Homeಅಂತರಾಷ್ಟ್ರೀಯಬಾಯ್ಕಟ್ ಚೀನಾ ಎಂಬ ಮಕ್ಕಳಾಟ: ಪ್ರಪಂಚವನ್ನು ಚೀನಾ ಆವರಿಸುತ್ತಿವುದು ಬಗೆ

ಬಾಯ್ಕಟ್ ಚೀನಾ ಎಂಬ ಮಕ್ಕಳಾಟ: ಪ್ರಪಂಚವನ್ನು ಚೀನಾ ಆವರಿಸುತ್ತಿವುದು ಬಗೆ

- Advertisement -
- Advertisement -

ಈಗ ದೇಶದಲ್ಲಿ ಸದ್ಯಕ್ಕೆ ಚೀನಾ ವಸ್ತುಗಳನ್ನು ಬಹಿಷ್ಕರಿಸಿ, ಬಾಯ್ಕಟ್ ಚೀನಾ, ಚೀನಾ ಮೊಬೈಲ್‌ ಆಪ್‌ಗಳನ್ನು ಅನ್‌ಇನ್ಸ್ಟಾಲ್‌ ಮಾಡಿ ಎಂಬ ಮಾತು ಎಲ್ಲ ಕಡೆಯಿಂದ ಕೇಳ್ತಾ ಇದ್ದಿವಿ. ಆದ್ರೆ ಇದು ವಾಸ್ತವದಲ್ಲಿ ಬರಿ APP ಗಳನ್ನು ಡಿಲೀಟ್‌ ಮಾಡಿ ಚೀನಾ ಕಟ್ಟಿ ಹಾಕಕ್ಕೆ ಸಾಧ್ಯನಾ? ಒಂದು ನಾವು ತಿಳ್ಕೊಬೇಕು ಚೀನಾ ದುಷ್ಟರಾಷ್ಟ್ರ ಅನ್ನೋದು ನಿಮ್ಮ ಅಭಿಪ್ರಾಯ ಆದ್ರೆ ಚೀನಾ ಮೂರ್ಖರಾಷ್ಟ್ರ ಅಲ್ಲ ಅನ್ನೋದು ಕೂಡ ಸತ್ಯ.

ಜೇಮ್ಸ್‌ ಬಾಂಡ್‌ನ SPECTRE ಸಿನಿಮಾದಲ್ಲಿ ಒಂದು ಡೈಲಾ‌ಗ್‌ ಇದೆ. WHERE ARE THEY? THEY ARE EVERY WHERE (ಎಲ್ಲಿದ್ದಾರೆ ಅವರು ಎಂದರೆ, ಅವರು ಎಲ್ಲಾ ಕಡೆ ಇದ್ದಾರೆ) ಅಂತ. ಅದೇ ತರ ಚೀನಾ ಹೂಡಿಕೆ ￰ಮಾಡದ ದೇಶ ಆಗಲಿ, ಕ್ಷೇತ್ರವಾಗಲಿ ಇಲ್ಲ ಅಂತ ಹೇಳಬಹುದು. ಒಂದು ಕಾಲದಲ್ಲಿ ಚೀನಾ ಅಂದ್ರೆ ಡುಪ್ಲಿಕೇಟ್‌ ಗೊಂಬೆ ಮಾಡೋರು, ಹಾವು, ಚೇಳು ತಿನ್ನೋ ದೇಶ ಅಂತ ಕರೀತಾ ಇದ್ರೂ ಆದ್ರೆ ಈಗ ಕಾಲ ಬದಲಾಗಿದೆ. ಚೀನಾ ತನ್ನ ಕಬಂದ ಬಾಹುಗಳಿಂದ ಪ್ರಪಂಚದ ಬಹುಪಾಲು ದೇಶವನ್ನ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದೆ.

