Homeಮುಖಪುಟಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಫೆನ್ಸಿಂಗ್; ಸ್ವೀಕಾರಾರ್ಹವಲ್ಲ ಎಂದ ಮಿಜೋರಾಂ ಸಿಎಂ

ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಫೆನ್ಸಿಂಗ್; ಸ್ವೀಕಾರಾರ್ಹವಲ್ಲ ಎಂದ ಮಿಜೋರಾಂ ಸಿಎಂ

- Advertisement -
- Advertisement -

ಇತ್ತೀಚೆಗೆ ಆಯ್ಕೆಯಾಗಿರುವ ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮ ಅವರು ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಫೆನ್ಸಿಂಗ್ (ಬೇಲಿ) ಹಾಕುವುದು ‘ಸ್ವೀಕಾರಾರ್ಹವಲ್ಲ’ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ಹೇಳಿದ್ದಾರೆ.

ಈಶಾನ್ಯ ರಾಜ್ಯಗಳಲ್ಲಿರುವ ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ 40 ವರ್ಷ ಹಳೆಯ ಮುಕ್ತ ಓಡಾಟ ಆಡಳಿತವನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದ ಎರಡು ದಿನಗಳ ನಂತರ ಅವರು ವಿದೇಶಾಂಗ ಸಚಿವರು ಹಾಗೂ ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿದ್ದಾರೆ.

ಬ್ರಿಟಿಷರು ಭಾರತದಿಂದ ಬರ್ಮಾವನ್ನು ಬೇರ್ಪಡಿಸುವ ಮೂಲಕ ಮಿಜೋಸ್ ಅನ್ನು ಪ್ರತ್ಯೇಕಿಸಿದರು. ಪ್ರಾಚೀನ ಇತಿಹಾಸವಿರುವ ಮಿಜೋ ಜನಾಂಗದ ಜನರ ಭೂಮಿಯನ್ನು ಎರಡು ಭಾಗಗಳಾಗಿ ಅವರು ವಿಂಗಡಿಸಿದರು. ಅದಕ್ಕಾಗಿಯೇ ನಾವು ಗಡಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಬದಲಿಗೆ, ನಾವು ಯಾವಾಗಲೂ ಒಂದೇ ಆಡಳಿತದ ಅಡಿಯಲ್ಲಿ ಒಂದೇ ರಾಷ್ಟ್ರವಾಗಬೇಕೆಂದು ಕನಸು ಕಾಣುತ್ತೇವೆ ಎಂದು ಲಾಲ್ದುಹೋಮ ಬುಧವಾರ (ಜನವರಿ 3) ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಜೈಶಂಕರ್ ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ.

ಅಂತಹ ಫೆನ್ಸಿಂಗ್ ಮಿಜೋಸ್ ಜನಾಂಗವನ್ನು ವಿಭಜಿಸುತ್ತದೆ ಮತ್ತು ಬ್ರಿಟಿಷರು ರಚಿಸಿದ ಗಡಿಯನ್ನು ಅನುಮೋದಿಸುತ್ತದೆ. ಇದು ನಮಗೆ ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿಯಲ್ಲೂ ಲಾಲ್ದುಹೋಮ ಇದೇ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

1970 ರ ದಶಕದಲ್ಲಿ ಜಾರಿಗೆ ಬಂದ ಮುಕ್ತ ಓಡಾಟ ಆಡಳಿತವು ಭಾರತ ಮತ್ತು ಮ್ಯಾನ್ಮಾರ್ನಿಂದ ಗಡಿಯ ಸಮೀಪ ವಾಸಿಸುವ ಜನರು, ಯಾವುದೇ ವೀಸಾ ಅಗತ್ಯವಿಲ್ಲದೇ 16 ಕಿಮೀ ವರೆಗೆ ಎರಡೂ ದೇಶಗಳಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.

ಈ ಹಿಂದೆ, ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ರಾಜ್ಯದಲ್ಲಿನ ಮೈತೇಯಿ ಮತ್ತು ಕುಕಿ-ಜೋ ಸಮುದಾಯಗಳ ನಡುವಿನ ಜನಾಂಗೀಯ ಸಂಘರ್ಷದ ಹಿನ್ನೆಲೆಯಲ್ಲಿ ಈ ಆಡಳಿತವನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಕೇಳಿದ್ದರು. ಕುಕಿಗಳು ಮಿಜೋರಾಂನ ಮಿಜೋಸ್ ಮತ್ತು ಮ್ಯಾನ್ಮಾರ್ನ ಚಿನ್ಸ್‌ಗಳೊಂದಿಗೆ ಜನಾಂಗೀಯ ಸಂಬಂಧಗಳನ್ನು ಹಂಚಿಕೊಂಡಿದ್ದಾರೆ. ಪ್ರತ್ಯೇಕ ಆಡಳಿತದ ಅಡಿಯಲ್ಲಿ ಏಕೀಕರಣಗೊಳ್ಳಲು ಕೇಳುತ್ತಿದ್ದಾರೆ. ಅಂತಹ ಏಕೀಕರಣವು ಲಾಲ್ದುಹೋಮ ಮತ್ತು ಅವರ ಝೋರಾಮ್ ಪೀಪಲ್ಸ್ ಪಾರ್ಟಿಯು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು.

ಇದನ್ನೂ ಓದಿ; ರಾಜ್ಯಸಭೆ ನಾಮನಿರ್ದೇಶನಕ್ಕೆ ಸಹಿ ಹಾಕಲು ಸಂಜಯ್ ಸಿಂಗ್‌ಗೆ ಕೋರ್ಟ್‌ ಅನುಮತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...