Homeಮುಖಪುಟತಮಿಳುನಾಡಿನಲ್ಲಿ ED-ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳ ನಡುವೆ ಮುಂದುವರಿದ ಫೈಟ್

ತಮಿಳುನಾಡಿನಲ್ಲಿ ED-ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳ ನಡುವೆ ಮುಂದುವರಿದ ಫೈಟ್

- Advertisement -
- Advertisement -

ತಮಿಳುನಾಡಿನಲ್ಲಿ ‘ಇಡಿ’ ಅಧಿಕಾರಿ ಅಂಕಿತ್ ತಿವಾರಿ ಬಂಧನದ ನಂತರ ಜಾರಿ ನಿರ್ದೇಶನಾಲಯ (ಇಡಿ) ಮತ್ತು ತಮಿಳುನಾಡಿನ ಭ್ರಷ್ಟಾಚಾರ ನಿಗ್ರಹ ಮತ್ತು ಜಾಗೃತ ಪಡೆ (ಡಿವಿಎಸಿ) ನಡುವೆ ಸಂಘರ್ಷ ನಡೆಯುತ್ತಿದೆ. ಈ ಮಧ್ಯೆ ಮಧುರೈ ನಗರ ಪೊಲೀಸರು, ಡಿವಿಎಸಿ ಅಧಿಕಾರಿಗಳ ಕರ್ತವ್ಯದ ವೇಳೆ ಅಡ್ಡಿಪಡಿಸಿದ ಆರೋಪದಲ್ಲಿ ‘ಇಡಿ’ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಲಂಚ ಪಡೆಯುವಾಗ ಕೇಂದ್ರೀಯ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯದ ಅಧಿಕಾರಿ ಅಂಕಿತ್ ಬಂಧನದ ನಂತರ ಮಧುರೈ ‘ಇಡಿ’ ಉಪ ವಲಯ ಕಚೇರಿಯಲ್ಲಿ ತಪಾಸಣೆ ನಡೆಸುತ್ತಿದ್ದಾಗ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿ ಡಿವಿಎಸಿ ಅಧಿಕಾರಿಗಳು ಸಲ್ಲಿಸಿದ ದೂರಿನ ಆಧಾರದ ಮೇಲೆ ತಲ್ಲಕುಲಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

‘ಇಡಿ’ ಅಧಿಕಾರಿಗಳು ಈ ಹಿಂದೆ ತಮಿಳುನಾಡಿನ ಭ್ರಷ್ಟಾಚಾರ ನಿಗ್ರಹ ಮತ್ತು ಜಾಗೃತ ಪಡೆ (ಡಿವಿಎಸಿ) ಅಧಿಕಾರಿಗಳ ವಿರುದ್ಧ ‘ಇಡಿ’ ಉಪ ವಲಯ ಕಚೇರಿಯಿಂದ ಸೂಕ್ಷ್ಮ ದಾಖಲೆಗಳನ್ನು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಿ ಪ್ರಕರಣವನ್ನು ದಾಖಲಿಸಿದ್ದರು. ಭ್ರಷ್ಟಾಚಾರ ನಿಗ್ರಹ ಮತ್ತು ಜಾಗೃತ ಪಡೆ ನ್ಯಾಯಾಲಯದಿಂದ ಅನುಮತಿ ಪಡೆದ ನಂತರ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಸಮರ್ಥಿಸಿಕೊಂಡಿತ್ತು.

35 ಜನರು ತಮ್ಮ ಕಚೇರಿ ಆವರಣವನ್ನು ಪ್ರವೇಶಿಸಿದ್ದಾರೆ ಎಂದು ‘ಇಡಿ’ ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಇಡಿ ಡಿ.2ರಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿತ್ತು. ಈ ಶೋಧ ಕಾನೂನುಬಾಹಿರ ಎಂದು  ಆರೋಪಿಸಿದ ‘ಇಡಿ’ ‘ಡಿವಿಎಸಿ’ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿತ್ತು. ‘ಡಿವಿಎಸಿ’ ಅತಿಕ್ರಮಣ ಮಾಡಿ ತನಿಖೆಗಳಿಗೆ ಸಂಬಂಧಿಸಿದ ವಿವಿಧ ಸೂಕ್ಷ್ಮ ಮತ್ತು ಗೌಪ್ಯ ದಾಖಲೆಗಳನ್ನು ಕಳ್ಳತನ ಮಾಡಿದೆ ಎಂದು ಇಡಿ ಆರೋಪಿಸಿತ್ತು.

