HomeಚಳವಳಿDSS ಬೀದಿಯಲ್ಲಿ ಕೂಗಿದ ಘೋ‍‍‍‍‍ಷಣೆಗಳು ಇಂದು ಸರ್ಕಾರದ ಕಾರ್ಯಕ್ರಮವಾಗಿವೆ: ಇಂದೂಧರ ಹೊನ್ನಾಪುರ

DSS ಬೀದಿಯಲ್ಲಿ ಕೂಗಿದ ಘೋ‍‍‍‍‍ಷಣೆಗಳು ಇಂದು ಸರ್ಕಾರದ ಕಾರ್ಯಕ್ರಮವಾಗಿವೆ: ಇಂದೂಧರ ಹೊನ್ನಾಪುರ

ಒನ್ ಮ್ಯಾನ್ ಒನ್ ವೋಟು ನಮ್ಮ ತಂದೆ ಅಂಬೇಡ್ಕರ್ ಕೊಟ್ಟಿದ್ದೇ ಹೊರತು ಯಾರೋ ವೈದಿಕರಲ್ಲ.

- Advertisement -
- Advertisement -

ದಲಿತ ಚಳವಳಿ ನಮ್ಮ ಕಾಲಮಾನದಲ್ಲಿ ದೊಡ್ಡಸಾಧನೆಗಳನ್ನು ಮಾಡಿದೆ. ನಾವು ಹೋರಾಟಗಳ ಮೂಲಕ ಕಟ್ಟಿಕೊಟ್ಟಂತಹ ವಿಚಾರಗಳು ಲಕ್ಷಾಂತರ ದಲಿತರ ಹೃದಯದಲ್ಲಿ ಸ್ವಾಭಿಮಾನಿದ ಕಿಚ್ಚು ಹತ್ತಿಸಿದೆ. DSS ಬೀದಿಯಲ್ಲಿ ಕೂಗಿದ ಘೋ‍‍‍‍‍ಷಣೆಗಳು ಇಂದು ಸರ್ಕಾರದ ಕಾರ್ಯಕ್ರಮವಾಗಿವೆ ಎಂದು ಹಿರಿಯ ದಲಿತ ಹೋರಾಟಗಾರ ಇಂದೂಧರ ಹೊನ್ನಾಪುರ ಅಭಿಪ್ರಾಯಪಟ್ಟರು.

ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶದ ಪ್ರಾಸ್ತವಿಕ ಮಾತುಗಳನ್ನಾಡಿದ ಅವರು, “ಇಂದು ಬಾಬಾ ಸಾಹೇಬರ 66ನೇ ಪರಿನಿಬ್ಬಾಣದ ದಿನ. ಬಾಬಾ ಸಾಹೇಬರು, ಬುದ್ಧ, ಬಸವಣ್ಣ್ರಾರಾಧಿಯಾಗಿ…. ದಲಿತ ಬಂಧುಗಳ ವಿಮುಕ್ತಗಾಗಿ ಪ್ರಾಣಾರ್ಪಣೆ ಮಾಡಿದವರಿಗೆ ಈ ಸಮಾವೇಶವನ್ನು ಅರ್ಪಿಸುತ್ತೇವೆ. ದಲಿತರೆಂದರೆ ಕೇವಲ ಅಸ್ಪಶ್ಯತೆರಲ್ಲ, ಈ ನಾಡಿನ ಎಲ್ಲಾ ನೊಂದವರು. ಎಲ್ಲ ನೊಂದವರ ಪರ ಡಿಎಸ್‌ಎಸ್‌ ಹೋರಾಟ ಮಾಡಿದೆ. ಹಿಂದುಳಿದ ವರ್ಗದ ಅನುಸೂಯಮ್ಮನವರ ಪರ ಹೋರಾಡಿತ್ತು” ಎಂದರು.

ದಲಿತ ಚಳವಳಿ ಆರಂಭವಾಗಿ ಐವತ್ತು ವರ್ಷಗಳಾಗಿವೆ. ದಲಿತರು ಕೂಗುತ್ತಿರುವ ಘೋಷಣೆಗಳು ಕಾರ್ಯಕ್ರಮಗಳಾಗಿವೆ. ಇವೆಲ್ಲವೂ ನಮ್ಮ ಹೆಮ್ಮೆ. ದಲಿತ ಸಂಘಟನೆ ವಿಘಟನೆಯಾಗಿವೆ, ಆಯಾಸವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸೇರಿರುವ ಜನಸ್ತೋಮ ನಮ್ಮ ಒಗ್ಗಟ್ಟನ್ನು ಸಾರಿ ಹೇಳಿದೆ ಎಂದರು.

