Homeಅಂತರಾಷ್ಟ್ರೀಯಕಾಬೂಲ್ ಪ್ರವೇಶಿಸಿದ ತಾಲಿಬಾನ್: ರಾಜೀನಾಮೆಯತ್ತ ಅಫ್ಘಾನ್‌ ಅಧ್ಯಕ್ಷ ಅಶ್ರಫ್ ಘನಿ

ಕಾಬೂಲ್ ಪ್ರವೇಶಿಸಿದ ತಾಲಿಬಾನ್: ರಾಜೀನಾಮೆಯತ್ತ ಅಫ್ಘಾನ್‌ ಅಧ್ಯಕ್ಷ ಅಶ್ರಫ್ ಘನಿ

- Advertisement -
- Advertisement -

ತಾಲಿಬಾನ್ ಭಯೋತ್ಪಾದಕರು ಇಂದು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ಗೆ ಪ್ರವೇಶಿಸಿದ್ದಾರೆ. ಹಾಗಾಗಿ ಅಫ್ಘಾನ್‌ ಅಧ್ಯಕ್ಷ ಅಶ್ರಫ್ ಘನಿ ಅವರು ರಾಜೀನಾಮೆ ನೀಡುವ ಸಾಧ್ಯತೆಗಳು ದಟ್ಟವಾಗಿವೆ. ಯಾವುದೇ ಹಿಂಸಾಚಾರಕ್ಕೆ ಆಸ್ಪದ ಕೊಡದಂತೆ ಅಧಿಕಾರ ಹಸ್ತಾಂತರಕ್ಕೆ ಒಪ್ಪಿಕೊಳ್ಳಲಾಗಿದೆ ಎಂದು ಹಂಗಾಮಿ ಆಂತರಿಕ ವ್ಯವಹಾರಗಳ ಸಚಿವ ಅಬ್ದುಲ್ ಸತ್ತಾರ್ ಮಿರ್ಜಕವಾಲ್ ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ತಾಲಿಬಾನ್‌ ಬಂಡುಕೋರರು “ಎಲ್ಲಾ ಕಡೆಗಳಿಂದಲೂ” ರಾಜಧಾನಿಯನ್ನು ಪ್ರವೇಶಿಸುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಹೋರಾಟಗಳು ವರದಿಯಾಗಿಲ್ಲ ಎಂದು ಆಂತರಿಕ ಸಚಿವಾಯಲದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಬೂಲ್‌ನ ಶಾಂತಿಯುತ ಶರಣಾಗತಿಗಾಗಿ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

20 ವರ್ಷಗಳ ಹಿಂದೆ ಅಮೆರಿಕಾವು ಕಾಬೂನ್‌ನಿಂದ ತಾಲಿಬಾನ್‌ಗಳನ್ನು ಹೊರಗಟ್ಟಿತ್ತು. ಅದಾದ ನಂತರ ಕಳೆದ ತಿಂಗಳು ಅಮೆರಿಕಾ ವಾಪಸ್ ಹೊರಟಿದೆ. ಈಗ ಸೆಪ್ಟೆಂಬರ್‌ 11ರ ದಾಳಿಯೊಂದಿಗೆ ತಾಲಿಬಾನ್‌ಗಳು ಕಾಬೂನ್‌ಗೆ ಪ್ರವೇಶಿಸಿದ್ದಾರೆ. ಅವರು ಶಾಂತಿಯುತ ಅಧಿಕಾರ ಹಸ್ತಾಂತರಕ್ಕೆ ಸರ್ಕಾರ ಒಪ್ಪಿಕೊಳ್ಳುವವರೆಗೂ ಕಾಬೂನ್‌ನ ಎಲ್ಲಾ ಪ್ರವೇಶದ್ವಾರಗಳಲ್ಲಿಯೂ ಮುತ್ತಿಗೆ ಹಾಕಲಿದ್ದಾರೆ ಎನ್ನಲಾಗಿದೆ.

ಅಫ್ಘಾನ್‌ ಪರಿಸ್ಥಿತಿಯ ಬಗ್ಗೆ ಸದ್ಯ ಅಧ್ಯಕ್ಷ ಅಶ್ರಫ್ ಘನಿ ಅವರಿಂದ ಯಾವುದೇ ತಕ್ಷಣದ ಮಾಹಿತಿ ದೊರಕಿಲ್ಲ. ಅವರು ಶನಿವಾರ ಸ್ಥಳೀಯ ನಾಯಕರು ಮತ್ತು ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ತುರ್ತು ಸಮಾಲೋಚನೆ ನಡೆಸಿದ್ದಾರೆ. ಅವರು ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಮತ್ತು ತಾಲಿಬಾನ್ ಕಮಾಂಡರ್ ಅಧಿಕಾರ ವಹಿಸಿಕೊಳ್ಳಲು ದಾರಿ ಮಾಡಿಕೊಡಲಿದ್ದಾರೆ ಎಂದು ವರದಿಗಳು ಹೇಳಿವೆ.

