Homeಚಳವಳಿಸಂಘರ್ಷ ನಡೆಸುವುದು ನಮ್ಮ ಹಕ್ಕು: ರಮಾಬಾಯಿ ಅಂಬೇಡ್ಕರ್

ಸಂಘರ್ಷ ನಡೆಸುವುದು ನಮ್ಮ ಹಕ್ಕು: ರಮಾಬಾಯಿ ಅಂಬೇಡ್ಕರ್

ಸಂವಿಧಾನವನ್ನು ಇಂಚಿಂಚೆ ಕಸಿಯಲಾಗುಗತ್ತಿದೆ. ಸವಲತ್ತುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂಬುದನ್ನು ನಾವು ತಿಳಿಯಬೇಕು. ಅದರ ವಿರುದ್ಧ ಐಕ್ಯ ಹೋರಾಟ ನಡೆಸಬೇಕು.

- Advertisement -
- Advertisement -

ಈ ದೇಶದಲ್ಲಿ ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ಬಳಸಿಕೊಂಡು ಅನ್ಯಾಯದ ವಿರುದ್ಧ ಸಂಘರ್ಷ ಮಾಡುವುದು ನಮ್ಮ ಹಕ್ಕಾಗಿದೆ ಎಂದು ಹೋರಾಟಗಾರ್ತಿ ರಮಾಬಾಯಿ ಅಂಬೇಡ್ಕರ್ ಅಭಿಪ್ರಾಯಪಟ್ಟರು.

ನ್ಯಾಷನಲ್ ಕಾಲೇಜು ಮೈದಾನದಲ್ಲಿ ದಲಿತರ ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ಇಂದು ಅಂಬೇಡ್ಕರರ ಪರಿನಿರ್ವಾಣದ ದಿನ. ಅವರು ಎಲ್ಲರಿಗೂ ಮತದಾನದ ಹಕ್ಕು ನೀಡಿದ್ದಾರೆ. ಬಡವರಿಗೆ, ಬಲ್ಲಿದರಿಗೆಲ್ಲರಿಗೂ ಒಂದು ಮತದಾನದ ಹಕ್ಕು ನೀಡಿದ್ದಾರೆ. ಅದನ್ನು ಸಮರ್ಪಕವಾಗಿ ಬಳಸುವುದು ನಮ್ಮ ಜವಾಬ್ದಾರಿ” ಎಂದರು.

ಮಹಿಳಾ ಶಿಕ್ಷಣದ ಬಾಬಾ ಸಾಹೇಬರು ಹೇಳಿದ್ದಾರೆ. ಮಹಿಳಾ ಶಿಕ್ಷಣದಿಂದ ಇಡೀ ಸಮಾಜದ ಧೀಶಕ್ತಿಯಾಗುತ್ತಾಳೆ ಎಂದರು. ಒಂದು ಸಮಾಜದ ಅಭಿವೃದ್ದಿ ಅಲ್ಲಿನ ಮಹಿಳೆಯರ ಶಿಕ್ಷಣದಿಂದ ಅಳೆಯಬೇಕು ಎಂದರು. ನಾವು ಬಾಬಾ ಸಾಹೇಬರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸುವುದೆಂದರೆ ಶಿಕ್ಷಣಕ್ಕಾಗಿ ಹೋರಾಡುವುದಾಗಿದೆ ಎಂದರು.

ನೀವು ಬಾಬಾ ಸಾಹೇಬರು ಹೇಳಿದಂತೆ ನಿಮ್ಮ ನಾಯಕರನ್ನು ಆಯ್ಕೆ ಮಾಡಿಕೊಂಡು ಸಂಘಟನೆ ಕಟ್ಟಿ, ಸಂಘರ್ಷ ಮಾಡಬೇಕು. ಇಂದು ಕೇಂದ್ರ ಸರ್ಕಾರ ದಲಿತ ದಮನಿತರ ವಿದ್ಯಾರ್ಥಿ ವೇತನ ಕಿತ್ತುಕೊಳ್ಳುತ್ತಿದ್ದಾರೆ. ಶಿಕ್ಷಣ ಕಿತ್ತುಕೊಳ್ಳುತ್ತಿದ್ದಾರೆ. ಹಾಗಾಗಿ ಬಾಬಾ ಸಾಹೇಬರು ಹೇಳಿದಂತೆ ಹೋರಾಟವೇ ಮುಖ್ಯವಾಗಿದೆ ಎಂದರು.

ಸಂವಿಧಾನವನ್ನು ಇಂಚಿಂಚೆ ಕಸಿಯಲಾಗುಗತ್ತಿದೆ. ಸವಲತ್ತುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂಬುದನ್ನು ನಾವು ತಿಳಿಯಬೇಕು. ಅದರ ವಿರುದ್ಧ ಐಕ್ಯ ಹೋರಾಟ ನಡೆಸಬೇಕು. ದಲಿತ ಸಂಘಟನೆಗಳು ಒಂದಾಗುತ್ತಿರುವುದು ಭರವಸೆ ಮೂಡಿಸಿದೆ ಎಂದರು.

ಇಷ್ಟು ದೊಡ್ಡ ಜನರು ಸೇರಿರುವುದನ್ನು ನೋಡಿ ಸಂತೋಷವಾಗಿದೆ. ನಾವು ಸಂಘರ್ಷದ ಹಾದಿ ತುಳಿಯಬೇಕಿದೆ. ಡಾ. ಆನಂದ್ ತೇಲ್ತುಂಬ್ದೆಯವರು ಜೈಲಿನಲ್ಲಿದ್ದಾಗ ನೀವೆಲ್ಲ ಹೋರಾಟ ಮಾಡಿ ನಮ್ಮ ಜೊತೆಯಲ್ಲಿದ್ದೀರಿ. ಅದಕ್ಕಾಗಿ ಧನ್ಯವಾದಗಳು. ನನ್ನನ್ನು ಇಲ್ಲಿ ಕರೆಸಿ ಗೌರವ ಕೊಟ್ಟಿದ್ದೀರಿ. ಅದಕ್ಕೆ ಧನ್ಯವಾದಗಳು ಎಂದರು.

ಇದನ್ನೂ ಓದಿ; DSS ಬೀದಿಯಲ್ಲಿ ಕೂಗಿದ ಘೋ‍‍‍‍‍ಷಣೆಗಳು ಇಂದು ಸರ್ಕಾರದ ಕಾರ್ಯಕ್ರಮವಾಗಿವೆ: ಇಂದೂಧರ ಹೊನ್ನಾಪುರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...