Homeಮುಖಪುಟಉತ್ತರ ಪ್ರದೇಶ: ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ: ತಂದೆಯನ್ನು ಹೊಡೆಯದಂತೆ ಬೇಡಿಕೊಂಡ ಮಗು

ಉತ್ತರ ಪ್ರದೇಶ: ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ: ತಂದೆಯನ್ನು ಹೊಡೆಯದಂತೆ ಬೇಡಿಕೊಂಡ ಮಗು

- Advertisement -
- Advertisement -

ಉತ್ತರ ಪ್ರದೇಶದ ಕಾನ್ಪುರದಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಗುಂಪೊಂದು ಬೀದಿಯಲ್ಲಿ ಮೆರವಣಿಗೆ ಮಾಡುತ್ತಾ, “ಜೈ ಶ್ರೀ ರಾಮ್” ಘೋಷಣೆಗಳನ್ನು ಕೂಗಿಕೊಂಡು ಆತನನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.

ಸ್ಥಳೀಯರು ಚಿತ್ರಿಸಿರುವ ವಿಡಿಯೊದಲ್ಲಿ ಹಲ್ಲೆಗೊಳಗಾದ ವ್ಯಕ್ತಿಯ ಪುಟ್ಟ ಮಗು ದಾಳಿಕೋರರ ಬಳಿ ತಂದೆಯನ್ನು ಬಿಟ್ಟು ಬಿಡುವಂತೆ ಕೇಳಿಕೊಳ್ಳುತ್ತಿರುವ ಮನ ಮಿಡಿಯುವ ದೃಶ್ಯಗಳಿವೆ. ಜೊತೆಗೆ ಪೊಲೀಸರ ವಶದಲ್ಲಿದ್ದಾಗಲೂ ಆ ವ್ಯಕ್ತಿಗೆ ಹೊಡೆದಿರುವ ದೃಶ್ಯಗಳು ಕಾಣಸಿಗುತ್ತವೆ.

ಬಲಪಂಥೀಯ ಗುಂಪು ಬಜರಂಗದಳವು ಸಭೆ ನಡೆಸಿದ ಸ್ಥಳದಿಂದ 500 ಮೀಟರ್ ದೂರದಲ್ಲಿ ಈ ಘಟನೆ ನಡೆದಿದ್ದು, ಆ ಪ್ರದೇಶದಲ್ಲಿ ಮುಸ್ಲಿಮರು ತಮ್ಮ ಪ್ರದೇಶದಲ್ಲಿನ ಹಿಂದೂ ಯುವತಿಯರನ್ನು ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಬಜರಂಗದಳದ ಸಭೆಯ ನಂತರ ಹಲ್ಲೆ ನಡೆದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಯುಪಿ ಚುನಾವಣಾ ಹಿಂಸಾಚಾರ: ಐಎಎಸ್‌ ಅಧಿಕಾರಿಯಿಂದ ಪತ್ರಕರ್ತನ ಮೇಲೆ ಹಲ್ಲೆ

ಕಾನ್ಪುರ ಪೊಲೀಸರು ಹಲ್ಲೆಗೊಳಗಾದ ವ್ಯಕ್ತಿಯ ದೂರಿನ ಆಧಾರದ ಮೇಲೆ ಸ್ಥಳೀಯವಾಗಿ ಮದುವೆ ಬ್ಯಾಂಡ್ ನಡೆಸುತ್ತಿರುವ ಸ್ಥಳೀಯ, ಆತನ ಮಗ ಮತ್ತು ಸುಮಾರು 10 ಅಪರಿಚಿತ ವ್ಯಕ್ತಿಗಳ ವಿರುದ್ಧ ಗಲಭೆ ಪ್ರಕರಣ ದಾಖಲಿಸಿದ್ದಾರೆ. ಆದರೆ, ಬಜರಂಗದಳದ ವ್ಯಕ್ತಿಗಳು ವಿರುದ್ಧ ಪ್ರಕರಣ ದಾಖಲಾಗಿದೆಯೇ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

“ನಾನು ಮಧ್ಯಾಹ್ನ 3 ಗಂಟೆ ಸುಮಾರಿಗೆ ನನ್ನ ಇ-ರಿಕ್ಷಾವನ್ನು ಓಡಿಸುತ್ತಿದ್ದೆ, ಆಗ ಆರೋಪಿಗಳು ನನ್ನ ಮತ್ತು ನನ್ನ ಕುಟುಂಬವನ್ನು ಕೊಲ್ಲುವ ಬೆದರಿಕೆಯೊಡ್ಡಲು ಮತ್ತು ನಿಂದಿಸಲು ಆರಂಭಿಸಿದರು. ಪೋಲಿಸರಿಂದಾಗಿ ನಾನು ರಕ್ಷಿಸಲ್ಪಟ್ಟಿದ್ದೇನೆ” ಎಂದು ಹಲ್ಲೆಗೊಳಗಾದ ವ್ಯಕ್ತಿ ದೂರು ನೀಡಿದ್ದಾರೆ.

ಹಲ್ಲೆಗೊಳಗಾದ ವ್ಯಕ್ತಿ ಮತ್ತು ಆವರ ಹಿಂದೂ ನೆರೆಹೊರೆಯವರೊಂದಿಗೆ ಕಾನೂನು ಸಮಸ್ಯೆಯಿದ್ದು, ಎರಡು ಕುಟುಂಬಗಳು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಜುಲೈನಲ್ಲಿ ಪರಸ್ಪರರ ವಿರುದ್ಧ ಪ್ರಕರಣಗಳನ್ನು ದಾಖಲಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಸ್ಲಿಂ ಸಮುದಾಯ ಮೊದಲು ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆಯ ಎಫ್‌ಐಆರ್ ದಾಖಲಿಸಿದ್ದರು. ನಂತರ ಹಿಂದೂ ಸಮುದಾಯದವರು ದೂರು ದಾಖಲಿಸಿದ್ದಾರೆ. ಮೂಲಗಳು ಹೇಳುವಂತೆ ಬಜರಂಗದಳವು ಇತ್ತೀಚೆಗೆ ಈ ವಿವಾದದಲ್ಲಿ ಭಾಗಿಯಾಗಿ, ಮುಸ್ಲಿಂ ಕುಟುಂಬದ ವಿರುದ್ಧ ಬಲವಂತದ ಮತಾಂತರದ ಆರೋಪಗಳನ್ನು ಮಾಡುತ್ತಿದ್ದರು ಎಂದು ತಿಳಿಸಿವೆ.


ಇದನ್ನೂ ಓದಿ: ಉತ್ತರ ಪ್ರದೇಶ: ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ, ಒಬ್ಬನ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...