Homeಮುಖಪುಟಮೊರ್ಬಿಗೆ ಭೇಟಿಗೆ 30 ಕೋಟಿ ರೂ ಖರ್ಚು ಟ್ವೀಟ್: ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಬಂಧನ

ಮೊರ್ಬಿಗೆ ಭೇಟಿಗೆ 30 ಕೋಟಿ ರೂ ಖರ್ಚು ಟ್ವೀಟ್: ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಬಂಧನ

- Advertisement -
- Advertisement -

ಗುಜರಾತ್‌ ತೂಗು ಸೇತುವೆ ದುರಂತದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೆಲವು ಗಂಟೆಗಳ ಕಾಲ ಮೊರ್ಬಿಗೆ ಭೇಟಿ ನೀಡಲು 30 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ನಾಯಕ ಸಾಕೇತ್‌ ಗೋಖಲೆ ಅವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.

“ಈ ಕುರಿತು ಆರ್‌ಟಿಐ ಅಡಿ ಮಾಹಿತಿ ಬಹಿರಂಗವಾಗಿದೆ” ಎಂದು ಗೋಖಲೆ ಭಾನುವಾರ ಟ್ವೀಟ್ ಮಾಡಿದ್ದರು.

130ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಇತ್ತೀಚಿನ ಸೇತುವೆ ಕುಸಿತದ ದುರಂತದ ನಂತರ ಪ್ರಧಾನಿ ಮೋದಿಯವರು ಅಕ್ಟೋಬರ್ 30ರಂದು ಗುಜರಾತ್ ರಾಜ್ಯದ ಮೊರ್ಬಿ ನಗರಕ್ಕೆ ಭೇಟಿ ನೀಡಿದ್ದರು. ಅದಕ್ಕಾಗಿ 30 ಕೋಟಿ ರೂಪಾಯಿ ವೆಚ್ಚವಾಗಿದೆ. ಅದರಲ್ಲಿ 5.5 ಕೋಟಿ ರೂಪಾಯಿಗಳು ‘ಸ್ವಾಗತ, ಕಾರ್ಯಕ್ರಮ ನಿರ್ವಹಣೆ ಮತ್ತು ಫೋಟೋಗ್ರಫಿ’ಗೆ ಖರ್ಚಾಗಿದೆ ಎಂದು ಗೋಖಲೆ ದೂರಿದ್ದರು.

ಮೋರ್ಬಿ ದುರಂತದ 135 ಸಂತ್ರಸ್ತರಿಗೆ ತಲಾ 4 ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. ಆದರೆ ಪ್ರಧಾನ ಮೋದಿಯವರ ಭೇಟಿಗೆ ಹೆಚ್ಚಿನ ಖರ್ಚಾಗಿದೆ ಎಂದು ಹೋಲಿಕೆ ಮಾಡಿದ್ದ ಅವರು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು.

“ಮೋರ್ಬಿಗೆ ಮೋದಿಯವರ ಕೆಲವು ಗಂಟೆಗಳ ಭೇಟಿಗೆ ₹ 30 ಕೋಟಿ ವೆಚ್ಚವಾಗಿದೆ ಎಂದು ಆರ್‌ಟಿಐ ಬಹಿರಂಗಪಡಿಸುತ್ತದೆ. ಇದರಲ್ಲಿ ₹ 5.5 ಕೋಟಿ ಕೇವಲ ‘ಸ್ವಾಗತ, ಈವೆಂಟ್ ಮ್ಯಾನೇಜ್‌ಮೆಂಟ್ ಮತ್ತು ಫೋಟೋಗ್ರಫಿ’ಗಾಗಿ ಖರ್ಚಾಗಿದೆ” ಎಂದು ಗೋಖಲೆ ಟ್ವೀಟ್‌ ಮಾಡಿದ್ದು, ಪತ್ರಿಕಾ ತುಣುಕುಗಳನ್ನು ಲಗತ್ತಿಸಿದ್ದರು.

“ಮೃತಪಟ್ಟ 135 ಸಂತ್ರಸ್ತರಿಗೆ ತಲಾ ₹ 4 ಲಕ್ಷ ಪರಿಹಾರ, ಅಂದರೆ ₹ 5 ಕೋಟಿ ಸಿಕ್ಕಿದೆ. ಕೇವಲ ಮೋದಿಯವರ ಈವೆಂಟ್ ಮ್ಯಾನೇಜ್ಮೆಂಟ್ ಮತ್ತು ಪಬ್ಲಿಕ್‌ ಪಿಆರ್‌‌ ಕೆಲಸಕ್ಕಾಗಿ 135 ಜನರ ಜೀವನಕ್ಕಿಂತ ಹೆಚ್ಚು ವೆಚ್ಚ ಮಾಡಲಾಗಿದೆ” ಎಂದು ಅವರು ಆರೋಪಿಸಿದ್ದರು.

ಈ ಕುರಿತು ಯಾವುದೇ ಆರ್‌ಟಿಐ ಮಾಹಿತಿಯನ್ನು ನೀಡಲಾಗಿಲ್ಲ. ಈ ಸುದ್ದಿಯು ಸುಳ್ಳು ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ಟ್ವೀಟ್ ಮಾಡಿತ್ತು.

“ಈ ಪ್ರತಿಪಾದನೆ ನಕಲಿಯಾಗಿದೆ. ಅಂತಹ ಯಾವುದೇ ಆರ್‌ಟಿಐ ಪ್ರತಿಕ್ರಿಯೆಯನ್ನು ನೀಡಲಾಗಿಲ್ಲ” ಎಂದು ಪಿಐಬಿ ಸ್ಪಷ್ಟಪಡಿಸಿತ್ತು. ಆದರೆ ನಿಜಕ್ಕೂ ಎಷ್ಟು ಹಣ ಖರ್ಚಾಗಿದೆ ಎಂಬುದನ್ನು ಸ್ಪಷ್ಟಪಡಿಸಲಾಗಿಲ್ಲ.

ಟ್ವೀಟ್ ಹಿನ್ನೆಲೆಯಲ್ಲಿ ಗೋಖಲೆಯವರ ಬಂಧನವಾಗಿದೆ.

ಸಾಕೇತ್ ಗೋಖಲೆ ಅವರು ಸೋಮವಾರ ರಾತ್ರಿ ನವದೆಹಲಿಯಿಂದ ರಾಜಸ್ಥಾನದ ಜೈಪುರಕ್ಕೆ ವಿಮಾನದಲ್ಲಿ ತೆರಳಿದ್ದರು. ಅಲ್ಲಿಂದ ಅವರನ್ನು ಗುಜರಾತ್ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಟಿಎಂಸಿಯ ಹಿರಿಯ ನಾಯಕ ಡೆರೆಕ್ ಒ’ಬ್ರಿಯಾನ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...