“ನಗರದ ಮೇಲೆ ದಾಳಿ ನಡೆಯುವುದಿಲ್ಲ, ಶಾಂತಿಯುತ ಹಸ್ತಾಂತರವನ್ನು ಒಪ್ಪಿಕೊಳ್ಳಲಾಗಿದೆ.” ಪರಿವರ್ತನೆಯ ಆಡಳಿತಕ್ಕೆ ಅಧಿಕಾರವನ್ನು ಹಸ್ತಾಂತರಿಸಲಾಗುವುದು ಎಂದು ಸರ್ಕಾರದ ಹಂಗಾಮಿ ಆಂತರಿಕ ಸಚಿವ ಅಬ್ದುಲ್ ಸತ್ತಾರ್ ಮಿರ್ಜಕವಾಲ್ ಹೇಳಿದ್ದಾರೆ.

ಕಾಬೂಲ್ ಸುತ್ತಮುತ್ತಲಿನ ಹಲವಾರು ಸ್ಥಳಗಳಲ್ಲಿ ಗುಂಡಿನ ಸದ್ದು ಕೇಳಿಬಂದಿದೆ. ಆದರೆ ಭದ್ರತಾ ಪಡೆಗಳು ಮತ್ತು ಅಂತಾರಾಷ್ಟ್ರೀಯ ಪಾಲುದಾರರೊಂದಿಗಿನ ಸಮನ್ವಯದಿಂದ ನಗರದ ಮೇಲೆ ನಿಯಂತ್ರಣ ಹೊಂದಿದೆ ಎಂದು ಅಫ್ಘಾನ್‌ ಅಧ್ಯಕ್ಷೀಯ ಕಚೇರಿ ಟ್ವೀಟ್‌ ಮಾಡಿದೆ.

ಕಾಬೂಲ್‌ನ ಅನೇಕ ಬೀದಿಗಳು ಕಾರುಗಳಿಂದ ತುಂಬಿಹೋಗಿವೆ. ಜನರು ತಮ್ಮ ಸ್ವಂತ ಸ್ಥಳಗಳಿಗೆ ಧಾವಿಸುತ್ತಿದ್ದಾರೆ. ಹಲವರು ವಿಮಾನ ನಿಲ್ದಾಣವನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಕೆಲವು ಜನರು ತಮ್ಮ ಕೀಗಳನ್ನು ಕಾರಿನಲ್ಲಿ ಬಿಟ್ಟು ವಿಮಾನ ನಿಲ್ದಾಣಕ್ಕೆ ನುಗ್ಗಲು ಆರಂಭಿಸಿದ್ದಾರೆ” ಎಂದು ನಿವಾಸಿಯೊಬ್ಬರು ರಾಯಿಟರ್ಸ್‌ಗೆ ಫೋನ್ ಮೂಲಕ ತಿಳಿಸಿದ್ದಾರೆ.

ಸರ್ಕಾರದ ಕೈಯಲ್ಲಿರುವ ಕಾಬೂಲ್‌ ಏರ್‌ಪೋರ್ಟ್‌ಅನ್ನು ಹೊರತು ಪಡಿಸಿದರೆ, ಜನರು ಅಫ್ಘಾನಿಸ್ಥಾನದಿಂದ ಹೊರ ಹೋಗಲು ಇರುವುದು ಒಂದೇ ದಾರಿ, ಅದು ಪಾಕಿಸ್ತಾನಕ್ಕೆ ಅಂಟಿಕೊಂಡಿರುವ ಟೋರ್ಖಾಮ್ ಗಡಿ ಪೋಸ್ಟ್. ಆದರೆ, ಅದನ್ನೂ ಸಹ ತಾಲಿಬಾನ್‌ ವಶಪಡಿಸಿಕೊಂಡಿದೆ.

ಉಳಿದಂತೆ, “ಜಲಾಲಾಬಾದ್‌ನಲ್ಲಿ ಯಾವುದೇ ಘರ್ಷಣೆಗಳು ನಡೆಯುತ್ತಿಲ್ಲ. ಏಕೆಂದರೆ, ಅಲ್ಲಿನ ರಾಜ್ಯಪಾಲರು ತಾಲಿಬಾನ್‌ಗೆ ಶರಣಾಗಿದ್ದಾರೆ.” ಎಂದು ಜಲಾಲಾಬಾದ್ ಮೂಲದ ಅಫ್ಘಾನ್ ಅಧಿಕಾರಿಯೊಬ್ಬರು ರಾಯಿಟರ್ಸ್‌ಗೆ ತಿಳಿಸಿದ್ದಾರೆ. “ಜನರ ಜೀವಗಳನ್ನು ಉಳಿಸಲು ತಾಲಿಬಾನ್‌ಗಳಿಗೆ ಅಧಿಕಾರ ನೀಡುವುದೊಂದೇ ಏಕೈಕ ದಾರಿಯಾಗಿದೆ” ಎಂದು ಅವರು ಹೇಳಿದ್ದಾರೆ.