ಚೀನಾ ಹೇಗೆ ತನ್ನ ಅಧಿಪತ್ಯ ಸಾಧಿಸುತ್ತಿದೆ ಅಂದ್ರೆ, ಒಬ್ಬ ವ್ಯಕ್ತಿಗೆ 10,000₹ ಅವಶ್ಯಕತೆ ಇದ್ರೆ ಅವನಿಗೆ ಒಂದು ಲಕ್ಷ ಸಾಲ ಕೊಡುತ್ತೆ. ಬಹುಪಾಲು ಜನ ಹಾಗೆ ಸಾಲ ಮಾಡಿ ಹಾಳು ಮಾಡ್ಕೊಂಡು ಸಾಲಗಾರರಾಗ್ತಾರೆ ಮತ್ತೆ ತೀರಿಸಕ್ಕೆ ಆಗದೆ ಶರಣಾಗ್ತಾರೆ. ಅದೇ ಫಾರ್ಮುಲಾ ಚೀನಾ ಕೆಲವು ಬಡ ದೇಶಗಳ ಪ್ರಯೋಗ ಮಾಡಿ ಯಶಸ್ವೀ ಆಗಿದೆ. ಇದನ್ನು ಮೊದಲು ಮಾಡಿ ಯಶಸ್ವಿಯಾಗಿದ್ದು ಅಮೆರಿಕ. ಈಗ ಚೀನಾ ಸರ್ಕಾರ ತಾನು ಸಾಲ ಕೊಟ್ಟ ರಾಷ್ಟ್ರಗಳಲ್ಲಿನ ಕಂಪನಿಗಳಲ್ಲಿ ಒಂದು ಭಾಗ ಹೂಡಿಕೆ ಮಾಡುತ್ತದೆ. ಯಾವುದೇ ರಾಷ್ಟ್ರದಲ್ಲಿ ಅದು ಹೂಡಿಕೆ ಮಾಡಿದ್ರೆ ಚೀನಾ ಸರ್ಕಾರ ಆ ದೇಶದ ಪಾಲುದಾರ ಎಂದರ್ಥ.

ಚೀನಾವು ಆಫ್ರಿಕಾ ಖಂಡದಲ್ಲಿ 2005 ರಿಂದ 2019 ರವರೆಗೆ 360 ಬಿಲಿಯನ್ ಡಾಲರ್‌ ಅಂದ್ರೆ ಸರಿ ಸುಮಾರು 23 ಲಕ್ಷ ಕೋಟಿಯಷ್ಟು ಹಣ ಹೂಡಿಕೆ ಮಾಡಿದೆ. (ಭಾರತದ ಕೊರೊನಾ ಪ್ಯಾಕೇಜ್‌ಗಿಂತಲೂ ಹೆಚ್ಚು). ಅದು ಕೃಷಿ, ಮೂಲಸೌಕರ್ಯ, ರಿಯಲ್‌ ಎಸ್ಟೇಟ್‌, ಪ್ರವಾಸೋಧ್ಯಮ, ಟೆಲಿಕಾಂನಿಂದ ಹಿಡಿದು ಎಲ್ಲ ರಂಗಗಳಲ್ಲೂ ಅವರ ಪಾಲು ಇದೆ. ಆಫ್ರಿಕಾ ದೇಶದ 2G, 3G ಮತ್ತೆ 4G ಸೇವೆಗಳಲ್ಲಿ ￰ಅರ್ಧದಷ್ಟು ನೀಡಿದ್ದು ಚೀನಾದ ದೈತ್ಯ HUAWEI ಕಂಪನಿ. ಈಗ 5G ಕೂಡ ಕೊಡಕ್ಕೆ ಸಿದ್ಧತೆ ಮಾಡಿಕೊಂಡಿದೆ. ಆಫ್ರಿಕ ಒಕ್ಕೂಟದ ಮುಖ್ಯ ಕಚೇರಿ ಇರೋದು ಇಥಿಯೋಪಿಯಾದಲ್ಲಿ. ಅದರ ಕಟ್ಟಡ ಕಟ್ಟಿಕೊಟ್ಟಿದ್ದು ಇದೆ ಚೀನಾ. ಅದು ಕೂಡ ಕೊಡುಗೆ ಆಗಿ. ಏನು ಲಾಭ ಇಲ್ಲದೆ ಯಾರು ಕೂಡ ಉಚಿತವಾಗಿ ಏನು ಕೊಡಲ್ಲ ಅನ್ನೋದು ಅಮೇರಿಕಾ ದೇಶದ ಅನುಮಾನ. ಅದಕ್ಕೆ HUAWEI ಕಂಪನಿ ಆಫ್ರಿಕಾ ಒಕ್ಕೂಟದ ಮುಖ್ಯ ಕಚೇರಿಯಿಂದ ರಹಸ್ಯ ಮಾಹಿತಿ ಶಾಂಗೈ ತಲುಪಿಸ್ತಾರೆ ಅಂತ ಅಮೆರಿಕ ಆರೋಪಿಸಿದೆ. ಆದರೆ ಆಫ್ರಿಕಾ ಒಕ್ಕೂಟ ಇದನ್ನ ನಿರಾಕರಿಸಿ ಚೀನಾ ಜೊತೆ ನಿಂತಿದೆ ಅಂದ್ರೆ ಚೀನಾ ಇನ್ಯಾವ ಮಟ್ಟಕ್ಕೆ ಆಫ್ರಿಕಾನಾ ನಿಯಂತ್ರಣ ಮಾಡುತ್ತೆ ಅನ್ನೋದು ಅರ್ಥ ಮಾಡ್ಕೋಬಹುದು.