ಹಂಚಿಕೊಂಡು ತಿಂದು ಬೆಳೆದ ದೇಶವಿದು. ಈ ದೇಶ ಯಾವ ಸ್ಥಿತಿ ಹೋಗಿದೆ ನೋಡುಗತ್ತಿದ್ದೇವೆ. ನಮ್ಮ ಸಂಸ್ಕೃತಿ, ಆಹಾರ, ಉದ್ಯೋಗ, ಉಡುಗೆ ತೊಡುಗೆಯನ್ನು ಕಿತ್ತುಕೊಂಡಿದ್ದಾರೆ. ನಮ್ಮ ದೇಸ ಅಕ್ಕಪಕ್ಕದ ದೇಶಕ್ಕಿಂತ ಕೆಳಗೆ ಇಳಕಿಯುತ್ತಿದೆ. ಸಂವಿಧಾನದ ಹೆಸರಲ್ಲಿ ವಂಚನೆ ಮಾಡುತ್ತಿದ್ದಾರೆ. ಸ್ಕಾಲರ್‌ಶಿಪ್ ನಿಲ್ಲಿಸಿ, ಲಕ್ಷಾಂತರ ರೂಪಾಯಿ ಕಾರ್ಪೊರೇಟರ್‌ಗಳ ಸಾಲ ಮನ್ನಾ ಮಾಡುತ್ತಿದ್ದಾರೆ. ಅಂಕಿ- ಅಂಶಗಳನ್ನು ತಡೆದು ಬಡತನ ಇಲ್ಲ ಎನ್ನುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಂಬೇಡ್ಕರ್ ಅಂದು ಮನುಸ್ಮೃತಿಯನ್ನು ಸುಟ್ಟರು. ಆದರೆ ಸಂವಿಧಾನದ ಹೆಸರಲ್ಲಿ ಆಳುವವರು ಇಂದು ಮನುಸ್ಮತಿ ಮತ್ತು ಪಂಚಾಂಗವನ್ನು ಹೇರುತ್ತಿದ್ದಾರೆ. ಅದರ ವಿರುದ್ಧ ದಲಿತರು ಇವತ್ತು ಬೀದಿಳಿದಿದ್ದಾರೆ. ಸಂಘಟನೆಗಳು ಒಂದಾಗಿದ್ದಾರೆ. ಇದಕ್ಕೆ ಕಾರಣವಾದ ಸರ್ಕಾರಕ್ಕೆ ಧನ್ಯವಾದ ಹೇಳಬೇಕು ಎಂದರು.

ರಾಮರಾಜ್ಯದ ಹೆಸರಲ್ಲಿ ಹಿಂಸೆ, ದೌರ್ಜನ್ಯ ಎಸಗುತ್ತಿದ್ದಾರೆ. ಪ್ರಶ್ನೆ ಕೇಳಿದರೆ ಜೈಲಿಗೆ ಹಾಕುತ್ತಿದ್ದಾರೆ. ಆನಂದ್ ತೇಲ್ತುಂಬ್ಡೆಯವರನ್ನು ಎರಡು ವರ್ಷ ಜೈಲಿಗೆ ಹಾಕಿದ್ದಾರೆ. ನ್ಯಾಯ ಕೇಳಿದರೆ ಜೈಲಿಗೆ ಹಾಕುತ್ತಾರೆ. ನೀವು ದೇಶದ್ರೋಹಿಗಳು. ದಲಿತರ ಹಕ್ಕು, ಬಡವರ ಹಕ್ಕು ಕಿತ್ತುಕೊಳ್ಳುತ್ತಿದ್ದೀರಿ. ನೀವು ದೇಶದ್ರೋಹಿಗಳು. ಆರ್ ಎಸ್ ಎಸ್, ಬಿಜೆಪಿ ದೇಶದ್ರೋಹಿಗಳು. ಸತ್ಯ ಹೇಳಿದರೆ ತಪ್ಪು ಎನ್ನುವುದಾದರೆ ನಿಮ್ಮಂಥ ಪಾಖಂಡಿಗಳು ಇನ್ನಾರೂ ಇಲ್ಲ. ಶಾಸ್ತ್ರ ಹೇಳುವವರು ದೇಶ ಕಟ್ಟಿಲ್ಲ. ದಲಿತರು, ತಳಸಮುದಾಯಗಳಾದ ನಾವು ದೇಶ ಕಟ್ಟಿದ್ದೇವೆ ಎಂದರು.