ಏನಿದು ಘಟನೆ?

2016ರ ಬ್ಯಾಚ್ ಅಧಿಕಾರಿ ಅಂಕಿತ್ ತಿವಾರಿ ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದರು.  ಕೇಂದ್ರ ಸರ್ಕಾರದ ಮಧುರೈ ಜಾರಿ ಇಲಾಖೆ ಕಚೇರಿಯಲ್ಲಿ ‘ಇಡಿ’ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಅಂಕಿತ್ ತಿವಾರಿ ದಿಂಡಿಗಲ್ ಬಳಿ ಸರ್ಕಾರಿ ವೈದ್ಯರೊಬ್ಬರಿಂದ 20 ಲಕ್ಷ ರೂಪಾಯಿ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದರು.

ಸರ್ಕಾರಿ ವೈದ್ಯನ ವಿರುದ್ದದ ಕಾನೂನು ಕ್ರಮವನ್ನು ತಪ್ಪಿಸಲು ‘ಇಡಿ’ ಅಧಿಕಾರಿ ತಿವಾರಿ 3 ಕೋಟಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ನಿಮ್ಮ ಮೇಲೆ ದಾಳಿ ನಡೆಸಲು ನನಗೆ ಪ್ರಧಾನಮಂತ್ರಿ ಕಚೇರಿಯಿಂದ ಸೂಚನೆ ಬಂದಿದೆ ಎಂದು ಅಧಿಕಾರಿ ಅಂಕಿತ್ ತಿವಾರಿ ವೈದ್ಯನನ್ನು ನಂಬಿಸಿದ್ದರು. ವೈದ್ಯ 3 ಕೋಟಿ ಹಣ ನೀಡಲು ನಿರಾಕರಿಸಿದಾಗ ಇಬ್ಬರು ಮಾತನಾಡಿಕೊಂಡು 51 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದರು. ಅದರ ಮೊದಲ ಕಂತು 20 ಲಕ್ಷ ಹಣವನ್ನು ಪಡೆಯಲು ಮುಂದಾದಾಗ ಡಿವಿಎಸಿ ಅಧಿಕಾರಿಗಳು ಬಂಧಿಸಿದ್ದಾರೆ.

ಅಂಕಿತ್‌ನನ್ನು ಬಂಧಿಸಿದ ಬೆನ್ನಲ್ಲೇ ಡಿವಿಎಸಿ ಅಧಿಕಾರಿಗಳು ‘ಇಡಿ’ ಕಚೇರಿ ಮತ್ತು ಅಂಕಿತ್‌ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7(ಎ) ಅಡಿಯಲ್ಲಿ ‘ಇಡಿ’ ಅಧಿಕಾರಿ ಅಂಕಿತ್‌ನನ್ನು ಬಂಧಿಸಲಾಗಿತ್ತು. ಇತ್ತೀಚೆಗೆ ಪ್ರಕರಣದಲ್ಲಿ ಜಾಮೀನು ಕೋರಿ ಅಂಕಿತ್‌ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ‘ಇಡಿ’ ಅಧಿಕಾರಿಯ ವಿರುದ್ಧ ಭ್ರಷ್ಟಾಚಾರದ ಬಗ್ಗೆ ಪುರಾವೆಗಳಿವೆ ಎಂದು ಅವರ ಮನವಿಯನ್ನು ತಿರಸ್ಕರಿಸಲಾಗಿತ್ತು.

ಇದನ್ನು ಓದಿ: ಗಾಝಾ ನಾಗರಿಕರಿಗೆ ಕುಡಿಯಲು ನೀರು ಸಿಗದಂತೆ ಮಾಡುತ್ತಿರುವ ಇಸ್ರೇಲ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪ| ತಾನು ನಿರ್ದೋಷಿ ಎಂದ ಬ್ರಿಜ್ ಭೂಷಣ್ ಸಿಂಗ್: ವಿಚಾರಣಾ ಹಂತ...

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ತಾನು ನಿರ್ದೋಷಿ ಎಂದು ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಂಗಳವಾರ...