Homeಕರ್ನಾಟಕಠಾಣೆಯಲ್ಲಿ ಹುಟ್ಟುಹಬ್ಬ ಆಚರಿಸಿ, ಡಿಐಜಿ ಆದೇಶ ಉಲ್ಲಂಘಿಸಿದ ಪಿಎಸ್‌ಐ!

ಠಾಣೆಯಲ್ಲಿ ಹುಟ್ಟುಹಬ್ಬ ಆಚರಿಸಿ, ಡಿಐಜಿ ಆದೇಶ ಉಲ್ಲಂಘಿಸಿದ ಪಿಎಸ್‌ಐ!

- Advertisement -
- Advertisement -

ಪೊಲೀಸ್‌ ಮಹಾನಿರ್ದೇಶಕರಾದ ಪ್ರವೀಣ್ ಸೂದ್‌ ಅವರು ಇತ್ತೀಚೆಗಷ್ಟೇ, ಸುತ್ತೋಲೆಯೊಂದನ್ನು ಹೊರಡಿಸಿ ಪೊಲೀಸ್ ಕಚೇರಿಗಳು ಸಾರ್ವಜನಿಕ ಕಚೇರಿಗಳಾಗಿರುವುದರಿಂದ ಅಲ್ಲಿ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವದಂತಹ ಖಾಸಗಿ ಕಾರ್ಯಕ್ರಮಗಳನ್ನು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದರು. ಆದರೆ ಹಾವೇರಿಯ ಬಂಕಾಪುರ ಠಾಣೆಯ ಪಿಎಸ್‌ಐ ಸಂತೋಷ ಪಾಟೀಲ ಅವರು ಡಿಜಿಪಿಯ ಆದೇಶ ಉಲ್ಲಂಘಿಸಿ ಠಾಣೆಯಲ್ಲೇ ಸಾರ್ವಜನಿಕರೊಂದಿಗೆ ಹುಟ್ಟು ಹಬ್ಬ ಆಚರಿಸಿದ್ದಾರೆ. ಈ ಮೂಲಕ ಸುತ್ತೋಲೆ ಹೊರಡಿಸಿ ಎರಡು ವಾರದ ಒಳಗೆ ಆದೇಶದ ಉಲ್ಲಂಘನೆ ಆಗಿದೆ.

“ಅಪರಾಧ ಹಿನ್ನಲೆಯ ಹಾಗೂ ಸಮಾಜ ಘಾತಕ ಶಕ್ತಿಗಳು ನಡೆಸುವ ಕಾರ್ಯಕ್ರಮದಲ್ಲಿ ಪೊಲೀಸರು ಭಾಗವಹಿಸಬಾರದು. ಯಾವುದೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ಕಾರ್ಯಕ್ರಮ ಹಮ್ಮಿಕೊಂಡಿರುವ ವ್ಯಕ್ತಿ ಮತ್ತು ಸಂಘ ಸಂಸ್ಥೆಯ ಪೂರ್ವಾಪರ ಪರಿಶೀಲನೆ ಮಾಡಿ ಅದರಲ್ಲಿ ಭಾಗವಹಸುವುದು ಸರಿಯೆ ಎಂದು ನಿರ್ಧರಿಸಬೇಕು” ಎಂದು ಡಿಜಿ & ಐಜಿಪಿ ಪ್ರವೀಣ್ ಸೂದ್‌ ಆಗಸ್ಟ್‌ 2 ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ಹೇಳಿದ್ದರು.

ಇದನ್ನೂ ಓದಿ: ‘ಸಮಾಜ ಘಾತಕ ಶಕ್ತಿಗಳ ಕಾರ್ಯಕ್ರಮದಲ್ಲಿ ಪೊಲೀಸರು’: ಸುತ್ತೋಲೆ ಹೊರಡಿಸಿದ ಡಿಜಿ & ಐಜಿಪಿ ಪ್ರವೀಣ್ ಸೂದ್‌