ಇನ್ನು ಏಷ್ಯಾದಲ್ಲೂ ಚೀನಾ ತನ್ನ ಪಾರುಪತ್ಯ ಸ್ಥಾಪಿಸಿದೆ. ಅದು ಪಾಕಿಸ್ತಾನಕ್ಕೆ ಮೂಲಸೌಕರ್ಯಕ್ಕೋಸ್ಕರ 60 ಬಿಲಿಯನ್ ಡಾಲರ್‌ ಸಾಲ ಕೊಟ್ಟಿದೆ. ಶ್ರೀಲಂಕಾಗೇ ಎಷ್ಟು ಸಾಲ ಕೊಟ್ಟಿದೆ ಅಂದ್ರೆ ಕೊಟ್ಟ ಸಾಲ ವಾಪಾಸ್ ಕೊಡಕ್ಕೆ ಆಗದ ಶ್ರೀಲಂಕಾ HAMBANTOTA ಬಂದರು ಅನ್ನು ಚೀನಾಗೆ 99 ವರ್ಷ ಗುತ್ತಿಗೆಗೆ ಕೊಟ್ಟಿದ್ದಾರೆ. ಇನ್ನು ಮಾಲ್ಡಿವ್ಸ್ ಕೂಡ ಇದಕ್ಕೆ ಹೊರತಾಗಿಲ್ಲ. ಇದರ ಮುಂದುವರೆದ ಭಾಗವಾಗಿ ಮೊನ್ನೆ ನೇಪಾಳ 150 ವರ್ಷ ಹಳೆ ಗಡಿ ಕ್ಯಾತೆ ತೆಗೆದು ಹೊಸ ಭೂಪಟ ಬಿಟ್ಟಿದ್ದು ಇದರ ಹಿಂದೆ ಚೀನಾ ಇದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ.

ಇನ್ನು ವಿಯೆಟ್ನಾಂ, ಥೈಲ್ಯಾಂಡ್, ಇಂಡೋನೇಷಿಯಾ, ಸಿಂಗಾಪೂರ್‌, ಮಲೇಷ್ಯಾ, ಕಾಂಬೋಡಿಯಾದಲ್ಲೂ ಚೀನಾ ಸಾಕಷ್ಟು ಮಾಡಿದ್ದಾರೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ಕಾಂಬೋಡಿಯಾ ದೇಶ ತನ್ನ ದೇಶದ ಕರಾವಳಿ ಜಾಗವನ್ನ 99 ವರ್ಷ ಗುತ್ತಿಗೆಗೆ ಕೊಟ್ಟಿದೆ. ಅಲ್ಲಿ ಪ್ರವಾಸಿತಾಣ ಮಾಡ್ತೀವಿ ಅಂತ ಹೇಳಿದ್ರು ಅಲ್ಲಿ ರಹಸ್ಯವಾಗಿ ಆರ್ಮಿ ಬೇಸ್‌ ಮಾಡ್ತಾ ಇದ್ದಾರೆ ಅಂತ ಅಮೆರಿಕಾ ಆರೋಪಿಸಿದೆ. ಈ ಸಮುದ್ರ ತೀರ 3 ದೇಶಗಳ ಗಡಿಯಾಗಿದ್ದು, ಮುಂದೊಂದು ದಿನ ಆರ್ಮಿ ಬೇಸ್‌ ಆಗುವುದರಲ್ಲಿ ಸಂಶಯವಿಲ್ಲ.

