HomeUncategorizedತಮಿಳುನಾಡು: ಪ್ರಣಾಳಿಕೆಯಲ್ಲಿ ಸಿಎಎ ವಿರೋಧಿಸಿದ BJP ಮಿತ್ರಪಕ್ಷ AIADMK!

ತಮಿಳುನಾಡು: ಪ್ರಣಾಳಿಕೆಯಲ್ಲಿ ಸಿಎಎ ವಿರೋಧಿಸಿದ BJP ಮಿತ್ರಪಕ್ಷ AIADMK!

ಶ್ರೀಲಂಕಾದ ತಮಿಳು ನಿರಾಶ್ರಿತರಿಗೆ ಉಭಯ ಪೌರತ್ವ ನೀಡುವುದಾಗಿ ಪಕ್ಷ ಭರವಸೆ ನೀಡಿದೆ.

- Advertisement -
- Advertisement -

ತಮಿಳುನಾಡು ಆಡಳಿತರೂಢ ಪಕ್ಷ ಎಐಎಡಿಎಂಕೆ ತನ್ನ ಚುನಾವಣಾ ಪ್ರಣಾಳಿಕೆಯನ್ನು ಚೆನ್ನೈನಲ್ಲಿ ಭಾನುವಾರ ಬಿಡುಗಡೆ ಮಾಡಿದೆ. ಪಕ್ಷವು ನೀಡಿದ ಭರವಸೆಗಳಲ್ಲಿ ಅಮ್ಮಾ ವಾಶಿಂಗ್ ಮೆಷಿನ್, ಮಹಿಳೆಯರಿಗೆ ಪ್ರಯಾಣ ರಿಯಾಯಿತಿ, ಅಮ್ಮ ಬ್ಯಾಂಕಿಂಗ್ ಕಾರ್ಡ್ ಯೋಜನೆಯ ಅನುಷ್ಠಾನ ಮತ್ತು ಶ್ರೀಲಂಕಾದ ತಮಿಳರಿಗೆ ಉಭಯ ಪೌರತ್ವ, ಪ್ರತಿ ಕುಟುಂಬದಿಂದ ಕನಿಷ್ಠ ಒಬ್ಬ ವ್ಯಕ್ತಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಪಕ್ಷ ಹೇಳಿದೆ.

ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಮಾತನಾಡಿ, ಅಮ್ಮ ವಸತಿ ಯೋಜನೆ ಅನುಷ್ಠಾನಗೊಳಿಸುವುದು, ಮಾತೃತ್ವ ರಜೆಯನ್ನು 12 ತಿಂಗಳವರೆಗೆ ವಿಸ್ತರಿಸುವುದು, ಇಡೀ ವರ್ಷ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಕೇಬಲ್ ಸಂಪರ್ಕ ಮತ್ತು ಉಚಿತ 2 ಜಿ ಡೇಟಾವನ್ನು ನೀಡುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: ಲಾಕ್‌ಡೌನ್‌ ಬೇಡವೆಂದರೆ ಸರ್ಕಾರದೊಂದಿಗೆ ಕೊರೊನಾ ನಿಯಂತ್ರಿಸಲು ಸಹಕರಿಸಿ: ಯಡಿಯೂರಪ್ಪ

ಪಕ್ಷದ ಪ್ರಣಾಳಿಕೆಯ ಬಗ್ಗೆ ಮಾತನಾಡಿದ ಪಕ್ಷದ ಮುಖಂಡ ಸಿ. ಪೊನ್ನಯ್ಯನ್, “ಕುಟುಂಬವೊಂದಕ್ಕೆ ಪ್ರತಿ ವರ್ಷ ಆರು ಉಚಿತ ಎಲ್‌ಪಿಜಿ ಸಿಲಿಂಡರ್‌. ಒಂದು ಕುಟುಂಬದಿಂದ ಕನಿಷ್ಠ ಒಬ್ಬ ವ್ಯಕ್ತಿಗೆ ಸರ್ಕಾರಿ ಕೆಲಸ ನೀಡಲಾಗುವುದು” ಎಂದು ಹೇಳಿದ್ದಾರೆ.

“ನಾವು ಶ್ರೀಲಂಕಾದ ತಮಿಳು ನಿರಾಶ್ರಿತರಿಗೆ ಉಭಯ ಪೌರತ್ವ ಮತ್ತು ವಸತಿ ಪರವಾನಗಿಗಾಗಿ ಕೇಂದ್ರ ಸರ್ಕಾರವನ್ನು ಕೋರುತ್ತೇವೆ. ಸಿಎಎಯನ್ನು ಹಿಂಪಡೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತಲೇ ಇರುತ್ತೇವೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ದೇವಾಲಯದಲ್ಲಿ ನೀರು ಕುಡಿದ ಮುಸ್ಲಿಂ ಬಾಲಕನ ಮೇಲೆ ಕ್ರೂರ ಹಲ್ಲೆ: #SorryAsif ಎಂದ ನೆಟ್ಟಿಗರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...