ಠಾಣೆಯಲ್ಲೆ ಸಾರ್ವಜನಿಕರೊಂದಿಗೆ ಹುಟ್ಟುಹಬ್ಬ ಆಚರಿಸಿದ್ದ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ನಂತರ ಇದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಹಾವೇರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಅವರು ಸಂತೋಷ್‌ ಪಾಟೀಲ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ಯಾವುದೆ ಪೊಲೀಸ್ ಅಧಿಕಾರಿಗಳು ಅಪರಾಧ ಹಿನ್ನಲೆಯ, ಸಮಾಜ ಘಾತಕ ಶಕ್ತಿಗಳ ಹಾಗೂ ರೌಡಿ ಶೀಟರ್‌ಗಳೊಂದಿಗೆ ಯಾವುದೆ ಸಂಬಂಧ ಹೊಂದುವಂತಿಲ್ಲ ಎಂಬುವುದನ್ನು ನೆನಪಿಸಿದ್ದ ಸುತ್ತೋಲೆ, “ಪೊಲೀಸ್ ಕಚೇರಿಗಳು ಸಾರ್ವಜನಿಕ ಕಚೇರಿಗಳಾಗಿರುವುದರಿಂದ ಅಲ್ಲಿ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವದಂತಹ ಖಾಸಗಿ ಕಾರ್ಯಕ್ರಮಗಳನ್ನು ನಡೆಯದಂತೆ ಎಚ್ಚರಿಕೆ ವಹಿಸಬೇಕು” ಎಂದೂ ಹೇಳಿತ್ತು.

ಪಿಎಸ್‌ಐ ಅಮಾನತ್ತಿನ ಬಗ್ಗೆ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿರುವ ಕರ್ನಾಟಕ ರಾಷ್ಟ್ರರಕ್ಷಣ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ, “DG & IGP ಆದೇಶವನ್ನೇ ಧಿಕ್ಕರಿಸುವ ದುರಹಂಕಾರ ಪೊಲೀಸ್ ಇಲಾಖೆಯಲ್ಲಿದೆ. ಆದರೆ ಜನತೆ ಇನ್ನು ಮೇಲೆ ಸ್ಥಳೀಯ ಭ್ರಷ್ಟ ಮತ್ತು ದುರಹಂಕಾರಿ ಪೊಲೀಸರನ್ನು ಪ್ರಶ್ನಿಸುವುದಿಲ್ಲ. ಅವರ ಮೇಲಧಿಕಾರಿಗಳನ್ನು ಪ್ರಶ್ನಿಸುತ್ತಾರೆ. ಇಲಾಖೆಯ ಆದೇಶವನ್ನು ಮೊನ್ನೆ ಒಬ್ಬ ಅಧಿಕಾರಿ ಉಲ್ಲಂಘಿಸಿದ. ಇಂದು ಅಮಾನತು ಆಗಿ ಮನೆಯಲ್ಲಿ ಇದ್ದಾನೆ. ಕಾನೂನು ಭಂಜಕ ಪೊಲೀಸ್ ಅಧಿಕಾರಿಗಳಿಗೆ ಇದು ಎಚ್ಚರಿಕೆ. ಕಾನೂನು ಪಾಲಿಸಿ; ಕರ್ತವ್ಯ ನಿಭಾಯಿಸಿ. ಖಾಕಿ ಬಟ್ಟೆ ಹಾಕಿಕೊಂಡ ಮಾತ್ರಕ್ಕೆ ಪೊಲೀಸರು ಸಮಾಜೋದ್ಧಾರಕರಲ್ಲ. ಸ್ವಾಭಿಮಾನಿ ಜನತೆ ಪೊಲೀಸರನ್ನು ಸನ್ಮಾನಿಸುವ, ಹೊಗಳುವ, ಅವರನ್ನು ತಲೆಯ ಮೇಲಿಟ್ಟುಕೊಂಡು ಮೆರೆಸುವ ಗುಲಾಮಿ ಮನಸ್ಥಿತಿಯನ್ನು ತೊರೆಯಬೇಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೇರಳ: ಮಹಿಳೆಯರ ಸುರಕ್ಷತೆಗಾಗಿ ಪಿಂಕ್ ಪ್ರೊಟೆಕ್ಷನ್ ಯೋಜನೆ ಆರಂಭ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...