ಕಳೆದ ತಿಂಗಳು ಯುಎಸ್ ನೇತೃತ್ವದ ಪಡೆಗಳು ಅಫ್ಘಾನ್‌ನಲ್ಲಿದ್ದ ತಮ್ಮ ಉಳಿದ ಸೈನ್ಯದ ಬಹುಭಾಗವನ್ನು ಹಿಂತೆಗೆದುಕೊಂಡವು. ನಂತರ ಅಫ್ಘಾನ್ ಮಿಲಿಟರಿಯ ರಕ್ಷಣೆ ವ್ಯವಸ್ಥೆ ಕುಸಿಯಲಾರಂಭಿಸಿದಂತೆ ಕಾಣತೊಡಗಿತು. ಈ ವೇಳೆಗೆ ತಾಲಿಬಾನ್ ಕಾರ್ಯಾಚರಣೆ ಚುರುಕುಗೊಂಡಿತು.

ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಶನಿವಾರ ಅಫ್ಘಾನ್‌ನ ನಾಗರಿಕರನ್ನು ಸ್ಥಳಾಂತರಿಸಲು ಮತ್ತು ಸೇನಾ ಸಿಬ್ಬಂದಿಗಳ “ಕ್ರಮಬದ್ಧ ಮತ್ತು ಸುರಕ್ಷಿತ” ಮರಳುವಿಕೆಯನ್ನು ಖಚಿತಪಡಿಸಿಕೊಳ್ಳಲು 5,000 ಯುಎಸ್ ಸೈನಿಕರನ್ನು ನಿಯೋಜಿಸಲು ಸೇನೆಗೆ ಅಧಿಕಾರ ನೀಡಿದ್ದಾರೆ. ಹೀಗಾಗಿ, 1,000 ಸೈನಿಕರನ್ನು ನಿಯೋಜಿಸಲಾಗಿದೆ. ಅವರು ಅಫ್ಘಾನ್‌ ಏರ್‌ಪೋರ್ಟ್‌ನಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಯುಎಸ್ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ತಾಲಿಬಾನ್ ಅಫಘಾನ್ ಜನರಿಂದ ಜನಪ್ರಿಯವಾಗಿ ಅಂಗೀಕರಿಸಲ್ಪಟ್ಟಿದೆ. ಅಫ್ಘಾನಿಸ್ತಾನಿಗಳು ಮತ್ತು ವಿದೇಶಿಯರಿಗೆ ಸುರಕ್ಷತೆಯ ಭರವಸೆ ನೀಡಿದೆ. ಅವರ ಜೀವನ, ಆಸ್ತಿ ಮತ್ತು ಗೌರವವನ್ನು ರಕ್ಷಿಸಲಾಗುತ್ತದೆ. ತನ್ನ ಪ್ರೀತಿಯ ರಾಷ್ಟ್ರದಲ್ಲಿ ಶಾಂತಿಯುತ ಮತ್ತು ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲಾಗುತ್ತದೆ. ರಾಜತಾಂತ್ರಿಕರು ಮತ್ತು ಸಹಾಯ ಕಾರ್ಯಕರ್ತರು ಕೂಡ ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ” ಎಂದು ತಾಲಿಬಾನ್‌ ಶನಿವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಆಗಸ್ಟ್ 31 ರೊಳಗೆ ಅಫ್ಘಾನಿಸ್ತಾನದಲ್ಲಿ ಯುಎಸ್ ಮಿಲಿಟರಿ ಕಾರ್ಯಾಚರಣೆಯನ್ನು ಕೊನೆಗೊಳಿಸಲು ಅಮೆರಿಕಾದ ಹಿಂದಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಯೋಜಿಸಿದ್ದರು. ಅದೇ ನಿರ್ಧಾರಕ್ಕೆ ಈಗಿನ ಅಧ್ಯಕ್ಷ ಬೈಡನ್‌ ಕೂಡ ಅಂಟಿಕೊಂಡಿದ್ದಾರೆ. ತಾಲಿಬಾನ್‌ಗಳು ಊಹಿಸಿದ್ದಕ್ಕಿಂತ ವೇಗವಾಗಿ ನಗರವನ್ನು ವಶಪಡಿಸಿಕೊಂಡಿದ್ದಾರೆ. ತನ್ನದೇ ಪ್ರದೇಶವನ್ನು ಹಿಡಿದಿಟ್ಟುಕೊಳ್ಳುವ ಅಥವಾ ರಕ್ಷಿಸಿಕೊಳ್ಳುವುದು ಅಫ್ಘಾನ್ ಸೇನೆಗೆ ಬಿಟ್ಟದ್ದು ಎಂದು ಅಮೆರಿಕಾ ಹೇಳಿದೆ.


ಇದನ್ನೂ ಓದಿ: ಅಫ್ಘಾನ್‌-ಪಾಕಿಸ್ತಾನದ ಪ್ರಮುಖ ಗಡಿ ಕ್ರಾಸಿಂಗ್‌‌‌ ತಾಲಿಬಾನ್ ವಶಕ್ಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...