Homeಚಳವಳಿಕರ್ನಾಟಕವನ್ನು ಯುಪಿ, ಗುಜರಾತ್, ಬಿಹಾರ ಮಾಡಲು ಬಿಡುವುದಿಲ್ಲ: ಸಿ ಬಸವಲಿಂಗಯ್ಯ

ಕರ್ನಾಟಕವನ್ನು ಯುಪಿ, ಗುಜರಾತ್, ಬಿಹಾರ ಮಾಡಲು ಬಿಡುವುದಿಲ್ಲ: ಸಿ ಬಸವಲಿಂಗಯ್ಯ

ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆರಂಭಗೊಂಡ ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶದಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು

- Advertisement -
- Advertisement -

ಇದು ಬುದ್ದನ ನಾಡು, ಆದರೆ ಬುದ್ಧನೇ ಇಲ್ಲಿ ಪರಕೀಯನಾಗಿದ್ದಾನೆ. ಮೂಲನಿವಾಸಿಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ. ಇದಕ್ಕೆ ಅವಕಾಶ ಕೊಡಬಾರದು. ಕರ್ನಾಟಕವನ್ನು ಯುಪಿ, ಗುಜರಾತ್, ಬಿಹಾರ ಮಾಡಲು ಬಿಡುವುದಿಲ್ಲ ಎಂದು ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಹೇಳಿದರು.

ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆರಂಭಗೊಂಡ ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶದಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಂಬೇಡ್ಕರ್ ಪರಿನಿರ್ವಾಣ ದಿನ ನಮ್ಮ ಪಾಲಿಗೆ ಹಬ್ಬ, ನಾವು ಇದನ್ನು ಸಂಭ್ರಮಿಸುತ್ತೇವೆ ಎಂದರು.

ಈ ದೇಶದಲ್ಲಿ ದಲಿತರು ಯಾರನ್ನು ಕೊಂದಿಲ್ಲ, ಮೋಸ ಮಾಡಿಲ್ಲ. ಈ ಹಿಂದೆ ಸಿದ್ದಲಿಂಗಯ್ಯನವರ “ಇಕ್ಕುರ್ಲ ಹೊದಿರ್ಲ ಆ ನನ್ ಮಕ್ಕಳ ಚರ್ಮ ಎಬ್ಬುರ್ಲ” ಎಂದು ಹಾಡಿದ್ದೇವೆ ಹೌದು. ಜೊತೆಗೆ ನಾವು ಕಟ್ಟುತ್ತೇವೆ, ನಾವು ಕಟ್ಟುತ್ತೇವೆ  ಹಾಡನ್ನು ಸಹ ಹಾಡುತ್ತೇವೆ. ನಮ್ಮದು ಸಾಂಸ್ಕೃತಿಕ ಪ್ರತರೋಧ ಎಂದರು.

ದಲಿತರ ತಮಟನೆಯನ್ನು ಜನ ಕೀಳೆಂದು ತಿಳಿದಿದ್ದರು. ಅದನ್ನೆ ನಮ್ಮ ಹೋರಾಟದ ಅಸ್ತ್ರ ಮಾಡಿಕೊಂಡಿದ್ದೇವೆ. ಜಂಬೆ ಎನ್ನುವುದು ಆಫ್ರಿಕದಲ್ಲಿ ಹುಟ್ಟಿತು. ಅದಕ್ಕೂ ನಮಗೂ ಡಿಎನ್‌ಎ ಸಂಬಂಧವಿದೆ ಮತ್ತು ಜಂಬೆ ಇಂದು ವಿಶ್ವವ್ಯಾಪಿಯಾಗಿದೆ. ಈ ಸಾಂಸ್ಕೃತಿಕ ಆಯುಧಗಳ ಮೂಲಕ ಹೊಸ ಪ್ರತಿರೋಧ ಚಳವಳಿ ಕಟ್ಟುತ್ತೇವೆ. ಏಕೆಂದರೆ ಡಿಎಸ್‌ಎಸ್‌ ಎಂಬುದು ಒಂದು ಪಕ್ಷವಲ್ಲ, ಬದಲಿಗೆ ದಲಿತರ ಶಕ್ತಿ ಎಂದರು.

ಇದನ್ನೂ ಓದಿ; “ದಸಂಸ ಹುಟ್ಟಿದ್ದೇ ಒಂದು ಸಾಂಸ್ಕೃತಿಕ ಚಳವಳಿಯಾಗಿ; ಸಂದರ್ಭ ಐಕ್ಯತೆಗೆ ಕರೆಕೊಟ್ಟಿದೆ”

ನಾವೆಲ್ಲವರೂ ವಿಶ್ವಮಾನವರು, ನಾವೆಲ್ಲ ಒಂದೇ. ಮೂಲನಿವಾಸಿಗಳ ಮೇಲಿನ ದಮನ ದೌರ್ಜನ್ಯವನ್ನು ಒಟ್ಟಾಗಿ ಎದುರಿಸುತ್ತೇವೆ. ಇದು ಪೇಶ್ವೆ ಭಾರತವಲ್ಲ, ಇದು ಸಂವಿಧಾನ ಭಾರತ. ದೌರ್ಜನ್ಯ ನಡೆಸುವವರ ಡಿಎನ್‌ಎ ಚೆಕ್ ಮಾಡಿದರೆ ನಮಗೆ ಸತ್ಯ ತಿಳಿಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಎಲ್ಲಾ ದಲಿತ ಸಂಘರ್ಷ ಸಮತಿಗಳೂ ಒಟ್ಟುಗೂಡಿದ್ದ ಐತಿಹಾಸಿಕ ದಲಿತ ಸಂಘಟನೆಗಳ ಐಕ್ಯತೆಗೆ ಸಜ್ಜಾಗಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಮಾ ಅಂಬೇಡ್ಕರ್‌ರವರು ಆಗಮಿಸಿದ್ದಾರೆ. ಕಾರ್ಯಕ್ರಮದ ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: ದಲಿತ ಸಂಘಟನೆಗಳ ಐಕ್ಯತೆ ಕುರಿತು ಎದ್ದಿರುವ ಪ್ರಶ್ನೆಗಳ ಸುತ್ತ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...