ಚೀನಾ ಬರಿ ಬಡ ದೇಶಗಳಷ್ಟೇ ಅಲ್ಲದೆ ಮುಂದುವರೆದ ದೇಶಗಳಾದ ಯೂರೋಪ್‌ ದೇಶಗಳಲ್ಲಿ, ಅಮೆರಿಕಾದಲ್ಲಿ ಹೂಡಿಕೆ ಮಾಡಿದೆ.

ಇನ್ನು ನಮ್ಮ ದೇಶದಲ್ಲಿ 2014ರ ವರೆಗೆ ಚೀನಾ ಹೂಡಿಕೆ ಅಷ್ಟೇನೂ ಇರಲಿಲ್ಲ. ಆದ್ರೆ ಯಾವಾಗ FDI ಗೆ ಅವಕಾಶ ದೊರಕಿತೋ, 50%,75% ಹೂಡಿಕೆ ಮುಕ್ತವಾಯಿತೋ ಚೀನಾ ಇಲ್ಲೂ ದಾಳಿ ಮಾಡಕ್ಕೆ ಶುರು ಮಾಡಿತು. ಅದು ಎಷ್ಟರ ಮಟ್ಟಿಗೆ ಅಂದ್ರೆ 4 ಬಿಲಿಯನ್‌ ಡಾಲರ್‌ ಹಣವನ್ನು ಕೇವಲ ಸ್ಟಾರ್ಟಪ್‌ ಕಂಪನಿಗಳ ಮೇಲೆ ಚೀನಾದ ದೈತ್ಯ ಕಂಪನಿಗಳಾದ ALIBABA, ByteDance,Tencent ಮೂಲಕ ಹೂಡಿಕೆ ಮಾಡಿದೆ. ಒಟ್ಟು 92 ಭಾರತದ ಸ್ಟಾರ್ಟಪ್‌ ಕಂಪನಿಗಳಲ್ಲಿ ಚೀನಾದ ಹೂಡಿಕೆಯಿದೆ.

ನಾವು ಬಾಯ್ಕಟ್ ಚೀನಾ ಎನ್ನುತ್ತಿದ್ದರೆ ಅದೇ ಚೀನಾ ನಮ್ಮ ದೇಶದಲ್ಲಿ 2 ಲಕ್ಷ ಕೋಟಿಗಿಂತ ಹೆಚ್ಚು ಹಣವನ್ನು ನೇರ ಹೂಡಿಕೆ ಮಾಡಿದೆ. Xiaomi, Oppo, VIVO, Redmi, Oneplus ಮುಂತಾದ ಚೀನಾ ಕಂಪನಿಗಳ ಮೊಬೈಲ್‌ಗಳು ದೇಶದ 66% ಮಾರುಕಟ್ಟೆಯನ್ನು ಹೊಂದಿವೆ. ಮತ್ತೆ PayTM ಅನ್ನು ನಮ್ಮ ಸರ್ಕಾರನೇ ಪ್ರಮೋಟ್‌ ಮಾಡಿದೆ. ಇನ್ನು ಅಮಿತ್ ಶಾ ಮಗ ಜೈ ಶಾ ಕಾರ್ಯದರ್ಶಿ ಆಗಿರೋ BCCI ಮಂಡಳಿ ತನ್ನ ಆಟಗಾರರ T-SHIRT ಮೇಲೆ ಇರೋ ಲೋಗೊ BYJU ಕೂಡ ಚೀನಾಯಿಂದ ಹೂಡಿಕೆ ಸ್ವೀಕರಿಸಿದೆ!

