ್ಟ್ ಫೇಕ್ ನ್ಯೂಸ್’ ಎಂಬ ಮೈಸೂರು ಮೂಲದ ಸಂಘಟನೆ ಈ ಸಂಪಾದಕೀಯ ಮುಸ್ಲಿಮರ ವಿರುದ್ಧ ಇದ್ದು ಇದು ಕೋಮುಗಳ ವಿರುಧ್ದ ದ್ವೇಷಕ್ಕೆ ಪ್ರಚೋದನೆ ನೀಡುತ್ತಿದೆ ಎಂದು ಆರೋಪಿಸಿ ಸಂಪಾದಕರಿಗೆ ಪತ್ರ ಬರೆದಿತ್ತು. ಈ ಸಾಂಕ್ರಾಮಿಕ ಈಗಗಾಲೇ ಜನಕ್ಕೆ ಸಾಕಷ್ಟು ಸಂಕಷ್ಟ ತಂದಿದೆ. ಇದನ್ನು ಜಾತಿ ಧರ್ಮಗಳ ಹೊರತಾಗಿ ಹೋರಾಡಬೇಕು. ಇಂತಹ ಸಮಯದಲ್ಲಿ ಒಂದು ಸಮದಾಯವನ್ನು ಸುಳ್ಳು ಸುಳ್ಳೇ ಆರೋಪಿಸಿ ಅವರಿಗೆ ಒತ್ತಡ ತರುವುದು ತಪ್ಪು ಎಂದು ಹೇಳಿತ್ತು.

ಅಲ್ಲದೆ ವಕೀಲರ ಬಳಗವೊಂದು ಪತ್ರಿಕೋದ್ಯಮದ ನಿಯಮಗಳನ್ನು ಉಲ್ಲೇಖಿಸಿ ಈ ಸಂಪಾದಕೀಯ ಪ್ರಚೋದಿಸಿರುವ ಕೋಮು ದ್ವೇಷವನ್ನು ಖಂಡಿಸಿತ್ತು. ಪತ್ರಿಕೆಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಹಲವು ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರಿಗೆ ಮನವಿ ಮಾಡಿದ್ದರು.

ಈ ಹಿನ್ನಲೆಯಲ್ಲಿ ಈಗ ಸ್ಟಾರ್ ಆಫ್ ಮೈಸೂರು ಪತ್ರಿಕೆ ಕ್ಷಮಾಪಣೆಯನ್ನು ಪ್ರಕಟಿಸಿದೆ. ಕೋವಿಡ್-19 ಹೋರಾಟಕ್ಕೆ ಸಂಬಂಧಿಸಿದಂತೆ ಬರೆದ ಈ ಲೇಖನ ಯಾವುದಾದರೂ ಸಮುದಾಯಕ್ಕೆ ನೋವುಂಟು ಮಾಡಿದ್ದರೆ ಕ್ಷಮಿಸುವುಂತೆ ಕೇಳಿಕೊಂಡಿದ್ದು ಸಂಪಾದಕ ಮಂಡಳಿಯಿಂದ ತಪ್ಪಾಗಿರುವುದನ್ನು ಒಪ್ಪಿಕೊಂಡಿದೆ.

 

ಈ ಹಿಂದೆ ಮಾರ್ಚ್ 2019 ರಲ್ಲಿ ರಿಪಬ್ಲಿಕ್‌ ಟಿವಿಯಲ್ಲಿ ಜಮಾತ್-ಇ-ಇಸ್ಲಾಮಿ ಭಾರತದ ಮುಖ್ಯಸ್ಥ ಮೌಲಾನಾ ಜಲಾಲುದ್ದೀನ್ ಉಮ್ರಿ ಭಯೋತ್ಪಾದಕ ಎಂದು ಸುಳ್ಳು ಆರೋಪ ಮಾಡಿ ಸುದ್ದಿ ಪ್ರಸಾರ ಮಾಡಲಾಗಿತ್ತು. ಇದರ ವಿರುದ್ಧ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಮಂಡಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದ ನಂತರ ರಿಪಬ್ಲಿಕ್ ಟಿವಿ ಕ್ಷಮೆಯಾಚಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಮಾರ್ಚ್ ಕೊನೆಯ ವಾರದಲ್ಲಿ ದೆಹಲಿಯಲ್ಲಿ ನಡೆದ ತಬ್ಲೀಗ್ ಜಮಾತ್ ಸಮಾವೇಶದಿಂದಲೇ ಭಾರತದಲ್ಲಿ ಕೊರೊನ ಹರಡಿತು ಎಂಬ ಸುಳ್ಳು ಸುದ್ದಿಯನ್ನು ಹರಡಿ, ಒಂದು ಸಮುದಾಯದ ವಿರುದ್ಧ ಆರೋಪವನ್ನು ಹೊರಿಸುವುದನ್ನು ಕೆಲವು ಮಾಧ್ಯಮಗಳು ನಿರಂತರವಾಗಿ ಮಾಡುತ್ತಿವೆ. ಟಿವಿ ವಾಹಿನಿಗಳಿಗೆ ನೀಡಿದ್ದ ಸಂದರ್ಶನದಲ್ಲಿ ಇಂತಹ ಸಂಗತಿಗಳ ವಿರುದ್ಧ ಎಚ್ಚರಿಕೆ ವಹಿಸುವಂತೆ ಕರ್ನಾಟಕ ಮುಖ್ಯಮಂತ್ರಿ ಮಾಧ್ಯಮಗಳಿಗೆ ಮತ್ತು ನಾಗರಿಕರಿಗೆ ಎಚ್ಚರಿಸಿದ್ದರು. ಮಹಾರಾಷ್ಟ್ರ ಸರ್ಕಾರ ಕೂಡ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಇಂತಹ ಧಾರ್ಮಿಕ ದ್ವೇಷಕ್ಕೆ ಕಾರಣವಾಗುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿತ್ತು.

400 ಪದದ ಸಂಪಾದಕೀಯ ಬರೆದು ಕೇವಲ 50 ಪದದ ಕ್ಷಮಾಪಣೆಯನ್ನು ಈ ಪತ್ರಿಕೆ ಪ್ರಕಟಿಸಿದೆ. ಇದರಿಂದ ಉಳಿದ ಮಾಧ್ಯಮಗಳು ಪಾಠ ಕಲಿಯುವಂತಾಗಲಿ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...