Homeಮುಖಪುಟಮಮತಾ ಮೇಲೆ ಹಲ್ಲೆ ನಡೆದಿಲ್ಲ: ಚುನಾವಣಾ ಆಯೋಗದ ಹೇಳಿಕೆ!

ಮಮತಾ ಮೇಲೆ ಹಲ್ಲೆ ನಡೆದಿಲ್ಲ: ಚುನಾವಣಾ ಆಯೋಗದ ಹೇಳಿಕೆ!

- Advertisement -
- Advertisement -

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಗಾಯಗಳನ್ನುಂಟು ಮಾಡಿದ ನಂದಿಗ್ರಾಮ್‌ನಲ್ಲಿ ನಡೆದ ಘಟನೆ ಅಪಘಾತ ಮತ್ತು ಯೋಜಿತ ದಾಳಿಯಲ್ಲ ಎಂದು ಚುನಾವಣಾ ಆಯೋಗ ಭಾನುವಾರ ತೀರ್ಮಾನಿಸಿದೆ. ಶನಿವಾರ ಇಬ್ಬರು ಮತದಾನ ವೀಕ್ಷಕರು ವರದಿಯನ್ನು ಸಲ್ಲಿಸಿದ ನಂತರ ಅದನ್ನು ಪರಿಶೀಲಿಸಿದ ಆಯೋಗ ಈ ತೀರ್ಮಾನಕ್ಕೆ ಬಂದಿದೆ.

ಅವರ ಭದ್ರತಾ ಉಸ್ತುವಾರಿಯ ಕೊರತೆಯಿಂದಾಗಿ ಬ್ಯಾನರ್ಜಿ ಗಾಯಗೊಂಡಿದ್ದಾರೆ ಎಂದು ಆಯೋಗ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಆಯೋಗ ನಿರ್ದೇಶನಗಳನ್ನು ನೀಡಲಿದೆ ಎಂದು ಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿವೆ.

ಸ್ಟಾರ್ ಪ್ರಚಾರಕರಾಗಿದ್ದರೂ ಬ್ಯಾನರ್ಜಿ ಬುಲೆಟ್ ಪ್ರೂಫ್ ಅಥವಾ ಶಸ್ತ್ರಸಜ್ಜಿತ ವಾಹನವನ್ನು ಬಳಸುತ್ತಿಲ್ಲ ಮತ್ತು ಇದು ಅವರ ಭದ್ರತೆ ನೋಡಿಕೊಳ್ಳುವವರ ಲೋಪ ಎಂದು ಆಯೋಗದ ಮೂಲಗಳು ಹೇಳಿವೆ.

ವಿಶೇಷ ಸಮೀಕ್ಷೆ ವೀಕ್ಷಕರಾದ ಅಜಯ್ ನಾಯಕ್ ಮತ್ತು ವಿವೇಕ್ ಡ್ಯೂಬ್ ಅವರ ವರದಿಯನ್ನು ಉಲ್ಲೇಖಿಸಿರುವ ಆಯೋಗ, ಮಮತಾ ಅವರು ಘಟನೆ ನಡೆದಾಗ ಸಾಮಾನ್ಯ ವಾಹನವನ್ನು ಬಳಸುತ್ತಿದ್ದರು, ಆದರೆ, ಅವರ ಭದ್ರತಾ ನಿರ್ದೇಶಕ ವಿವೇಕ್ ಸಹಾಯ್ ಅವರು ಗುಂಡು ನಿರೋಧಕ ಕಾರಿನಲ್ಲಿದ್ದರು ಎಂದು ಮೂಲಗಳು ಗಮನಿಸಿವೆ.

ಅಲ್ಲದೆ, ಘಟನೆ ನಡೆದ ಪ್ರದೇಶದ ರಿಟರ್ನಿಂಗ್ ಅಧಿಕಾರಿಯಿಂದ ಯಾವುದೇ ಅನುಮೋದನೆ ಪಡೆಯಲಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಕಾರಣದಿಂದಾಗಿ, ಮತದಾನದ ಅಧಿಕಾರಿಗಳಿಗೆ ವಿಡಿಯೋಗ್ರಾಫರ್‌ಗಳನ್ನು ಅಥವಾ ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ನಿಯೋಜಿಸಲು ಸಾಧ್ಯವಾಗಲಿಲ್ಲ ಎಂದು ಆಯೋಗದ ಮೂಲಗಳು ತಿಳಿಸಿವೆ.

