Homeಮುಖಪುಟಯುವಜನರನ್ನು ಗುರಿಯಾಗಿಸಿ ಪ್ರಜಾಪ್ರಭುತ್ವದ ಕತ್ತು ಹಿಸುಕಬೇಡಿ: ಲಿಯೋ ಸಾಲ್ಡಾನಾ

ಯುವಜನರನ್ನು ಗುರಿಯಾಗಿಸಿ ಪ್ರಜಾಪ್ರಭುತ್ವದ ಕತ್ತು ಹಿಸುಕಬೇಡಿ: ಲಿಯೋ ಸಾಲ್ಡಾನಾ

- Advertisement -
- Advertisement -

ಭಾರತೀಯ ಪ್ರಭುತ್ವದಿಂದ ಯುವ ಪರಿಸರ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದಾಳಿಯು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಭಿನ್ನಮತದ ಪ್ರಜಾತಾಂತ್ರಿಕ ಹಕ್ಕನ್ನು ಸರ್ವಾಧಿಕಾರಿ ಧೋರಣೆಯಿಂದ ಹತ್ತಿಕ್ಕುವ ಟ್ರೆಂಡ್‌ನ ಸಂಕೇತವಾಗಿದೆ. ಇದರ ಬದಲು ಸರ್ಕಾರ ಮಾತುಕತೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿಜವಾದ ಪ್ರಜಾತಾಂತ್ರಿಕ ನಿಲುವನ್ನು ಪ್ರದರ್ಶಿಸಬೇಕಿತ್ತು ಎಂದು ಲಿಯೋ ಎಫ್. ಸಾಲ್ಡಾನಾ ತಿಳಿಸಿದ್ದಾರೆ.

ಜನರ ಚಳುವಳಿಗಳ ರಾಷ್ಟ್ರೀಯ ಒಕ್ಕೂಟ, ಭಾರತದಲ್ಲಿ ಪರಿಸರ ನ್ಯಾಯಕ್ಕಾಗಿ ಒಕ್ಕೂಟ ಮತ್ತು
ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ವತಿಯಿಂದ ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

“ದೇಶದ ಯುವಜನರ ಮಾತು ಆಲಿಸುವ ಬದಲು, 22 ವರ್ಷದ ಯುವ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ನಡೆಸಿಕೊಂಡ ರೀತಿ, ಕಾನೂನಿನ ನಿಯಮಗಳನ್ನು ಉಲ್ಲಂಘಿಸಲು ಮತ್ತು ಸ್ಥಾಪಿತ ಕಾರ್ಯವಿಧಾನದ ಪ್ರಕ್ರಿಯೆಗಳನ್ನು ಉಲ್ಲಂಘಿಸಲು ಬಯಸುವ ಪ್ರಭುತ್ವದ ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ” ಎಂದು ಸಾಲ್ಡಾನಾ ಆರೋಪಿಸಿದ್ದಾರೆ.

ನಿಕಿತಾ ಜಾಕೋಬ್ ಮತ್ತು ಶಾಂತನ್ ಮುಲುಕ್ ಎಂಬ ಇಬ್ಬರು ಯುವಕರ ವಿರುದ್ಧ ಹೊರಡಿಸಲಾದ ವಾರಂಟ್‌ಗಳು ಮತ್ತು ದಿಶಾ ಅವರ ‘ಆಯ್ದ’ ಖಾಸಗಿ ಸಂದೇಶಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದು- ಇವೆಲ್ಲವೂ ಭಾರತವನ್ನು ಅಸ್ಥಿರಗೊಳಿಸುವ ಅಂತಾರಾಷ್ಟ್ರೀಯ ಪಿತೂರಿಯ ಭಾಗವಾಗಿ ಈ ಯುವಕರನ್ನು ಚಿತ್ರಿಸುವ ಪ್ರಯತ್ನಗಳಾಗಿವೆ ಎಂದು ಅವರು ಕಿಡಿಕಾರಿದರು.