ಈಗ ಇವುಗಳನ್ನು ಡಿಲೀಟ್‌ ಮಾಡೋರು ಯಾರು ? ಇನ್ನು AIRTEL, IDEA, VODAFONE ಕಂಪನಿಗಳು 5G TRIALಗೋಸ್ಕರ HUAWEI ಕಂಪನಿ ಜೊತೆ ಕೈಜೋಡಿಸಿವೆ. ಇನ್ನು ಚೀನಾವು ಹಾಂಕ್‌ಕಾಂಗ್‌, ಸಿಂಗಾಪುರ ಮೂಲಕ ಕಂಪನಿಗಳ ಮೂಲಕ ಭಾರತದಲ್ಲಿ ಹೂಡಿಕೆ ಮಾಡಿರೋ ಹಣಕ್ಕೆ ಲೆಕ್ಕವೇ ಇಲ್ಲ. ಈಗ ಚೀನಾ ಮೇಲಿನ ಸಿಟ್ಟಿಗೆ ಒಂದಷ್ಟು ಅಮೆರಿಕಾದ ಕಂಪನಿಗಳು ಚೀನಾಯಿಂದ ಹೊರಗೆ ಬರ್ತಾ ಇದೆ. ಆದ್ರೆ ಅದ್ರಲ್ಲಿ ಎಷ್ಟು ಬರುತ್ತಿವೆ ಎಂದರೆ ಬಹಳ ಕಡಿಮೆ.

ಹಲವು ಗಾರ್ಮೆಂಟ್ಸ್‌ಗಳು ಬಾಂಗ್ಲಾದೇಶಕ್ಕೆ ಹೋಗುತ್ತಿವೆ. ಹಲವು ಉತ್ಪಾದಕ ಕಂಪನಿಗಳು ವಿಯೆಟ್ನಾಂಗೆ, ಶೂ ಕಂಪನಿಗಳು ಇಥಿಯೋಪಿಯಾಗೆ ಹೋಗುತ್ತಿದ್ದರೆ ನಾವಿಲ್ಲ TIKTOK ಮತ್ತು ಚೀನಾ APP DELETE ಮಾಡ್ತಾ ಇದ್ದಿವಿ. ಬಾಯ್ಕಟ್ ಚೀನಾ ಅಂತ ಬೊಬ್ಬೆ ಹೊಡೆಯುತ್ತಿದ್ದೇವೆ. ಚೀನಾಯಿಂದ ಹೊರಗೆ ಹೋಗ್ತಾ ಇರೋ ಕಂಪನಿಗಳು ಯಾಕೆ ಭಾರತಕ್ಕೆ ಬರುತ್ತಿಲ್ಲ ಎಂದರೆ ಇಲ್ಲಿ ಸ್ಕಿಲ್ ಇರೋ ಜನ ಕಡಿಮೆ ಎನ್ನುತ್ತಿದ್ದಾರೆ.

2003 ರಿಂದ 2015 ರವರೆಗೆ ದೇಶ ಆರ್ಥಿಕವಾಗಿ ಮುಂದೆ ಹೋಗ್ತಾ ಇತ್ತು. ಆದ್ರೆ ಯಾವಾಗ ನೋಟು ಅಮಾನ್ಯೀಕರಣ ಆಯಿತೋ, ಜಿಎಸ್‌ಟಿ ಬರೆ ಬಿದ್ದಿತೋ 2016 ರಿಂದ ಆರ್ಥಿಕತೆ ಹಿಮ್ಮುಕವಾಗಿ ಓಡ್ತಾ ಇದೆ. ಅದರ ಪರಿಣಾಮ 40 ವರ್ಷದಲ್ಲೇ ಅತಿ ಹೆಚ್ಚು ನಿರುದ್ಯೋಗ ಹೆಚ್ಚಿದರೆ GDP ￰ಸತತವಾಗಿ ಬೀಳ್ತಾ ಇದೆ. ಮುಂದಿನ ದಿನಗಳಲ್ಲಿ NEGETIVE GDP ಬರಬಹುದು ಅಂತ ಅಂತಾರಾಷ್ಟ್ರೀಯ ಆರ್ಥಿಕ ತಜ್ಞರ ಅಭಿಪ್ರಾಯ.