ಮಾರ್ಚ್ 10 ರಂದು ಪೂರ್ವ ಮಿಡ್ನಾಪೋರ್ ಜಿಲ್ಲೆಯ ನಂದಿಗ್ರಾಮದ ಬಿರುಲಿಯಾ ಬಜಾರ್‌ನಲ್ಲಿ ನಡೆದ ಘಟನೆ, ಬ್ಯಾನರ್ಜಿ ನಾಮಪತ್ರ ಸಲ್ಲಿಸಿದ ನಂತರ “ಹಠಾತ್ತನೆ” ನಡೆದಿದ್ದರೂ “ಪಿತೂರಿ ಸಿದ್ಧಾಂತ” ಇದರ ಹಿಂದಿದೆ ಎನ್ನಲಾಗಿದೆ. ಆದರೆ, ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ಹಠಾತ್ ಸಂಭಸಿದ ಘಟನೆಯಲ್ಲಿ ಮಮತಾ ಗಾಯಗೊಂಡರು ಎನ್ನಲಾಗಿದೆ.

“ಈ ಘಟನೆ ಯೋಜಿತ ದಾಳಿಯಲ, ಅಪಘಾತ. ಇದು ಇದ್ದಕ್ಕಿದ್ದಂತೆ ನಡೆದಿತ್ತು” ಎಂದು ವರದಿಯನ್ನು ಉಲ್ಲೇಖಿಸಿ ಮೂಲ ಹೇಳಿದೆ. ಈ ಘಟನೆಯಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರೂ ಆಗಿರುವ ಬ್ಯಾನರ್ಜಿಗೆ ಆದ ಗಾಯದ ಬಗ್ಗೆ, ವರದಿಯು “ಘಟನೆಯ ಹಠಾತ್ ಕಾರಣ ಇದಕ್ಕೆ ಕಾರಣವಾಯಿತು. ಘಟನೆಯ ಹಿಂದೆ ಯಾವುದೇ ಪಿತೂರಿ ನಡೆದಿಲ್ಲ’ ಎಂದಿದೆ.

ಘಟನೆಯ ಸಮಯದಲ್ಲಿ ಹಾಜರಿದ್ದ ಪ್ರತ್ಯಕ್ಷದರ್ಶಿಗಳು ಒದಗಿಸಿದ ವಿವರಗಳು ಮತ್ತು ಅವರಿಂದ ಸಂಗ್ರಹಿಸಲಾದ ವಿಡಿಯೋವನ್ನು ವರದಿಯು ಗಣನೆಗೆ ತೆಗೆದುಕೊಂಡಿದೆ.
ಮಮತಾರಿಗೆ “ತುಂಬಾ ಹತ್ತಿರ” ಬಂದ ಜನಸಮೂಹವನ್ನು ನಿಯಂತ್ರಿಸುವಲ್ಲಿ ಮುಖ್ಯಮಂತ್ರಿಯ ಭದ್ರತೆಯ ಉಸ್ತುವಾರಿ ಪೊಲೀಸ್ ಸಿಬ್ಬಂದಿಗಳ ವೈಫಲ್ಯವನ್ನೂ ಈ ವರದಿ ಉಲ್ಲೇಖಿಸಿದೆ.

“ಸ್ಥಳೀಯ ಪೊಲೀಸರು ಮತ್ತು ಸಿಎಂ ಅವರ ಭದ್ರತೆಯ ಉಸ್ತುವಾರಿಯವರು ಜನಸಂದಣಿಯನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಅದು ಅನಪೇಕ್ಷಿತ ಪರಿಸ್ಥಿತಿಗೆ ಕಾರಣವಾಯಿತು” ಎಂದು ವರದಿ ಹೇಳಿದೆ.

