Homeಕರ್ನಾಟಕರಾಜ್ಯ ವಿಧಾನಸಭಾ ಚುನಾವಣೆ: ಬಿಜೆಪಿಯ 2ನೇ ಪಟ್ಟಿ ಬಿಡುಗಡೆ

ರಾಜ್ಯ ವಿಧಾನಸಭಾ ಚುನಾವಣೆ: ಬಿಜೆಪಿಯ 2ನೇ ಪಟ್ಟಿ ಬಿಡುಗಡೆ

- Advertisement -
- Advertisement -

ರಾಜ್ಯ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಜೆಪಿ ಪಟ್ಟಿ ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯಲ್ಲಿ 23 ಮಂದಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಐವರು ಶಾಸಕರಿಗೆ ಟಿಕೆಟ್ ಕೈ ತಪ್ಪಿದೆ.

ಮೇ 10ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ ಮಂಗಳವಾರವಷ್ಟೇ ಬಿಜೆಪಿ 189 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿತ್ತು. ಅದರಿಂದ ಟಿಕೆಟ್ ಆಕಾಂಕ್ಷಿಗಳು ಬಂಡಾಯದ ಹಾದಿ ಹಿಡಿದಿದ್ದಾರೆ. ಈ ನಡುವೆ ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ.

ಬಿಜೆಪಿ ಅಭ್ಯರ್ಥಿಗಳು:

ದೇವರಹಿಪ್ಪರಗಿ– ಸೋಮನಗೌಡ ಪಾಟೀಲ (ಸಾಸನೂರು)

ಬಸವನ ಬಾಗೇವಾಡಿ– ಎಸ್‌.ಕೆ. ಬೆಳ್ಳುಬ್ಬಿ

ಇಂಡಿ– ಕಾಸಾಗೌಡ ಬಿರಾದರ್‌

ಗುರುಮಿಟ್ಕಲ್‌– ಲಲಿತಾ ಅನಪುರ

ಬೀದರ್‌– ಈಶ್ವರ್ ಸಿಂಗ್‌ ಠಾಕೂರ್‌

ಬಾಲ್ಕಿ– ಪ್ರಕಾಶ್‌ ಖಂಡ್ರೆ

ಗಂಗಾವತಿ–ಪರಣ್ಣ ಮುನವಳ್ಳಿ

ಕಲಘಟಗಿ– ನಾಗರಾಜ್‌ ಛಬ್ಬಿ

ಹಾನಗಲ್‌–ಶಿವರಾಜ ಸಜ್ಜನರ್‌

ಹಾವೇರಿ–ಗವಿಸಿದ್ದಪ್ಪ ದ್ಯಾಮಣ್ಣನವರ್‌

ಹರಪ್ಪನಹಳ್ಳಿ–ಕರುಣಾಕರ ರೆಡ್ಡಿ

ದಾವಣಗೆರೆ ಉತ್ತರ– ಲೋಕಿಕೆರೆ ನಾಗರಾಜ್‌

ದಾವಣಗೆರೆ ದಕ್ಷಿಣ– ಅಜಯ್‌ಕುಮಾರ್‌

ಮಾಯಕೊಂಡ–ಬಸವರಾಜ ನಾಯಕ್‌

ಚನ್ನಗಿರಿ–ಶಿವಕುಮಾರ್‌

ಬೈಂದೂರು–ಗುರುರಾಜ್‌ ಗಂಟೀಹೊಳೆ

ಮೂಡಿಗೆರೆ–ದೀಪಕ್‌ ದೊಡ್ಡಯ್ಯ

ಗುಬ್ಬಿ–ಎಸ್‌.ಟಿ.ದಿಲೀಪ್‌ಕುಮಾರ್‌

ಶಿಡ್ಲಘಟ್ಟ–ರಾಮಚಂದ್ರಗೌಡ

ಕೆಜಿಎಫ್‌– ಅಶ್ವಿನಿ ಸಂಪಂಗಿ

ಶ್ರವಣಬೆಳಗೊಳ– ಚಿದಾನಂದ

ಅರಸೀಕೆರೆ– ಜಿ.ವಿ.ಬಸವರಾಜ್‌

ಹೆಚ್.ಡಿ.ಕೋಟೆ–ಕೃಷ್ಣ ನಾಯಕ್

ಟಿಕೆಟ್‌ ಕೈ ತಪ್ಪಿದವರು 

ಮೂಡಿಗೆರೆ; ಎಂ.ಪಿ.ಕುಮಾರಸ್ವಾಮಿ

ಬೈಂದೂರು; ಸುಕುಮಾರ ಶೆಟ್ಟಿ

ಚನ್ನಗಿರಿ; ಮಾಡಾಳು ವಿರೂಪಾಕ್ಷಪ್ಪ

ಹಾವೇರಿ; ನೆಹರೂ ಓಲೇಕಾರ್‌

ಮಾಯಕೊಂಡ; ಪ್ರೊ.ಲಿಂಗಣ್ಣ

ಕಲಘಟಗಿ; ಸಿ.ಎಂ.ನಿಂಬಣ್ಣನವರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...