ಈ ಕ್ರಮಗಳು, ರಾಷ್ಟ್ರದ ಅತ್ಯಂತ ತುರ್ತಿನ, ಒತ್ತಡದ ಅಗತ್ಯಗಳಾದ ರೈತರ ಬಿಕ್ಕಟ್ಟು, ಜೀವವೈವಿಧ್ಯದ ಏರುಪೇರು ಮತ್ತು ಕೋಟ್ಯಂತರ ಜನರ ಆರ್ಥಿಕ ಅಭದ್ರತೆಯಂತಹ ವಿಷಯಗಳಿಂದ ಸಾರ್ವಜನಿಕ ಗಮನವನ್ನು ಬೇರೆಡೆಗೆ ತಿರುಗಿಸುವ ಗುರಿಯನ್ನು ಹೊಂದಿವೆ. ಈ ಸಮಸ್ಯೆಗಳನ್ನು ನಿಭಾಯಿಸಲು ತನ್ನ ಎಲ್ಲ ಗಮನವನ್ನು ಕೇಂದ್ರೀಕರಿಸುವ ಬದಲು, ಸರ್ಕಾರವು ಪಿತೂರಿ ಮತ್ತು ಭಯೋತ್ಪಾದನೆಯ ಸುಳ್ಳು ನೆರೇಷನ್‌ಗಳನ್ನು ಸಿದ್ಧಪಡಿಸುತ್ತಿದೆ ಎಂದು ಸಾಲ್ಡಾನಾ ಹೇಳಿದ್ದಾರೆ.

ಈಗ ಟಾರ್ಗೆಟ್ ಮಾಡಲ್ಪಟ್ಟ ಹಲವು ಯುವಜನರು ಅಥವಾ ಸಾಮಾಜಿಕ ಮತ್ತು ಪರಿಸರೀಯ ವಿಷಯಗಳಲ್ಲಿ ಭಾಗಿಯಾಗಿರುವ ಹತ್ತಾರು ಇತರ ಲಕ್ಷಾಂತರ ಯುವಕರ ಕೆಲಸ/ಪಾತ್ರಗಳಲ್ಲಿ ದೇಶದ್ರೋಹ ಅನ್ನುವಂಥದ್ದು ಏನೂ ಇಲ್ಲ. ತಮ್ಮ ಸಾಮೂಹಿಕ ಭವಿಷ್ಯದ ಬಗ್ಗೆ ಗಮನಹರಿಸಿದ ಕಾರಣ, ದೇಶದ ಭವಿಷ್ಯದ ಬಗ್ಗೆ ಪ್ರಭುತ್ವಕ್ಕೆ ಸವಾಲು ಹಾಕುವುದು ದೇಶದ್ರೋಹದ ಕಾರ್ಯವಲ್ಲ ಎಂದು ಅವರು ತಿಳಿಸಿದ್ದಾರೆ.

ದಿಶಾ ರವಿ ಅವರ ವಿರುದ್ಧದ ಎಲ್ಲಾ ಆರೋಪಗಳನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು. ಶಾಂತನು ಮುಲುಕ್ ಮತ್ತು ನಿಕಿತಾ ಜಾಕೋಬ್ ವಿರುದ್ಧದ ವಾರಂಟ್‌ಗಳನ್ನು ಸಹ ಕೈಬಿಡಬೇಕು ಮತ್ತು ರೈತರ ಆಂದೋಲನ ಮತ್ತು ಸಾಮಾಜಿಕ ಮತ್ತು ಪರಿಸರ ನ್ಯಾಯದ ಕಾರಣಗಳನ್ನು ಬೆಂಬಲಿಸುತ್ತಿರುವ ಯುವಕರ ವಿರುದ್ಧ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಆಶಿಶ್ ಕೊಠಾರಿ, ಮೀರಾ ಸಂಗಮಿತ್ರ ಮತ್ತು ಕವಿತಾ ಶ್ರೀವತ್ಸವ ಭಾಗವಹಿಸಿದ್ದರು.


ಇದನ್ನೂ ಓದಿ: ದಿಶಾ ರವಿಯ ಬಂಧನ ಒಂದೇ ಕಲ್ಲಲ್ಲಿ ಮೂರು ಹಕ್ಕಿಗಳನ್ನು ಹೊಡೆದ ಹಾಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...