ಸಂವಿಧಾನ ಆಶಯಗಳನ್ನು ಬುಡಮೇಲು ಮಾಡಲು ಹೊರಟಿದ್ದೀರಿ. ಬಿಕ್ಷುಕರ ಮೇಲೆ ಜಿಎಸ್ ಟಿ ಹಾಕುತ್ತಿದ್ದೀರಿ. ಈ ದೇಶವನ್ನು ಲೂಟಿ ಹೊಡೆಯುತ್ತಿರುವವರನ್ನು ಏಕೆ ಪ್ರಶ್ನಿಸುತ್ತಿಲ್ಲ. ಈ ವಂಚಕರನ್ನು ಚುನಾವಣೆ ಮೂಲಕ ಕಿತ್ತು ಎಸಯನಬೇಕಾಗಿದೆ. ಒನ್ ಮ್ಯಾನ್ ಒನ್ ವೋಟು ನಮ್ಮ ತಂದೆ ಅಂಬೇಡ್ಕರ್ ಕೊಟ್ಟಿದ್ದೇ ಹೊರತು ಯಾರೋ ವೈದಿಕರಲ್ಲ. ನ್ಯಾಯ ಕೇಳುವುದು, ಹಕ್ಕಿಗಾಗಿ ಹೋರಾಡುವುದು ದೇಶದ್ರೋಹವಲ್ಲ. ಸುಳ್ಳು ಹೇಳಿ, ಮೋಸ ಮಾಡುವ ಕೋಮುವಾದಿಗಳೇ ಅತಿ ದೊಡ್ಡ ದೇಶದ್ರೋಹಿಗಳು. ನಮ್ಮ ಓಟಿನ ಮೂಲಕ ನಿಮ್ಮನ್ನು ಸೋಲಿಸಿ ಮನೆಗೆ ಕಳಿಸುತ್ತೇವೆ. ಬಾಬಾ ಸಾಹೇಬರು ಕೊಟ್ಟ ಒಂದು ಓಟಿನ ಹಕ್ಕಿನಿಂದ ನಿಮ್ಮ ಸೋಲಿಸುತ್ತೇವೆ ಎಂದರು.

ಹತ್ತು ಸಂಘಟನೆಯ ನಾಯಕರು ವೇದಿಕೆ ಮೇಲೆ ನಿಂತಿದ್ದಾರೆ. ಇದು ಇಲ್ಲಿಗೆ ನಿಲ್ಲುವುದಿಲ್ಲ. ಇದು ಮುಂದುವರಿಯುತ್ತದೆ. ಜಾತ್ಯತೀತರು ಎಲ್ಲರನ್ನೂ ಒಳಗೊಳ್ಳುತ್ತೇವೆ. ಮನುವಾದಿಗಳ ಪರ, ಸಂವಿಧಾನ ವಿರೋಧಿಗಳ ಜೊತೆ ನಿಂತವರನ್ನು ಬಿಟ್ಟು ನಾವು ಒಂದಾಗುಗುತ್ತೇವೆ. ನಾವೆಲ್ಲ ಒಂದಾಗದಿದ್ದರೆ ರೌರವ ನರಕಕ್ಕೆ ಹೋಗುತ್ತೇವೆ ಎಂದರು.

ಬಾಬಾಸಾಹೇಬರ, ಬುದ್ದರ ತತ್ವ ಸಿದ್ದಾಂತಗಳನ್ನು ನಂಬಿ ಬರುವವರಿಗೆ ನಮ್ಮಲ್ಲಿ ಮುಕ್ತ ಪ್ರವೇಶವಿದೆ. ನಾವು ಯಾರನ್ನೂ ಹೊರಗಡೆ ಇಡುವುದಿಲ್ಲ. ಆದರೆ ಕೋಮುವಾದಿಗಳೊಂದಗೆ ಹೋದವರಿಗೆ ನಮ್ಮಲ್ಲಿ ಪ್ರವೇಶವಿಲ್ಲ. ನಾಲ್ಕು ಪರ್ಸೆಂಟ್ ಇರುವವರಿಗೆ ಹತ್ತು ಪರ್ಸೆಂಟ್ ಮೀಸಲಾತಿ ಕೊಡುತ್ತಿದ್ದಿರಿ. ಆತ್ಮ ವಂಚಕರು ನೀವು, ನಿಮ್ಮನ್ನು ಸೋಲಿಸುತ್ತೇವೆ ಎಂದರು.

ಇದನ್ನೂ ಓದಿ: ಕರ್ನಾಟಕವನ್ನು ಯುಪಿ, ಗುಜರಾತ್, ಬಿಹಾರ ಮಾಡಲು ಬಿಡುವುದಿಲ್ಲ: ಸಿ ಬಸವಲಿಂಗಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...