Homeಮುಖಪುಟರಾಜ್ಯಸಭೆಗೆ ನಾಮನಿರ್ದೇಶನಗೊಂಡ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್

ರಾಜ್ಯಸಭೆಗೆ ನಾಮನಿರ್ದೇಶನಗೊಂಡ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್

- Advertisement -
- Advertisement -

ಜನವರಿ 19ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರನ್ನು ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ಅಭ್ಯರ್ಥಿಯನ್ನಾಗಿ ನಾಮನಿರ್ದೇಶನ ಮಾಡಿದೆ. ಪಕ್ಷವು ಸಂಜಯ್ ಸಿಂಗ್ ಮತ್ತು ಎನ್‌ಡಿ ಗುಪ್ತಾ ಅವರನ್ನು ಎರಡನೇ ಅವಧಿಗೆ ಮರುನಾಮಕರಣ ಮಾಡಿದೆ. ಎಎಪಿಯ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಇಂದು ನಾಮಪತ್ರಗಳನ್ನು ಪ್ರಕಟಿಸಿದೆ.

‘ಡಿಸಿಡಬ್ಲ್ಯೂ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರನ್ನು ಮೊದಲ ಬಾರಿಗೆ ನಾಮನಿರ್ದೇಶನ ಮಾಡಲಾಗಿದೆ. ಸಂಜಯ್ ಸಿಂಗ್ ಮತ್ತು ಎನ್‌ಡಿ ಗುಪ್ತಾ ಅವರ ಎರಡನೇ ಅವಧಿಗೆ ರಾಜ್ಯಸಭಾ ಸದಸ್ಯರಾಗಿ ಮುಂದುವರಿಸಲು ಪಿಎಸಿ ನಿರ್ಧರಿಸಿದೆ’ ಎಂದು ಪಕ್ಷ ಹೇಳಿದೆ.

ದೆಹಲಿ ನ್ಯಾಯಾಲಯವು ಸಂಜಯ್ ಸಿಂಗ್ ಅವರ ಮರುನಾಮಕರಣ ದಾಖಲೆಗಳಿಗೆ ಜೈಲಿನಿಂದಲೇ ಸಹಿ ಹಾಕಲು ಅನುಮತಿ ನೀಡಿದೆ. ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಎಎಪಿ ನಾಯಕನನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

ಎಎಪಿಯಿಂದ ರಾಜ್ಯಸಭಾ ಸದಸ್ಯರಾಗಿದ್ದ ಸುಶೀಲ್ ಕುಮಾರ್ ಗುಪ್ತಾ ಅವರ ಅಧಿಕಾರಾವಧಿ ಇದೇ ತಿಂಗಳ 27ಕ್ಕೆ ಕೊನೆಗೊಳ್ಳಲಿದೆ. ಆ ಸ್ಥಾನಕ್ಕೆ ಸ್ವಾತಿ ಮಲಿವಾಲ್ ಅವರನ್ನು ಕಳುಹಿಸಲು ಎಎಪಿ ನಿರ್ಧರಿಸಿದೆ. ಈ ವರ್ಷದ ಕೊನೆಯಲ್ಲಿ ನಡೆಯುವ ಹರ್ಯಾಣದ ಚುನಾವಣೆಯಲ್ಲಿ ಗುಪ್ತಾ ಸ್ಪರ್ಧಿಸಲು ಬಯಸಿದ್ದು, ಚುನಾವಣೆ ಕ್ಯಾಂಪೇನ್‌ನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಆಕಾಂಕ್ಷೆಯನ್ನು ಅವರು ತಿಳಿಸಿದ್ದಾರೆ ಎನ್ನಲಾಗಿದೆ.

ಮೇಲ್ಮನೆಯಲ್ಲಿ ಎಎಪಿಯ 10 ಸದಸ್ಯರು:

ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ರಾಘವ್ ಚಡ್ಡಾ ಸೇರಿದಂತೆ ಆಮ್ ಆದ್ಮಿ ಪಕ್ಷವು ಪ್ರಸ್ತುತ ಮೇಲ್ಮನೆಯಲ್ಲಿ 10 ಸದಸ್ಯರನ್ನು ಹೊಂದಿದೆ. ಸಂಪೂರ್ಣ ಬಹುತದೊಂದಿಗೆ ಪಂಜಾಬ್‌ನಲ್ಲಿ ಸರ್ಕಾರ ರಚಿಸಿದ ನಂತರ ರಾಜ್ಯಸಭೆಯಲ್ಲಿ ಎಎಪಿ ಬಲ ಏರಿಕೆ ಕಂಡಿದೆ. ದೆಹಲಿಯ ಮೂರು ರಾಜ್ಯಸಭಾ ಸ್ಥಾನಗಳಿಗೆ ನಾಮನಿರ್ದೇಶನವು ಜನವರಿ 3 ರಂದು ಪ್ರಾರಂಭವಾಗಿದೆ. ಜ.19 ರಂದು ಚುನಾವಣೆ ನಡೆಯಲಿದೆ. ಎಎಪಿ ದೆಹಲಿ ವಿಧಾನಸಭೆಯಲ್ಲಿ 70 ಸ್ಥಾನಗಳಲ್ಲಿ 62 ಸ್ಥಾನಗಳನ್ನು ಎಎಪಿ ಹೊಂದಿರುವುದರಿಂದ, ಮೂರು ಜನ ನಾಮನಿರ್ದೇಶಿತರು ಅವಿರೋಧವಾಗಿ ಆಯ್ಕೆಯಾಗುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...