ಹಾಗಂತ ನಮಗೆ ಇದರಿಂದ ಆಚೆ ಬರಕ್ಕೆ ಸಾಧ್ಯ ಇಲ್ಲ ಅಂತಲ್ಲ ಸರ್ಕಾರ ಮಾಡಬೇಕಿರೋದು ನಮ್ಮ ದೇಶದಲ್ಲಿ ಇರೋ ಅತ್ಯತ್ತಮ ಆರ್ಥಿಕ ತಜ್ಞರ ಮಾತು ಕೆಳಕ್ಕೆ ಕಿವಿ ಕೊಡಬೇಕು ಅಷ್ಟೇ. ಪ್ರಪಂಚದ ಯಾವ ದೇಶದಲ್ಲೂ ಕೂಡ ನಮ್ಮ ದೇಶದಷ್ಟು ಯುವಕರಿಲ್ಲ. ಅವರನ್ನ ಸರಿಯಾಗಿ ಬಳಸಿಕೊಳ್ಳಬೇಕು ಅಷ್ಟೇ. ಅತ್ಯುತ್ತಮ ಶಿಕ್ಷಣ ನೀಡಿ ತಾಂತ್ರಿಕತೆಯಲ್ಲಿ ವಿಜಯ ಸಾಧಿಸಬೇಕು. ಸದ್ಯಕ್ಕೆ ರಾಜಕೀಯ, ದ್ವೇಷ ಬಿಟ್ಟು ದೇಶ ಕಟ್ಟಬೇಕು. ಮತ್ತೆ ಈಗಿನ ಜನ ತಿಳ್ಕೊಬೇಕಾಗಿರೋದು ದೇಶದ ಜೊತೆ ನಿಲ್ಲೋದು ಅಂದ್ರೆ ವ್ಯಕ್ತಿ ಜೊತೆ ನಿಲ್ಲೋದಲ್ಲ,ಯಾರೇ ತಪ್ಪು ಮಾಡಿದ್ರು ಪ್ರಶ್ನೆ ಮಾಡಬೇಕು. ಅದು ಬಿಟ್ಟು ಪ್ರಶ್ನೆ ಮಾಡೋರನ್ನೇ ದೇಶದ್ರೋಹಿ ಅನ್ನಬಾರದು. ದೇಶಾಭಿಮಾನ ಅಂದ್ರೆ ದೇಶದ ಪ್ರತಿಯೊಬ್ಬರನ್ನು ಪ್ರೀತಿಸೋದು ಮತ್ತೆ ದೇಶದ ಏಳಿಗೆಗೆ ಶ್ರಮಿಸೋದು. ಇಷ್ಟು ಮಾಡಿದರೆ ನಾವು ಖಂಡಿತ ವಿಶ್ವ ಗುರು ಆಗ್ತಿವಿ. ಇಲ್ಲ ನಾವು ಜಾತಿ, ಧರ್ಮ ಅಂತ ಕಿತ್ತಾಡ್ತಾ ಇರ್ತೀವಿ ಅಂದ್ರೆ ದೇಶಕ್ಕೆ ಬಾರಿ ಗಂಡಾಂತರ ತಪ್ಪಿದ್ದಲ್ಲ.


ಇದನ್ನೂ ಓದಿ: ಬಾಯ್ಕಟ್‌ ಚೀನಾ ಅಭಿಯಾನ: ಸಂಪೂರ್ಣ ಭಾರತೀಯ ಫೋನು ತಯಾರಿಸೋ ಕಂಪನಿ ಯಾವುದೂ ಗೊತ್ತೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...