ನಂದಿಗ್ರಾಮ್ ಘಟನೆಯ ನಂತರ, ರಾಜ್ಯ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ನೋಡಲ್ ಅಧಿಕಾರಿ ಜಗಮೋಹನ್, ಮುಖ್ಯಮಂತ್ರಿಗಳ ಪ್ರವಾಸದ ಸಮಯದಲ್ಲಿ ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು ವ್ಯವಸ್ಥೆ ಮಾಡುವಂತೆ ಎಲ್ಲಾ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿದ್ದಾರೆ.

“ಸಿಎಂ ಸುತ್ತಲಿನ ಭದ್ರತಾ ಕ್ರಮಗಳು ಕಟ್ಟುನಿಟ್ಟಾಗಿರಬೇಕು. ಇತರ ಸ್ಟಾರ್ ಪ್ರಚಾರಕರ ಭದ್ರತೆಯನ್ನು ಬಿಗಿಗೊಳಿಸಬೇಕು. ನಂದಿಗ್ರಾಮ್ ಘಟನೆಯ ನಂತರ ನಾವು ಯಾವುದೇ ಚಾನ್ಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ”ಎಂದು ಸಿಇಒ ಮೂಲವು ಜಗಮೋಹನ್ ವರದಿ ಉಲ್ಲೇಖಿಸಿ ಹೇಳಿದೆ.

ಈ ನಡುವೆ, ರಾಜ್ಯ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡ್ಯೋಪಾಧ್ಯಾಯ ಆಯೋಗಕ್ಕೆ ನೀಡಿದ ವಿವರವಾದ ವರದಿಯಲ್ಲಿ ನಂದಿಗ್ರಾಮದಲ್ಲಿ ನಡೆದ ಘಟನೆಗೆ ಏನು ಕಾರಣ ಎಂಬುದು ಲಭ್ಯ ವಿಡಿಯೋದಲ್ಲಿ ಸ್ಪಷ್ಟವಾಗಿಲ್ಲ ಎಂದಿದ್ದಾರೆ.

“ಸಿಎಂ ವಾಹನವು ಕಿಕ್ಕಿರಿದ ಪ್ರದೇಶದ ಮೂಲಕ ಹಾದುಹೋಗುತ್ತಿತ್ತು. ಆಗ ಅವರನ್ನು ಕಾರಿನ ಬಾಗಿಲಿನತ್ತ ತಳ್ಳಲಾಯಿತು. ಆದರೆ ತಳ್ಳುವಿಕೆಯು ಉದ್ದೇಶಪೂರ್ವಕವಾಗಿದೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಸಂಗ್ರಹಿಸಿದ ವೀಡಿಯೊ ಹೆಚ್ಚು ಸ್ಪಷ್ಟವಾಗಿಲ್ಲ” ಎಂದು ಸಿಇಒ ಮೂಲವೊಂದು ಬಂಡೊಪಾಧ್ಯಾಯರ ಎರಡನೇ ವರದಿಯನ್ನು ಉಲ್ಲೇಖಿಸಿ ಹೇಳಿದೆ.

ಘಟನೆ ಕುರಿತು ಚುನಾವಣಾ ಆಯೋಗ, ರಾಜ್ಯ ಸರ್ಕಾರ ಮತ್ತು ಇಬ್ಬರು ವೀಕ್ಷಕರಿಂದ ವರದಿಗಳನ್ನು ಕೋರಿತ್ತು. ರಾಜ್ಯ ಆಡಳಿತ ಶುಕ್ರವಾರ ತನ್ನ ವರದಿಯನ್ನು ಸಲ್ಲಿಸಿತ್ತು.
ಪಶ್ಚಿಮ ಬಂಗಾಳದ 294 ವಿಧಾನಸಭಾ ಸ್ಥಾನಗಳಿಗೆ ಮಾರ್ಚ್ 27 ಮತ್ತು ಏಪ್ರಿಲ್ 29 ರ ನಡುವೆ ಚುನಾವಣೆ ನಡೆಯಲಿದೆ. ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.


ಇದನ್ನೂ ಓದಿ: ನನ್ನ ಜನರ ನೋವಿಗಿಂತ ನನ್ನದು ದೊಡ್ಡದಲ್ಲ, ಎಂದಿಗೂ ತಲೆಬಾಗುವುದಿಲ್ಲ: ಮಮತಾ ಬ್ಯಾನರ್ಜಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...